ಶಾಲಾ ಬಸ್ ಹರಿದು 1.5 ವರ್ಷದ ಮಗು ಸಾ*ವು!- ಅಮ್ಮನ ಜೊತೆ ಖುಷಿಯಾಗಿ ಹೋದ ಕಂದಮ್ಮನ ದಾರುಣ ಅಂತ್ಯ!

ಮನೆಯಿಂದ ಖುಷಿಯಾಗಿ ಹೊರಟಿದ್ದ ಒಂದೂವರೆ ವರ್ಷದ ಪುಟ್ಟ ಕಂದಮ್ಮನ ಆಯಸ್ಸು ಇಷ್ಟು ಬೇಗ ಮುಗಿದಿತ್ತು ಎಂದು ಯಾರೂ ಊಹಿಸಿರಲಿಲ್ಲ. ಅಣ್ಣ ಶಾಲೆಯಿಂದ ಬರುತ್ತಾನೆ ಎಂದು ಅಮ್ಮನ ಜೊತೆ ಆತನನ್ನು ಕರೆತರಲು ಹೋಗಿದ್ದ ಪುಟ್ಟ ಲತೀಕ್ಷಾ, ಮತ್ತೆ ಮನೆಗೆ ಮರಳಲೇ ಇಲ್ಲ.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ನಂಜಾಪುರ ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ಅಣ್ಣನ ಶಾಲಾ ಬಸ್ ಬರುತ್ತಿದ್ದ ಹಿನ್ನೆಲೆಯಲ್ಲಿ ರಸ್ತೆ ಬದಿ ಅಮ್ಮನ ಜೊತೆ ಲತೀಕ್ಷಾ ನಿಂತಿದ್ದಳು ಎನ್ನಲಾಗಿದೆ. ಇದೇ ವೇಳೆ ಶಾಲಾ ಬಸ್ ಮಗುವಿನ ಮೇಲೆ ಹರಿದ ಪರಿಣಾಮ ಪುಟ್ಟ ಕಂದಮ್ಮ ಸ್ಥಳದಲ್ಲೇ ಮೃತಪಟ್ಟಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಶಾಲಾ ಮಕ್ಕಳಿಗೆ ಬಿಗ್ ನ್ಯೂಸ್! ದಸರಾಗೆ 19 ದಿನ ರಜೆ!
ಒಂದೂವರೆ ವರ್ಷದ ಮಗುವಿನ ಸಾವಿನ ಸುದ್ದಿ ಗ್ರಾಮಸ್ಥರನ್ನು ಆಘಾತಕ್ಕೀಡು ಮಾಡಿದೆ. ಅಣ್ಣನನ್ನು ಶಾಲೆಯಿಂದ ಕರೆದುಕೊಂಡು ಬರಲು ಹೋಗಿದ್ದ ತಾಯಿ, ಕಣ್ಣೆದುರೇ ತನ್ನ ಮಗುವನ್ನು ಕಳೆದುಕೊಂಡು ದುಃಖದಲ್ಲಿ ಮುಳುಗಿದ್ದಾರೆ. ಮಗುವಿನ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಶಾಲಾ ಬಸ್ಗಳ ಸಂಚಾರದ ವೇಳೆ ಮಕ್ಕಳ ಸುರಕ್ಷತೆ, ಚಾಲಕರ ಎಚ್ಚರಿಕೆ ಹಾಗೂ ರಸ್ತೆ ಬದಿಯಲ್ಲಿರುವ ಮಕ್ಕಳ ಬಗ್ಗೆ ಹೆಚ್ಚಿನ ಜಾಗ್ರತೆ ಅಗತ್ಯ ಎಂಬ ಪ್ರಶ್ನೆಯನ್ನೂ ಈ ಘಟನೆ ಮತ್ತೆ ಎತ್ತಿದೆ. ಪುಟ್ಟ ಲತೀಕ್ಷಾಳನ್ನು ಕಳೆದುಕೊಂಡ ಕುಟುಂಬದ ನೋವು ಹೇಳತೀರದು. ಒಂದು ಕ್ಷಣದ ಅಜಾಗರೂಕತೆ ಇಡೀ ಕುಟುಂಬದ ಬದುಕನ್ನೇ ಬದಲಿಸಿದೆ.

ನೋಡಿರಿ

