ಇನ್ನು ಡೇಟಾ ಬೇಡ! ಕರೆ + SMSಗೆ ಮಾತ್ರ ರೀಚಾರ್ಜ್! – ಏರ್‌ಟೈಲ್‌, ಜಿಯೋ ಮತ್ತು VI ಬಳಕೆದಾರರಿಗೆ ಹೊಸ ಪ್ಲಾನ್

ಇನ್ನು ಡೇಟಾ ಬೇಡ! ಕರೆ + SMSಗೆ ಮಾತ್ರ ರೀಚಾರ್ಜ್! – ಏರ್‌ಟೈಲ್‌, ಜಿಯೋ ಮತ್ತು VI ಬಳಕೆದಾರರಿಗೆ ಹೊಸ ಪ್ಲಾನ್

ಮೊಬೈಲ್‌ನಲ್ಲಿ ಇಂಟರ್ನೆಟ್ ಡೇಟಾ ಬಳಸದವರಿಗೆ ಇನ್ಮುಂದೆ ರೀಚಾರ್ಜ್ ವಿಚಾರದಲ್ಲಿ ಮತ್ತಷ್ಟು ಆಯ್ಕೆಗಳು ಸಿಗಲಿವೆ. ಕೇವಲ ಕರೆ ಮತ್ತು ಎಸ್ಎಂಎಸ್‌ಗಾಗಿ ಮೊಬೈಲ್ ಬಳಸುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು, ಟೆಲಿಕಾಂ ಕ್ಷೇತ್ರದಲ್ಲಿ Voice ಮತ್ತು SMS Only ಪ್ಲಾನ್‌ಗಳಿಗೆ ಒತ್ತು ನೀಡಲಾಗುತ್ತಿದೆ.

ಸಾಮಾನ್ಯವಾಗಿ ಈಗ ಸಿಗುವ ಹಲವು ರೀಚಾರ್ಜ್ ಪ್ಲಾನ್‌ಗಳಲ್ಲಿ ಕರೆ, SMS ಜೊತೆಗೆ ಡೇಟಾವೂ ಕಡ್ಡಾಯವಾಗಿ ಸೇರಿರುತ್ತದೆ. ಆದರೆ ಡೇಟಾ ಬಳಸದೇ ಇರುವ ಹಿರಿಯ ನಾಗರಿಕರು, ಫೀಚರ್ ಫೋನ್ ಬಳಕೆದಾರರು ಅಥವಾ ಎರಡನೇ ಸಿಮ್ ಬಳಸುವವರಿಗೆ ಡೇಟಾಕ್ಕಾಗಿ ಹಣ ಪಾವತಿಸುವ ಅಗತ್ಯವಿಲ್ಲ.

ಇದನ್ನೂ ಓದಿ: ಗೋವಾದಲ್ಲಿ IPL ಬಿಗ್ AUCTION – ವೈಭವ್‌ಗೆ ಕಿವೀಸ್ ಕೋಚ್ ಸವಾಲ್

TRAI ಮಾಹಿತಿಯ ಪ್ರಕಾರ, Voice & SMS Only ಪ್ಯಾಕ್‌ಗಳು ಯಾವುದೇ ಮೊಬೈಲ್ ಡೇಟಾ ನೀಡದೆ ಕೇವಲ ಧ್ವನಿ ಕರೆ ಮತ್ತು SMS ಸೌಲಭ್ಯ ಒದಗಿಸುವ ಪ್ರಿಪೇಯ್ಡ್ ಪ್ಲಾನ್‌ಗಳಾಗಿವೆ. ಇಂತಹ ಪ್ಲಾನ್‌ಗಳಿಗೆ 365 ದಿನಗಳವರೆಗಿನ ವ್ಯಾಲಿಡಿಟಿಯೂ ಇರಬಹುದು.

ಹೀಗಾಗಿ ಏರ್‌ಟೆಲ್, ಜಿಯೋ, ವೊಡಾಫೋನ್ ಐಡಿಯಾ ಸೇರಿದಂತೆ ಟೆಲಿಕಾಂ ಕಂಪನಿಗಳಲ್ಲಿ ಕೇವಲ ಕರೆ ಮತ್ತು SMS ಅಗತ್ಯವಿರುವ ಗ್ರಾಹಕರಿಗೆ ಸೂಕ್ತವಾದ ಪ್ಲಾನ್‌ಗಳ ಆಯ್ಕೆ ಹೆಚ್ಚಾಗುವ ನಿರೀಕ್ಷೆಯಿದೆ.

ಇದರ ಪ್ರಮುಖ ಉದ್ದೇಶ ಗ್ರಾಹಕರಿಗೆ ತಮಗೆ ಬೇಕಾದ ಸೇವೆ ಮಾತ್ರ ಆಯ್ಕೆ ಮಾಡಿಕೊಳ್ಳುವ ಅವಕಾಶ ಕಲ್ಪಿಸುವುದು. ಡೇಟಾ ಬಳಕೆ ಇಲ್ಲದಿದ್ದರೆ ಡೇಟಾ ಇರುವ ದುಬಾರಿ ಪ್ಲಾನ್ ತೆಗೆದುಕೊಳ್ಳುವ ಅನಿವಾರ್ಯತೆ ಕಡಿಮೆಯಾಗಬಹುದು.

ಆದರೆ ಅಕ್ಟೋಬರ್ 21, 2026ರಿಂದ ಜಾರಿಗೆ ಬರಲಿದೆ ಎನ್ನಲಾಗಿರುವ ನಿರ್ದಿಷ್ಟ ನಿಯಮದ ವಿವರಗಳನ್ನು ರೀಚಾರ್ಜ್ ಮಾಡುವ ಮುನ್ನ TRAI ಮತ್ತು ನಿಮ್ಮ ಟೆಲಿಕಾಂ ಕಂಪನಿಯ ಅಧಿಕೃತ ಪ್ರಕಟಣೆಗಳಲ್ಲಿ ಪರಿಶೀಲಿಸುವುದು ಉತ್ತಮ.

Kishor KV

Leave a Reply

Your email address will not be published. Required fields are marked *