ರೊಚ್ಚಿಗೆದ್ದ ರೋಹಿತ್.. ಗೆದ್ದಾಯ್ತು ಗಿಲ್ – ರನ್ಸ್ ಬೆಟ್ಟ ಕಟ್ಟಿದ್ರೂ ಸೋತ ವಿಂಡೀಸ್
ಭಾರತದ ಬೆಂಕಿಗೆ ವಿಶ್ವದಾಖಲೆಗಳೂ ಭಸ್ಮ

ರೊಚ್ಚಿಗೆದ್ದ ರೋಹಿತ್.. ಗೆದ್ದಾಯ್ತು ಗಿಲ್ – ರನ್ಸ್ ಬೆಟ್ಟ ಕಟ್ಟಿದ್ರೂ ಸೋತ ವಿಂಡೀಸ್ಭಾರತದ ಬೆಂಕಿಗೆ ವಿಶ್ವದಾಖಲೆಗಳೂ ಭಸ್ಮ

ಮೂವರು ಬ್ಯಾಟರ್ ಗಳ ಸೆಂಚುರಿ.. 400+ ರನ್ಸ್ ಟಾರ್ಗೆಟ್.. ಭಾರತ ಈ ಗುರಿ ಮುಟ್ಟೋದು ಕಷ್ಟ ಅಂತಾನೇ ಎಲ್ರೂ ಅನ್ಕೊಳ್ತಿದ್ರು. ಆದ್ರೆ ಭಾರತದ ಬ್ಯಾಟಿಂಗ್ ಶುರುವಾದ್ಮೇಲೆ ವಿಂಡೀಸ್ ಬೌಲರ್​ಗಳಿಗೆ ಬೆರಗಾಗೋದು ಬಿಟ್ರೆ ಬೇರೆ ದಾರಿನೇ ಇರ್ಲಿಲ್ಲ. ಫಸ್ಟ್ ವಿಕೆಟ್ ತೆಗೆಯೋ ಹೊತ್ತಿಗೆಲ್ಲಾ ಭಾರತದ ಕಡೆ ಮ್ಯಾಚ್ ಕೂಡ ಟರ್ನ್ ಆಗಿತ್ತು. ಕ್ಯಾಪ್ಟನ್ ಶುಭ್​ಮನ್ ಗಿಲ್ ಫಸ್ಟ್ ಓವರ್​ನಿಂದ ಲಾಸ್ಟ್ ಓವರ್​ವರೆಗೂ ನಿಂತು ಭಾರತವನ್ನ ಗೆಲ್ಲಿಸಿದ್ರು.

ಇದನ್ನೂ ಓದಿ : ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ! – ಗಿಲ್ ದ್ವಿಶತಕಕ್ಕೆ WI ಧೂಳೀಪಟ!

ಎರಡನೇ ಏಕದಿನ ಪಂದ್ಯದಲ್ಲೂ ಟಾಸ್ ಸೋತು ಫಸ್ಟ್ ಬ್ಯಾಟಿಂಗ್​ಗೆ ಬಂದ ವೆಸ್ಟ್ ಇಂಡೀಸ್ ಚೆನ್ನಾಗೇ ಬ್ಯಾಟಿಂಗ್ ಮಾಡಿದ್ರು. ತಂಡದ ಪರ ಮೂವರು ಸೆಂಚುರಿ ಬಾರಿಸಿದ್ದು ಫಸ್ಟ್ ಇನ್ನಿಂಗ್ಸ್ ನಲ್ಲಿ 405 ರನ್ಸ್ ಕಲೆ ಹಾಕಿದ್ರು. ಭಾರತ 406 ರನ್​ಗಳ ಗುರಿ ನೀಡಲಾಯ್ತು. ಆದ್ರೆ ಈ ಟಾರ್ಗೆಟ್ ಟಾರ್ಗೆಟ್ಟೇ ಅಲ್ಲ ಅನ್ನೋ ತರ ಆಡಿದ ಭಾರತ 43.3 ಓವರ್​ಗಳಲ್ಲಿ ಗುರಿ ಬೆನ್ನಟ್ಟುವ ಮೂಲಕ ಏಕದಿನ ಕ್ರಿಕೆಟ್​ನಲ್ಲಿ ಇದೇ ಮೊದಲ ಬಾರಿಗೆ 400+ ರನ್ ಗುರಿ ಬೆನ್ನಟ್ಟಿ ಗೆದ್ದ ಇತಿಹಾಸ ಬರೆಯಿತು. ಏಕದಿನ ವಿಶ್ವಕಪ್ ತಂಡದಿಂದ ಹೊರಗಿಡಿ ಎನ್ನುತ್ತಿದ್ದವರ ಬಾಯಿ ಮುಚ್ಚಿಸಲೆಂದೇ ರೋಹಿತ್ ಶರ್ಮಾ ಕೂಡ ರೊಚ್ಚಿಗೆದ್ದು ಶತಕ ಹೊಡೆದ್ರು. ಇನ್ನು ನಾಯಕ ಶುಭ್​ಮನ್ ಗಿಲ್ ಡಬಲ್ ಸೆಂಚುರಿ ಬಾರಿಸಿ ಗೆಲುವಿನ ರೂವಾರಿಯಾದ್ರು. ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಗಿಲ್ ಕೇವಲ 134 ಎಸೆತಗಳಲ್ಲಿ 25 ಫೋರ್ ಹಾಗೂ 9 ಸಿಕ್ಸರ್​ಗಳೊಂದಿಗೆ ಅಜೇಯ 223 ರನ್ ಬಾರಿಸಿದರು. ಈ ಅದ್ಭುತ ಗೆಲುವಿನ ಮೂಲಕ ಭಾರತ ಹಲವು ದಾಖಲೆಗಳನ್ನ ಬ್ರೇಕ್ ಮಾಡಿದೆ.

ದಾಖಲೆಗಳನ್ನ ಮುರಿದ ಭಾರತ!

400+ ರನ್ ಚೇಸ್ ಮಾಡಿ ಗೆದ್ದ ವಿಶ್ವದ 2ನೇ ತಂಡವೆಂಬ ವಿಶ್ವ ದಾಖಲೆ

ಇತಿಹಾಸದಲ್ಲೇ ಮೊದಲ ಬಾರಿಗೆ ಒಂದೇ ಪಂದ್ಯದಲ್ಲಿ 5 ಶತಕಗಳು

ಒಂದೇ ಇನ್ನಿಂಗ್ಸ್‌ನಲ್ಲಿ ಮೂವರು ಬ್ಯಾಟರ್‌ ಗಳು ಶತಕ ಗಳಿಸಿದ ದಾಖಲೆ

117 ಎಸೆತಗಳಲ್ಲಿ ದ್ವಿಶತಕ, ಏಕದಿನ ಇತಿಹಾಸದಲ್ಲೇ ಅತ್ಯಂತ ವೇಗದ ದಾಖಲೆ

ಚೇಸಿಂಗ್ ನಲ್ಲಿ ಬ್ಯಾಟರ್ ಗಳಿಸಿದ ಗರಿಷ್ಠ ವೈಯಕ್ತಿಕ ಸ್ಕೋರ್ ಎಂಬ ವಿಶ್ವದಾಖಲೆ

62 ಎಸೆತಗಳಲ್ಲಿ ಶತಕ ಸಿಡಿಸಿ ವೇಗದ ಶತಕ ಬಾರಿಸಿದ ಭಾರತದ ಏಕದಿನ ನಾಯಕ

ಏಕದಿನ ಮಾದರಿಯಲ್ಲಿ ಎರಡು ದ್ವಿಶತಕ ಬಾರಿಸಿದ ವಿಶ್ವದ ಮೂರನೇ ಬ್ಯಾಟರ್

ನಾಯಕನಾಗಿ ಗರಿಷ್ಠ ಸ್ಕೋರ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಗಿಲ್ (223*) ಟಾಪ್

Shantha Kumari

Leave a Reply

Your email address will not be published. Required fields are marked *