ಗಿಲ್ಲಿ ಗುಂಗಿನಲ್ಲಿ ಬಿಗ್ಬಾಸ್ – 13ನೇ ಸೀಸನ್ ಅಟ್ಟರ್ ಪ್ಲಾಫ್

ಬಿಗ್ಬಾಸ್ ಕನ್ನಡ ಸೀಸನ್ 13.. ಈ ಸೀಸನ್ ಅಟರ್ ಪ್ಲಾಫ್ ಆಯ್ತಾ? ಸೀಸನ್ 12ರಲ್ಲಿ ಗಿಲ್ಲಿ ನಟನ ಕ್ರೇಜ್ ಜೋರಾಗಿತ್ತು. ಹೀಗಾಗಿ ಈ ಸಲ ಬಿಬಿಕೆ ಮೇಲೆ ನಿರೀಕ್ಷೆ ಹೆಚ್ಚಾಗಿತ್ತು. ಈ ಬಾರಿ ಕಾಮನ್ ಮ್ಯಾನ್ ಬರ್ತಾರೆ… ಹೊಸ ಮುಖಗಳು ಬರ್ತವೆ… ಬಿಗ್ಬಾಸ್ ಮನೆನಲ್ಲಿ ಹೊಸ ರೀತಿಯ ಆಟ ಶುರುವಾಗುತ್ತೆ ಅಂತ ಪ್ರೇಕ್ಷಕರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ರು. ಆದ್ರೆ ಸೀಸನ್ ಶುರುವಾಗಿ 3 ವಾರ ಕಳೆದ್ರೂ ಬಿಗ್ಬಾಸ್ ಕ್ರೇಜ್ ಇಲ್ಲ.
ಜನ ಕಾಯ್ತಿದ್ದ ಎಂಟರ್ಟೈನ್ಮೆಂಟ್ ಸಿಗ್ತಿದ್ಯಾ? ಬಿಗ್ಬಾಸ್ ಮನೆಯ ಆಟ ಒಂದೇ ರೀತಿಯಲ್ಲಿ ಸಾಗ್ತಿದೆಯಾ?. ಜನರಿಗೆ ಇಂಟ್ರೆಸ್ಟ್ ಹೋಗಿದ್ಯಾ ಈ ಕುರಿತು ಕಂಪ್ಲಿಟ್ ಮಾಹಿತಿ ನೀಡುತ್ತೇನೆ.. ನಾನು ನಿಮ್ಮ ಶಿವರಾಜ್ ಬಾಣಂಕಿ.. ನೀವು ಸುದ್ದಿಯಾನದ ಸಬ್ಸ್ಕೈಬರ್ ಆಗೋದ್ದನ್ನ ಮರೆಯಬೇಡಿ.
ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ಬಿಗ್ಬಾಸ್ ಕನ್ನಡದ 13ನೇ ಸೀಸನ್ ಮೇಲೆ ಈ ಬಾರಿ ನಿರೀಕ್ಷೆ ಸಾಕಷ್ಟಿತ್ತು. ಅದರಲ್ಲೂ ಗಿಲ್ಲಿ ನಟ ಕಳೆದ ಸೀಸನ್ನಲ್ಲಿ ಮಾಡಿದ ಹವಾ ಈ ಸೀಸನ್ನಲ್ಲೂ ಇತ್ತು. ಕಳೆದ ಸೀಸನ್ನಲ್ಲಿ ಗಿಲ್ಲಿ ನಟ ಬಿಗ್ಬಾಸ್ ಮನೆಯಲ್ಲಿದ್ದಾಗ, ಸಾಮಾನ್ಯವಾಗಿ ಬಿಗ್ಬಾಸ್ ನೋಡದವರೂ ಕೂಡ ಈ ಶೋ ಕಡೆಗೆ ತಿರುಗಿ ನೋಡಿದ್ರು. ಅವರ ಆಟ, ಮಾತಿನ ಶೈಲಿ, ಮನೆಯೊಳಗಿನ ವರ್ತನೆ ಮತ್ತು ಪ್ರೇಕ್ಷಕರ ಜೊತೆಗಿನ ಕನೆಕ್ಷನ್ನಿಂದ ಗಿಲ್ಲಿ ನಟ ಸೀಸನ್ನ ಪ್ರಮುಖ ಆಕರ್ಷಣೆಯಾಗಿದ್ದರು. ಆದ್ರೆ ಈ ಸೀಸನ್ ಶುರುವಾಗಿ 3 ವಾರ ಕಳೆದ್ರೂ ಜನರಲ್ಲಿ ಬಿಗ್ಬಾಸ್ ಕ್ರೇಜ್ ಇಲ್ಲ. ಗಿಲ್ಲಿ ಮಾಡಿದ ಕ್ರೇಜ್ 10 ಪರ್ಸೆಂಟ್ ಕೂಡ ಈ ಸಲ ಯಾರು ಮಾಡಿಲ್ಲ.
ಈ ಬಾರಿ ಬಿಗ್ಬಾಸ್ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಅದರಲ್ಲೂ ಕಾಮನ್ ಮ್ಯಾನ್ಗಳನ್ನು ಸ್ಪರ್ಧಿಗಳಾಗಿ ಕರೆತರುತ್ತಾರೆ ಎಂಬ ವಿಚಾರ ದೊಡ್ಡ ಕುತೂಹಲ ಹುಟ್ಟಿಸಿತ್ತು. ಸಾಮಾನ್ಯ ವ್ಯಕ್ತಿಗಳು ಬಿಗ್ಬಾಸ್ ಮನೆಯೊಳಗೆ ಬಂದರೆ ಅವರ ಜೀವನ, ಹೋರಾಟ, ಪ್ರತಿಭೆ ಮತ್ತು ಆಟವನ್ನು ಜನರು ಹೆಚ್ಚು ಕನೆಕ್ಟ್ ಮಾಡಿಕೊಳ್ಳಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಸೀಸನ್ ಮುಂದುವರಿದಂತೆ, ಆ ನಿರೀಕ್ಷೆ ಎಷ್ಟರ ಮಟ್ಟಿಗೆ ಈಡೇರಿದೆ ಎನ್ನುವ ಪ್ರಶ್ನೆ ಇದೀಗ ಎದ್ದಿದೆ.
ಸ್ಪರ್ಧಿಗಳ ನಡುವೆ ನಡೆಯುವ ಜಗಳ, ಟಾಸ್ಕ್, ನಾಮಿನೇಷನ್, ಎಲಿಮಿನೇಷನ್ ಎಲ್ಲವೂ ಬಿಗ್ಬಾಸ್ನ ಭಾಗವೇ. ಆದರೆ ಪ್ರೇಕ್ಷಕರನ್ನು ಪ್ರತಿದಿನವೂ ಮುಂದಿನ ಎಪಿಸೋಡ್ಗಾಗಿ ಕಾಯಿಸುವಂತಹ ದೊಡ್ಡ ಕನೆಕ್ಷನ್ ಮತ್ತು ಕುತೂಹಲ ಈ ಸಲ. ಯಾರೂ ಕೂಡ ಕಳೆದ ಸಲದ ಯಾವಾಗ ಪ್ರೋಮೋ ರಿಲೀಸ್ ಆಗುತ್ತೆ ಅಂತ ಕಾಯ್ತಾ ಇಲ್ಲ. ಬಿಗ್ ಬಾಸ್ ನೋಡುವವರ ಸಂಖ್ಯೆ ಕೂಡ ಕಡಿಮೆ ಆಗಿದೆ. ಸೋಷಿಯಲ್ ಮೀಡಿಯಾದಲ್ಲೂ ಕೂಡ ಈ ಸಲದ ಬಿಗ್ ಬಾಸ್ ಕ್ರೇಜ್ ಕಮ್ಮಿಯಾಗಿದೆ.
ಕನ್ನಡ ಬಿಗ್ಬಾಸ್ ಮೇಲಿನ ಕ್ರೇಜ್ ಮೊದಲಿನಂತೆ ಇಲ್ಲ ಎಂದು ಕೆಲ ವೀಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇವರ ಫ್ಯಾನ್ ನಾನು ಅಂತ ಯಾರು ಹೇಳ್ತಾ ಇಲ್ಲ. ಇವರು ನನ್ನ ಅಚ್ಚುಮಚ್ಚಿನ ಆಟಗಾರ ನಾನು ಸಪೋರ್ಟ್ ಮಾಡ್ತೀನಿ ಅಂತ ಕೂಡ ಯಾರು ಹೇಳ್ತಾ ಇಲ್ಲ.
ಹೀಗಾಗಿ ಈಗ ಬಿಗ್ಬಾಸ್ ಮುಂದೆ ಇರುವ ಸವಾಲು ಒಂದೇ— ಆಟದಲ್ಲಿ ಹೊಸತನ ತರಬೇಕು. ಅದಕ್ಕಾಗಿಯೇ ಹೊಸ ಸ್ಪರ್ಧಿಗಳ ಎಂಟ್ರಿ, ವೈಲ್ಡ್ಕಾರ್ಡ್ ಸ್ಪರ್ಧಿಗಳು ಅಥವಾ ಮನೆಯೊಳಗಿನ ಆಟದ ಲೆಕ್ಕಾಚಾರವನ್ನೇ ಬದಲಿಸುವಂತಹ ಟ್ವಿಸ್ಟ್ಗಳಿಗೆ ಬಿಗ್ಬಾಸ್ ಮುಂದಾಗಬಹುದು ಎಂಬ ಕುತೂಹಲ ಹೆಚ್ಚಾಗಿದೆ.
ಹೊಸ ಸ್ಪರ್ಧಿಗಳಿಂದ ಈಗಾಗಲೇ ನಿರ್ಮಾಣವಾಗಿರುವ ಗುಂಪುಗಳ ಲೆಕ್ಕಾಚಾರ ಬದಲಾಗಬಹುದು. ಹೊಸ ಸ್ನೇಹಗಳು ಹುಟ್ಟಬಹುದು, ಹಳೆಯ ಸ್ನೇಹಗಳಲ್ಲಿ ಬಿರುಕು ಮೂಡಬಹುದು. ಟಾಸ್ಕ್ಗಳಲ್ಲೂ ಸ್ಪರ್ಧೆ ಹೆಚ್ಚಾಗಬಹುದು. ಮುಖ್ಯವಾಗಿ, ಪ್ರೇಕ್ಷಕರಿಗೆ ಹೊಸ ಮುಖಗಳು ಮತ್ತು ಹೊಸ ಕಥೆಗಳು ಸಿಗಬಹುದು.
ಹೀಗಾಗಿ ಸೀಸನ್ 13 ಸಂಪೂರ್ಣವಾಗಿ ಫ್ಲಾಪ್ ಆಗಿದೆ ಎಂದು ಹೇಳುವುದಕ್ಕಿಂತ, ಇದ್ದ ನಿರೀಕ್ಷೆಗೆ ಹೋಲಿಸಿದರೆ ಇನ್ನಷ್ಟು ಬಿಗ್ ಬೂಸ್ಟ್ ಬೇಕಾಗಿದೆ. ಲಾಸ್ಟ್ ಟೈಮ್ ಗಿಲ್ಲಿ ನಟನ ಕ್ರೇಜ್ನಿಂದ ಬಿಗ್ಬಾಸ್ ನೋಡಲು ಜನ ಮುಗಿ ಬಿದಿದ್ರೂ, ಈ ಸಲ ಅಂತ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿಕೊಡಬೇಕಿದೆ.

ನೋಡಿರಿ

