IND Vs SL ಪಂದ್ಯಕ್ಕೂ ಮಳೆ ಕಾಟ? – ಸೆಮೀಸ್ ರದ್ದಾದ್ರೆ ಫೈನಲ್ ಗೆ ಭಾರತ
ಫಸ್ಟ್ ಟೈಂ ಇಂಡೋ-ಪಾಕ್ ಫೈಟ್?

IND Vs SL ಪಂದ್ಯಕ್ಕೂ ಮಳೆ ಕಾಟ? – ಸೆಮೀಸ್ ರದ್ದಾದ್ರೆ ಫೈನಲ್ ಗೆ ಭಾರತಫಸ್ಟ್ ಟೈಂ ಇಂಡೋ-ಪಾಕ್ ಫೈಟ್?

ಏಷ್ಯನ್ ಗೇಮ್ಸ್ ಮೆನ್ಸ್ ಕ್ರಿಕೆಟ್​​ನಲ್ಲಿ ಮಳೆಯದ್ದೇ ದರ್ಬಾರ್. ಕ್ವಾರ್ಟರ್ ಫೈನಲ್​ನ ನಾಲ್ಕೂ ಪಂದ್ಯಗಳು ಮಳೆಗೆ ವಾಷ್​ಔಟ್ ಆಗಿ ಕೊನೆಗೆ ಐಸಿಸಿ ರ್ಯಾಂಕಿಂಗ್ ಮೇಲೆ ನಾಲ್ಕು ತಂಡಗಳು ಸೆಮೀಸ್​ಗೆ ಕಾಲಿಟ್ಟಿವೆ. ಇದೇ ಮಳೆಯ ಕಣ್ಣಾಮುಚ್ಚಾಲೆ ಈಗ ಏಷ್ಯನ್ ಗೇಮ್ಸ್ ಫೈನಲ್​ನಲ್ಲಿ ಹೈವೋಲ್ಟೇಜ್ ಮ್ಯಾಚ್​ಗೂ ಕಾರಣವಾಗುತ್ತಾ ಅನ್ನೋ ಕುತೂಹಲ ಮೂಡಿಸಿದೆ.

ಇದನ್ನೂ ಓದಿ : CSK ಬೌಲಿಂಗ್ ಕೋಚ್ ಹುದ್ದೆಗೂ ಮಾಜಿ ಭಾರತೀಯ ವೇಗಿ ಎಂಟ್ರಿ – ಮೊಹಿತ್‌ಗೆ ದೊಡ್ಡ ಜವಾಬ್ದಾರಿ!

ಏಷ್ಯನ್ ಗೇಮ್ಸ್​​ನ ಕ್ವಾರ್ಟರ್ ಫೈನಲ್​ನ ಎಲ್ಲಾ ಪಂದ್ಯಗಳು ರದ್ದಾಗಿವೆ. ಹೀಗಾಗಿ ಐಸಿಸಿ ಟಿ20 ಶ್ರೇಯಾಂಕದಲ್ಲಿ ಭಾರತ, ಪಾಕಿಸ್ತಾನ್, ಶ್ರೀಲಂಕಾ ಮತ್ತು ಬಾಂಗ್ಲಾದೇಶ್ ತಂಡಗಳು ಸೆಮಿ ಫೈನಲ್‌ಗೆ ಟಿಕೆಟ್ ಪಡೆದಿವೆ. ಎರಡೂ ಸೆಮಿಫೈನಲ್ ಪಂದ್ಯಗಳು ಅಕ್ಟೋಬರ್ 1 ಅಂದ್ರೆ ನಾಳೆ ನಡೆಯಲಿದೆ. ಮೊದಲ ಸೆಮಿಫೈನಲ್​ನಲ್ಲಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗ್ತಾರೆ. ಭಾರತೀಯ ಟೈಮಿಂಗ್ಸ್ ಪ್ರಕಾರ ಈ ಪಂದ್ಯ ಬೆಳಗ್ಗಿನ ಜಾವ 5.30ಕ್ಕೆ ಸ್ಟಾರ್ಟ್ ಆಗುತ್ತೆ. ಌಂಡ್ ಎರಡನೇ ಪಂದ್ಯದಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಮೈದಾನಕ್ಕಿಳಿಯಲಿದ್ದಾರೆ. ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಭಾರತ-ಲಂಕಾ ತಂಡಗಳು ಇದುವರೆಗೂ ಮುಖಾಮುಖಿ ಆಗಿಲ್ಲ. ಌಂಡ್ ಈ ಮ್ಯಾಚ್ ಬೆಳಗ್ಗೆ 10.30ಕ್ಕೆ ಸ್ಟಾರ್ಟ್ ಆಗುತ್ತೆ. ಆದ್ರೆ ಇಲ್ಲಿರುವಂಥ ಪ್ರಶ್ನೆ ಸೆಮೀಸ್ ಪಂದ್ಯಗಳಾದ್ರೂ ನಡೆಯುತ್ತಾ ಅನ್ನೋದು.

ಕ್ವಾರ್ಟರ್ ಫೈನಲ್ ಪಂದ್ಯಗಳಂತೆ ಸೆಮೀಸ್ ಪಂದ್ಯಗಳೂ ವಾಶ್ ಔಟ್?

ಶೆಡ್ಯೂಲ್ ಪ್ರಕಾರ ಸೋಮವಾರ ಹಾಗೇ ಮಂಗಳವಾರ ಎರಡೂ ದಿನ ತಲಾ ಎರಡೆರಡು ಕ್ವಾರ್ಟರ್ ಫೈನಲ್ ಪಂದ್ಯಗಳು ನಡೀಬೇಕಿತ್ತು. ಬಟ್ ಬ್ಯಾಡ್​ಲಕ್ ಮಳೆಯಿಂದಾಗಿ ನಾಲ್ಕೂ ಮ್ಯಾಚಸ್ ರದ್ದಾದ್ವು. ಈಗ ನಾಳೆ ಸೆಮೀಸ್ ಪಂದ್ಯಗಳಿದ್ದು ಈ ಪಂದ್ಯಗಳಿಗೂ ಮಳೆ ಭಯ ಕಾಡ್ತಿದೆ. ಹಾಗೇನಾದ್ರೂ ಸೆಮೀಸ್ ಪಂದ್ಯಗಳಿಗೂ ಮಳೆ ಬಂತು ಅಂದ್ರೆ ಫೈನಲ್ ಪಂದ್ಯದಲ್ಲಿ ಇಂಡೋ=ಪಾಕ್ ಫೈಟ್ ಪಕ್ಕಾ ಆಗುತ್ತೆ.

ಮಳೆ ಬಂದ್ರೆ ಹೈವೋಲ್ಟೇಜ್ ಫೈನಲ್!

ಮೊದಲ ಸೆಮೀಸ್ ನಲ್ಲಿ ಪಾಕಿಸ್ತಾನ ಹಾಗೂ ಬಾಂಗ್ಲಾ ತಂಡಗಳು ಮುಖಾಮುಖಿ

ಮಳೆಯಿಂದ ಪಂದ್ಯ ರದ್ದಾದ್ರೆ ಮತ್ತೆ ಐಸಿಸಿ ಶ್ರೇಯಾಂಕದಲ್ಲಿ ಗೆಲುವಿನ ಘೋಷಣೆ

ಟಿ-20ಐನಲ್ಲಿ ಪಾಕ್ 6ನೇ ಸ್ಥಾನ, ಬಾಂಗ್ಲಾ 8ನೇ ಸ್ಥಾನ.. ಪಾಕ್ ಗೆ ಫೈನಲ್ ಟಿಕೆಟ್

ಎರಡನೇ ಸೆಮೀಸ್ ನಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿ

ಈ ಪಂದ್ಯವೂ ಮಳೆಗೆ ರದ್ದಾದ್ರೆ ಭಾರತಕ್ಕೆ ಏಷ್ಯನ್ ಗೇಮ್ಸ್ ಫೈನಲ್ ಆಡುವ ಚಾನ್ಸ್

ಟಿ-20ಐ ಶ್ರೇಯಾಂಕದಲ್ಲಿ ಭಾರತ 1ನೇ ಸ್ಥಾನ, ಶ್ರೀಲಂಕಾ 9ನೇ ಸ್ಥಾನದಲ್ಲಿವೆ

ಸೋ ಅಲ್ಲಿಗೆ ಮಳೆ ಬಂದೂ ಎರಡೂ ಪಂದ್ಯಗಳು ರದ್ದಾಯ್ತು ಅಂದ್ರೆ ಏಷ್ಯನ್ ಗೇಮ್ಸ್​ನ ಮೆನ್ಸ್ ಕ್ರಿಕೆಟ್ ಫೈನಲ್ ಪಂದ್ಯ ರಣರೋಚಕ ಸಮರಕ್ಕೆ ಸಾಕ್ಷಿಯಾಗಿದೆ. ಅಕ್ಟೋಬರ್ 3ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ಹಾಗೇ ಪಾಕಿಸ್ತಾನ ತಂಡಗಳು ಗೋಲ್ಡ್ ಮೆಡಲ್​ಗಾಗಿ ಗುದ್ದಾಡಲಿದ್ದಾರೆ. ಭಾರತ-ಪಾಕಿಸ್ತಾನ ತಂಡಗಳು ಏಷ್ಯನ್ ಗೇಮ್ಸ್​ನ ಇತಿಹಾಸದಲ್ಲೇ ಮೊದಲ ಬಾರಿಗೆ ಫೈನಲ್ ಪಂದ್ಯದಲ್ಲಿ ಎದುರು ಬದುರಾಗ್ತಾರೆ.

ಏಷ್ಯನ್ ಗೇಮ್ಸ್ ನಲ್ಲಿ ಒಮ್ಮೆಯೂ ಮುಖಾಮುಖಿಯಾಗದ ಭಾರತ-ಪಾಕ್!

ಏಷ್ಯನ್ ಗೇಮ್ಸ್​ನ ಇತಿಹಾಸದಲ್ಲಿ ಭಾರತ ಹಾಗೂ ಪಾಕಿಸ್ತಾನ ಮೆನ್ಸ್ ಕ್ರಿಕೆಟ್ ತಂಡಗಳು ಇದುವರೆಗೆ ಒಮ್ಮೆಯೂ ಮುಖಾಮುಖಿ ಆಗಿಲ್ಲ. ಅಷ್ಟಕ್ಕೂ ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಮೆನ್ಸ್ ಕ್ರಿಕೆಟ್ ಪಂದ್ಯಾವಳಿಯನ್ನ ಆಯೋಜನೆ ಮಾಡಿತ್ತಿರೋದು ಇದು ನಾಲ್ಕನೇ ಸಲ ಅಷ್ಟೇ. ಮೊದಲನೇದಾಗಿ ಏಷ್ಯನ್ ಗೇಮ್ಸ್​ನ 16ನೇ ಆವೃತ್ತಿಯಾಗಿದ್ದ 2010ರಲ್ಲಿ ಮೊದಲ ಬಾರಿಗೆ ಕ್ರಿಕೆಟ್ ಆಯೋಜನೆ ಮಾಡಲಾಗುತ್ತೆ. ಌಂಡ್ 2014ರಲ್ಲಿ ಎರಡನೇ ಬಾರಿಗೆ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತೆ. ಉದ್ಘಾಟನಾ ವರ್ಷದಲ್ಲಿ ಬಾಂಗ್ಲಾ ಚಾಂಪಿಯನ್ಸ್ ಆದ್ರೆ ಎರಡನೇ ಬಾರಿ ಶ್ರೀಲಂಕಾ ವಿನ್ನರ್ ಆಗಿತ್ತು. ಈ ಎರಡೂ ಆವೃತ್ತಿಗಳಲ್ಲೂ ಭಾರತ ಪಾರ್ಟಿಸಿಪೇಟ್ ಮಾಡಿರಲಿಲ್ಲ. 2022-23ರಲ್ಲಿ ಚೀನಾದಲ್ಲಿ ನಡೆದ ಏಷ್ಯನ್ ಗೇಮ್ಸ್​ನಲ್ಲಿ ಮತ್ತೆ ಕ್ರಿಕೆಟ್ ಸೇರಿಸಿದ್ರು. ಈ ಆವೃತ್ತಿಯಲ್ಲಿ ಭಾರತ ಕೂಡ ಕಾಂಪಿಟ್ ಮಾಡಿತ್ತು. ಌಂಡ್ ಚಾಂಪಿಯನ್ಸ್ ಕೂಡ. ತಮ್ಮ ಮೊದಲ ಸ್ಪರ್ಧೆಯಲ್ಲೇ ಗೋಲ್ಡ್ ಮೆಡಲ್ ಗೆದ್ದಿದ್ದಾರೆ. ಆದ್ರೆ ಪಾಕಿಸ್ತಾನ ಈ ಎಲ್ಲಾ ಆವೃತ್ತಿಗಳಲ್ಲಿ ಆಡಿದ್ರೂ ಗೋಲ್ಡ್ ಗೆಲ್ಲೋಕೆ ಆಗಿಲ್ಲ. 2022ರ ಏಷ್ಯನ್ ಗೇಮ್ಸ್​ನಲ್ಲಿ ಭಾರತ ಫೈನಲ್​ ತಲುಪಿತ್ತಾದ್ರೂ ಪಾಕಿಸ್ತಾನ ತಂಡವು ಸೆಮಿಫೈನಲ್‌ನಲ್ಲಿ ಅಫ್ಘಾನಿಸ್ತಾನದ ವಿರುದ್ಧ ಸೋತಿದ್ದರಿಂದ ಭಾರತದೊಂದಿಗೆ ಮುಖಾಮುಖಿಯಾಗುವ ಅವಕಾಶ ತಪ್ಪಿಹೋಗಿತ್ತು. ಬಟ್ ಈಗ 2026ಕ್ಕೆ ಫಾರ್ ದಿ ಫಸ್ಟ್ ಟೈಂ ಮುಖಾಮುಖಿ ಆಗೋ ಚಾನ್ಸಸ್ ಇದೆ. 2 ರೀತಿಯ ಪಾಸಿಬಿಲಿಟೀಸ್ ಇದೆ.

ಇಂಡೋ-ಪಾಕ್ ಕದನ ಸಾಧ್ಯನಾ?

ಮೊದಲ ಸೆಮೀಸ್ ನಲ್ಲಿ ಪಾಕ್, 2ನೇ ಸೆಮೀಸ್ ನಲ್ಲಿ ಭಾರತ ಗೆದ್ರೆ ಫೈನಲ್

ಎರಡೂ ಸೆಮಿಫೈನಲ್ ಪಂದ್ಯಗಳು ವಾಶ್ ಔಟ್ ಆದ್ರೆ ಇಂಡೋ-ಪಾಕ್ ಫೈನಲ್

ಸೆಮಿಫೈನಲ್ ನಲ್ಲಿ ಎರಡೂ ತಂಡಗಳು ಸೋಲು ಕಂಡ್ರೆ ಕಂಚಿನ ಪದಕಕ್ಕಾಗಿ ಫೈಟ್

ಭಾರತ-ಪಾಕಿಸ್ತಾನ ಪಂದ್ಯಗಳು ಅಂದ್ರೇನೇ ಫ್ಯಾನ್ಸ್ ಫುಲ್ ಎಕ್ಸೈಟ್ ಆಗ್ತಾರೆ. ಐಸಿಸಿ ಟೂರ್ನಮೆಂಟ್ಸ್, ಏಷ್ಯಾಕಪ್​ನಲ್ಲಿ ಈಗಾಗ್ಲೇ ಟೀಮ್ ಇಂಡಿಯಾ ಪಾಕಿಸ್ತಾನವನ್ನ ಸದೆಬಡಿಯುತ್ತಲೇ ಬರ್ತಿದೆ. ಈಗ ಏಷ್ಯನ್ ಗೇಮ್ಸ್​ನಲ್ಲೂ ಮುಖಾಮುಖಿ ಆದ್ರೆ ಮತ್ತೊಂದು ಹೈವೋಲ್ಟೇಜ್ ಮ್ಯಾಚ್ ಆಗೋದ್ರಲ್ಲಿ ಡೌಟೇ ಇಲ್ಲ.

Shantha Kumari

Leave a Reply

Your email address will not be published. Required fields are marked *