ಆಡದೇ ಸೆಮೀಸ್ ಗೆ ಭಾರತ-ಪಾಕ್ – IND Vs PAK ಫೈನಲ್ ಸಾಧ್ಯನಾ?
ಮಳೆ ಬಂದ್ರೆ ನಾವೇ ಚಾಂಪಿಯನ್ಸ್

ಆಡದೇ ಸೆಮೀಸ್ ಗೆ ಭಾರತ-ಪಾಕ್ – IND Vs PAK ಫೈನಲ್ ಸಾಧ್ಯನಾ?ಮಳೆ ಬಂದ್ರೆ ನಾವೇ ಚಾಂಪಿಯನ್ಸ್

ಏಷ್ಯನ್ ಗೇಮ್ಸ್​ನಲ್ಲಿ ಇವತ್ತು ಭಾರತ ಹಾಗೂ ಅಫ್ಘಾನಿಸ್ತಾನ ತಂಡಗಳ ಕ್ವಾರ್ಟರ್ ಫೈನಲ್ ಮುಖಾಮುಖಿಗೆ ಜಪಾನ್​ನ ಸ್ಟೇಡಿಯಂ ಸಿದ್ಧವಾಗಿತ್ತು. ಪ್ಲೇಯರ್ಸ್ ರೆಡಿಯಾಗಿದ್ರು. ಌಂಡ್ ಫ್ಯಾನ್ಸ್ ಕೂಡ ಕಾಯ್ತಾ ಇದ್ರು. ಆದ್ರೆ ಆಟಗಾರರು ಮೈದಾನಕ್ಕಿಳಿಯದೇ ಟೀಂ ಇಂಡಿಯಾ ಸೆಮೀಸ್​ಗೆ ಲಗ್ಗೆ ಇಟ್ಟಿದೆ. ಮತ್ತೊಂದೆಡೆ ಪಾಕಿಸ್ತಾನಕ್ಕೆ ವರುಣ ವರವಾಗಿದ್ದಾನೆ. ಎರಡು ಕ್ವಾರ್ಟರ್ ಫೈನಲ್ ಪಂದ್ಯಗಳು ಮಳೆ ಕಾರಣಕ್ಕೆ ಒಂದೂ ಎಸೆತವನ್ನೂ ಕಾಣದೇ ರದ್ದಾಗಿವೆ.

ಇದನ್ನೂ ಓದಿ : ವಿಂಡೀಸ್ ಚೆಂಡಾಡಿದ ಕಿಂಗ್ ಕೊಹ್ಲಿ – ಕುಲ್ದೀಪ್ ಕಿಚ್ಚಿಗೆ ಗಂಭೀರ್ ಗಪ್ ಚುಪ್

ಜಪಾನ್​ನಲ್ಲಿ ನಡೆಯುತ್ತಿರೋ ಏಷ್ಯನ್ ಗೇಮ್ಸ್​ನ ಮೆನ್ಸ್ ಕ್ರಿಕೆಟ್ ತಂಡಗಳಿಗೆ ಮಳೆ ಬಿಟ್ಟೂ ಬಿಡದೇ ಕಾಡ್ತಿದೆ. ಕ್ರೂಶಿಯಲ್ ಪಂದ್ಯಗಳೇ ಮಳೆ ಕಾರಣಕ್ಕೆ ರದ್ದಾಗ್ತಿವೆ. ಬಲಿಷ್ಠ ತಂಡಗಳಿಗೆ ಇದು ವರದಾನವಾಗಿದ್ರೆ ಫೈಟ್ ಕೊಡ್ಬೇಕು ಅನ್ಕೊಳ್ತಿದ್ದ ಇತರೆ ತಂಡಗಳಿಗೆ ನಿರಾಸೆಯಾಗಿದೆ. ಈಗ ಕ್ವಾರ್ಟರ್ ಫೈನಲ್​ನ ಎರಡು ಪಂದ್ಯಗಳು ಮಳೆಗೆ ಬಲಿಯಾಗಿವೆ.. ಮುಂದಿನ ಪಂದ್ಯಗಳಲ್ಲೂ ಇದೇ ರೀತಿ ಆದ್ರೆ ಹೇಗೆ ಅನ್ನೋ ಚರ್ಚೆ ಶುರುವಾಗಿದೆ.

ಭಾರತ & ಆಫ್ಘನ್ ಹಾಗೂ ಪಾಕಿಸ್ತಾನ & ಹಾಂಗ್ ಕಾಂಗ್ ಪಂದ್ಯಗಳು ರದ್ದು!

ಜಪಾನ್‌ನ ನಿಶ್ಶಿನ್ ಕೊರೋಗಿ ಸ್ಪೋರ್ಟ್ಸ್ ಪಾರ್ಕ್ ಮೈದಾನದಲ್ಲಿ ಇವತ್ತು ನಡೆಯಬೇಕಿದ್ದ ಏಷ್ಯನ್ ಗೇಮ್ಸ್  ಮೆನ್ಸ್ ಟಿ20 ಕ್ರಿಕೆಟ್ ಟೂರ್ನಿಯ ಎರಡನೇ ಕ್ವಾರ್ಟರ್ ಫೈನಲ್ ಪಂದ್ಯ ಮಳೆಯಿಂದಾಗಿ ಸಂಪೂರ್ಣ ರದ್ದಾಗಿದೆ. ಈ ಪಂದ್ಯದಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ್ ಮುಖಾಮುಖಿಯಾಗಬೇಕಿತ್ತು. ಪಂದ್ಯ ರದ್ದಾದ ಕಾರಣ, ಐಸಿಸಿ ಟಿ20 ರ‍್ಯಾಂಕಿಂಗ್‌ನಲ್ಲಿ ಮೇಲಿರುವ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸಿದೆ. ಇದಕ್ಕೂ ಮುನ್ನ ಪಾಕಿಸ್ತಾನ್ ಮತ್ತು ಹಾಂಗ್ ಕಾಂಗ್ ನಡುವಣ ಮೊದಲ ಕ್ವಾರ್ಟರ್ ಫೈನಲ್ ಪಂದ್ಯ ಕೂಡ ಮಳೆಯ ಕಾರಣ ರದ್ದಾಗಿತ್ತು. ಅದರಂತೆ ಐಸಿಸಿ ರ‍್ಯಾಂಕಿಂಗ್‌ ಆಧಾರದ ಮೇಲೆ ಪಾಕಿಸ್ತಾನ್ ತಂಡ ಸೆಮಿಫೈನಲ್​ಗೆ ಎಂಟ್ರಿ ಕೊಟ್ಟಿದೆ. ಇದೀಗ ಟೀಮ್ ಇಂಡಿಯಾ ಕೂಡ ಮುಂದಿನ ಸುತ್ತಿಗೆ ಪ್ರವೇಶಿಸಿದೆ. ಇನ್ನು ಮೂರನೇ ಮತ್ತು ನಾಲ್ಕನೇ ಕ್ವಾರ್ಟರ್ ಫೈನಲ್​ಗಳಲ್ಲಿ ಶ್ರೀಲಂಕಾ ಮತ್ತು ನೇಪಾಳ ಹಾಗೂ ಮಲೇಷ್ಯಾ ಮತ್ತು ಬಾಂಗ್ಲಾದೇಶ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯಗಳಲ್ಲಿ ಗೆಲ್ಲುವ ತಂಡಗಳು ಭಾರತ ಮತ್ತು ಪಾಕಿಸ್ತಾನ್ ತಂಡಗಳನ್ನು ಸೆಮಿಫೈನಲ್​ನಲ್ಲಿ ಎದುರಿಸಲಿದೆ. ಏಷ್ಯನ್ ಗೇಮ್ಸ್ ನಿಯಮಗಳ ಪ್ರಕಾರ ಭಾರತ, ಪಾಕಿಸ್ತಾನ್, ಶ್ರೀಲಂಕಾ ಮತ್ತು ಬಾಂಗ್ಲಾದೇಶ್ ತಂಡಗಳು ಐಸಿಸಿ ರ್ಯಾಂಕಿಂಗ್ ಆಧಾರದ ಮೇಲೆ ಟೂರ್ನಿಯಲ್ಲಿ ನೇರವಾಗಿ ಕ್ವಾರ್ಟರ್‌ ಫೈನಲ್ ಹಂತಕ್ಕೆ ಪ್ರವೇಶ ಪಡೆದಿದ್ದವು. ಆದ್ರೆ ಇವತ್ತು ಭಾರತ ಮತ್ತು ಪಾಕಿಸ್ತಾನ ತಂಡಗಳು ಮಳೆ ಕಾರಣದಿಂದಾಗಿ ಬ್ಯಾಟ್ ಅಥವಾ ಬಾಲ್ ಮುಟ್ಟದೆಯೇ ಅಕ್ಟೋಬರ್ 1 ರಂದು ನಡೆಯಲಿರುವ ಸೆಮಿಫೈನಲ್​ಗೆ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಹೀಗೆ ಡೈರೆಕ್ಟ್ ಆಗಿ ಸೆಮೀಸ್​ಗೆ ಹೋದ್ರು ಸರಿ. ಆದ್ರೆ ಸೆಮೀಸ್​ನಲ್ಲೂ ಮಳೆ ಬಂದ್ರೆ ಮುಂದೇನು ಅನ್ನೋ ಗೊಂದಲ ಎಲ್ರನ್ನೂ ಕಾಡ್ತಿದೆ. ಸೆಮೀಸ್​ ಪಂದ್ಯಗಳಿಗೆ ಮಳೆ ಬಂದು ಪಂದ್ಯಗಳು ರದ್ದಾದ್ರೆ ಅಲ್ಲೂ ಭಾರತಕ್ಕೇ ಲಾಭವಾಗಲಿದೆ. ಅದು ಹೇಗೆ ಅನ್ನೋದನ್ನ ನೋಡೋಣ.

ಆಡದೆಯೇ ಗೆಲ್ಲುವ ತಂಡಗಳು!

ಏಷ್ಯನ್ ಗೇಮ್ಸ್ ನಲ್ಲಿ ಸೆಮಿಫೈನಲ್ ಪಂದ್ಯಗಳಿಗೆ ಮಳೆ ಬಂದು ರದ್ದಾದ್ರೆ ರೂಲ್ಸ್

ನಾಕೌಟ್ ಹಂತದ ನಿಯಮಗಳ ಪ್ರಕಾರ ಯಾವುದೇ ಮೀಸಲು ದಿನ ಇರಲ್ಲ

ಪಂದ್ಯ ಸಂಪೂರ್ಣವಾಗಿ ರದ್ದಾದಾಗ ಐಸಿಸಿ ಟಿ20 ಶ್ರೇಯಾಂಕದಲ್ಲಿ ಫಲಿತಾಂಶ

ಐಸಿಸಿ ಟಿ-20ಐ ಶ್ರೇಯಾಂಕದಲ್ಲಿ ಮೇಲಿನ ಸ್ಥಾನದ ತಂಡ ವಿಜಯಿ.. ಡೈರೆಕ್ಟ್ ಫೈನಲ್

ಭಾರತವು ಟಿ-20ಐನಲ್ಲಿ 1ನೇ ಸ್ಥಾನ, ಅಫ್ಘಾನಿಸ್ತಾನವು 10ನೇ ಸ್ಥಾನದಲ್ಲಿದೆ

ಪಾಕಿಸ್ತಾನ 6ನೇ ಸ್ಥಾನದಲ್ಲಿದ್ದರೆ ಹಾಂಗ್ ಕಾಂಗ್ ಚೀನಾ 24ನೇ ಸ್ಥಾನದಲ್ಲಿದೆ

ಭಾರತ, ಪಾಕ್ ತಂಡಗಳು ಸೆಮೀಸ್ ಗೆ ಲಗ್ಗೆ.. ಮಂಗಳವಾರ ಮತ್ತಿಬ್ಬರು ಸೆಲೆಕ್ಟ್

3 & 4ನೇ ಕ್ವಾರ್ಟರ್ ಫೈನಲ್ ನಲ್ಲಿ ಶ್ರೀಲಂಕಾ Vs ನೇಪಾಳ, ಬಾಂಗ್ಲಾ Vs ಮಲೇಶಿಯಾ

ಭಾರತವೂ ಶ್ರೀಲಂಕಾ ಮತ್ತು ನೇಪಾಳ ನಡುವೆ ಗೆದ್ದವರ ವಿರುದ್ಧ ಸೆಮೀಸ್ ಕಾಳಗ

ಬಾಂಗ್ಲಾ ಮತ್ತು ಮಲೇಶಿಯಾ ನಡುವೆ ಗೆದ್ದವರ ವಿರುದ್ಧ ಪಾಕಿಸ್ತಾನಕ್ಕೆ ಸೆಮೀಸ್

ಮಂಗಳವಾರದ ಪಂದ್ಯಗಳೂ ಮಳೆಗೆ ರದ್ದಾದ್ರೆ ಶ್ರೀಲಂಕಾ ಮತ್ತು ಬಾಂಗ್ಲಾಗೆ ಸೆಮೀಸ್

ಸೆಮೀಸ್ ನಲ್ಲೂ ಮಳೆ ಬಂದ್ರೆ ಮತ್ತೆ ಐಸಿಸಿ ಶ್ರೇಯಾಂಕದ ತಂಡಗಳಿಗೆ ಫೈನಲ್ ಟಿಕೆಟ್

ಭಾರತ 1ನೇ ಸ್ಥಾನ, ಪಾಕ್ 6ನೇ ಸ್ಥಾನ, ಬಾಂಗ್ಲಾ 8ನೇ ಸ್ಥಾನ, ಶ್ರೀಲಂಕಾ 9ನೇ ಸ್ಥಾನ

ಸೋ ಇಲ್ಲಿ ಪಂದ್ಯಗಳು ರದ್ದಾದ್ರೆ ಐಸಿಸಿ ಶ್ರೇಯಾಂಕಗಳೇ ಮ್ಯಾಟರ್ ಆಗೋದ್ರಿಂದ ಭಾರತಕ್ಕೆ ಲಾಭ ಅಂತೂ ಇದ್ದೇ ಇದೆ. ಸೆಮೀಸ್​ನಲ್ಲೂ ಪಂದ್ಯ ರದ್ದಾದ್ರೆ ಭಾರತ ಫೈನಲ್ ಟಿಕೆಟ್ ಗಿಟ್ಟಿಸಿಕೊಳ್ಳುತ್ತೆ. ಒಂದು ವೇಳೆ ಪಾಕಿಸ್ತಾನದ ಸೆಮೀಸ್​ ಕೂಡ ರದ್ದಾದ್ರೆ ಅವ್ರೂ ಫೈನಲ್​ಗೆ ಬರ್ತಾರೆ. ಆಗ ಅಕ್ಟೋಬರ್ 3ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಇಂಡೋ-ಪಾಕ್ ವಾರ್ ಇರುತ್ತೆ. ಗೆದ್ದವ್ರಿಗೆ ಗೋಲ್ಡನ್ ಮೆಡಲ್ ಸಿಗುತ್ತೆ. ಭಾರತ ಹಾಲಿ ಚಾಂಪಿಯನ್ ಆಗಿರೋದ್ರಿಂದ ಭಾರತವೇ ಟೈಟಲ್ ವಿನ್ನರ್ ಆಗ್ತಾರೆ. ಬಟ್ ಬ್ಯಾಡ್ ಡೇ ಫೈನಲ್ ಪಂದ್ಯದ ದಿನವೂ ಮಳೆ ಬಂತು ಪಂದ್ಯ ನಡೆಸೋಕೆ ಸಾಧ್ಯನೇ ಇಲ್ಲ ಅಂದ್ರೆ ಐಸಿಸಿ ಶ್ರೇಯಾಂಕದಲ್ಲಿರುವ ಭಾರತವೇ ವಿನ್ನರ್ ಅಂತಾ ಘೋಷಣೆ ಮಾಡಲಾಗುತ್ತೆ. ಒಟ್ನಲ್ಲಿ ಭಾರತ ಹಾಗೂ ಪಾಕ್ ತಂಡಗಳು ಒಂದೂ ಪಂದ್ಯ ಆಡದೇ ಸೆಮೀಸ್​ಗೆ ಬಂದಿದ್ದಾರೆ. ಅಟ್​ಲೀಸ್ಟ್ ಸೆಮೀಸ್ ಪಂದ್ಯಗಳಾದ್ರೂ ನಡೆದು ಗೆದ್ದು ಫೈನಲ್​ಗೆ ಬರಲಿ ಅಂತಾ ಫ್ಯಾನ್ಸ್ ಕೂಡ ಕಾಯ್ತಿದ್ದಾರೆ.

Shantha Kumari

Leave a Reply

Your email address will not be published. Required fields are marked *