CSK ಬೌಲಿಂಗ್ ಕೋಚ್ ಹುದ್ದೆಗೂ ಮಾಜಿ ಭಾರತೀಯ ವೇಗಿ ಎಂಟ್ರಿ – ಮೊಹಿತ್ಗೆ ದೊಡ್ಡ ಜವಾಬ್ದಾರಿ!

ಐಪಿಎಲ್ 2027ರ ಸೀಸನ್ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ದೊಡ್ಡ ಬದಲಾವಣೆಗಳು ಆರಂಭವಾಗಿವೆ. ಹೊಸ ಹೆಡ್ ಕೋಚ್ ಆಗಿ ದಿಗ್ಗಜ ವೇಗಿ ಜಹೀರ್ ಖಾನ್ ನೇಮಕಗೊಂಡ ಬೆನ್ನಲ್ಲೇ, ಇದೀಗ ಬೌಲಿಂಗ್ ಕೋಚ್ ಹುದ್ದೆಗೂ ಮಾಜಿ ಭಾರತೀಯ ವೇಗಿ ಮೊಹಿತ್ ಶರ್ಮಾ ಅವರನ್ನು ಕರೆತರಲು ಸಿಎಸ್ಕೆ ನಿರ್ಧರಿಸಿದೆ.
ಜಹೀರ್ ಖಾನ್ ಅವರ ಶಿಫಾರಸಿನ ಮೇರೆಗೆ ಮೊಹಿತ್ ಶರ್ಮಾ ಅವರನ್ನು ಬೌಲಿಂಗ್ ಕೋಚ್ ಆಗಿ ಆಯ್ಕೆ ಮಾಡಲಾಗಿದೆ ಎಂದು ಸಿಎಸ್ಕೆ ಸಿಇಒ ಕಾಶಿ ವಿಶ್ವನಾಥನ್ ತಿಳಿಸಿದ್ದಾರೆ. ಮೊಹಿತ್ ಅವರು ಈ ಹಿಂದೆ ಸಿಎಸ್ಕೆ ಪರ ಆಟಗಾರನಾಗಿ ನಾಲ್ಕು ಸೀಸನ್ಗಳಲ್ಲಿ ಆಡಿದ್ದರು. ಐಪಿಎಲ್ನಲ್ಲಿ ಸಿಎಸ್ಕೆ ಪರ ಒಟ್ಟು 48 ಪಂದ್ಯಗಳನ್ನು ಆಡಿರುವ ಅವರು, ಇದೀಗ ಅದೇ ತಂಡಕ್ಕೆ ಕೋಚ್ ಆಗಿ ಮರಳುತ್ತಿದ್ದಾರೆ.
ಇದನ್ನೂ ಓದಿ: ರೋಹಿತ್ VS ಕೊಹ್ಲಿ.. ಯಾರ ಸುನಾಮಿ? – ಬೌಲಿಂಗ್ ನಲ್ಲಿ ಬದಲಾವಣೆ ಬೇಕಾ?
ಈ ಹಿಂದೆ ಸಿಎಸ್ಕೆಯ ಬೌಲಿಂಗ್ ಕೋಚ್ ಆಗಿದ್ದ ಎರಿಕ್ ಸಿಮನ್ಸ್ ಅವರ ಸ್ಥಾನವನ್ನು ಮೊಹಿತ್ ಶರ್ಮಾ ತುಂಬಲಿದ್ದಾರೆ. ಜಹೀರ್ ಖಾನ್ ನೇತೃತ್ವದ ಹೊಸ ಕೋಚಿಂಗ್ ತಂಡಕ್ಕೆ ಸೇರುತ್ತಿರುವ ಮೊದಲ ಪ್ರಮುಖ ಸದಸ್ಯರೂ ಮೊಹಿತ್ ಆಗಿದ್ದಾರೆ. ಮೊಹಿತ್ ಶರ್ಮಾ ಭಾರತ ಪರ 8 ಟಿ20 ಪಂದ್ಯಗಳನ್ನು ಆಡಿದ್ದು, 2025ರ ಸೀಸನ್ವರೆಗೂ ಐಪಿಎಲ್ನಲ್ಲಿ ಸಕ್ರಿಯರಾಗಿದ್ದರು. ನಂತರ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದರು.
ಇನ್ನು ಸಿಎಸ್ಕೆಯ ಬ್ಯಾಟಿಂಗ್ ಸೇರಿದಂತೆ ಉಳಿದ ಸಪೋರ್ಟ್ ಸ್ಟಾಫ್ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರವಾಗುವ ನಿರೀಕ್ಷೆಯಿದೆ. ಹೀಗಾಗಿ ಐಪಿಎಲ್ 2027ಕ್ಕೂ ಮುನ್ನ ಸಿಎಸ್ಕೆ ಹೊಸ ಕೋಚಿಂಗ್ ತಂಡ ಹೇಗೆ ರೂಪುಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

ನೋಡಿರಿ

