ವಿರಾಟ್‌ ವಿಶ್ವರೂಪ.. ಗಿಲ್‌ ಸೂಪರ್‌ ಸೆಂಚುರಿ.. ವಿಂಡೀಸ್‌ ವಿರುದ್ಧ ಭಾರತಕ್ಕೆ 8 ವಿಕೆಟ್‌ ಭರ್ಜರಿ ಜಯ!

ವಿರಾಟ್‌ ವಿಶ್ವರೂಪ.. ಗಿಲ್‌ ಸೂಪರ್‌ ಸೆಂಚುರಿ.. ವಿಂಡೀಸ್‌ ವಿರುದ್ಧ ಭಾರತಕ್ಕೆ 8 ವಿಕೆಟ್‌ ಭರ್ಜರಿ ಜಯ!

ವೆಸ್ಟ್‌ ಇಂಡೀಸ್‌  ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ ಜಯಗಳಿಸಿದೆ. ವಿರಾಟ್‌ ಕೊಹ್ಲಿ ಮತ್ತು ಶುಭಮನ್‌ ಗಿಲ್‌  ಅವರ ಶತಕದ ನೆರವಿನಿಂದ ವಿಂಡೀಸ್‌  ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಭಾರತ 8 ವಿಕೆಟ್‌ಗಳಿಂದ ಜಯಗಳಿಸಿದೆ.

ಇದನ್ನೂ ಓದಿ: ಬ್ಲಾಂಕ್‌ ಚೆಕ್..‌ ಅದೊಂದು ಪತ್ರ.. 13ನೇ ವಯಸ್ಸಲ್ಲೇ ಸ್ಮೃತಿ ಶಪಥ! – RCB ಕ್ವೀನ್‌ NET WORTH ಇಷ್ಟೊಂದಾ?

ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ವೆಸ್ಟ್‌ ಇಂಡೀಸ್‌ 7 ವಿಕೆಟ್‌ ನಷ್ಟಕ್ಕೆ 295 ರನ್‌ ಹೊಡೆಯಿತು. ಈ ಮೊತ್ತವನ್ನು ಬೆನ್ನಟ್ಟಿದ ಭಾರತ ಇನ್ನೂ 50 ಎಸೆತಗಳು ಬಾಕಿ ಇರುವಂತೆಯೇ 41.4 ಓವರ್‌ಗಳಲ್ಲಿ 300 ರನ್‌ ಹೊಡೆದು ಜಯ ಸಾಧಿಸಿತು. ಈ ಭರ್ಜರಿ ಗೆಲುವಿನೊಂದಿಗೆ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ.

ವಿರಾಟ್ ಕೊಹ್ಲಿ ಕೇವಲ 88 ಎಸೆತಗಳಲ್ಲಿ 9 ಸಿಕ್ಸರ್ ಹಾಗೂ 10 ಬೌಂಡರಿಗಳೊಂದಿಗೆ ಭರ್ಜರಿ 139 ರನ್ ಚಚ್ಚಿದರು. ಮತ್ತೊಂದೆಡೆ ನಾಯಕ ಶುಭ್‌ಮನ್ ಗಿಲ್ ಕೂಡ ಆಕರ್ಷಕ ಶತಕ 110 ರನ್(108 ಎಸೆತ, 13 ಬೌಂಡರಿ, 1 ಸಿಕ್ಸ್‌) ಹೊಡೆದು ಮಿಂಚಿದರು. ರೋಹಿತ್‌ ಶರ್ಮಾ 32 ರನ್‌ ಹೊಡೆದು ಔಟಾದರೆ ಋತುರಾಜ್‌ ಗಾಯಕ್ವವಾಡ್‌ ಔಟಾಗದೇ 13 ರನ್‌ ಹೊಡೆದರು.

ಮೊದಲು ಬ್ಯಾಟ್ ಮಾಡಿದ ವೆಸ್ಟ್‌ ಇಂಡೀಸ್‌ ತಂಡ ಜಸ್ಟಿನ್ ಗ್ರೀವ್ಸ್ 101 ರನ್ ಶತಕ ಹಾಗೂ ಕೊನೆಯಲ್ಲಿ ರೋಸ್ಟನ್ ಚೇಸ್ ಅವರ ಉಪಯುಕ್ತ ಆಟದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 295 ರನ್ ಕಲೆಹಾಕಿತು. ಭಾರತದ ಪರ ಸ್ಪಿನ್ನರ್ ಕುಲದೀಪ್ ಯಾದವ್ 40 ರನ್ ನೀಡಿ 4 ಪ್ರಮುಖ ವಿಕೆಟ್ ಉರುಳಿಸಿದರು.

Shwetha M

Leave a Reply

Your email address will not be published. Required fields are marked *