ಟ್ವಿಟರ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್! – ತಿಂಗಳಿಗೆ 900 ರೂ. ಪಾವತಿ ಮಾಡ್ಲೇಬೇಕಾ?

ಟ್ವಿಟರ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್! – ತಿಂಗಳಿಗೆ 900 ರೂ. ಪಾವತಿ ಮಾಡ್ಲೇಬೇಕಾ?

ಇದುವರೆಗೂ ಕೆಲ ದೇಶಗಳಲ್ಲಿ ಜಾರಿಗೆ ತಂದಿದ್ದ ಟ್ವಿಟರ್ ಬ್ಲೂ ಫೀಚರ್ ಅನ್ನು ಭಾರತದಲ್ಲೂ ಇಂದಿನಿಂದ ಅಧಿಕೃತವಾಗಿ ಆರಂಭಿಸಲಾಗಿದೆ. ನಿಗದಿತ ಮೊತ್ತವನ್ನು ಪಾವತಿಸಿ ಟ್ವಿಟರ್ ಬ್ಲೂ ಸದಸ್ಯತ್ವವನ್ನು ಪಡೆದುಕೊಳ್ಳಬಹುದು ಎಂದು ಟ್ವಿಟರ್ ತಿಳಿಸಿದೆ.

ಇದನ್ನೂ ಓದಿ: ಉಳಿತಾಯದ ನೆಪವೊಡ್ಡಿ 7 ಸಾವಿರ ಸಿಬ್ಬಂದಿ ವಜಾಗೆ ನಿರ್ಧಾರ – ಟೆಕ್ ಸಂಸ್ಥೆಗಳಲ್ಲಿ ಇದೆಂಥಾ ಬೆಳವಣಿಗೆ..!?

ಭಾರತದಲ್ಲಿ ಟ್ವಿಟರ್ ಬ್ಲೂ ಫೀಚರ್ಸ್  ಆ್ಯಂಡ್ರಾಯ್ಡ್ ಹಾಗೂ ಐಫೋನ್ ಸಾಫ್ಟ್ ವೇರ್ ನಲ್ಲಿ ಲಭ್ಯವಾಗಲಿದೆ. ಈ ಸೌಲಭ್ಯ ಪಡೆಯಲು ಮೊಬೈಲ್ ಬಳಕೆದಾರರಾದರೆ ತಿಂಗಳಿಗೆ 900 ರೂ. ಮತ್ತು ವೆಬ್‌ಸೈಟ್ ಗೆ 650 ರೂ. ಪಾವತಿಸಬೇಕಾಗುತ್ತದೆ. ವಾರ್ಷಿಕ ಟ್ವಿಟರ್ ಸದಸ್ಯತ್ವ ಪ್ಲಾನ್ ಸಹ ಪಡೆಯಬಹುದಾಗಿದೆ. ವಾರ್ಷಿಕ ಚಂದಾದಾರಿಕೆಗೆ  6,800 ರೂಪಾಯಿ ಪಾವತಿಸಬೇಕಾಗುತ್ತದೆ ಎಂದು ಹೇಳಿದೆ.

ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಜಪಾನ್ ,ಯುನೈಟೆಡ್ ಕಿಂಗ್‌ಡಮ್, ಸೌದಿ ಅರೇಬಿಯಾ, ಫ್ರಾನ್ಸ್, ಜರ್ಮನಿ, ಇಟಲಿ, ಪೋರ್ಚುಗಲ್, ಸ್ಪೇನ್, ಇಂಡೋನೇಷ್ಯಾ ಮತ್ತು ಬ್ರೆಜಿಲ್ ನಲ್ಲಿ ಮಾತ್ರ ಬ್ಲೂ ಸೇವೆ ಲಭ್ಯವಿತ್ತು. ಭಾರತದಲ್ಲೂ  ಈ ಸೌಲಭ್ಯ ಸಿಗಲಿದೆ ಎಂದು ಸುದ್ದಿಯಾಗಿತ್ತು. ಇಂದಿನಿಂದ ಭಾರತದಲ್ಲೂ ಈ  ಸೇವೆ ಆರಂಭವಾಗಿದೆ.

ಬ್ಲೂಟಿಕ್ ಪಡೆದ ಖಾತೆಗಳಿಗಾಗಿ ಟ್ವಿಟರ್‌  ಕೆಲವು ಹೊಸ ಫೀಚರ್‌ಗಳನ್ನು ಬಿಡುಗಡೆ ಮಾಡಿದೆ. ಸದಸ್ಯತ್ವ ಪಡೆದವರು ಇದುವರೆಗೂ ಟ್ವಿಟರ್‌ನಲ್ಲಿ ಸಣ್ಣ ವಿಡಿಯೋ ತುಣುಕನ್ನು ಮಾತ್ರ ಪೋಸ್ಟ್ ಮಾಡುವ ಅವಕಾಶವಿತ್ತು. ಆದರೆ, ಬ್ಲೂಟಿಕ್ ಸೇವೆ ಪಡೆದವರು ಟ್ವಿಟರ್‌ಗೆ ಹೆಚ್ಚಿನ ಅವಧಿಯ ವಿಡಿಯೋಗಳನ್ನು ಕೂಡ ಪೋಸ್ಟ್ ಮಾಡಲು ಸಾಧ್ಯವಾಗುತ್ತದೆ. ಅಲ್ಲದೇ ಸಾಮಾನ್ಯ ಖಾತೆಗಳಲ್ಲಿ ಬರುವ ಅರ್ಧದಷ್ಟು ಜಾಹೀರಾತು ಬ್ಲೂಟಿಕ್ ಸೇವೆಯಲ್ಲಿ ಕಡಿತಗೊಳ್ಳಲಿದೆ ಎಂದು ಟ್ವಿಟರ್ ಹೇಳಿದೆ.

suddiyaana