ಅಂಶುಲ್ ಕಾಂಬೋಜ್ಗೆ ಕೊಹ್ಲಿ ಕ್ಯಾಪ್! SRH ಬಿಡೋಕೆ ಅಭಿಷೇಕ್ ರೆಡಿ?

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು
ವೆಸ್ಟ್ ಇಂಡಿಸ್ ವಿರುದ್ಧದ 3ನೇ ODI ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಮುಲ್ಲಾನ್ಪುರದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಭಾರತ ತಂಡವು ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡುವ ಗುರಿಯೊಂದಿಗೆ ಕಣಕ್ಕಿಳಿದಿದೆ. ಗಾಯಗೊಂಡಿರುವ ಪ್ರಸಿದ್ಧ್ ಕೃಷ್ಣ ಅವರ ಬದಲಿಗೆ ಅಂಶುಲ್ ಕಾಂಬೋಜ್ ಅವರು ಈ ಪಂದ್ಯದ ಮೂಲಕ ಏಕದಿನ ಕ್ರಿಕೆಟ್ಗೆ ಪದಕಾರ್ಪಣೆ ಮಾಡಿದ್ದಾರೆ. ಅವರಿಗೆ ವಿರಾಟ್ ಕೊಹ್ಲಿ ಭಾರತ ತಂಡದ ಕ್ಯಾಪ್ ನೀಡಿದರು
ಏಷ್ಯನ್ ಗೇಮ್ಸ್ನಲ್ಲಿ ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಕ್ರಿಕೆಟ್ ಫೈನಲ್ನಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ. ಭಾರತ 20 ಓವರ್ಗಳಲ್ಲಿ 211 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡ 20 ಓವರ್ಗಳಲ್ಲಿ 192 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಟೀಮ್ ಇಂಡಿಯಾ 19 ರನ್ಗಳ ಗೆಲುವು ದಾಖಲಿಸಿದೆ.
ಪಾಕಿಸ್ತಾನ ವಿರುದ್ಧದ ಏಷ್ಯನ್ ಗೇಮ್ಸ್ ಫೈನಲ್ನಲ್ಲಿ ಭಾರತದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ 15 ರನ್ ಗಳಿಸಿ ಔಟಾದ ವೇಳೆ ಪಾಕ್ ಬೌಲರ್ ಕಿರಿಕ್ ಮಾಡಿದ್ದಾನೆ. 15 ರನ್ ಗಳಿಸಿದ್ದ ವೈಭವ್, ಸೈಮ್ ಅಯೂಬ್ ಬೌಲಿಂಗ್ನಲ್ಲಿ ವಿಕೆಟ್ಕೀಪರ್ಗೆ ಕ್ಯಾಚ್ ನೀಡಿದರು. ವೈಭವ್ ವಿಕೆಟ್ ಪಡೆಯುತ್ತಿದ್ದಂತೆ ಸೈಮ್ ಅಯೂಬ್ ನಡೆದುಕೊಂಡ ರೀತಿ ವಿವಾದಕ್ಕೆ ಕಾರಣವಾಗಿದೆ. ಸೂರ್ಯವಂಶಿಗೆ ಕೈಯಿಂದ ಮಗುವನ್ನು ತೂಗುವಂತೆ ಸೈನ್ ಮಾಡುತ್ತಾ ‘ಬೇಬಿ ಸೆಲೆಬ್ರೇಷನ್’ ಮಾಡುವ ಮೂಲಕ ಕಿರಿಕ್ ಮಾಡಿದ್ರು.
ಇಶಾನ್ ಕಿಶನ್, ಜಪಾನ್ ದೇಶದ ಆತಿಥ್ಯವನ್ನು ಶ್ಲಾಘಿಸಿದ್ದಾರೆ. ಭಾಷೆಯ ತೊಡಕಿದ್ದರೂ ಜಪಾನಿಗರು ನೆರವಾಗುವ ಗುಣವನ್ನು ಮೆಚ್ಚಿದ ಅವರು, “ಮದುವೆಯಾದ ಮೇಲೆ ಕುಟುಂಬದೊಂದಿಗೆ ಇಲ್ಲಿಗೆ ಮರುಪ್ರವಾಸ ಕೈಗೊಳ್ಳುವೆ” ಎಂದು ನಸುನಗುತ್ತಾ ಹೇಳಿದ್ದಾರೆ. ವಿಕೆಟ್ ಕೀಪರ್ ಬ್ಯಾಟರ್ ನೀಡಿರುವ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ.
ಏಷ್ಯನ್ ಗೇಮ್ಸ್ ಪುರುಷರ ಕ್ರಿಕೆಟ್ನಲ್ಲಿ ನಡೆದಿದ್ದ ಕಂಚಿನ ಪದಕ ಸ್ಪರ್ಧೆಯಲ್ಲಿ ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ ಭರ್ಜರಿ ಗೆಲುವು ಸಾಧಿಸಿದೆ. ಕೊರೋಗಿ ಸ್ಪೋರ್ಟ್ಸ್ ಮೈದಾನದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್ಗಳನ್ನು ಕಲೆಹಾಕಿತು. ಇದಕ್ಕೆ ಪ್ರತಿಯಾಗಿ ಬಾಂಗ್ಲಾದೇಶ 102 ರನ್ಗಳಿಗೆ ಸರ್ವಪತನ ಕಂಡಿತು.
ಭಾರತದ ODI ನಾಯಕ ಶುಭ್ಮನ್ ಗಿಲ್ ನಾಯಕತ್ವದ ಬಗ್ಗೆ ರೋಹಿತ್ ಶರ್ಮಾ ಇತ್ತೀಚೆಗೆ ಮಾತನಾಡಿದ್ದಾರೆ. ಗಿಲ್ ನಾಯಕನಾದರೂ ಅವರೊಂದಿಗೆ ಮಾತನಾಡುವುದು ಅಥವಾ ಸಲಹೆ ನೀಡುವುದು ಕಡಿಮೆಯಾಗಿಲ್ಲ ಎಂದು ರೋಹಿತ್ ಹೇಳಿದ್ದಾರೆ. 2027ರ ಏಕದಿನ ವಿಶ್ವಕಪ್ ಗೆಲ್ಲುವ ಗುರಿಯನ್ನೂ ರೋಹಿತ್ ಪ್ರಸ್ತಾಪಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಗಿಲ್ ನಾಯಕತ್ವದಲ್ಲಿ ಭಾರತ ಉತ್ತಮ ಪ್ರದರ್ಶನ ಮುಂದುವರಿಸಿದೆ.
ಸನ್ರೈಸರ್ಸ್ ಹೈದರಾಬಾದ್ ತಂಡದ ಸ್ಫೋಟಕ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಮಿನಿ ಹರಾಜಿಗೂ ಮೊದಲು ತಂಡವನ್ನು ತೊರೆಯಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಸನ್ರೈಸರ್ಸ್ ತಂಡದಲ್ಲಿ ಸಾಕಷ್ಟು ವರ್ಷಗಳಿಂದ ಆಡುತ್ತಿರುವ ಅಭಿಷೇಕ್ ಅವರನ್ನು ನಾಯಕತ್ವದ ರೇಸ್ನಲ್ಲಿ ಕಡೆಗಣಿಸಿರುವುದು ಅವರ ಈ ನಿರ್ಧಾರಕ್ಕೆ ಕಾರಣ ಎನ್ನಲಾಗುತ್ತಿದೆ. ಕಳೆದ ಆವೃತ್ತಿಯಲ್ಲಿ ಪ್ಯಾಟ್ ಕಮ್ಮಿನ್ಸ್ ಅನುಪಸ್ಥಿತಿಯಲ್ಲಿ ತಂಡದ ಆಡಳಿತ ಮಂಡಳಿ ಇಶಾನ್ ಕಿಶನ್ ಅವರನ್ನು ನಾಯಕನನ್ನಾಗಿ ನೇಮಿಸಿತು. ಇದು ಅಭಿಷೇಕ್ ಅಸಮಾಧಾನಕ್ಕೆ ಕಾರಣ ಎನ್ನಲಾಗುತ್ತಿದೆ
ಆರ್ಸಿಬಿ ಟ್ರೇಡ್ ಡೀಲ್ ಮಾತುಕತೆ ಅಂತಿಮಗೊಂಡರೆ ಸ್ಯಾಮ್ ಕುರನ್ ಆರ್ಸಿಬಿ ಸೇರಲಿದ್ದಾರೆ. ಇದಕ್ಕೆ ಬದಲಾಗಿ ಆರ್ಸಿಬಿ ತಂಡದ ರೊಮಾರಿಯೋ ಶೆಫರ್ಡ್ ರಾಜಸ್ಥಾನ ರಾಯಲ್ಸ್ ತಂಡ ಸೇರಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ. ಕಳೆದ ಐಪಿಎಲ್ ಆವೃತ್ತಿಯಲ್ಲಿ ರೋಮಾರಿಯೋ ಶೆಫರ್ಡ್ ಹೆಚ್ಚಿನ ಅವಕಾಶವೂ ಸಿಕ್ಕಿಲ್ಲ, ಸಿಕ್ಕ ಅವಕಾಶದಲ್ಲಿ ಮಿಂಚಲು ಸಾಧ್ಯವಾಗಿಲ್ಲ. ಇದೀಗ ರೋಮಾರಿಯೋ ಶೆಫರ್ಡ್ ರಾಜಸ್ಥಾನ ರಾಯಲ್ಸ್ ತಂಡಕ್ಕೆ ನೀಡಿ, ಸ್ಯಾಮ್ ಕುರನ್ ತಂಡಕ್ಕೆ ಸೇರಿಸಿಕೊಳ್ಳಲು ಆರ್ಸಿಬಿ ಮಾತುಕತೆ ನಡೆಸುತ್ತಿದೆ.
ವಿಶ್ವ ಕ್ರಿಕೆಟ್ನ ದಿಗ್ಗಜ ಆಟಗಾರರು ಮತ್ತೊಮ್ಮೆ ಮೈದಾನದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ ಟಿ20 ಲೀಗ್ನ ಮೂರನೇ ಆವೃತ್ತಿ ಇಂದಿನಿಂದ ಅಕ್ಟೋಬರ್ 18ರವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ನಡೆಯಲಿದೆ. ಇದೇ ಮೊದಲ ಬಾರಿ ಮಧ್ಯಪ್ರಾಚ್ಯದಲ್ಲಿ ಟೂರ್ನಿ ಆಯೋಜನೆಯಾಗುತ್ತಿದ್ದು, ದುಬೈ ಮತ್ತು ಶಾರ್ಜಾದ ಪ್ರಮುಖ ಕ್ರೀಡಾಂಗಣಗಳು ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ. ಯುವರಾಜ್ ಸಿಂಗ್, ಡಿವಿಲಿಯರ್ಸ್, ಗೇಲ್ಸ್ ಈ ಟೂರ್ನಿಗೆ ಸಿದ್ಧರಾಗಿದ್ದಾರೆ.
ದಕ್ಷಿಣ ಆಫ್ರಿಕಾದ ಯುವ ಬ್ಯಾಟರ್ ಟೈಟನ್ಸ್ ಪರ ಅದ್ಭುತ ಬ್ಯಾಟಿಂಗ್ ನಡೆಸಿ T20 ಕ್ರಿಕೆಟ್ನಲ್ಲಿ ಭರ್ಜರಿ ದಾಖಲೆ ನಿರ್ಮಿಸಿದ್ದಾರೆ. ನೈಟ್ಸ್ ವಿರುದ್ಧ ಬ್ಲೋಮ್ಫಾಂಟೈನ್ನಲ್ಲಿ ಅವರು 188 ರನ್ಗಳಿಗೆ ಅಜೇಯರಾಗಿ ಉಳಿದರು. 15 ಬೌಂಡರಿ ಮತ್ತು 13 ಸಿಕ್ಸರ್ಗಳನ್ನು ಸಿಡಿಸಿದ ಅವರು ತಂಡದ ಮೊತ್ತವನ್ನು 20 ಓವರ್ಗಳಲ್ಲಿ 267/3ಕ್ಕೆ ಕೊಂಡೊಯ್ದರು. ಈ ಮೂಲಕ ಕ್ರಿಸ್ ಗೇಲ್ ಹೆಸರಿನಲ್ಲಿದ್ದ 175 ರನ್ಗಳ ವಿಶ್ವ ದಾಖಲೆ ಧೂಳೀಪಟ ಮಾಡಿದ್ದಾರೆ.

ನೋಡಿರಿ

