ನನ್ನ ಆಟಕ್ಕೆ ಯಾರೂ ಡಿಸ್ಟರ್ಬ್‌ ಮಾಡಬೇಡಿ! – ಚೆಂಡಾಟವಾಡಲು ಅಡ್ಡಿಯಾದ ಕುರ್ಚಿಗೆ ಗತಿ ಕಾಣಿಸಿದ ಮರಿಯಾನೆ!

ನನ್ನ ಆಟಕ್ಕೆ ಯಾರೂ ಡಿಸ್ಟರ್ಬ್‌ ಮಾಡಬೇಡಿ! – ಚೆಂಡಾಟವಾಡಲು ಅಡ್ಡಿಯಾದ ಕುರ್ಚಿಗೆ ಗತಿ ಕಾಣಿಸಿದ ಮರಿಯಾನೆ!

ಸೋಶಿಯಲ್‌ ಮೀಡಿಯಾ ಓಪನ್‌ ಮಾಡಿದ್ರೆ ಸಾಕು. ಪ್ರಾಣಿಗಳ ಆಟ, ತುಂಟಾಟದ ಸಾಕಷ್ಟು ವಿಡಿಯೋಗಳು ವೈರಲ್‌ ಆಗ್ತಿರುತ್ತವೆ. ಇದೀಗ ಇಲ್ಲೊಂದು ಮರಿಯಾನೆ ಬಾಲ್‌ನಲ್ಲಿ ಆಟವಾಡುತ್ತಿದೆ. ಇದ್ರ ಕ್ಯೂಟ್‌ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗ್ತಿದೆ.

ಇದನ್ನೂ ಓದಿ: ಹೃದಯದ ಆರೋಗ್ಯಕ್ಕೆ ಈ ಹಣ್ಣು ಬೆಸ್ಟ್!‌ – ಒಂದು ಹಣ್ಣಿನಿಂದ ಏನೆಲ್ಲಾ ಪ್ರಯೋಜನ?

ಮರಿಯಾನೆಯೊಂದು ಚೆಂಡಾಟ ಆಡಿರುವ ವಿಡಿಯೋ ಸದ್ಯ ವೈರಲ್ ಆಗಿದೆ. ಸ್ಮೈಲ್ ಲೇ (Smile Lay) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಮರಿಯಾನೆಯೊಂದು ಚೆಂಡನ್ನು ಕಾಲಲ್ಲಿ ಒದೆಯುತ್ತ ಓಡೋಡಿ ಬಂದಿದೆ.  ಮುಂದೆ ಬರ್ತಿದ್ದಂತೆ ಆನೆಮರಿಗೆ ಕುರ್ಚಿ ಅಡ್ಡ ಸಿಕ್ಕಿದೆ. ತನ್ನ ಆಟಕ್ಕೆ ಅಡ್ಡಿಯಾದ ಕುರ್ಚಿಯನ್ನ ಎತ್ತಿ ನೆಲಕ್ಕೆ ಬಡಿದಿದೆ. ಸದ್ಯ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.  ಈ ವಿಡಿಯೋ ನೋಡಿದ ನೆಟ್ಟಿಗರು ಒಬ್ಬ ಬಳಕೆದಾರ, ನನ್ನ ಟೀಮ್ ಮೇಟ್ ಗಿಂತ ಅದ್ಭುತವಾಗಿದ್ದಾನೆ ಎಂದಿದ್ದಾರೆ. ಇನ್ನೊಬ್ಬರು, ಫುಟ್ ಬಾಲ್ ಪ್ಲೇಯರ್ ಎಂದು ಹೇಳಿದ್ದಾರೆ. ಮತ್ತೊಬ್ಬರು, ಕ್ಯೂಟ್ ಆಟ. ನನ್ನ ಆಟಕ್ಕೆ ಯಾರಾದ್ರು ಅಡ್ಡಿಯಾದ್ರೆ ಸುಮ್ಮನಿರಲ್ಲ ಅಂತ ಹೇಳಿದಂತೆ ಇದೆ ಎಂದು ಕಾಮೆಂಟ್ ಮಾಡಿದ್ದಾರೆ.

 

View this post on Instagram

 

A post shared by Smile Lay (@bank.mahout)

Shwetha M

Leave a Reply

Your email address will not be published. Required fields are marked *