ಸ್ವಿಂಗ್, ಸೀಮ್ ಇಲ್ಲ.. ವಿಕೆಟ್ಸ್ ಬೀಳಲ್ಲ – ಬ್ಯಾಟರ್ಸ್ ಬೆಂಕಿಗೆ ಬೌಲರ್ಸ್ ಬಲಿಪಶು
TREND SETTER ಕ್ಯಾಪ್ಟನ್ ಗಿಲ್

ಸ್ವಿಂಗ್, ಸೀಮ್ ಇಲ್ಲ.. ವಿಕೆಟ್ಸ್ ಬೀಳಲ್ಲ – ಬ್ಯಾಟರ್ಸ್ ಬೆಂಕಿಗೆ ಬೌಲರ್ಸ್ ಬಲಿಪಶುTREND SETTER ಕ್ಯಾಪ್ಟನ್ ಗಿಲ್

ವೆಸ್ಟ್ ಇಂಡೀಸ್ ಕಡೆಯಿಂದ ಮೂರು ಸೆಂಚುರಿ.. ಭಾರತದ ಕಡೆಯಿಂದ ಒಂದು ಡಬಲ್ ಸೆಂಚುರಿ ಜೊತೆಗೆ ಒಂದು ಸೆಂಚುರಿ. ಎರಡೂ ಇನ್ನಿಂಗ್ಸ್ ಗಳಿಂದ ಟೋಟಲ್ 800+ ರನ್ಸ್.. ಗುವಾಹಟಿಯಲ್ಲಿ ಬುಧವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಬ್ಯಾಟರ್ಸ್ ಅಕ್ಷರಶಃ ಸುನಾಮಿ ಎಬ್ಬಿಸಿದ್ರು. ದಾಖಲೆಯ ಮೊತ್ತದ ಚೇಸಿಂಗ್ ಮಾಡಿ ಭಾರತ ಕೂಡ ಭರ್ಜರಿಯಾಗೇ ಗೆಲ್ತು. ಆದ್ರೆ ಪಂದ್ಯ ಗೆದ್ರೂ ಭಾರತದ ಕೋಚಿಂಗ್ ಸ್ಟಾಫ್ಸ್ ಸಿಟ್ಟಾಗಿದ್ದಾರೆ. ಅದಕ್ಕೆ ಕಾರಣ ಬ್ಯಾಟಿಂಗ್ ಪ್ಯಾರಡೈಸ್ ಆಗ್ತಿರುವ ಫ್ಲಾಟ್ ಪಿಚ್​ಗಳು.

ಇದನ್ನೂ ಓದಿ : ರೊಚ್ಚಿಗೆದ್ದ ರೋಹಿತ್.. ಗೆದ್ದಾಯ್ತು ಗಿಲ್ – ರನ್ಸ್ ಬೆಟ್ಟ ಕಟ್ಟಿದ್ರೂ ಸೋತ ವಿಂಡೀಸ್

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಹಾಗೇ ಎರಡನೇ ಏಕದಿನ ಪಂದ್ಯಗಳನ್ನ ಗೆದ್ದು ಭಾರತ ಸರಣಿ ಕೈವಶ ಮಾಡಿಕೊಂಡಿದೆ. ಌಂಡ್ ಈ ಎರಡೂ ಪಂದ್ಯಗಳಲ್ಲೂ ಶೈನ್ ಆಗಿದ್ದು ಬ್ಯಾಟರ್​ಗಳೇ. ತಿರುವನಂತಪುರದಲ್ಲಿ ನಡೆದ ಮೊದಲ ಮ್ಯಾಚಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿದ್ದ ವಿಂಡೀಸ್ 50 ಓವರ್​ಗಳಲ್ಲಿ 295 ರನ್ಸ್ ಕಲೆ ಹಾಕಿತ್ತು. ಈ ಪಂದ್ಯದಲ್ಲಿ ವಿಂಡೀಸ್ ಓಪನರ್ ಸೆಂಚುರಿ ಬಾರಿಸಿದ್ರೆ ಭಾರತದ ಪರ ಶುಭ್​ಮನ್ ಗಿಲ್ ಹಾಗೇ ವಿರಾಟ್ ಕೊಹ್ಲಿ ಸೆಂಚುರಿ ಸಿಡಿಸಿದ್ರು. ಇನ್ನು ಎರಡನೇ ಪಂದ್ಯದಲ್ಲಂತೂ ಸೆಂಚುರಿಗಳ ಸುರಿಮಳೆ. ವಿಂಡೀಸ್ ಕಡೆಯಿಂದ ಮೂರು ಭಾರತದ ಕಡೆಯಿಂದ ಇಬ್ಬರ ಶತಕ. ಅದ್ರಲ್ಲಿ ಗಿಲ್​ರದ್ದು ಡಬಲ್ ಸೆಂಚುರಿ. ಗುವಾಹಟಿಯಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿದ್ದ ವೆಸ್ಟ್ ಇಂಡೀಸ್ ಪರ 2ನೇ ವಿಕೆಟ್​ಗೆ 100+ ರನ್ಸ್ ಜೊತೆಯಾಟ.. ಌಂಡ್ 3ನೇ ವಿಕೆಟ್​ಗೆ 180+ ರನ್ಸ್ ಪಾರ್ಟ್ನರ್​ಶಿಪ್.. ಇತ್ತ ಭಾರತದ ಪರ ಮೊದಲನೇ ವಿಕೆಟ್​​ಗೇ 255 ರನ್ಸ್​ ಜೊತೆಯಾಟ.. ಌಂಡ್ ಒನ್ ಮೋರ್ ಥಿಂಗ್ ಎರಡೂ ಪಂದ್ಯಗಳಲ್ಲೂ ಕೂಡ ಎಲ್ಲೂ ಮ್ಯಾಚ್ ಕ್ಲೋಸ್ ಆಗ್ಲೇಇಲ್ಲ. ಮೊದಲ ಪಂದ್ಯದಲ್ಲಿ 41.4 ಓವರ್​ಗಳಲ್ಲಿ ಭಾರತ ಗೆದ್ರೆ ಎರಡನೇ ಮ್ಯಾಚಲ್ಲಿ ದಾಖಲೆಯ 406 ರನ್​ಗಳ ಟಾರ್ಗೆಟ್​ನ ಇನ್ನೂ 39 ಬಾಲ್​ಗಳು ಬಾಕಿ ಇರುವಂತೆಯೇ ರೀಚ್ ಆದ್ರು.

ಸ್ವಿಂಗ್ ಇಲ್ಲ.. ಸೀಮ್ ಇರಲಿಲ್ಲ.. ವಿಕೆಟ್ಸ್ ತೆಗೆಯೋದು ಕಷ್ಟ ಕಷ್ಟ!

ಗುವಾಹಟಿಯ ಬರ್ಸಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸರಣಿಯ ಎರಡನೇ ODI ಪಂದ್ಯಕ್ಕಾಗಿ ಪಿಚ್ ಸಂಖ್ಯೆ 6 ಅನ್ನು ಬಳಸಲಾಯಿತು. ಆದ್ರೆ ಬೌಲರ್‌ಗಳಿಗೆ ಇಲ್ಲಿನ ಕಂಡೀಷನ್ ಸಪೋರ್ಟಿವ್ ಆಗಿ ಇರಲಿಲ್ಲ. ಯಾವುದೇ ಸ್ವಿಂಗ್ ಇರಲಿಲ್ಲ, ಸೀಮ್ ಇರಲಿಲ್ಲ, ಯಾವುದೇ ಸ್ಪಿನ್ ಇರಲಿಲ್ಲ. ಇದಲ್ಲದೆ, ಔಟ್‌ಫೀಲ್ಡ್ ಕೂಡ ಸ್ಪೀಡ್​ನಲ್ಲಿತ್ತು. ಸೋ ಬ್ಯಾಟರ್ಸ್ ಈಸಿಯಾಗಿ ಬೌಂಡರಿಗಳನ್ನ ಪಿಕ್ ಮಾಡ್ತಿದ್ರು. ಌಂಡ್ ಇಲ್ಲಿ ಭಾರತದಲ್ಲೇ ಡೊಮೆಸ್ಟಿಕ್ ಕ್ರಿಕೆಟ್​ಗಳಲ್ಲಿ ಧೂಳೆಬ್ಬಿಸ್ತಿದ್ದ ಔಕಿಬ್ ನಬಿಗೆ ಅವರ ODI ಚೊಚ್ಚಲ ಪಂದ್ಯವನ್ನು ನೀಡಲಾಯಿತು. ಆದ್ರೆ ನಬಿ 8.5 ಓವರ್‌ಗಳಲ್ಲಿ 84 ರನ್‌ಗಳನ್ನು ಬಿಟ್ಟುಕೊಟ್ರು. ಌಂಡ್ ವಿಕೆಟ್ ಲೆಸ್ ಆದ್ರು. ಸೋ ಇದೇ ಬೌಲಿಂಗ್ ಫೇಲ್ಯೂರ್ ಹೊಸ ಚರ್ಚೆಗಳಿಗೆ ಕಾರಣವಾಗಿದೆ. ಟೀಂ ಇಂಡಿಯಾ ಕೋಚಿಂಗ್ ಸ್ಟಾಫ್ಸ್ ಕೂಡ ಗರಂ ಆಗಿದ್ದಾರೆ.

ನೀವು ನೋಡಿದ್ದು ನಿಜವಾದ ಕ್ರಿಕೆಟ್ ಅಲ್ಲ.. ಬೌಲರ್ಸ್ ಗೂ ನ್ಯಾಯ ಸಿಗ್ಬೇಕು!

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಪಂದ್ಯದ ಬಳಿಕ ಮಾತನಾಡಿದ್ದ ಹೆಡ್​ಕೋಚ್ ಗೌತಮ್ ಗಂಭೀರ್ ಕೂಡ ಪಿಚ್ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ. ಫ್ಯಾನ್ಸ್ ನೋಡಿದ್ದು ನಿಜವಾದ ಕ್ರಿಕೆಟ್ ಅಲ್ಲ. ಬ್ಯಾಟ್ ಮತ್ತು ಬಾಲ್ ನಡುವೆ ಉತ್ತಮ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಕರೆ ನೀಡಿದ್ದಾರೆ. ಹಾಗೇ ಬ್ಯಾಟ್ ಮತ್ತು ಚೆಂಡಿನ ನಡುವೆ ಇನ್ನಷ್ಟು ಸಮಾನ ಪೈಪೋಟಿ ಇರಬೇಕು. ಒಬ್ಬ ನಿಜವಾದ ಕ್ರಿಕೆಟ್ ಅಭಿಮಾನಿಯಾಗಿ ಮತ್ತು ಕೋಚ್ ಆಗಿ ನಾನು ಬೌಲರ್‌ಗಳ ಬಗ್ಗೆಯೂ ಸಹಾನುಭೂತಿ ಹೊಂದಿರಬೇಕಾಗುತ್ತದೆ. ಕೆಲವೊಮ್ಮೆ ವಿಕೆಟ್ ತೆಗೆಯೋಕೆ ಸಾಧ್ಯನೇ ಇಲ್ಲ ಎನ್ನುವಷ್ಟು ಬೌಲರ್ಸ್ ಕಳಪೆ ಇರಲ್ಲ. ಈ ರೀತಿಯ ಟ್ರ್ಯಾಕ್​ಗಳಲ್ಲಿ ಎಂದಿಗೂ ಉತ್ತಮ ಬೌಲರ್‌ಗಳನ್ನು ರೂಪಿಸಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ. ಸೋ ಅಲ್ಲಿಗೆ ಗೌತಮ್ ಗಂಭೀರ್ ಅವ್ರೇ ಪಿಚ್ ಬಗ್ಗೆ ಸಿಟ್ಟಾಗಿದ್ದಾರೆ. ಅಷ್ಟಕ್ಕೂ ಇಲ್ಲಿ ಬ್ಯಾಟರ್​ಗಳ ಆರ್ಭಟವನ್ನ ನಾವು ನೀವೆಲ್ಲಾ ನೋಡಿ ಎಂಜಾಯ್ ಮಾಡ್ಬೋದು ಬ್ರಾಡ್​ಕಾಸ್ಟರ್ಸ್ ಕೂಡ ಹ್ಯಾಪಿ ಆಗ್ಬೋದು. ಆದ್ರೆ ವಿದೇಶಿ ಪಿಚ್​ಗಳು ಅಂತಾ ಬಂದಾಗ ಇದು ಭಾರತಕ್ಕೆ ಅತಿ ದೊಡ್ಡ ಹೊಡೆತ ನೀಡಲಿದೆ.

ಬೌಲರ್ಸ್ ಬಲಿಪಶು!

ಭಾರತದ ಫ್ಲ್ಯಾಟ್ ಪಿಚ್ ಗಳಲ್ಲಿ ಲೀಲಾಜಾಲವಾಗಿ ಆಟಗಾರರ ಬ್ಯಾಟಿಂಗ್

ವಿದೇಶಿ ಪಿಚ್ ಗಳಿಗೆ ಹೋದಾಗ ಸಾಕಷ್ಟು ಬಾರಿ ಸ್ಟ್ರಗಲ್ ಪಟ್ಟಿರುವುದು ಬಯಲು

ಟೀಂ ಇಂಡಿಯಾದಲ್ಲೂ ಪ್ರಸ್ತುತ ಬ್ಯಾಟರ್ ಗಳಿಗೇ ಹೆಚ್ಚಿನ ಪ್ರಿಯಾರಿಟಿ

ಪ್ಲೇಯಿಂಗ್ 11ನಲ್ಲಿ ನಂಬರ್ 9 ವರೆಗೂ ಬ್ಯಾಟಿಂಗ್ ಡೆಪ್ತ್ ಹೆಚ್ಚಳ

ನವೆಂಬರ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಐದು ಪಂದ್ಯಗಳ ಏಕದಿನ ಸರಣಿ ಸವಾಲು

2027ರ ಏಕದಿನ ವಿಶ್ವಕಪ್ ನಡೆಯಲಿರುವ ದಕ್ಷಿಣ ಆಫ್ರಿಕಾದಲ್ಲಿ ಬ್ಯಾಟಿಂಗ್ ಕಷ್ಟ

ದಕ್ಷಿಣ ಆಫ್ರಿಕಾದ ಪಿಚ್‌ ಗಳು ವೇಗದ ಬೌಲರ್‌ ಗಳಿಗೆ ಹೆಚ್ಚಿನ ನೆರವು

ಆರಂಭದ ಓವರ್ ಗಳಲ್ಲಿ ಸ್ವಿಂಗ್ ಮತ್ತು ಬೌನ್ಸ್ ತಡೆದು ನಿಲ್ಲುವುದು ಕಷ್ಟ

ಸೋ ಹೀಗಿರುವಾಗ ಭಾರತದಲ್ಲಿ ಬ್ಯಾಟರ್ಸ್ ಫ್ಲ್ಯಾಟ್ ಪಿಚ್​ನಲ್ಲಿ ಸಿಕ್ಸ್ ಫೋರ್ ಬಾರಿಸಿ ವಿದೇಶಿ ಪಿಚ್​ಗಳಲ್ಲಿ ಸೈಲೆಂಟ್ ಆದ್ರೆ ಅದ್ರಿಂದ ತಂಡಕ್ಕೇ ಲಾಸ್ ಆಗಲಿದೆ. ಅದೂ ಅಲ್ದೇ ಭಾರತದ ಸದ್ಯ ಬ್ಯಾಟರ್​ಗಳಲ್ಲಿ ಒಬ್ರಿಗಿಂತ ಒಬ್ರು ಬೆಟರ್ ಅನ್ನೋ ಥರ ಇದ್ದಾರೆ. ಬಟ್ ಬೌಲರ್ಸ್ ಆಪ್ಶನ್ಸ್ ತೀರಾ ಕಮ್ಮಿ ಇದೆ.

ಒಬ್ರಿಗಿಂತ ಒಬ್ರು ಬೆಸ್ಟ್ ಎನ್ನುವಂತೆ ಬ್ಯಾಟರ್ ಗಳ ಉದಯ!

ಇನ್ನು ಭಾರತದಲ್ಲಿ ಕ್ರಿಕೆಟ್ ದಿನೇದಿನೇ ಹೇಗೆ ಬೆಳೀತಾ ಇದೆ ಅನ್ನೋದನ್ನ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಅದ್ಭುತವಾಗಿ ಹೇಳಿದ್ದಾರೆ. ಬ್ಯಾಟರ್ಸ್ ವಿಭಾಗದಲ್ಲಿ ಜನರೇಷನ್ ಟ್ರೆಂಡ್ ಸೆಟ್ಟರ್ಸ್ ಉದಯ ಆಗ್ತಿರೋದನ್ನೂ ವಿವರಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್​ನಲ್ಲಿ ಮೊದಲು ಸುನಾಮಿ ಎಬ್ಬಿಸಿದ್ರು. ಭಾರತೀಯ ಕ್ರಿಕೆಟ್‌ಗೆ ಹೆಗ್ಗುರುತನ್ನು ಮೂಡಿಸಿದ್ರು. ಆನಂತ್ರದಲ್ಲಿ ವಿರಾಟ್ ಕೊಹ್ಲಿ ತಮ್ಮ ರನ್ ಹಂಗರ್ ಹಾಗೂ ಫಿಟ್‌ನೆಸ್ ಮೂಲಕ ಅದನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ದರು. ಈಗ ಅದೇ ಹಾದಿಯಲ್ಲಿ ಶುಭ್‌ಮನ್ ಗಿಲ್ ಕೂಡ ಕೊಹ್ಲಿಯಷ್ಟೇ ಸ್ಥಿರತೆಯೊಂದಿಗೆ ದೇಶದ ಮುಂದಿನ ಸೂಪರ್‌ಸ್ಟಾರ್ ಆಗಿ ಹೊರಹೊಮ್ಮುತ್ತಿದ್ದಾರೆ ಎಂದಿದ್ದಾರೆ. ಒಟ್ನಲ್ಲಿ ಭಾರತದ ಬ್ಯಾಟರ್ಸ್ ಭಾರತದಲ್ಲಷ್ಟೇ ಹುಲಿಗಳಾಗದೆ ಜಗತ್ತಿನ ಮೂಲೆ ಮೂಲೆಯಲ್ಲೂ ಗರ್ಜಿಸಬೇಕು.

Shantha Kumari

Leave a Reply

Your email address will not be published. Required fields are marked *