IND Vs AFG.. ಯಾರಿಗೆ ಸೆಮೀಸ್? – ಬುಮ್ರಾ ಬಂದ್ಮೇಲೆ ಬೌಲಿಂಗ್ ಬೆಂಕಿ
ಏಷ್ಯನ್ ಗೇಮ್ಸ್ ನಲ್ಲಿ ನಮ್ದೇ GOLD?

ಏಷ್ಯನ್ ಗೇಮ್ಸ್ನಲ್ಲಿ ಟೀಂ ಇಂಡಿಯಾ ವುಮೆನ್ಸ್ ಪಡೆ ಗೋಲ್ಡನ್ ಮೆಡಲ್ ಗೆದ್ದು ಹೆಣ್ಮಕ್ಕಳೇ ಸ್ಟ್ರಾಂಗು ಗುರು ಅನ್ನೋದನ್ನ ತೋರಿಸಿದ್ದಾರೆ. ಈಗ ಹುಡುಗ್ರ ಸರದಿ. ಐಸಿಸಿ ರ್ಯಾಂಕಿಂಗ್ ಆಧಾರದ ಮೇಲೆ ನೇರವಾಗಿ ಕ್ವಾಟರ್ ಫೈನಲ್ಗೆ ಲಗ್ಗೆ ಇಟ್ಟಿರೋದ್ರಿಂದ ಸೆಪ್ಟೆಂಬರ್ 28 ಅಂದ್ರೆ ನಾಳೆ ತನ್ನ ಮೊದಲ ಪಂದ್ಯವನ್ನ ಆಡ್ತಾರೆ. ಶ್ರೇಯಸ್ ಅಯ್ಯರ್ ಕ್ಯಾಪ್ಟನ್ಸಿಯಲ್ಲಿ ಕಣಕ್ಕಿಳಿಯಲಿರೋ ಭಾರತದ ಪ್ಲೇಯಿಂಗ್ 11 ಹೇಗಿರುತ್ತೆ ಅನ್ನೋ ಬಗ್ಗೆ ಮಾಹಿತಿ.
ಮೆನ್ಸ್ ಕ್ರಿಕೆಟ್ನಲ್ಲಿ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿದಿರೋ ಟೀಂ ಇಂಡಿಯಾ ಸೆಪ್ಟೆಂಬರ್ 28 ರಿಂದ ಕ್ವಾರ್ಟರ್ ಫೈನಲ್ ಅಭಿಯಾನ ಆರಂಭಿಸಲಿದೆ. ಶ್ರೇಯಸ್ ಅಯ್ಯರ್ ಕ್ಯಾಪ್ಟನ್ ಆದ್ಮೇಲೆ ಮೊದಲ ಮಲ್ಟಿ ನೇಷನ್ಸ್ ಟೂರ್ನಿ ಇದಾಗಿದ್ದು ತಂಡದ ಪರ್ಫಾಮೆನ್ಸ್ ಬಗ್ಗೆ ಸಾಕಷ್ಟು ಪ್ರಶ್ನೆಗಳಿವೆ. ಈಗಾಗ್ಲೇ ಜಪಾನ್ ವಿರುದ್ಧದ ಏಕೈಕ ಪಂದ್ಯದಲ್ಲಿ ಒದ್ದಾಡಿ ಒದ್ದಾಡಿ ಗೆದ್ದಿರೋದ್ರಿಂದ ಅಲ್ಲಿನ ಪಿಚ್, ಕಂಡೀಷನ್ ಗಳ ಬಗ್ಗೆಯೂ ಟೆನ್ಷನ್ ಇದೆ. ಹೀಗಾಗಿ ಬ್ಯಾಟಿಂಗ್, ಬೌಲಿಂಗ್ ಹಾಗೇ ಮಿಡಲ್ ಆರ್ಡರ್ನಲ್ಲಿ ಯಾವೆಲ್ಲಾ ಆಟಗಾರರು ಇರ್ತಾರೆ ಅನ್ನೋ ಕುತೂಹಲವೂ ಇದೆ.
ಇಂಜುರಿ ನಡುವೆ ತಂಡದಲ್ಲಿ ಕೆಲ ಬದಲಾವಣೆ!
ಏಷ್ಯನ್ ಗೇಮ್ಸ್ಗೆ ಸೆಲೆಕ್ಟ್ ಆಗಿದ್ದ ತಂಡದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ವರುಣ್ ಚಕ್ರವರ್ತಿ ಗಾಯದಿಂದ ಏಷ್ಯನ್ ಗೇಮ್ಸ್‌ನಿಂದ ಹೊರಬಂದಿದ್ದು, ಅವರ ಸ್ಥಾನಕ್ಕೆ ವಿಪ್ರಜ್ ನಿಗಮ್ ಬಂದಿದ್ದಾರೆ. ಹರ್ಷಿತ್ ರಾಣಾ ಬದಲಿಗೆ ಯಶ್ ಠಾಕೂರ್ ಸೇರ್ಪಡೆಯಾಗಿದ್ದಾರೆ. ನಿತೀಶ್ ಕುಮಾರ್ ರೆಡ್ಡಿ ಕೂಡ ಏಷ್ಯನ್ ಗೇಮ್ಸ್ ತಂಡದಿಂದ ಹೊರಬಂದು ವೆಸ್ಟ್ ಇಂಡೀಸ್ ODI ಸರಣಿಗೆ ತೆರಳಿದ್ದಾರೆ. ಹೀಗಾಗಿ ಪ್ಲೇಯಿಂಗ್ 11 ಹೇಗಿರುತ್ತೆ ಅನ್ನೋ ಕ್ಯೂರಿಯಾಸಿಟಿ ಅಂತೂ ಇದ್ದೇ ಇದೆ.
ಭಾರತದ ಪ್ಲೇಯಿಂಗ್ 11
ಅಭಿಷೇಕ್ ಶರ್ಮಾ
ಸಂಜು ಸ್ಯಾಮ್ಸನ್
ಇಶಾನ್ ಕಿಶನ್
ಶ್ರೇಯಸ್ ಅಯ್ಯರ್
ತಿಲಕ್ ವರ್ಮಾ
ಶಿವಂ ದುಬೆ
ವಾಷಿಂಗ್ಟನ್ ಸುಂದರ್
ಅಕ್ಷರ್ ಪಟೇಲ್
ರವಿ ಬಿಷ್ಣೋಯ್
ಅರ್ಶದೀಪ್ ಸಿಂಗ್
ಜಸ್ಪ್ರೀತ್ ಬುಮ್ರಾ

ನೋಡಿರಿ

