ಗಾಯಕ್ವಾಡ್ IN.. ಜೈಸ್ವಾಲ್ OUT – ಬುಮ್ರಾ ಇಲ್ಲದೆ ಗೆಲ್ಲಿಸ್ತಾರಾ ಸಿರಾಜ್?
WI ಬೇಟೆಗೆ ಹೀಗಿದೆ ಪ್ಲೇಯಿಂಗ್ 11

ಗಾಯಕ್ವಾಡ್ IN.. ಜೈಸ್ವಾಲ್ OUT – ಬುಮ್ರಾ ಇಲ್ಲದೆ ಗೆಲ್ಲಿಸ್ತಾರಾ ಸಿರಾಜ್?WI ಬೇಟೆಗೆ ಹೀಗಿದೆ ಪ್ಲೇಯಿಂಗ್ 11

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿ ಭಾನುವಾರದಿಂದ ಸ್ಟಾರ್ಟ್ ಆಗಲಿದೆ. 2027ರ ಏಕದಿನ ವಿಶ್ವಕಪ್​ ಗೆಲ್ಲೋಕೆ ಭಾರತಕ್ಕೆ ಈ ಸರಣಿ ಇಂಪಾರ್ಟೆಂಟ್ ಇದ್ರೆ ವಿಶ್ವಕಪ್​ಗೆ ಅರ್ಹತೆ ಪಡೆಯೋಕೆ ವಿಂಡೀಸ್ ಪಡೆ ಇಲ್ಲಿಂದಲೇ ಭರ್ಜರಿ ಫೈಟ್ ಕೊಡ್ಬೇಕಿದೆ. ಇನ್ನು ಈ ಸರಣಿಯಲ್ಲಿ ಟೀಂ ಇಂಡಿಯಾಗೂ ಒಂದಷ್ಟು ಕನ್ಫ್ಯೂಷನ್ಸ್ ಇದೆ. ಯಾಕಂದ್ರೆ ಏಷ್ಯನ್ ಗೇಮ್ಸ್ ಕೂಡ ನಡೀತಾ ಇರೋದ್ರಿಂದ ಪ್ಲೇಯಿಂಗ್ 11 ಫೈನಲ್ ಮಾಡೋ ಟಾಸ್ಕ್ ಕೂಡ ಇದೆ.

ಇದನ್ನೂ ಓದಿ : ಕೌರ್ GOLDEN ಗುಡ್ ಬೈ? – ಸ್ಮೃತಿ ಮಂದಾನಗೆ ಒಲಿಯುತ್ತಾ ಕ್ಯಾಪ್ಟನ್ಸಿ?

ಭಾರತದ ಏಕದಿನ ಪಂದ್ಯಗಳು ಅಂದ್ರೇನೇ ಖದರ್ ಬಂದ್ಬಿಡುತ್ತೆ. ಅದು ಆನ್ ಫೀಲ್ಡ್ ಆದ್ರೂ ಅಷ್ಟೇ.. ಆಫ್ ದಿ ಫೀಲ್ಡ್ ಅಂದ್ರೂ ಅಷ್ಟೇ. ಯಾಕಂದ್ರೆ ಅಲ್ಲಿ ಭಾರತ ಕ್ರಿಕೆಟ್​ನ ಲೆಜೆಂಡರಿ ಸ್ಟಾರ್​ಗಳಾಗಿರೋ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಡ್ತಾರೆ ಅನ್ನೋ ಕಾರಣಕ್ಕೆ. ಇಂಗ್ಲೆಂಡ್ ಸರಣಿ ಬಳಿಕ ರೆಸ್ಟ್​ನಲ್ಲಿರೋ ರೋಕೋ 70 ದಿನಗಳ ಬಳಿಕ ಮತ್ತೆ ಮೈದಾನಕ್ಕಿಳಿಯಲಿದ್ದಾರೆ. ಹೀಗಾಗಿ ಈ ಪಂದ್ಯಗಳ ರೋಚಕತೆ ಕೂಡ ಜಾಸ್ತಿಯಾಗಿದೆ.

ಏಷ್ಯನ್ ಗೇಮ್ಸ್ ನಿಂದಾಗಿ ಸ್ಟಾರ್ ಪ್ಲೇಯರ್ ಗಳೂ ಔಟ್!

ಜಪಾನ್​ನಲ್ಲಿ ಏಷ್ಯನ್ ಗೇಮ್ಸ್​ ಕೂಡ ನಡೀತಾ ಇರೋದ್ರಿಂದ ಭಾರತೀಯ ಟಿ-20ಐ ತಂಡ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಪಾರ್ಟಿಸಿಪೇಟ್ ಮಾಡ್ತಾರೆ. ಹೀಗಾಗಿ ಏಕದಿನ ತಂಡದಲ್ಲೂ ಆಡ್ತಿದ್ದ ಕೆಲ ಪ್ಲೇಯರ್ಸ್ ಏಷ್ಯನ್ ಗೇಮ್ಸ್​ನಲ್ಲಿದ್ದಾರೆ. ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಜಸ್ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್ ಹೀಗೆ ಸ್ಟಾರ್ ಪ್ಲೇಯರ್​ಗಳೇ ವಿಂಡೀಸ್ ಸರಣಿಯಿಂದ ಹೊರಗುಳಿದಿದ್ದಾರೆ. ಇನ್ನು ಯಶಸ್ವಿ ಜೈಸ್ವಾಲ್, ರವೀಂದ್ರ ಜಡೇಜಾ, ರುತುರಾಜ್ ಗಾಯಕ್ವಾಡ್​ರಂಥ ಪ್ಲೇಯರ್ಸ್ ಈ ಸರಣಿಗೆ ಅವಕಾಶ ಪಡೆದಿದ್ದು ಯಾರೆಲ್ಲಾ ಮೈದಾನಕ್ಕಿಳಿಯುತ್ತಾರೆ ಅನ್ನೋ ಕ್ಯೂರಿಯಾಸಿಟಿ ಇದ್ದೇ ಇದೆ.

ಭಾರತದ ಪ್ಲೇಯಿಂಗ್ 11

ರೋಹಿತ್ ಶರ್ಮಾ

ಶುಭ್ ಮನ್ ಗಿಲ್

ವಿರಾಟ್ ಕೊಹ್ಲಿ

ರುತುರಾಜ್ ಗಾಯಕ್ವಾಡ್

ಕೆಎಲ್ ರಾಹುಲ್

ರವೀಂದ್ರ ಜಡೇಜಾ

ನಿತೀಶ್ ರೆಡ್ಡಿ

ಕುಲ್ದೀಪ್ ಯಾದವ್

ಗುರ್ನೂರ್ ಬ್ರಾರ್

ಮೊಹಮ್ಮದ್ ಸಿರಾಜ್

ಪ್ರಸಿದ್ಧ್ ಕೃಷ್ಣ

Shantha Kumari

Leave a Reply

Your email address will not be published. Required fields are marked *