IND Vs WI ಹೊಡಿಬಡಿ ಧಮಾಕ – X -Factor ಪ್ಲೇಯರ್ಸ್ ಯಾರೆಲ್ಲಾ?
T-20I ಫೆಸ್ಟಿವಲ್ ಗೆಲ್ಲೋದ್ಯಾರು?

ಟೀಂ ಇಂಡಿಯಾ ಫ್ಯಾನ್ಸ್ ಅಂತೂ ಈ ಫೆಸ್ಟಿವಲ್ ಮೂಡ್ನಲ್ಲಿದ್ದಾರೆ. ಏಷ್ಯನ್ ಗೇಮ್ಸ್ ಫೈನಲ್ನಲ್ಲಿ ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಿ ಮತ್ತೊಮ್ಮೆ ಗೋಲ್ಡ್ ಮೆಡಲ್.. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲೂ ವಿನ್ನರ್ಸ್.. ದೆನ್ ವಾಟ್ ನೆಕ್ಸ್ಟ್ ಅಂದ್ರೆ ಲಾಂಗ್ ಬ್ರೇಕ್ ಇಲ್ವೇಇಲ್ಲ. ಜಸ್ಟ್ ಇನ್ನೆರಡು ದಿನಗಳಲ್ಲೇ ಮತ್ತೆ ಅಭಿಮಾನಿಗಳಿಗೆ ಹಬ್ಬ. ವೆಸ್ಟ್ ಇಂಡೀಸ್ ವಿರುದ್ಧ ಅದೂ ಕೂಡ ಐದು ಪಂದ್ಯಗಳ ಟಿ-20ಐ ಸರಣಿ ಸ್ಟಾರ್ಟ್ ಆಗಲಿದೆ.
ಇದನ್ನೂ ಓದಿ : ಭಾರತಕ್ಕೆ AUSನೇ ಫಸ್ಟ್ ವಿಲನ್! – ಅ.10ಕ್ಕೆ ಇಂಡೋ-ಪಾಕ್ ಫೈಟ್
ಒಂದ್ಕಡೆ ಪವರ್ ಹಿಟ್ಟಿಂಗ್ಗೇ ಹೆಸರುವಾಸಿಯಾಗಿರೋ ವೆಸ್ಟ್ ಇಂಡೀಸ್ ತಂಡ.. ಮತ್ತೊಂದ್ಕಡೆ ಟಿ-20ಐನ ಮೋಸ್ಟ್ ಡೇಂಜರಸ್ ಬ್ಯಾಟರ್ಗಳೇ ತುಂಬಿರೋ ಯಂಗ್ ಇಂಡಿಯಾ.. ಇವ್ರಿಬ್ರೂ ಎದುರುಬದುರಾಗಿ ಅಖಾಡಕ್ಕಿಳಿದ್ರೆ ಕೇಳ್ಬೇಕಾ.. ಗ್ಯಾಲರಿಯ ಮೂಲೆ ಮೂಲೆಗೂ ಬಾಲ್ಗಳು ಬೀಳೋದಂತೂ ಪಕ್ಕಾ. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 5 ಪಂದ್ಯಗಳ ಟಿ-20ಐ ಅಕ್ಟೋಬರ್ 6 ರಿಂದ ಅಕ್ಟೋಬರ್ 17 ರವರೆಗೆ ಭಾರತದಲ್ಲಿ ನಡೆಯಲಿದೆ. ಭಾರತ ತಂಡವನ್ನು ಶ್ರೇಯಸ್ ಅಯ್ಯರ್ ಲೀಡ್ ಮಾಡಿದ್ರೆ ವೆಸ್ಟ್ ಇಂಡೀಸ್ ತಂಡಕ್ಕೆ ಶಾಯ್ ಹೋಪ್ ನಾಯಕರಾಗಿದ್ದಾರೆ.
5 ಪಂದ್ಯಗಳ ಹಬ್ಬ!
ಪಂದ್ಯ ದಿನಾಂಕ ಸ್ಥಳ
1ನೇ ಪಂದ್ಯ ಅಕ್ಟೋಬರ್ 6 ಲಕ್ನೋ
2ನೇ ಪಂದ್ಯ ಅಕ್ಟೋಬರ್ 9 ರಾಂಚಿ
3ನೇ ಪಂದ್ಯ ಅಕ್ಟೋಬರ್ 11 ಇಂದೋರ್
4ನೇ ಪಂದ್ಯ ಅಕ್ಟೋಬರ್ 14 ಹೈದರಾಬಾದ್
5ನೇ ಪಂದ್ಯ ಅಕ್ಟೋಬರ್ 17 ಬೆಂಗಳೂರು
ಹೀಗೆ ನೆಕ್ಸ್ಟ್ ಎರಡು ವಾರ ಅಂತೂ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಹಬ್ಬನೇ ಆಗುತ್ತೆ. ಮೊದ್ಲೇ ಸರಣಿ ನಡೆಯುತ್ತಾ ಇರೋದು ಟಿ-20ಐ ಮಾದರಿಯಲ್ಲಿ. ಭಾರತ ಈ ಫಾರ್ಮೆಟ್ನಲ್ಲಿ ಬ್ಯಾಟಿಂಗ್ನಲ್ಲಿ ನೆಕ್ಸ್ಟ್ ಲೆವೆಲ್ ಬ್ಯಾಟರ್ಸ್ನ ಹೊಂದಿದೆ. ಹೀಗಾಗಿ ಈ ಪಂದ್ಯಗಳಲ್ಲಿ ಸಿಕ್ಸ್, ಫೋರ್ಗಳ ಸುರಿಮಳೆಯಂತೂ ಪಕ್ಕಾ. ಹಾಗೇ ಕೋಚ್ ಡ್ಯಾರೆನ್ ಸ್ಯಾಮಿ ಅವರ ಮಾರ್ಗದರ್ಶನದ ವೆಸ್ಟ್ ಇಂಡೀಸ್ ತಂಡದಲ್ಲಿ ಹಲವು ಪ್ರಮುಖ ಆಟಗಾರರ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಈ ಸರಣಿಯಲ್ಲಿ ಭಾರತಕ್ಕೆ ಕಠಿಣ ಸವಾಲು ನೀಡಬಲ್ಲ ವಿಂಡೀಸ್‌ನ ಎಕ್ಸ್-ಫ್ಯಾಕ್ಟರ್ ಪ್ಲೇಯರ್ಸ್ ಕೂಡ ಇದ್ದಾರೆ. ಭಾರತದ ಪಿಚ್‌ಗಳಿಗೆ ಹೊಂದಿಕೊಳ್ಳಲು ಶಿಮ್ರಾನ್ ಹೆಟ್ಮೆಯರ್, ರೊಮಾರಿಯೋ ಶೆಫರ್ಡ್ ಅವರಂತಹ ಐಪಿಎಲ್ ಅನುಭವವಿರುವ ಆಟಗಾರರು ವಿಂಡೀಸ್ ಪಡೆಗೆ ಪ್ರಮುಖ ಶಕ್ತಿಯಾಗಲಿದ್ದಾರೆ.
ಹೊಡಿ ಬಡಿ ಬ್ಯಾಟಿಂಗ್ ಪಕ್ಕಾ!
ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಇಶಾನ್ ಕಿಶನ್ ಫೈಯರ್
ಇಂಡಿಯನ್ ಪಿಚ್ ಗಳಲ್ಲಿ ಮತ್ತೊಮ್ಮೆ ಸಂಜು ಸ್ಯಾಮ್ಸನ್ ಧಮಾಕಾ ನಿರೀಕ್ಷೆ
ಸ್ಟಾರ್ ಬೌಲರ್ಸ್ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಮೇಲೆಯೂ ಹೆಚ್ಚಿನ ನಿರೀಕ್ಷೆ
ಹಾರ್ಡ್ ಹಿಟ್ಟಿಂಗ್ ಗೆ ಹೆಸರಾಗಿರೋ ಕೆರೆಬಿಯನ್ ರೋವ್ ಮನ್ ಪೊವೆಲ್
ತಂಡವನ್ನು ಮುನ್ನಡೆಸುತ್ತಿರುವ ಶಾಯ್ ಹೋಪ್ ಪ್ರಸ್ತುತ ಭರ್ಜರಿ ಫಾರ್ಮ್
ಭಾರತದ ಪಿಚ್ ಗಳಲ್ಲಿ ಅತ್ಯಂತ ಅಪಾಯಕಾರಿ ಬ್ಯಾಟರ್ ಶಿಮ್ರಾನ್ ಹೆಟ್ಮೆಯರ್
ಲೋವರ್ ಆರ್ಡರ್ ನಲ್ಲಿ ಪಂದ್ಯದ ದಿಕ್ಕನ್ನೇ ಬದಲಿಸೋ ರೊಮಾರಿಯೋ ಶೆಫರ್ಡ್
ಎಡಗೈ ಆರ್ಥೊಡಾಕ್ಸ್ ಸ್ಪಿನ್ನರ್ ಅಕೀಲ್ ಹೊಸೇನ್ ಸ್ಪಿನ್ ಬೌಲಿಂಗ್ ಕರಾಮತ್ತು
ಎಕ್ಸ್ ಪ್ರೆಸ್ ವೇಗದ ಬೌಲಿಂಗ್ ನಲ್ಲಿ ಸಂಚಲನ ಸೃಷ್ಟಿಸಿರುವ ಶಮರ್ ಜೋಸೆಫ್
ಹೀಗೆ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಐದು ಪಂದ್ಯಗಳ ಸರಣಿ ಹಲವು ವಿಚಾರಗಳಿಂದ ಸರಣಿಯ ಫೀವರ್ ಹೆಚ್ಚಿಸಿದೆ. ಌಂಡ್ ಎರಡೂ ಕಡೆಯೂ ಮೋಸ್ಟ್ ಡೇಂಜರಸ್ ಪ್ಲೇಯರ್ಗಳೇ ಇದ್ದಾರೆ. ಌಂಡ್ ಈ ಸರಣಿ ಹಲವು ವಿಚಾರಗಳಿಂದ ಎರಡೂ ತಂಡಗಳಿಗೆ ತುಂಬಾನೇ ಮುಖ್ಯ. 2026ರ ವಿಶ್ವಕಪ್ ಆದ್ಮೇಲೆ ಎರಡೂ ತಂಡಗಳೂ ತಮ್ಮ ಭವಿಷ್ಯದ ತಲೆಮಾರಿನ ಆಟಗಾರರನ್ನು ಸಿದ್ಧಪಡಿಸಲು ಈ ಸರಣಿಯನ್ನು ಒಂದು ಮಾನದಂಡವಾಗಿ ಬಳಸಿಕೊಳ್ತಾರೆ. ಭಾರತ ತಂಡಕ್ಕೆ ಶ್ರೇಯಸ್ ಅಯ್ಯರ್ ಮತ್ತು ವೆಸ್ಟ್ ಇಂಡೀಸ್ ತಂಡಕ್ಕೆ ಶಾಯ್ ಹೋಪ್ ಹೊಸ ನಾಯಕರಾಗಿ ಜವಾಬ್ದಾರಿ ಹೊತ್ತಿದ್ದು, ಹೊಸ ನಾಯಕತ್ವದ ಅಡಿಯಲ್ಲಿ ತಂಡಗಳ ಕಾರ್ಯತಂತ್ರ ಹೇಗಿರಲಿದೆ ಎಂಬುದನ್ನು ಪರೀಕ್ಷಿಸೋಕೆ ಇದು ರೈಟ್ ಟೈಂ ಕೂಡ ಆಗಲಿದೆ. ಹೇಳಿ ಕೇಳಿ ವೆಸ್ಟ್ ಇಂಡೀಸ್ ಯಾವಾಗ್ಲೂ ಟಿ-20ಐ ಫಾರ್ಮೆಟ್ನ ರಾಜ ಎಂದೇ ಹೆಸರಾದ ತಂಡ. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರ ಪ್ರದರ್ಶನದಲ್ಲಿ ಸ್ಥಿರತೆ ಇರಲಿಲ್ಲ. ಆದ್ರೀಗ ಕೋಚ್ ಡ್ಯಾರೆನ್ ಸ್ಯಾಮಿ ಮಾರ್ಗದರ್ಶನದಲ್ಲಿ ವಿಂಡೀಸ್ ಪಡೆ, ಭಾರತದ ನೆಲದಲ್ಲೇ ಭಾರತವನ್ನು ಮಣಿಸಿ ತನ್ನ ಹಳೆಯ ‘ಟಿ20 ಪವರ್‌ಹೌಸ್’ ಹೆಗ್ಗಳಿಕೆಯನ್ನು ಮರಳಿ ಪಡೆಯುವ ಹಠದಲ್ಲಿದೆ. ಇತ್ತ ಶ್ರೇಯಸ್ ಕ್ಯಾಪ್ಟನ್ಸಿಯಲ್ಲಿ ಭಾರತದ ಪಾರುಪತ್ಯ ಮುಂದುವರಿಸೋ ಟಾರ್ಗೆಟ್ನಲ್ಲಿದೆ.

ನೋಡಿರಿ

