ಭಾರತಕ್ಕೆ AUSನೇ ಫಸ್ಟ್ ವಿಲನ್! – ಅ.10ಕ್ಕೆ ಇಂಡೋ-ಪಾಕ್ ಫೈಟ್
ವಿಶ್ವಕಪ್ ಗೆ 14-2=12 ಟ್ವಿಸ್ಟ್

ಕ್ರಿಕೆಟ್ ಜಗತ್ತೇ ಕುತೂಹಲದಿಂದ ಕಾಯ್ತಾ ಇದ್ದ 2027ರ ಏಕದಿನ ವಿಶ್ವಕಪ್ನ ಗ್ರೂಪ್ ಹಂತದ ಪಂದ್ಯಗಳ ಶೆಡ್ಯೂಲ್ ಅನೌನ್ಸ್ ಆಗಿದೆ. ಯಾವ್ಯಾವ ತಂಡಗಳ ವಿರುದ್ಧ ಌಂಡ್ ಯಾವ ದಿನ ಭಾರತದ ಪಂದ್ಯಗಳು ಅನ್ನೋ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದೆ.
ಇದನ್ನೂ ಓದಿ : ಐಸಿಸಿ 2027 ವಿಶ್ವಕಪ್ ವೇಳಾಪಟ್ಟಿ ಬಿಡುಗಡೆ – ಒಂದೇ ಗುಂಪಿನಲ್ಲಿ ಭಾರತ–ಪಾಕಿಸ್ತಾನ ಫೈಟ್
ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೇ ನಮೀಬಿಯಾ. ಈ ಮೂರೂ ರಾಷ್ಟ್ರಗಳ ಆತಿಥ್ಯದಲ್ಲಿ ನಡೆಯಲಿರೋ 2027ರ ಏಕದಿನ ವಿಶ್ವಕಪ್ನಲ್ಲಿ ಒಟ್ಟು 14 ಟೀಮ್ಸ್ ಪಾರ್ಟಿಸಿಪೇಟ್ ಮಾಡ್ತಾರೆ. ಟೋಟಲ್ 12 ಸ್ಥಳಗಳಲ್ಲಿ 57 ಪಂದ್ಯಗಳನ್ನು ಆಡಬೇಕಿದೆ. ಅಕ್ಟೋಬರ್ 2 ರಿಂದ ನವೆಂಬರ್ 21 ರವರೆಗೆ ಅದ್ಧೂರಿಯಾಗಿ ಜರುಗಲಿದೆ. ಟೂರ್ನಿಯ ಉದ್ಘಾಟನಾ ಪಂದ್ಯವು ಅಕ್ಟೋಬರ್ 2 ರಂದು ಆರಂಭವಾಗಲಿದ್ದು, ವಿಶ್ವ ಕ್ರಿಕೆಟ್‌ನ ಹೊಸ ಚಾಂಪಿಯನ್ ಯಾರು ಎಂಬುದನ್ನು ನಿರ್ಧರಿಸುವ ಮಹಾ ಫೈನಲ್ ಪಂದ್ಯವು ನವೆಂಬರ್ 21 ರಂದು ನಡೆಯಲಿದೆ. ಇನ್ನು ಭಾರತ ಗ್ರೂಪ್ ಎನಲ್ಲಿದ್ದು ಈ ಗುಂಪಿನಲ್ಲಿ ಪಾಕಿಸ್ತಾನ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಜಿಂಬಾಬ್ವೆ ಮತ್ತು ಕ್ವಾಲಿಫೈಯರ್ ಎ ಯ ಒಂದು ತಂಡ ಸೇರಿವೆ. ಗ್ರೂಪ್ ಬಿ ನಲ್ಲಿ ಬಾಂಗ್ಲಾದೇಶ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ನ್ಯೂಜಿಲೆಂಡ್ ಮತ್ತು ಕ್ವಾಲಿಫೈಯರ್ ಬಿ ಯ ಒಂದು ತಂಡ ಇರಲಿದೆ. ಇನ್ನು ಟೂರ್ನಿಯಲ್ಲಿ ಭಾರತದ ಮೊದಲ ಎದುರಾಳಿಯೇ ಕಾಂಗರೂಪಡೆ.
2023ರಲ್ಲಿ ಭಾರತದ ಕಪ್ ಕಸಿದ ಕಾಂಗರೂಗಳೇ ಫಸ್ಟ್ ವಿಲನ್!
ಏಕದಿನ ವಿಶ್ವಕಪ್ ಅಂದ್ರೆ ಪ್ರಸ್ತುತ ಭಾರತೀಯರಿಗೆ ಥಟ್ ಅಂತಾ ನೆನಪಾಗೋದೇ 2023ರ ಹಾರ್ಟ್ ಬ್ರೇಕಿಂಗ್ ಮೂಮೆಂಟ್ಸ್. ಮೋದಿ ಸ್ಟೇಡಿಯಮ್ನಲ್ಲಿ ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳ ಕಣ್ಮುಂದೆ ಕೋಟ್ಯಂತರ ಭಾರತೀಯರ ಹೃದಯ ಛಿದ್ರವಾಗಿತ್ತು. ಭಾರತ-ಆಸ್ಟ್ರೇಲಿಯಾ ಫೈನಲ್ ಪಂದ್ಯದಲ್ಲಿ ಭಾರತ ಸೋತು ಚಾಂಪಿಯನ್ ಪಟ್ಟವನ್ನ ಜಸ್ಟ್ ಮಿಸ್ ಮಾಡಿಕೊಂಡಿದ್ರು. ಟ್ರೋಫಿ ಗೆದ್ದ ಅಹಂಕಾರದಲ್ಲಿ ನಾವು ಭಾರತೀಯರನ್ನ ಸೈಲೆಂಡ್ ಮಾಡಿದ್ದೇವೆ ಅಂತಾ ಆಸೀಸ್ ಪ್ಲೇಯರ್ಸ್ ಅಹಂಕಾರದ ಮಾತುಗಳನ್ನಾಡಿದ್ರು. ಇದೆಲ್ಲಾ ಮುಗಿದ ಅಧ್ಯಾಯವಾಗಿ ಈಗ ಹೊಸ ಇತಿಹಾಸ ಸೃಷ್ಟಿಸೋಕೆ ಭಾರತ ರೆಡಿಯಾಗ್ತಿದೆ. 2027ರ ಏಕದಿನ ವಿಶ್ವಕಪ್ಗೆ ಡೇಟ್ಸ್ ಅನೌನ್ಸ್ ಆಗಿದ್ದು ಆಸ್ಟ್ರೇಲಿಯಾ ವಿರುದ್ಧವೇ ಭಾರತ ತನ್ನ ಮೊದಲ ಪಂದ್ಯ ಆಡ್ಬೇಕಿದೆ.
ಭಾರತದ ಗ್ರೂಪ್ ಸ್ಟೇಜ್ ಪಂದ್ಯಗಳು!
ದಿನಾಂಕ ಎದುರಾಳಿ
ಅಕ್ಟೋಬರ್ 7 ಆಸ್ಟ್ರೇಲಿಯಾ
ಅಕ್ಟೋಬರ್ 10 ಪಾಕಿಸ್ತಾನ
ಅಕ್ಟೋಬರ್ 14 ಅಫ್ಘಾನಿಸ್ತಾನ
ಅಕ್ಟೋಬರ್ 17 ಕ್ವಾಲಿಫೈಯರ್ ಎ
ಅಕ್ಟೋಬರ್ 24 ಜಿಂಬಾಬ್ವೆ
ಹೀಗೆ ಗ್ರೂಪ್ ಸ್ಟೇಜ್ನಲ್ಲಿ ಭಾರತ ಐದು ಪಂದ್ಯಗಳನ್ನ ಆಡಲಿದೆ. ಅಷ್ಟಕ್ಕೂ ಇಲ್ಲಿ ಟೋಟಲ್ 14 ತಂಡ ಇರೋದು ಬಟ್ ಎರಡು ಗುಂಪುಗಳಲ್ಲಿ ತಲಾ 6ರಂತೆ 12 ತಂಡಗಳಾಗ್ತಾರೆ. ಇನ್ನುಳಿದ 2 ತಂಡಗಳ ಕಥೆ ಏನು ಅಂದ್ರೆ ಅಲ್ಲೂ ಕೂಡ ಟ್ವಿಸ್ಟ್ ಇದೆ. ಕ್ವಾಲಿಫೈಯರ್ ಟೂರ್ನಿಯಲ್ಲಿ ನಂಬರ್ 1ಸ್ಥಾನದ ತಂಡ ನೇರವಾಗಿ ಅರ್ಹತೆ ಪಡೆಯುತ್ತೆ. ಇದು ಗ್ರೂಪ್ ಎನಲ್ಲಿ ಸೇರಿಕೊಳ್ತಾರೆ. ಆನಂತ್ರ 2, 3 ಹಾಗೇ 4ನೇ ಸ್ಥಾನದ ತಂಡಗಳ ನಡುವೆ ರೌಂಡ್-ರಾಬಿನ್ ಪಂದ್ಯಗಳು ನಡೆದು, ಅದರಲ್ಲಿ ಅಗ್ರಸ್ಥಾನ ಪಡೆಯುವ 1 ತಂಡ ಮಾತ್ರ ಮುಂದಿನ ಹಂತಕ್ಕೆ ಹೋಗುತ್ತದೆ. ಇವ್ರು ಗ್ರೂಪ್ ಬಿ ಸೇರಿಕೊಳ್ತಾರೆ. ಪ್ರತಿ ಗುಂಪಿನಿಂದ ಟಾಪ್ 3 ತಂಡಗಳು ಮತ್ತು ಒಟ್ಟಾರೆ ಉತ್ತಮ ಪ್ರದರ್ಶನ ನೀಡಿದ ಮತ್ತೊಂದು ತಂಡ ಸೇರಿದಂತೆ ಒಟ್ಟು 7 ತಂಡಗಳು ಸೂಪರ್ 7 ಹಂತಕ್ಕೆ ಲಗ್ಗೆ ಇಡಲಿವೆ. ಸೂಪರ್ 7ನಲ್ಲಿ ಒಟ್ಟು 21 ರೌಂಡ್-ರಾಬಿನ್ ಪಂದ್ಯಗಳು ನಡೆಯಲಿದೆ. ಈ ಪೈಕಿ ಬೆಸ್ಟ್ ಪರ್ಫಾಮೆನ್ಸ್ ನೀಡಿದ 4 ತಂಡಗಳು ಸೆಮಿಫೈನಲ್ ತಲುಪಲಿವೆ. ಎರಡು ಸೆಮಿಫೈನಲ್ ಪಂದ್ಯಗಳು ನಡೆದ ಬಳಿಕ, ನವೆಂಬರ್ 21 ರಂದು ಫೈನಲ್ ಪಂದ್ಯದ ಮೂಲಕ ಹೊಸ ಚಾಂಪಿಯನ್ಸ್ ಉದಯ ಆಗ್ತಾರೆ.

ನೋಡಿರಿ

