ರಿಷಬ್ ಶೆಟ್ಟಿ, ವಿಜಯ್ ಕಿರಗಂದೂರುಗೆ ನಿರೀಕ್ಷಣಾ ಜಾಮೀನು – ನ್ಯಾಯಾಧೀಶರು ಹಾಕಿದ ಷರತ್ತುಗಳೇನು..!?

ರಿಷಬ್ ಶೆಟ್ಟಿ, ವಿಜಯ್ ಕಿರಗಂದೂರುಗೆ ನಿರೀಕ್ಷಣಾ ಜಾಮೀನು – ನ್ಯಾಯಾಧೀಶರು ಹಾಕಿದ ಷರತ್ತುಗಳೇನು..!?

ಕಾಂತಾರ ಸಿನಿಮಾ ಸಕ್ಸಸ್​ನಲ್ಲಿರೋ ನಟ ರಿಷಬ್ ಶೆಟ್ಟಿ ಹಾಗೂ ವಿಜಯ್ ಕಿರಗಂದೂರುಗೆ ಬಿಗ್ ರಿಲೀಫ್ ಸಿಕ್ಕಿದೆ. ಕೇರಳ ಹೈಕೋರ್ಟ್​​ನ ನ್ಯಾಯಮೂರ್ತಿ ಎ. ಬದ್ರುದೀನ್ ರಿಷಬ್ ಹಾಗೂ ವಿಜಯ್​ಗೆ ನಿರೀಕ್ಷಣಾ ಜಾಮೀನು ನೀಡಿದ್ದಾರೆ. ಜೊತೆಗೆ ಅರ್ಜಿದಾರರಿಗೆ ಷರತ್ತುಗಳನ್ನು ಹಾಕಿದ್ದಾರೆ.

ಇದನ್ನೂ ಓದಿ : ಲ್ಯಾಂಡ್ ಡೀಲರ್ ವಿರುದ್ಧ ವರದಿ ಮಾಡಿದ್ದೇ ತಪ್ಪಾ..!? – ಪತ್ರಕರ್ತನ ಮೇಲೆ ಕಾರು ಹರಿಸಿ ಭೀಕರ ಕೊಲೆ..!

ದೇಶ, ಭಾಷೆಗಳ ಎಲ್ಲೆ ಮೀರಿ ಗೆಲುವಿನ ನಗಾರಿ ಭಾರಿಸಿದ ಚಿತ್ರ ಕಾಂತಾರ. ಈಗಾಗ್ಲೇ ಈ ಸಿನಿಮಾ 100 ದಿನ  ಪೂರೈಸಿ ಚಿತ್ರತಂಡ ಈ ಗೆಲುವನ್ನ ಸೆಲೆಬ್ರೇಟ್ ಕೂಡ ಮಾಡಿದೆ. ಆದ್ರೆ ಇದೇ ಚಿತ್ರದಲ್ಲಿ ಪ್ರೇಕ್ಷಕರನ್ನ ಮಂತ್ರ ಮುಗ್ದರನ್ನಾಗಿಸಿದ್ದ ‘ವರಾಹ ರೂಪಂ’ ಹಾಡಿನ ಬಗ್ಗೆ ಭಾರೀ ವಿವಾದ ಸೃಷ್ಟಿಯಾಗಿತ್ತು. ‘ನಮ್ಮ ಟ್ಯೂನ್ ಕದಿಯಲಾಗಿದೆ’ ಎಂದು ಮಲಯಾಳಂನ ‘ತೈಕ್ಕುಡಂ ಬ್ರಿಡ್ಜ್​​’ನವರು ಆರೋಪ ಮಾಡಿದ್ದರು. ಈ ವಿಚಾರ ಕೋರ್ಟ್​ನಲ್ಲಿದ್ದು, ಸದ್ಯ ಹೊಂಬಾಳೆ ಫಿಲಮ್ಸ್​​​ನ ವಿಜಯ್ ಕಿರಗಂದೂರು ಹಾಗೂ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಅವರು ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.

ಕೇರಳ ಹೈಕೋರ್ಟ್​​ನ ನ್ಯಾಯಮೂರ್ತಿ ಎ. ಬದ್ರುದೀನ್ ಅವರು ರಿಷಬ್ ಹಾಗೂ ವಿಜಯ್​ಗೆ ನಿರೀಕ್ಷಣಾ ಜಾಮೀನು ನೀಡಿದ್ದಾರೆ. ಜತೆಗೆ ಅರ್ಜಿದಾರರಿಗೆ ಷರತ್ತುಗಳನ್ನು ಹಾಕಿದ್ದಾರೆ. ‘ಕಾಪಿರೈಟ್ ಪ್ರಕರಣದಲ್ಲಿ ಸಿವಿಲ್ ಕೋರ್ಟ್​ನಿಂದ ಮಧ್ಯಂತರ ಅಥವಾ ಅಂತಿಮ ಆದೇಶ ಬರೋವರೆಗೆ ಕಾಂತಾರ ಸಿನಿಮಾದಲ್ಲಿ ‘ವರಾಹ ರೂಪಂ..’ ಹಾಡನ್ನು ಬಳಕೆ ಮಾಡುವಂತಿಲ್ಲ. ಈ ಪ್ರಕರಣದ ಮರುವಿಚಾರಣೆಗೆ ಕೋರಲು ಅರ್ಜಿದಾರರಿಗೆ ಅವಕಾಶ ಇದೆ’ ಎಂದು ಬದ್ರುದೀನ್ ಹೇಳಿದ್ದಾರೆ. ತೈಕುಡಂ ಬ್ರಿಡ್ಜ್​ನವರು ಕೋಯಿಕ್ಕೋಡ್​ನ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ‘ವರಾಹ ರೂಪಂ..’ ಹಾಡಿನಲ್ಲಿ ಬಳಕೆ ಆದ ಟ್ಯೂನ್ ‘ನವರಸಂ’ ಹಾಡಿನದ್ದು ಎನ್ನುವ ಆರೋಪ ಕೇಳಿ ಬಂತು. ಈ ಪ್ರಕರಣದ ಸದ್ಯ ಕೋರ್ಟ್​ನಲ್ಲಿ ವಿಚಾರಣೆ ಆಗುತ್ತಿದೆ.

suddiyaana