ರೋಹಿತ್ VS ಕೊಹ್ಲಿ.. ಯಾರ ಸುನಾಮಿ? – ಬೌಲಿಂಗ್ ನಲ್ಲಿ ಬದಲಾವಣೆ ಬೇಕಾ?

ಕುಲ್ದೀಪ್ ಯಾದವ್ ಮ್ಯಾಜಿಕ್.. ಶುಭ್ಮನ್ ಗಿಲ್ ಸೆಂಚುರಿ.. ಕಿಂಗ್ ವಿರಾಟ್ ಕೊಹ್ಲಿ ವಿರಾಟರೂಪಕ್ಕೆ ವಿಂಡೀಸ್ ಪಡೆ ಮೊಲದ ಏಕದಿನ ಪಂದ್ಯದಲ್ಲಿ ಧೂಳೀಪಟವಾಗಿತ್ತು. ಕೆರೆಬಿಯನ್ಗಳ ವಿರುದ್ಧ ಭರ್ಜರಿಯಾಗಿ ಗೆದ್ದಿರೋ ಭಾರತ ಈಗ ಎರಡನೇ ಪಂದ್ಯಕ್ಕೆ ಸಿದ್ಧವಾಗಿದೆ. ಗುವಾಹಟಿಯಲ್ಲಿ ನಡೆಯಲಿರೋ ಈ ಮ್ಯಾಚ್ ಮೇಲೆ ನಿರೀಕ್ಷೆಗಳೂ ಜಾಸ್ತಿಯಾಗಿವೆ. ಹಾಗೇ ರೋಹಿತ್ ವರ್ಸಸ್ ಕೊಹ್ಲಿ ನಡುವೆ ಫೈಟ್ ಕೂಡ ಶುರುವಾಗಿದೆ.
ಇದನ್ನೂ ಓದಿ : AUS ಸೊಕ್ಕಿಳಿಸಿದ ಸೌತ್ ಆಫ್ರಿಕಾ – ಟೆಂಬಾ, ಮಿಲ್ಲರ್ ಬಿಗ್ ಮೆಸೇಜ್
ಭಾನುವಾರ ತಿರುವನಂತಪುರದಲ್ಲಿ ನಡೆದ ಫಸ್ಟ್ ಮ್ಯಾಚಲ್ಲಿ ವಿರಾಟ್ ಕೊಹ್ಲಿ ಅಕ್ಷರಶಃ ವಿಶ್ವರೂಪ ತಾಳಿದ್ರು. 10 ಬೌಂಡರಿ.. 9 ಸಿಕ್ಸರ್.. 88 ಬಾಲಲ್ಲೇ 139 ರನ್ಸ್.. ಌಂಡ್ ನಾಟ್ಔಟ್.. ಕ್ರಿಕೆಟ್ ಜಗತ್ತು ಇನ್ನೂ ಕೂಡ ಇದೇ ಗುಂಗಿನಲ್ಲಿದೆ. ಇದ್ರ ನಡುವೆ ಎರಡನೇ ಪಂದ್ಯಕ್ಕೆ ಗುವಾಹಟಿಯಲ್ಲಿ 2ನೇ ಪಂದ್ಯಕ್ಕೆ ವೇದಿಕೆ ಸಿದ್ಧವಾಗ್ತಿದೆ. ಮೊದಲ ಪಂದ್ಯದಲ್ಲಿ ಸೋತಿರೋದ್ರಿಂದ 2ನೇ ಪಂದ್ಯದಲ್ಲಿ ಗೆದ್ದು ಕಂ ಬ್ಯಾಕ್ ಮಾಡೋಕೆ ವಿಂಡೀಸ್ ಕಾಯ್ತಾ ಇದ್ರೆ ಅತ್ತ ಭಾರತ ಎರಡನೇ ಪಂದ್ಯವನ್ನೂ ಗೆದ್ದು ಸರಣಿಯನ್ನ ಸೀಲ್ ಮಾಡೋಕೆ ನೋಡ್ತಿದೆ. ಆದ್ರೆ ಪಂದ್ಯಕ್ಕೂ ಮೊದಲೇ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಡುವೆ ಎಕ್ಸ್ಪೆಕ್ಟೇಷನ್ ಫೈಟ್ ಶುರುವಾಗಿದೆ.
ರೋಹಿತ್ Vs ಕೊಹ್ಲಿ.. ಎರಡನೇ ಪಂದ್ಯದಲ್ಲಿ ಯಾರ ಸುನಾಮಿ?
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೈದಾನಕ್ಕೆ ಇಳೀತಾರೆ ಅಂದ್ರೆ ಎಲ್ಲರ ಕಣ್ಣೂ ಇವ್ರಿಬ್ಬರ ಮೇಲೇ ಇರುತ್ತೆ. ಬೇಗ ಔಟ್ ಆದ್ರೂ ಸುದ್ದಿಯೇ.. ಬಿಗ್ ಇನ್ನಿಂಗ್ಸ್ ಬಂದ್ರಂತೂ ಸುನಾಮಿಯೇ.. ನಿವೃತ್ತಿ, 2027ರ ಏಕದಿನ ವಿಶ್ವಕಪ್ ನಲ್ಲಿ ಚಾನ್ಸ್ ಹಂಗಾಮದ ನಡುವೆ ಈ ಲೆಜೆಂಡರಿ ಪ್ಲೇಯರ್ಸ್ ಮೈದಾನದಲ್ಲಿ ಧೂಳೆಬ್ಬಿಸ್ತಾ ಇದ್ದಾರೆ. ಇದೀಗ ವಿಂಡೀಸ್ ವಿರುದ್ಧದ ಎರಡನೇ ಪಂದ್ಯದಲ್ಲಿ ಯಾರು ಚಾರ್ಜ್ ತಗೊಳ್ತಾರೆ ಅನ್ನೋ ಚರ್ಚೆ ಶುರುವಾಗಿದೆ. ಅದಕ್ಕೆ ಕಾರಣವೇ ಈ ಹಿಂದಿನ ಇನ್ನಿಂಗ್ಸ್.
ರೋಹಿತ್ & ಕೊಹ್ಲಿ ನಡುವೆ ಚಾಲೆಂಜ್!
ಜುಲೈ 19ರಂದು ಲಾರ್ಡ್ಸ್ ಮೈದಾನದಲ್ಲಿ ರೋಹಿತ್ ಶರ್ಮಾ ಸುನಾಮಿ
110 ಎಸೆತ, 17 ಬೌಂಡರಿ, 5 ಸಿಕ್ಸರ್, 138 ರನ್ ಗಳಿಸಿದ್ದ ಹಿಟ್ ಮ್ಯಾನ್
ಸೆಪ್ಟೆಂಬರ್ 27ಕ್ಕೆ ತಿರುವನಂತಪುರದಲ್ಲಿ ವಿರಾಟ್ ಕೊಹ್ಲಿ ಬೆಂಕಿ ಬ್ಯಾಟಿಂಗ್
88 ಎಸೆತಗಳಲ್ಲಿ 10 ಬೌಂಡರಿ, 9 ಸಿಕ್ಸರ್ ಸಮೇತ ಅಜೇಯ 139 ರನ್ಸ್
ಈಗ ಗುವಾಹಟಿಯಲ್ಲಿ ರೋ-ಕೊ ನಡುವೆ ಯಾರು ಹೈಯೆಸ್ಟ್ ರನ್ಸ್?
2026ರಲ್ಲಿ ಏಕದಿನ ಪಂದ್ಯಗಳಲ್ಲಿ ಅದ್ಭುತ ಫಾರ್ಮ್ ನಲ್ಲಿರುವ ದಿಗ್ಗಜರು
ರೋಹಿತ್ ಒಟ್ಟು 10 ಏಕದಿನ ಪಂದ್ಯ, 441 ರನ್ಸ್.. 1 ಶತಕ, 1 ಅರ್ಧಶತಕ
ಬ್ಯಾಟಿಂಗ್ ಸರಾಸರಿ 41.10, ಸ್ಟ್ರೈಕ್ ರೇಟ್ 98.56ರಲ್ಲಿ ಬ್ಯಾಟಿಂಗ್
2026ರಲ್ಲಿ ಅದ್ಭುತ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ ಬ್ಯಾಟಿಂಗ್
7 ಪಂದ್ಯ, 523 ರನ್ಸ್, 116.74 ಸ್ಟ್ರೈಕ್ ರೇಟ್, 87.17 ಆವರೇಜ್
7 ಇನ್ನಿಂಗ್ಸ್ ಪೈಕಿ 2 ಶತಕ ಹಾಗೂ 3 ಅರ್ಧಶತಕ ಬಾರಿಸಿರುವ ಕೊಹ್ಲಿ
ಇಲ್ಲಿ ರೋಹಿತ್ ಮತ್ತು ಕೊಹ್ಲಿ ಇಬ್ಬರ ಬ್ಯಾಟಿಂಗ್ ಕೂಡ ಚೆನ್ನಾಗಿದೆ. ಅದ್ರಲ್ಲೂ ಕಿಂಗ್ ವಿರಾಟ್ ಕೊಹ್ಲಿ ಅಂತೂ ತಮ್ಮ ಅಷ್ಟೂ ವರ್ಷಗಳ ಏಕದಿನ ಕೆರಿಯರ್ ಪೈಕಿ ಈ ವರ್ಷ ಪೀಕ್ನಲ್ಲಿದ್ದಾರೆ. ಇದೇ ಕಾರಣಕ್ಕೆ ವಿಂಡೀಸ್ ವಿರುದ್ಧದ ಎರಡನೇ ಪಂದ್ಯದಲ್ಲಿ ಯಾರು ಮತ್ತೊಮ್ಮೆ ಸುನಾಮಿ ಎಬ್ಬಿಸ್ತಾರೆ ಅನ್ನೋ ಚರ್ಚೆ ಶುರುವಾಗಿದೆ. ಹಾಗೇ ಈ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಹೆಸರೂ ಹಲ್ಚಲ್ ಎಬ್ಬಿಸಿದೆ.
ಬುಮ್ರಾ ಆಬ್ಸೆನ್ಸ್ ನಲ್ಲೂ ಸಿರಾಜ್ ರನ್ನು ಹೊರಗಿಟ್ಟ ಗಂಭೀರ್!
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದ ಪ್ಲೇಯಿಂಗ್ 11ನಲ್ಲಿ ಭಾರತದ ಪರ ಮೊಹಮ್ಮದ್ ಸಿರಾಜ್ ಅವರನ್ನು ಹೊರಗಿಡಲಾಗಿತ್ತು. ನಾಲ್ವರು ಪ್ರಮುಖ ಬೌಲರ್ಗಳೊಂದಿಗೆ ಮತ್ತು ಆಲ್ರೌಂಡರ್ ನಮನ್ ಧೀರ್ ಅವರಿಗೆ ಪದಾರ್ಪಣೆ ಮಾಡಲು ಅವಕಾಶ ನೀಡಿದ್ರು. ಗೌತಮ್ ಗಂಭೀರ್ ಅವ್ರ ಈ ಕಾಂಬಿನೇಷನ್ ಮತ್ತು ಸಿರಾಜ್ ಅವರಂತಹ ಅನುಭವಿ ಪ್ರಮುಖ ವೇಗಿಯನ್ನು ಬೆಂಚ್ ಮೇಲೆ ಕೂರಿಸಿದ್ದರ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. tactical selection reasons and workload management preferences ಅಂತೇಳಿ ಸ್ಪೆಷಲಿಸ್ಟ್ ಬೌಲರ್ಗಳಾದ ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್, ಕುಲ್ದೀಪ್ ಯಾದವ್ ಜೊತೆ ಆಲ್ರೌಂಡರ್ಗಳಾದ ನಮನ್ ಧೀರ್, ನಿತೀಶ್ ರೆಡ್ಡಿ ಹಾಗೇ ರವೀಂದ್ರ ಜಡೇಜಾರನ್ನ ಪಿಕ್ ಮಾಡಿದ್ರು. ಹೀಗಾಗಿ ಎರಡನೇ ಪಂದ್ಯದಲ್ಲೂ ಇದೇ ಕಂಟಿನ್ಯೂ ಆಗುತ್ತಾ ಎನ್ನುವ ಟಾಕ್ ಇದೆ. ಸದ್ಯದ ಸಿಚುಯೇಷನ್ ನೋಡ್ತಿದ್ರೆ ಪ್ಲೇಯಿಂಗ್ 11ನಲ್ಲಿ ಬದಲಾವಣೆಯಾಗೋ ಚಾನ್ಸಸ್ ಕಮ್ಮಿ ಇದೆ. ಮೊದಲ ಪಂದ್ಯದ ವಿನ್ನಿಂಗ್ ಕಾಂಬಿನೇಷನ್ನೇ ಮತ್ತೆ ಕಂಟಿನ್ಯೂ ಮಾಡಬಹುದು.
ಸಿರಾಜ್ ಗೆ ಮತ್ತೆ ಸಿಗಲ್ಲ ಚಾನ್ಸ್?
ರೋಹಿತ್ ಶರ್ಮಾ
ಶುಭ್ ಮನ್ ಗಿಲ್
ವಿರಾಟ್ ಕೊಹ್ಲಿ
ರುತುರಾಜ್ ಗಾಯಕ್ವಾಡ್
ಕೆಎಲ್ ರಾಹುಲ್
ರವೀಂದ್ರ ಜಡೇಜಾ
ನಿತೀಶ್ ರೆಡ್ಡಿ
ನಮನ್ ಧೀರ್
ಕುಲ್ದೀಪ್ ಯಾದವ್
ಗುರ್ನೂರ್ ಬ್ರಾರ್
ಪ್ರಸಿದ್ಧ್ ಕೃಷ್ಣ

ನೋಡಿರಿ

