ಬ್ಲಾಂಕ್ ಚೆಕ್.. ಅದೊಂದು ಪತ್ರ.. 13ನೇ ವಯಸ್ಸಲ್ಲೇ ಸ್ಮೃತಿ ಶಪಥ! – RCB ಕ್ವೀನ್ NET WORTH ಇಷ್ಟೊಂದಾ?

ಸ್ಮೃತಿ ಮಂದಾನ.. ಮೆನ್ಸ್ ಕ್ರಿಕೆಟ್‌ನಲ್ಲಿ ಕಿಂಗ್ ವಿರಾಟ್ ಕೊಹ್ಲಿ ಹೇಗೋ ವುಮೆನ್ಸ್ ಕ್ರಿಕೆಟ್‌ನಲ್ಲಿ ಕ್ವೀನ್ ಸ್ಮೃತಿ ಮಂದಾನನೂ ಹಾಗೇ. ಜೆರ್ಸಿ ನಂಬರ್, ಮ್ಯಾನರಿಸಂ, ಬ್ಯಾಟಿಂಗ್ ಸ್ಟೈಲ್ ಹೀಗೆ ಎಲ್ಲದ್ರಲ್ಲೂ ಥೇಟ್ ವಿರಾಟ್ ಕೊಹ್ಲಿಯನ್ನೇ ಹೋಲುತ್ತಾರೆ ಈ ಸುಂದರಿ. ಅದ್ರಲ್ಲೂ ಐಪಿಎಲ್ನಲ್ಲಿ ನಮ್ಮ ಆರ್ಸಿಬಿ ಫ್ಯಾನ್ಸ್ ಅಂತೂ ಕೊಹ್ಲಿಯನ್ನ ಹೇಗೆ ಆರಾಧಿಸ್ತಾರೋ ಹಾಗೇ ಸ್ಮೃತಿ ಮಂದಾನಗೂ ತಮ್ಮ ಹಾರ್ಟ್ನಲ್ಲಿ ಸ್ಪೆಷಲ್ ಸ್ಥಾನ ಕೊಟ್ಟಿದ್ದಾರೆ. ಅಂದ್ಹಾಗೆ ಕ್ರಿಕೆಟ್ ಲೋಕದಲ್ಲಿ ತನ್ನದೇ ಆದ ಹೆಸರು ಮಾಡಿರುವ ಮಂದಾನ ಫೇಸ್ ಮಾಡಿರೋ ಸವಾಲು ಒಂದೆರಡಲ್ಲ. ಇಷ್ಟೆಲ್ಲಾ ಸಾಧನೆ ಮಾಡಲು ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ. 13ನೇ ವಯಸ್ಸಲ್ಲೇ ಸ್ಮೃತಿ ತಮ್ಮ ಗೋಲ್ ರೀಚ್ ಮಾಡಲು ಶಪಥ ಮಾಡಿದ್ರು. ಇದ್ರಿಂದಾಗೇ ಈಗ ಮಂದಾನ ಕೋಟಿಗಳ ಒಡತಿ ಆಗಿದ್ದಾರೆ. ಇದೀಗ ತನ್ನ ಸಕ್ಸಸ್‌ನ ಸಿಕ್ರೇಟ್ ಏನು ಅನ್ನೋದನ್ನ ರಿವೀಲ್ ಮಾಡಿದ್ದಾರೆ.
ಇದನ್ನೂ ಓದಿ: RO-KO ಶತ್ರುಗಳಲ್ಲ.. ಗಂಭೀರ್ ಕ್ಲಾರಿಟಿ – RCB ಹೀರೋ ಈಗ MI ಹೆಡ್ ಕೋಚ್!
ಭಾರತ ಮಹಿಳಾ ಕ್ರಿಕೆಟ್ ತಂಡದ ಎಡಗೈ ಆರಂಭಿಕ ಬ್ಯಾಟರ್ ಸ್ಮೃತಿ ಮಂದಾನ ಕ್ರಿಕೆಟ್ ಲೋಕದಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೇ 2026ರ ಏಷ್ಯನ್ ಗೇಮ್ಸ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಅಬ್ಬರಿಸಿದ ಸ್ಮೃತಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 11,000 ರನ್ ಪೂರೈಸಿದ್ದಾರೆ. ಈ ಮೂಲಕ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಈ ಮೈಲಿಗಲ್ಲು ತಲುಪಿದ ವಿಶ್ವದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಬೆನ್ನಲ್ಲೇ ಮಂದಾನ ವೈಯಕ್ತಿಕ ವಿಚಾರ ಕೂಡ ಮುನ್ನಲೆಗೆ ಬಂದಿದೆ. ಅದಕ್ಕೆ ಕಾರಣ, ಸ್ಮೃತಿ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿರುವುದು. ಇದೀಗ ಸ್ಮೃತಿ ಸಕ್ಸಸ್ ಹಿಂದಿನ ರಹಸ್ಯ ರಿವೀಲ್ ಆಗಿದೆ.
ಜುಲೈ,18, 1996 ರಂದು ಮುಂಬೈನಲ್ಲಿ ಜನಿಸಿದರು. ಮಂದಾನ ಅವರ ತಂದೆಯ ಹೆಸರು ಶ್ರೀನಿವಾಸ್ ಮಂದಾನ. ತಾಯಿಯ ಹೆಸರು ಸ್ಮಿತಾ ಮಂದಾನ. ಇನ್ನು ಸ್ಮೃತಿ ಮಂದಾನಗೆ ಸಹೋದರ ಕೂಡ ಇದ್ದಾರೆ. ಸ್ಮೃತಿ ಸಹೋದರ ಕೂಡ ಕ್ರಿಕೆಟರ್ ಆಗಿದ್ದು, ಅವರ ಆಟವನ್ನ ನೋಡುತ್ತಾ ಕ್ರಿಕೆಟ್ ಆಡುವ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಅಲ್ಲಿಂದ ಮಂದಾನ ಕ್ರಿಕೆಟ್ ಜರ್ನಿ ಶುರುವಾಗಿದ್ದು, ಸ್ಕೃತಿ ಕೇವಲ 9 ವರ್ಷ ವಯಸ್ಸಿನವರಾಗಿದ್ದಾಗ ಮಹಾರಾಷ್ಟ್ರ ರಾಜ್ಯ ಅಂಡರ್ – 15 ತಂಡಕ್ಕೆ ಆಯ್ಕೆಯಾದರು. ಬಳಿಕ ಅಂದ್ರೆ 11 ವರ್ಷದವಳಿದ್ದಾಗ ಅಂಡರ್-19 ತಂಡಕ್ಕೆ ಆಯ್ಕೆ ಆಗಿದ್ದರು. 5 ಏಪ್ರಿಲ್ 2013 ರಂದು ಬಾಂಗ್ಲಾದೇಶದ ಮಹಿಳಾ ತಂಡದ ವಿರುದ್ಧ T20 ಸರಣಿಯಲ್ಲಿ ಮಂಧಾನ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದರು. ಅಲ್ಲಿಂದ ಮಂದಾನ ಹಿಂತಿರುಗಿ ನೋಡೇ ಇಲ್ಲ. ಒಂದಾದ ಮೇಲೊಂದು ದಾಖಲೆ ಬರೆಯುತ್ತಲೇ ಇದ್ದಾರೆ. IPL ನಲ್ಲಿ RCB ತಂಡದ ನಾಯಕಿಯಾಗಿರುವ ಮಂದಾನ ಎರಡು ಟ್ರೋಫಿಗಳನ್ನು ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. ಅಲ್ಲದೇ ಭಾರತ ತಂಡದ ಬ್ಯಾಟಿಂಗ್‌ನ ಆಧಾರವಾಗಿರುವ ಅವರು ಇಂದು ದೊಡ್ಡ ಸಾಧನೆ ಮಾಡಿದ್ದಾರೆ. ಆದರೆ ಮಂದಾನ ಸಕ್ಸಸ್‌ಗೆ ಒಂದು ಸಣ್ಣ ಕಾಗದ ಕಾರಣ ಅಂದ್ರೆ ನಂಬೀರಾ?
ಹೌದು, ಸ್ಮೃತಿ ಮಂದಾನ ಅವರು ತಮ್ಮ ಕೋಚ್ ಕಲಿಸಿದ ವಿಶೇಷ ಅಭ್ಯಾಸದ ಬಗ್ಗೆ ಪಾಡ್‌ಕ್ಯಾಸ್ಟ್‌ನಲ್ಲಿ ರಿವೀಲ್ ಮಾಡಿದ್ದಾರೆ. ಸ್ಮೃತಿ ರಾಜ್ಯ ಮಟ್ಟದಲ್ಲಿ ಆಡುತ್ತಿದ್ದಾಗ ಅವರ ಕೋಚ್ ಒಂದು ವಿಚಿತ್ರ ಸಲಹೆ ಕೊಟ್ಟರು. ರಾಂಡಾ ಬೈರ್ನ್ ಅವರ ದಿ ಸೀಕ್ರೆಟ್ ವಿಡಿಯೋ ತೋರಿಸಿ, ಪ್ರತಿದಿನ ಒಳ್ಳೆಯ ಮಾತುಗಳನ್ನು ಬರೆಯಲು ಹೇಳಿದರು. ನಾನು ಈಗಾಗಲೇ ವಿಶ್ವದ ಅತ್ಯುತ್ತಮ ಬ್ಯಾಟರ್. ನಾನು ವಿಶ್ವಕಪ್ ಗೆದ್ದಿದ್ದೇನೆ ಎಂದು ಕಾಗದದಲ್ಲಿ ಪದೇ ಪದೇ ಬರೆದು, ಅದನ್ನು ದಿಂಬಿನ ಕೆಳಗೆ ಇಟ್ಟು ನಿದ್ದೆ ಮಾಡು ಎಂದು ಹೇಳಿದರು. ನಾಲ್ಕು ರಿಂದ ಐದು ವರ್ಷಗಳ ಕಾಲ ಪ್ರತಿ ರಾತ್ರಿ ಇದನ್ನೇ ಮಾಡುತ್ತಿದ್ದರಂತೆ ಸ್ಮೃತಿ. ಆರಂಭದಲ್ಲಿ ಇದು ಮೂರ್ಖತನದಂತೆ ಕಂಡರೂ ಅವರು ಮಾಡುತ್ತಲೇ ಇದ್ದರಂತೆ. ಆ ಕಾಗದದಲ್ಲಿ ಬರೆದಿದ್ದು ಸಾಮಾನ್ಯ ಆಸೆ ಅಲ್ಲ. ನಾನು ಆಗುತ್ತೇನೆ ಅಂತ ಬರೆಯಲಿಲ್ಲ. ನಾನು ಆಗಿದ್ದೇನೆ ಅಂತ ಬರೆದಿದ್ದು. ಮುಂದೆ ಆಗುವುದನ್ನು ಈಗಾಗಲೇ ಆಗಿಬಿಟ್ಟಂತೆ ನಂಬಿದೆ. ಮನಸ್ಸು ಅದನ್ನು ನಿಜವೆಂದು ಒಪ್ಪಿಕೊಳ್ಳಲು ಶುರು ಮಾಡಿತು. ನಂಬಿಕೆ ಬಲಗೊಂಡಿತು. ಪ್ರತಿ ಇನ್ನಿಂಗ್ಸ್, ಪ್ರತಿ ನೆಟ್ ಪ್ರಾಕ್ಟೀಸ್ ಆ ನಂಬಿಕೆಯಿಂದಲೇ ನಡೆಯಿತು. ಕೆಲವು ವರ್ಷಗಳ ನಂತರ ಆ ಮಾತುಗಳು ನಿಜವಾಯ್ತು. ಐಸಿಸಿ ರ್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನ ಬಂತು, ವಿಶ್ವಕಪ್ ಗೆದ್ದೆ. ದಿಂಬಿನ ಕೆಳಗಿಟ್ಟಿದ್ದ ಆ ಕಾಗದ ಕೇವಲ ಕಾಗದವಾಗಿ ಉಳಿಯಲಿಲ್ಲ. ಅದು ಒಂದು ಪ್ರತಿಜ್ಞೆಯಾಗಿ, ಒಂದು ಶಕ್ತಿಯಾಗಿ ಬದಲಾಯಿತು ಎಂದು ಪಾಡ್‌ಕ್ಯಾಸ್ಟ್‌ನಲ್ಲಿ ಸ್ಮೃತಿ ಮಂದಾನ ಹೇಳಿದ್ದಾರೆ.
ಅದೇ ಸಮಯದಲ್ಲಿ ಇನ್ನೊಂದು ಕಾಗದವೂ ಸ್ಮೃತಿ ಮಂದಾನ ಬಳಿ ಇತ್ತಂತೆ. ಅದು ಖಾಲಿ ಚೆಕ್. ತಾಯಿ-ತಂದೆಗೆ ಮನೆ ಕಟ್ಟುವ ಕನಸು. ಅವರು ಅದನ್ನು ಗೋಡೆಗೆ ಅಂಟಿಸಿ ಪ್ರತಿದಿನ ನೋಡುತ್ತಿದ್ದರಂತೆ. ಒಂದು ದಿಂಬಿನ ಕೆಳಗಿನ ಕಾಗದ ಮತ್ತು ಗೋಡೆಯ ಮೇಲಿನ ಚೆಕ್ ಎರಡೂ ಒಂದೇ ಪಾಠ ಹೇಳುತ್ತಿದ್ದವು. ನಂಬಿಕೆ, ಬರೆಯುತ್ತಿರು, ನೋಡು, ನಿದ್ದೆ ಮಾಡು. ಮನಸ್ಸು ಅದು ಸಾಧ್ಯ ಎಂದು ಒಪ್ಪಿಕೊಂಡರೆ, ಜೀವನವೇ ಆ ದಾರಿಯಲ್ಲಿ ನಡೆಯುತ್ತದೆ ಎಂದು ಸ್ಮೃತಿ ಮಂದಾನ ತಿಳಿಸಿದ್ದಾರೆ. 18 ವರ್ಷ ಆಗುವಾಗ ಮಂದಾನ ಆ ಕಸನು ನಿಜವಾಯಿತು. ತಂದೆ ತಾಯಿಗಾಗಿ ಒಂದು ಸುಂದರ ಮನೆ ಕಟ್ಟಿಸಿಕೊಟ್ಟಿದ್ದಾರೆ. ಅದಕ್ಕೆ SM18 ಅಂತ ಹೆಸರಿಟ್ಟಿದ್ದಾರೆ. ಇದೀಗ ಮಂದಾನ ಈ ಮಾತು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗ್ತಿದೆ. ಈ ಬೆನ್ನಲ್ಲೇ ಮಂದಾನ ನೆಟ್‌ವರ್ತ್ ಎಷ್ಟು ಅಂತ ಅಭಿಮಾನಿಗಳಿಗೆ ಕ್ಯೂರಿಯಾಸಿಟಿ ಹುಟ್ಟಿಕೊಂಡಿದೆ.
ಅಂದ್ಹಾಗೆ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ RCB ತಂಡದಿಂದ ಮಂದಾನ ವರ್ಷಕ್ಕೆ ₹3.4 ಕೋಟಿ ಗಳಿಸ್ತಾರೆ. ಇನ್ನು BCCI ಕೇಂದ್ರ ಒಪ್ಪಂದದ ‘ಗ್ರೇಡ್ A’ ಅಡಿಯಲ್ಲಿ ವಾರ್ಷಿಕ ₹50 ಲಕ್ಷ ವೇತನ ಗಳಿಸ್ತಿದ್ದಾರೆ. ಅಂತರರಾಷ್ಟ್ರೀಯ ಪಂದ್ಯಗಳಿಂದ ಬರುವ ಮ್ಯಾಚ್ ಫೀಸ್, ಬ್ರ್ಯಾಂಡ್ ಎಂಡೋರ್ಸ್‌ಮೆಂಟ್‌ನಿಂದ ಕೋಟ್ಯಂತರ ರೂಪಾಯಿ ಗಳಿಸ್ತಾ ಇದ್ದಾರೆ. ಇವೆಲ್ಲಾ ಸೇರಿ ಸ್ಮೃತಿ ಮಂದಾನ ನಿವ್ವಳ ಮೌಲ್ಯ ₹34 ಕೋಟಿಯಿಂದ ₹40 ಕೋಟಿ ಎನ್ನಲಾಗ್ತಿದೆ. ಆದ್ರೆ ಇತ್ತೀಚಿನ ಕೆಲವು ವರದಿಗಳ ಪ್ರಕಾರ ₹80 ರಿಂದ ₹90 ಕೋಟಿ ವರೆಗೆ ಅಂದಾಜಿಸಲಾಗಿದೆ.

ನೋಡಿರಿ

