ಎಲ್ಲಿಸ್ ಪೆರ್ರಿ  ವಾಪಸ್.. ಗ್ರೇಸ್ ಗೆ ಗೇಟ್ ಪಾಸ್ – RCBಗೆ ರಿಲೀಸ್ ನಲ್ಲೇ 3ನೇ ಕಪ್ ಫಿಕ್ಸ್?
5 ಟೀಂ.. 5ನೇ ಟ್ರೋಫಿ.. ಯಾರು ಸ್ಟ್ರಾಂಗ್?

ಎಲ್ಲಿಸ್ ಪೆರ್ರಿ  ವಾಪಸ್.. ಗ್ರೇಸ್ ಗೆ ಗೇಟ್ ಪಾಸ್ – RCBಗೆ ರಿಲೀಸ್ ನಲ್ಲೇ 3ನೇ ಕಪ್ ಫಿಕ್ಸ್?5 ಟೀಂ.. 5ನೇ ಟ್ರೋಫಿ.. ಯಾರು ಸ್ಟ್ರಾಂಗ್?

ಜಗತ್ತಿನ ಸೂಪರ್ ಸ್ಟಾರ್ ಪ್ಲೇಯರ್​ಗಳೆಲ್ಲಾ ಒಟ್ಟಾಗೋ ಐಪಿಎಲ್​ ವರ್ಲ್ಡ್ ಮೋಸ್ಟ್ ವ್ಯಾಲ್ಯೂಯೇಬಲ್ ಲೀಗ್.  ವುಮೆನ್ಸ್ ಪ್ರೀಮಿಯರ್ ಲೀಗ್ ಕೂಡ ನಾವೇನ್ ಕಮ್ಮಿ ಅನ್ನೋ ರೀತಿ ವರ್ಷದಿಂದ ವರ್ಷಕ್ಕೆ ರೈಸ್ ಆಗ್ತಾನೇ ಇದೆ. ನಾಲ್ಕು ಸೀಸನ್​ಗಳನ್ನ ಸಕ್ಸಸ್​​ಫುಲ್ ಆಗಿ ಮುಗಿಸಿ ಈಗ ಐದನೇ ಆವೃತ್ತಿಗೆ ಸಿದ್ಧವಾಗ್ತಿದ್ದಾರೆ. 2027ರ ವುಮೆನ್ಸ್ ಪ್ರೀಮಿಯರ್ ಲೀಗ್​ಗೆ ಎಲ್ಲಾ ತಂಡಗಳ ಅಧಿಕೃತ ರಿಟೇನ್ ಹಾಗೇ ರಿಲೀಸ್ ಲಿಸ್ಟ್ ಔಟ್ ಆಗಿದೆ. ಈ ಪೈಕಿ ಆರ್​ಸಿಬಿ ಸ್ಮಾರ್ಟ್ ಮೂವ್ ಮಾಡಿದೆ.

ಇದನ್ನೂ ಓದಿ : 10 ಓವರ್.. 4/40 ವಿಕೆಟ್ – ಮಧ್ಯಮ ಓವರ್ ಗಳ MAGICIAN 

ವುಮೆನ್ಸ್ ಪ್ರೀಮಿಯರ್ ಲೀಗ್ ಒಂಥರಾ ಇಂಟ್ರೆಸ್ಟಿಂಗ್ ಆಗಿದೆ. ಟೋಟಲ್ ಇರೋದು ಐದು ತಂಡಗಳು. ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್,  ಡೆಲ್ಲಿ ಕ್ಯಾಪಿಟಲ್ಸ್, ಯುಪಿ ವಾರಿಯರ್ಸ್ ಮತ್ತು ಗುಜರಾತ್ ಜೇಂಟ್ಸ್. 2023ರಲ್ಲಿ ಟೂರ್ನಿ ಅಧಿಕೃತವಾಗಿ ಸ್ಟಾರ್ಟ್ ಆಗಿದೆ. ಮೊದಲ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಚಾಂಪಿಯನ್ಸ್.. 2024ರಲ್ಲಿ ಆರ್​ಸಿಬಿ ವಿನ್ನರ್ಸ್.. 2025ರಲ್ಲಿ ಮತ್ತೆ ಮುಂಬೈ ವಿನ್.. 2026ರಲ್ಲಿ ಮತ್ತೆ ಆರ್​ಸಿಬಿ ಕಪ್ ಗೆದ್ದಿದೆ. ಇದೆಲ್ಲಕ್ಕಿಂತ ಅಚ್ಚರಿಯ ವಿಚಾರ ಅಂದ್ರೆ ಈ ನಾಲ್ಕೂ ಆವೃತ್ತಿಗಳಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಫೈನಲ್​ಗೆ ಬಂದಿದೆ. ನಾಲ್ಕೂ ಸಲವೂ ರನ್ನರ್ ಅಪ್ ಆಗಿದ್ದಾರೆ. ಟ್ರೋಫಿ ಹೊಸ್ತಿಲಲ್ಲಿ ಎಡವಿದ್ದಾರೆ. ಈಗ ಐದನೇ ಆವೃತ್ತಿಗೆ ಟೀಂ ಫಾರ್ಮ್ ಮಾಡೋ ಟೈಂ ಬಂದಿದೆ. ಸೆಪ್ಟೆಂಬರ್ 28 ಲಾಸ್ಟ್ ಡೇಟ್ ಆಗಿದ್ದು ತಂಡಗಳ ರಿಟೇನ್ ಮತ್ತು ರಿಲೀಸ್ ಲಿಸ್ಟ್ ಹೊರಬಿದ್ದಿದೆ.

5 ತಂಡ.. 63 ಆಟಗಾರ್ತಿಯರು ಸೇಫ್.. 26 ಪ್ಲೇಯರ್ಸ್ ಔಟ್!

2027ರ ಮಹಿಳಾ ಪ್ರೀಮಿಯರ್ ಲೀಗ್ ಜನವರಿ 14 ರಿಂದ ಫೆಬ್ರವರಿ 7 ರವರೆಗೆ ನಡೆಯಲಿದೆ. ಅದಕ್ಕೂ ಮೊದಲು ಅಕ್ಟೋಬರ್ 28ರಂದು ಕೊಚ್ಚಿಯಲ್ಲಿ ಮಿನಿ ಆಕ್ಷನ್ ನಡೆಯಲಿದೆ. ಐದು ತಂಡಗಳು ಒಟ್ಟು 63 ಆಟಗಾರ್ತಿಯರನ್ನು ಉಳಿಸಿಕೊಂಡಿದ್ದು, 27 ಆಟಗಾರ್ತಿಯರನ್ನು ಹರಾಜಿಗೆ ಬಿಡಲಾಗಿದೆ. ಌಂಡ್ ಇಲ್ಲಿ ಯಾವುದೇ ತಂಡ ಕೂಡ ನಾಯಕಿಯರನ್ನ ಆಕ್ಷನ್​ಗೆ ಬಿಟ್ಟಿಲ್ಲ. ಬಹುಶಃ ಸೇಮ್ ಕ್ಯಾಪ್ಟನ್ಸಿಯಲ್ಲೇ ಕಂಟಿನ್ಯೂ ಮಾಡಬಹುದು.

ಕ್ಯಾಪ್ಟನ್ಸಿ ಬದಲಾವಣೆ ಇಲ್ಲ!?

ತಂಡ                      ನಾಯಕಿ                       ರಿಟೇನ್                ರಿಲೀಸ್

ಬೆಂಗಳೂರು             ಸ್ಮೃತಿ ಮಂದಾನ                   13                     4

ಮುಂಬೈ                ಹರ್ಮನ್ ಪ್ರೀತ್ ಕೌರ್           11                     6

ಡೆಲ್ಲಿ                   ಜೆಮಿಮಾ ರೊಡ್ರಿಗಸ್               13                    6

ಉತ್ತರಪ್ರದೇಶ          ಮೆಗ್ ಲ್ಯಾನಿಂಗ್                   11                     9

ಗುಜರಾತ್             ಆಶ್ಲೀ ಗಾರ್ಡ್ನರ್                     15                     4

ಇಲ್ಲಿ ಉತ್ತರಪ್ರದೇಶ ವಾರಿಯರ್ಸ್ ಟೀಂ ಅತೀ ಹೆಚ್ಚು ಅಂದ್ರೆ 9 ಆಟಗಾರ್ತಿಯರನ್ನ ರಿಲೀಸ್ ಮಾಡಿದೆ. ಆರ್​ಸಿಬಿಯಲ್ಲಿ ಗ್ರೇಸ್ ಹ್ಯಾರಿಸ್, ಲಿನ್ಸೆ ಸ್ಮಿತ್, ಡಿ ಹೇಮಲತಾ, ಗೌತಮಿ ನಾಯಕ್ ಹೊರ ಬಂದಿದ್ದಾರೆ. ಬಟ್ ಇಲ್ಲಿ ಆರ್​ಸಿಬಿಯ ಮೂವ್ ನಿಂದ ನೆಕ್ಸ್​ಟ್ ಕೂಡ ನಮ್ದೇ ಕಪ್ ಎನ್ನುವಂಥ ಟಾಕ್ ಶುರುವಾಗಿದೆ. ಯಾಕಂದ್ರೆ ಹಾಲಿ ಚಾಂಪಿಯನ್ ಆರ್​ಸಿಬಿ ತಮ್ಮ ಗೆಲುವಿನ ಟೀಮ್​ನ ಹಾಗೇ ಉಳಿಸಿಕೊಂಡಿದೆ. ಎಲ್ಲಿಸ್ ಪೆರ್ರಿ.. ಪೆರ್ರಿ ಲಾಸ್ಟ್ ಸೀಸನ್ ಆಡಿರ್ಲಿಲ್ಲ. ಪರ್ಸನಲ್ ರೀಸನ್ ಹೇಳಿ ಸೀಸನ್​ನಿಂದ ಹೊರನಡೆದಿದ್ರು. ಹೀಗಿದ್ರೂ ಈ ಸೀಸನ್​ನಲ್ಲಿ ಆಡುವ ಭರವಸೆ ನೀಡಿರೋದ್ರಿಂದ ಅವ್ರನ್ನ ರಿಟೇನ್ ಮಾಡಿಕೊಂಡಿದೆ. ಹಾಗೇ ಜಾರ್ಜಿಯಾ ವೋಲ್, ಲಾರೆನ್ ಬೆಲ್, ನಡಿನ್ ಡಿ ಕ್ಲರ್ಕ್, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಾಕರ್, ಪ್ರತ್ಯೋಶಾ ಕುಮಾರ್, ಪ್ರೇಮಾ ರಾವತ್, ರಾಧಾ ಯಾದವ್, ರಿಚಾ ಘೋಷ್, ಸಯಾಲಿ ಸತ್ಘರೆ, ಶ್ರೇಯಾಂಕ ಪಾಟೀಲ್, ಸ್ಮೃತಿ ಮಂಧಾನ ತಂಡದಲ್ಲೇ ಉಳಿದಿದ್ದಾರೆ. ಚಾಂಪಿಯನ್ ಪ್ಲೇಯರ್​ಗಳೇ ಕಂಟಿನ್ಯೂ ಆಗ್ತಿರೋದ್ರಿಂದ ಬೆಂಗಳೂರು ತಂಡ ಈ ಸಲವೂ ಕಪ್ ಗೆಲ್ಲೋ ಫೇವರೆಟ್ ಟೀಂ ಆಗಿದೆ.

ಐಪಿಎಲ್​ನಲ್ಲಿ ರಜತ್ ಪಾಟಿದಾರ್ ಕ್ಯಾಪ್ಟನ್ಸಿಯಲ್ಲಿ ಆರ್​ಸಿಬಿ ಹುಡುಗರ ಟೀಂ ಹಾಲಿ ಚಾಂಪಿಯನ್ಸ್.. ಌಂಡ್ ಡಬ್ಲ್ಯೂಪಿಎಲ್​ನಲ್ಲಿ ಸ್ಮೃತಿ ಮಂದಾನ ಲೀಡರ್​ಶಿಪ್​ನಲ್ಲಿ ಆರ್​ಸಿಬಿ ಬ್ಯೂಟೀಸ್ ಕೂಡ ಹಾಲಿ ಚಾಂಪಿಯನ್ಸ್. ಈಗ ಹೆಣ್ಮಕ್ಕಳೇ ಸ್ಟ್ರಾಂಗು ಗುರು ಅಂತಾ ತೋರಿಸೋಕೆ ಮಹಿಳಾ ಪಡೆ ಮತ್ತೊಮ್ಮೆ ಸಿದ್ಧವಾಗ್ತಿದೆ. ಜಗತ್ತಿನಲ್ಲೇ ಮೋಸ್ಟ್ ಫ್ಯಾನ್ ಬೇಸ್​ ಇರೋ ಆರ್​ಸಿಬಿಗೆ ಚೊಚ್ಚಲ ಕಪ್ ತಂದುಕೊಟ್ಟಿದ್ದೇ ಮಹಿಳಾ ಟೀಂ. ಆಮೇಲೆ ಮೆನ್ಸ್ ಟೀಮ್​ಗೂ ಲಕ್ ಸ್ಟಾರ್ಟ್ ಆಯ್ತು. ಕಳೆದ ಮೂರು ವರ್ಷಗಳಿಂದ ಆರ್​ಸಿಬಿ ಚಾಂಪಿಯನ್ ಆಗ್ತಾನೇ ಬಂದಿದೆ. ಮೆನ್ಸ್ ಟೀಂ ಬ್ಯಾಕ್ ಟು ಬ್ಯಾಕ್ ಟೈಟಲ್ ಗೆದ್ದು ಹ್ಯಾಟ್ರಿಕ್ ಟ್ರೋಫಿ ಕ್ಯೂನಲ್ಲಿದೆ. ಇನ್ನು ಆರ್​ಸಿಬಿ ವುಮೆನ್ಸ್ ಟೀಂ 2 ಬಾರಿ ಕಪ್ ಗೆದ್ದು ಈಗ ನೆಕ್ಸ್​ಟ್ ಸೀಸನ್​ಗೆ ಮೂರನೇ ಟೈಟಲ್ ಮೇಲೆ ಕಣ್ಣಿಟ್ಟಿದ್ದಾರೆ.

Shantha Kumari

Leave a Reply

Your email address will not be published. Required fields are marked *