10 ಓವರ್.. 4/40 ವಿಕೆಟ್ – ಮಧ್ಯಮ ಓವರ್ ಗಳ MAGICIAN
ವಿಶ್ವಕಪ್ ಗೆ ಟವೆಲ್ ಹಾಕಿದ ಕುಲ್ದೀಪ್

ಭಾರತ ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿಯಾಗಿ ಗೆಲ್ಲೋಕೆ ಒನ್ ಆಫ್ ದಿ ರೀಸನ್ ಸ್ಪೆಷಲಿಸ್ಟ್ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್. ಆದ್ರೆ ಇತ್ತೀಚೆಗೆ ಅವ್ರನ್ನ ತುಂಬಾನೇ ಸೈಡ್ಲೈನ್ ಮಾಡಿದ್ರು. ಬಟ್ ಒನ್ಸ್ ಚಾನ್ಸ್ ಸಿಗ್ತಿದ್ದಂತೆ ಕುಲ್ದೀಪ್ ಎಲ್ಲರ ಬಾಯಿ ಮುಚ್ಚೋ ಹಾಗೇ ಪರ್ಫಾಮ್ ಮಾಡಿದ್ದಾರೆ. ವಿಶ್ವಕಪ್ನಲ್ಲಿ ನನಗೂ ಚಾನ್ಸ್ ಕೊಡಿ ಎನ್ನುವಂಥ ಮೆಸೇಜ್ ಕೊಟ್ಟಿದ್ದಾರೆ.
ಇದನ್ನೂ ಓದಿ : ಬವುಮಾ vs ಡಿ ಕಾಕ್ ವಾಕ್ಸಮರ! ಮೈದಾನದಲ್ಲೇ ಇಬ್ಬರ ನಡುವೆ ಫೈಟ್
ಭಾನುವಾರದ ಪಂದ್ಯದಲ್ಲಿ ಬಳಿಕ ಎಲ್ರೂ ಕೂಡ ಕಿಂಗ್ ಕೊಹ್ಲಿ ಸೆಂಚುರಿಯನ್ನ ಹಾಡಿ ಹೊಗಳ್ತಿದ್ದಾರೆ. ಅಟ್ ದಿ ಸೇಮ್ ಟೈಂ ಸ್ಪಿನ್ನರ್ ಕುಲ್ದೀಪ್ ಯಾದವ್ ಗೂ ಅಪ್ರಿಸಿಯೇಷನ್ ಸಿಗ್ತಿಲ್ಲ. ವೆಸ್ಟ್ ಇಂಡೀಸ್ ವಿರುದ್ಧ 10 ಓವರ್ಗಳಲ್ಲಿ ಕೇವಲ 40 ರನ್ ನೀಡಿ 4 ವಿಕೆಟ್ ತೆಗೆದು ಕೆರೆಬಿಯನ್ ಕಲಿಗಳನ್ನ 300 ಒಳಗೆ ಕಟ್ಟಿ ಹಾಕಿದ್ರು. ಕುಲ್ದೀಪ್ರ ಇದೇ ಸ್ಪೆಲ್ನಿಂದಲೇ ಭಾರತಕ್ಕೆ ಚೇಸಿಂಗ್ ಸ್ವಲ್ಪ ಈಸಿ ಅನ್ಸಿತ್ತು. ತಮ್ಮ ಗೂಗ್ಲಿ ಮತ್ತು ವೈವಿಧ್ಯಮಯ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟರ್ಗಳನ್ನು ಔಟ್ ಮಾಡುವಲ್ಲಿ ನಿಸ್ಸೀಮರಾಗಿರೋ ಕುಲ್ದೀಪ್ಗೆ ಈಗ ತಂಡದಲ್ಲಿ ಚಾನ್ಸ್ ಸಿಗೋದೇ ದೊಡ್ಡದಾಗಿದೆ.
2027ರ ವಿಶ್ವಕಪ್ ಗೆ ನಾನೂ ರೆಡಿ ಎಂದ ಕುಲ್ದೀಪ್!
ವಿಂಡೀಸ್ ವಿರುದ್ಧದ ಸರಣಿಯಲ್ಲಿ ಕುಲ್ದೀಪ್ಗೆ ತಂಡದಲ್ಲಿ ಚಾನ್ಸ್ ಸಿಕ್ಕಿರೋದೇ ಹೆಚ್ಚು. ಸಿಕ್ರೂ ಪ್ಲೇಯಿಂಗ್ 11ನಲ್ಲಿ ಅವಕಾಶ ಕೊಟ್ಟಿರೋದು ಮತ್ತೊಂದು ಅದೃಷ್ಟ. ಯಾಕಂದ್ರೆ ಕಳೆದ ಕೆಲ ತಿಂಗಳುಗಳಿಂದ ಮ್ಯಾನೇಜ್ಮೆಂಟ್ ಕುಲ್ದೀಪ್ರನ್ನ ಸೈಡ್ಲೈನ್ ಮಾಡಿದೆ. ಕಳೆದ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ವೇಳೆ ಮೊದಲ ಪಂದ್ಯದಲ್ಲಿ ಕುಲ್ದೀಪ್ ಆಡಿದ್ರು. ಆಗ ಭಾರತ ಗೆದ್ದಿತ್ತು. ಆದ್ರೆ ಎರಡನೇ ಪಂದ್ಯದಲ್ಲಿ ಅವ್ರನ್ನ ಕೈಬಿಡಲಾಗಿತ್ತು. ಹೀಗಾಗಿ ಎರಡನೇ ಪಂದ್ಯ ಡ್ಯಾ ಆಗಿತ್ತು. ಅದಕ್ಕೆ ಕಾರಣವೇ ಭಾರತದ ಬೌಲಿಂಗ್ ವೀಕ್ ಇದ್ದದ್ದು. ಈಗ ವಿಂಡೀಸ್ ವಿರುದ್ಧ ವರುಣ್ ಚಕ್ರವರ್ತಿ, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್ ಇಲ್ಲದ್ದಕ್ಕೆ ಕುಲ್ದೀಪ್ಗೆ ಅವಕಾಶ ಕೊಟ್ಟಿದ್ದಾರೆ. ಈ ಚಾನ್ಸ್ನಲ್ಲಿ ಕುಲ್ದೀಪ್ ಪರ್ಫಾಮೆನ್ಸ್ನಲ್ಲೇ ಉತ್ತರ ಕೊಟ್ಟಿದ್ದಾರೆ. 2027ರ ವಿಶ್ವಕಪ್ ಌಂಗಲ್ನಲ್ಲಿ ತಾನೂ ಕೂಡ ಬೆಟರ್ ಆಪ್ಶನ್ ಅನ್ನೋದನ್ನ ಹೇಳಿದ್ದಾರೆ. ಅಷ್ಟಕ್ಕೂ ಕುಲ್ದೀಪ್ ಏಕದಿನ ತಂಡದಲ್ಲಿ ಆಡೋದಕ್ಕೆ ಒಂದಷ್ಟು ಅಡ್ವಾಂಟೇಜಸ್ ಕೂಡ ಇದೆ.
ಕುಲ್ದೀಪ್ ಪ್ಲಸ್ ಪಾಯಿಂಟ್ಸ್!
ಮಧ್ಯಮ ಓವರ್ ಗಳಲ್ಲಿ ವಿಕೆಟ್ ಪಡೆಯುವ ಸಾಮರ್ಥ್ಯ ಕುಲ್ದೀಪ್ ಗೆ ಇದೆ
ಏಕದಿನ ಕ್ರಿಕೆಟ್ ನಲ್ಲಿ 11 ರಿಂದ 40 ಓವರ್ ಗಳಲ್ಲಿ ಪಂದ್ಯದ ದಿಕ್ಕು ಬದಲು
ಯುಜ್ವೇಂದ್ರ ಚಹಾಲ್ ಅನುಪಸ್ಥಿತಿಯಲ್ಲಿ ಪ್ರಮುಖ ರಿಸ್ಟ್ ಸ್ಪಿನ್ನರ್ ಕುಲ್ದೀಪ್
ಆಸ್ಟ್ರೇಲಿಯಾ, ಇಂಗ್ಲೆಂಡ್ & ದಕ್ಷಿಣ ಆಫ್ರಿಕಾದಂತಹ ಪಿಚ್ ಗಳಲ್ಲಿ ಸಾಬೀತು
2023ರ ಏಕದಿನ ವಿಶ್ವಕಪ್ ನಲ್ಲಿ 11 ಪಂದ್ಯಗಳಲ್ಲಿ 15 ವಿಕೆಟ್ ಬೇಟೆ

ನೋಡಿರಿ

