ವಿಂಡೀಸ್ ಚೆಂಡಾಡಿದ ಕಿಂಗ್ ಕೊಹ್ಲಿ – ಕುಲ್ದೀಪ್ ಕಿಚ್ಚಿಗೆ ಗಂಭೀರ್ ಗಪ್ ಚುಪ್
ಗುವಾಹಟಿಗೆ ಗುರಿ ಇಟ್ಟ ಭಾರತ!

ವಿಂಡೀಸ್ ಚೆಂಡಾಡಿದ ಕಿಂಗ್ ಕೊಹ್ಲಿ – ಕುಲ್ದೀಪ್ ಕಿಚ್ಚಿಗೆ ಗಂಭೀರ್ ಗಪ್ ಚುಪ್ಗುವಾಹಟಿಗೆ ಗುರಿ ಇಟ್ಟ ಭಾರತ!

ಕೊಹ್ಲಿ.. ಕೊಹ್ಲಿ.. ಕೊಹ್ಲಿ.. ಎಲ್ಲೆಲ್ಲೂ ಕೊಹ್ಲಿಯದ್ದೇ ಸದ್ದು ಸುದ್ದಿ ಎಲ್ಲವೂ.. ಮಾಜಿ ಕ್ರಿಕೆಟರ್ಸ್ ಪೋಸ್ಟ್​ಗಳಲ್ಲೂ ಕಿಂಗ್​ದೇ ಮಾತು.. ಫ್ಯಾನ್ಸ್  ಬಾಯಲ್ಲೂ ವಿರಾಟ್​ದೇ ಗುಣಗಾನ. ಟೋಟಲಿ ಈಗ ಎಲ್ಲವೂ ಕೊಹ್ಲಿಮಯವಾಗಿಬಿಟ್ಟಿದೆ. ಮೊದ್ಲೇ ಸಂಡೇ ಮ್ಯಾಚಸ್ ಅಂದ್ರೇನೇ ಕಿಂಗ್ ಕೊಹ್ಲಿಗೆ ಫೇವರೆಟ್. ಅದ್ರಲ್ಲೂ ಚೇಸಿಂಗ್ ಅಂತಾ ಬಂದಾಗ ಕೇಳ್ಬೇಕಾ. ಭಾನುವಾರ ತಿರುವನಂತಪುರದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ ಭರ್ಜರಿಯಾಗಿ ಗೆದ್ದಿದೆ. ಬ್ಯಾಟಿಂಗ್, ಬೌಲಿಂಗ್ ಎರಡ್ರಲ್ಲೂ ಅದ್ಭುತವಾಗಿ ಪರ್ಫಾಮ್ ಮಾಡಿ ವಿನ್ ಆಗಿದ್ದಾರೆ. ಈ ಒಂದು ಗೆಲುವಿನಿಂದ ಬಿಸಿಸಿಐಗೆ ಬಿಗ್ ಮೆಸೇಜ್ ಕೂಡ ಹೋಗಿದೆ.

ಇದನ್ನೂ ಓದಿ : RO-KO ಫಾರ್ಮ್.. ಗಿಲ್ ಕ್ಯಾಪ್ಟನ್ಸಿ – ವಿಂಡೀಸ್ ವಾರ್ ನಲ್ಲಿ ವಿಶ್ವಕಪ್ ಭವಿಷ್ಯ

ತಿರುವನಂತಪುರಂನಲ್ಲಿ ನಡೆದ ಭಾರತ-ವೆಸ್ಟ್ ಇಂಡೀಸ್ ನಡುವಿನ ಮೊದಲ ODI ಪಂದ್ಯದವನ್ನ ಭಾರತ 8 ವಿಕೆಟ್ ಅಂತರದಲ್ಲಿ ಭರ್ಜರಿಯಾಗಿ ಗೆದ್ದಿದೆ. ಕಿಂಗ್ ಕೊಹ್ಲಿ ಮತ್ತು ಪ್ರಿನ್ಸ್ ಶುಭ್​ಮನ್ ಗಿಲ್ ಅವ್ರ ರೋಚಕ ಸೆಂಚುರಿಯಿಂದ ವಿಂಡೀಸ್ ಪಡೆ ಸೋತು ಸುಣ್ಣವಾಗಿದೆ. ಪಂದ್ಯಕ್ಕೂ ಮುನ್ನ ಟಾಸ್ ಗೆದ್ದ ಭಾರತ ಬೌಲಿಂಗ್ ಚೂಸ್ ಮಾಡಿಕೊಂಡಿದ್ರು. ಸೋ ಬ್ಯಾಟಿಂಗ್​ಗೆ ಬಂದ ವಿಂಡೀಸ್​ಗೆ ಓಪನಿಂಗ್ ಚೆನ್ನಾಗಿತ್ತು. ಫಸ್ಟ್ ವಿಕೆಟ್​ಗೆ 135 ರನ್​ಗಳ ಜೊತೆಯಾಟ. ಜಸ್ಟೀನ್ ಗ್ರೀವ್ಸ್ 101 ರನ್ಸ್.. ಆದ್ರೆ ನಂತ್ರದಲ್ಲಿ ಸಪೋರ್ಟ್ ಸಿಗ್ದೇ 50 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 295 ರನ್ಸ್ ಕಲೆ ಹಾಕಿದ್ರು. ಅಷ್ಟಕ್ಕೂ ಕೆರೆಬಿಯನ್ ಕಲಿಗಳನ್ನ ಕಟ್ಟಿಹಾಕಿದ್ದೇ ಕುಲ್ದೀಪ್ ಯಾದವ್. ಕಳೆದ ಸಾಕಷ್ಟು ಪಂದ್ಯಗಳಲ್ಲಿ ಚಾನ್ಸ್ ಸಿಗದೇ ಬೆಂಚ್ ಕಾಯ್ತಿದ್ದ ಕುಲ್ದೀಪ್ ವಿಂಡೀಸ್ ವಿರುದ್ಧ ಸಿಕ್ಕ ಅವಕಾಶ ಬಳಸಿಕೊಂಡು 4 ವಿಕೆಟ್ಸ್ ಬೇಟೆಯಾಡಿದ್ರು. ಕುಲ್ದೀಪ್​ರನ್ನ ಸೈಡ್​ಲೈನ್ ಮಾಡಿದ್ದ ಹೆಡ್​ಕೋಚ್ ಗೌತಮ್ ಗಂಭೀರ್ ಗಪ್​ಚುಪ್ ಆಗುವಂತೆ ಮಾಡಿದ್ರು. ಇನ್ನು ಬ್ಯಾಟಿಂಗ್​ ಅಂತಾ ಬಂದಾಗ್ಲೂ ಕೊಹ್ಲಿ ಕೂಡ ಎಲ್ಲರ ಬಾಯಿ ಮುಚ್ಚಿಸುವಂತೆ ಅಬ್ಬರಿಸಿದ್ರು. ರೋಹಿತ್ 32 ರನ್​ಗಳಿಗೆ ಔಟ್ ಆದ್ರೆ ಗಿಲ್ 110 ರನ್ಸ್ ಕಲೆ ಹಾಕಿದ್ರು. ಅದ್ರಲ್ಲೂ ನಂಬರ್ 3ನಲ್ಲಿ ವಿರಾಟ್ ಕೊಹ್ಲಿ 139 ರನ್ಸ್.. 10 ಫೋರ್ ಮತ್ತು 9 ಸಿಕ್ಸರ್ಸ್ ಇತ್ತು, 157 ಪ್ಲಸ್ ಸ್ಟ್ರೈಕ್​ರೇಟ್. ಪರಿಣಾಮ 41.4 ಓವರ್​ಗಳಲ್ಲೇ 2 ವಿಕೆಟ್ ನಷ್ಟಕ್ಕೆ ಭಾರತ 300 ರನ್ಸ್ ಕಲೆಹಾಕೋ ಮೂಲಕ ಪಂದ್ಯ ವಿನ್ ಆದ್ರು. ಈ ಇನ್ನಿಂಗ್ಸ್ ಬಳಿಕ ಕಿಂಗ್ ಕೊಹ್ಲಿ ಮತ್ತಷ್ಟು ದಾಖಲೆಗಳ ಸರದಾರನಾಗಿದ್ದಾರೆ.

ಕೊಹ್ಲಿ ನಡೆದಿದ್ದೇ ದಾರಿ!

ಏಕದಿನ ಕ್ರಿಕೆಟ್ ನಲ್ಲಿ ಅತ್ಯಂತ ವೇಗವಾಗಿ 15,000 ರನ್ಸ್, 303 ಇನ್ನಿಂಗ್ಸ್

ಸ್ವದೇಶದಲ್ಲಿ ಅತಿ ಹೆಚ್ಚು ಏಕದಿನ ರನ್ ಗಳಿಸಿದ್ದ ಸಚಿನ್ ದಾಖಲೆ ಬ್ರೇಕ್

ಸಚಿನ್ ತೆಂಡೂಲ್ಕರ್ 6,976 ರನ್ಸ್, 7,000 ರನ್ ಕಲೆಹಾಕಿದ ಕೊಹ್ಲಿ

ವಿಂಡೀಸ್ ವಿರುದ್ಧ ಏಕದಿನದಲ್ಲಿ 10 ಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟರ್

ಏಕದಿನ ಕ್ರಿಕೆಟ್‌ ನಲ್ಲಿ 200 ಸಿಕ್ಸರ್‌ ಗಳ ಮೈಲಿಗಲ್ಲನ್ನು ದಾಟಿದ ಬ್ಯಾಟ್ಸ್‌ ಮನ್

ಏಕದಿನ ಪಂದ್ಯಗಳಲ್ಲಿ ಚೇಸಿಂಗ್ ನಲ್ಲಿ ಅತೀ ಹೆಚ್ಚು ಶತಕ.. ಒಟ್ಟು 30 ಸೆಂಚುರಿ

ವಿರಾಟ್ ಕೊಹ್ಲಿ ಪ್ರತೀ ಸಲ ಮೈದಾನಕ್ಕಿ ಇಳಿದಾಗ್ಲೂ ಹತ್ತು ಹಲವು ದಾಖಲೆಗಳು ಶೇಕ್ ಆಗ್ತಾನೇ ಇರುತ್ತೆ. ಕ್ರಿಕೆಟ್ ಲೋಕದ ರನ್ ಮೆಷಿನ್ ಅನ್ನೋದನ್ನ ಪದೇಪದೆ ಪ್ರೂವ್ ಮಾಡ್ತಾನೇ ಇದ್ದಾರೆ. ಫಿಟ್​ನೆಸ್, ಏಜ್, ಫಾರ್ಮ್, ಸ್ಟ್ರೈಕ್​ರೇಟ್ ಅಂತಾ ಮಾತಾಡೋರ ಬಾಯಿ ಮುಚ್ಚಿಸಿದ್ದಾರೆ. ಅದ್ರಲ್ಲೂ ಈ ವರ್ಷ ಅದ್ಭುತ ಫಾರ್ಮ್​ನಲ್ಲಿದ್ದು ಕ್ರಿಕೆಟ್​ನ ಆಡಲ್ಲ ಆಳ್ತೀನಿ ಅನ್ನೋದನ್ನ ಮತ್ತೆ ಸಾಬೀತು ಮಾಡಿದ್ದಾರೆ. ಎರಡನೇ ಪಂದ್ಯ ಬುಧವಾರ ಗುವಾಹಟಿಯಲ್ಲಿ ನಡೆಯಲಿದ್ದು ಈ ಪಂದ್ಯವನ್ನೂ ಗೆದ್ದು ಸರಣಿ ಕೈವಶ ಮಾಡಿಕೊಳ್ಳೋಕೆ ಭಾರತ ಕಾಯ್ತಾ ಇದೆ.

Shantha Kumari

Leave a Reply

Your email address will not be published. Required fields are marked *