ಬವುಮಾ vs ಡಿ ಕಾಕ್ ವಾಕ್ಸಮರ! ಮೈದಾನದಲ್ಲೇ ಇಬ್ಬರ ನಡುವೆ ಫೈಟ್

ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ರನ್‌ಗಳ ಸುರಿಮಳೆಯ ಜೊತೆಗೆ ಮೈದಾನದಲ್ಲೇ ನಡೆದ ಒಂದು ಘಟನೆ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ. ಅದು ಸೌತ್ ಆಫ್ರಿಕಾ ನಾಯಕ ತೆಂಬಾ ಬವುಮಾ ಮತ್ತು ಹಿರಿಯ ವಿಕೆಟ್‌ಕೀಪರ್ ಕ್ವಿಂಟನ್ ಡಿ ಕಾಕ್ ನಡುವಿನ ತೀವ್ರ ವಾಗ್ವಾದ!
ಆಸ್ಟ್ರೇಲಿಯಾ ರನ್‌ಚೇಸ್ ಮಾಡುತ್ತಿದ್ದ ವೇಳೆ 48ನೇ ಓವರ್‌ನಲ್ಲಿ ಲಿಜಾಡ್ ವಿಲಿಯಮ್ಸ್ ಎಸೆತದಲ್ಲಿ ಕ್ಸೇವಿಯರ್ ಬಾರ್ಟ್ಲೆಟ್ ಅವರ ಪ್ಯಾಡ್‌ಗೆ ಚೆಂಡು ಬಡಿದಿತ್ತು. ಸೌತ್ ಆಫ್ರಿಕಾ ಆಟಗಾರರು ಎಲ್‌ಬಿಡಬ್ಲ್ಯೂಗೆ ಮನವಿ ಮಾಡಿದರೂ, ಅಂಪೈರ್ ಔಟ್ ನೀಡಲಿಲ್ಲ. ಹೀಗಾಗಿ ಡಿಆರ್‌ಎಸ್ ತೆಗೆದುಕೊಳ್ಳಬೇಕೇ ಬೇಡವೇ ಎಂಬ ಚರ್ಚೆ ಶುರುವಾಯಿತು.
ಇದನ್ನೂ ಓದಿ: AUS ಸೊಕ್ಕಿಳಿಸಿದ ಸೌತ್ ಆಫ್ರಿಕಾ – ಟೆಂಬಾ, ಮಿಲ್ಲರ್ ಬಿಗ್ ಮೆಸೇಜ್
ವಿಕೆಟ್ ಹಿಂದೆ ಇದ್ದ ಡಿ ಕಾಕ್ ಅವರ ಅಭಿಪ್ರಾಯ ಮತ್ತು ನಾಯಕ ಬವುಮಾ ಅವರ ನಿರ್ಧಾರದಲ್ಲಿ ಭಿನ್ನಾಭಿಪ್ರಾಯ ಮೂಡಿತು. ಮಾತಿನ ಚಕಮಕಿ ತೀವ್ರವಾಗುತ್ತಿದ್ದಂತೆ ಮಾರ್ಕೊ ಜಾನ್ಸೆನ್ ಸೇರಿದಂತೆ ಸಹ ಆಟಗಾರರು ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಲು ಮುಂದಾದರು. ಕೊನೆಗೆ ಬವುಮಾ ಡಿಆರ್‌ಎಸ್ ತೆಗೆದುಕೊಳ್ಳುವ ನಿರ್ಧಾರ ಮಾಡಿದರು. ರಿಪ್ಲೇಯಲ್ಲಿ ಮೂರು ರೆಡ್‌ಗಳು ಕಾಣಿಸಿಕೊಂಡಿದ್ದು, ಬಾರ್ಟ್ಲೆಟ್ ಎಲ್‌ಬಿಡಬ್ಲ್ಯೂ ಔಟ್ ಆದರು. ಅಂದರೆ ನಾಯಕನ ನಿರ್ಧಾರ ಸೌತ್ ಆಫ್ರಿಕಾಗೆ ವಿಕೆಟ್ ತಂದುಕೊಟ್ಟಿತು.
ಈ ಘಟನೆಯ ಹೊರತಾಗಿಯೂ ಸೌತ್ ಆಫ್ರಿಕಾ ಪಂದ್ಯವನ್ನು 32 ರನ್‌ಗಳಿಂದ ಗೆದ್ದು ಮೂರು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಆದರೆ ಬವುಮಾ ಮತ್ತು ಡಿ ಕಾಕ್ ನಡುವಿನ ಈ ವಾಕ್ಸಮರ ಮಾತ್ರ ಪಂದ್ಯದ ನಂತರವೂ ಕ್ರಿಕೆಟ್ ಅಭಿಮಾನಿಗಳ ಚರ್ಚೆಯ ವಿಷಯವಾಗಿದೆ.

ನೋಡಿರಿ

