ಚಿಕನ್ ಪ್ರಿಯರೇ ಒಮ್ಮೆ ಟ್ರೈ ಮಾಡಿ ಈ ಚಿಕನ್ ಪೆಪ್ಪರ್ ಮಸಾಲಾ – ಭಾನುವಾರದ ಊಟದ ರುಚಿಯೇ ಬೇರೆ

ಭಾನುವಾರ ಬಂತೆಂದರೆ ಮನೆಯಲ್ಲಿ ಏನಾದರೂ ಸ್ಪೆಷಲ್ ಅಡುಗೆ ಮಾಡಬೇಕು ಅನ್ನಿಸುತ್ತದೆ. ಅದರಲ್ಲೂ ಚಿಕನ್ ಪ್ರಿಯರಿಗೆ ರುಚಿಕರವಾದ ಚಿಕನ್ ಪೆಪ್ಪರ್ ಮಸಾಲಾ ಮಾಡಿದರೆ ಊಟದ ರುಚಿಯೇ ಬೇರೆ! ಬನ್ನಿ, ಇದನ್ನು ಸುಲಭವಾಗಿ ಹೇಗೆ ತಯಾರಿಸಬಹುದು ಎಂದು ತಿಳಿಯೋಣ.
ಬೇಕಾಗುವ ಸಾಮಗ್ರಿಗಳು
ಚಿಕನ್ – 500 ಗ್ರಾಂ
ಈರುಳ್ಳಿ – 2
ಟೊಮೇಟೊ – 1
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಚಮಚ
ಕಾಳುಮೆಣಸಿನ ಪುಡಿ – 1½ ಚಮಚ
ಖಾರದ ಪುಡಿ – 1 ಚಮಚ
ಅರಿಶಿನ – ¼ ಚಮಚ
ಗರಂ ಮಸಾಲಾ – ½ ಚಮಚ
ಕರಿಬೇವು, ಕೊತ್ತಂಬರಿ ಸೊಪ್ಪು
ಎಣ್ಣೆ, ಉಪ್ಪು ಮತ್ತು ಸ್ವಲ್ಪ ನೀರು
ಮಾಡುವ ವಿಧಾನ
ಮೊದಲು ಚಿಕನ್ ಅನ್ನು ಚೆನ್ನಾಗಿ ತೊಳೆದು ಅದಕ್ಕೆ ಅರಿಶಿನ, ಉಪ್ಪು, ಖಾರದ ಪುಡಿ ಮತ್ತು ಸ್ವಲ್ಪ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ 15 ನಿಮಿಷ ನೆನೆಯಲು ಬಿಡಿ.
ನಂತರ ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಕರಿಬೇವು ಮತ್ತು ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಿ ಬಂಗಾರದ ಬಣ್ಣ ಬರುವವರೆಗೆ ಹುರಿಯಿರಿ. ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಟೊಮೇಟೊ ಸೇರಿಸಿ ಚೆನ್ನಾಗಿ ಬೇಯಿಸಿ.
ಈಗ ಮಸಾಲೆ ಹಚ್ಚಿದ ಚಿಕನ್ ಹಾಕಿ ಐದು ನಿಮಿಷ ಹುರಿಯಿರಿ. ಸ್ವಲ್ಪ ನೀರು ಸೇರಿಸಿ ಮುಚ್ಚಳ ಮುಚ್ಚಿ 20–25 ನಿಮಿಷ ಬೇಯಿಸಿ. ಚಿಕನ್ ಚೆನ್ನಾಗಿ ಬೆಂದ ನಂತರ ಕಾಳುಮೆಣಸಿನ ಪುಡಿ ಮತ್ತು ಗರಂ ಮಸಾಲಾ ಸೇರಿಸಿ ಮಿಶ್ರಣ ಮಾಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಉದುರಿಸಿದರೆ ರುಚಿಕರವಾದ ಚಿಕನ್ ಪೆಪ್ಪರ್ ಮಸಾಲಾ ಸಿದ್ಧ!
ಬಿಸಿ ಬಿಸಿ ಅನ್ನ, ಚಪಾತಿ ಅಥವಾ ರೊಟ್ಟಿಯೊಂದಿಗೆ ಸವಿಯಿರಿ. ನಿಮ್ಮ ಭಾನುವಾರದ ಊಟಕ್ಕೆ ಈ ಸ್ಪೆಷಲ್ ರೆಸಿಪಿ ಖಂಡಿತಾ ರುಚಿ ಹೆಚ್ಚಿಸುತ್ತದೆ.

ನೋಡಿರಿ

