RO-KO ಶತ್ರುಗಳಲ್ಲ.. ಗಂಭೀರ್ ಕ್ಲಾರಿಟಿ – RCB ಹೀರೋ ಈಗ MI ಹೆಡ್ ಕೋಚ್!

RO-KO ಶತ್ರುಗಳಲ್ಲ.. ಗಂಭೀರ್ ಕ್ಲಾರಿಟಿ –  RCB ಹೀರೋ ಈಗ MI ಹೆಡ್ ಕೋಚ್!

 

ಮಹಿಳಾ ಪ್ರೀಮಿಯರ್ ಲೀಗ್‌ನ 2027ರ ಆವೃತ್ತಿಗೂ ಮುನ್ನ, ಎರಡು ಬಾರಿಯ ಚಾಂಪಿಯನ್ ತಂಡವಾದ ಮುಂಬೈ ಇಂಡಿಯನ್ಸ್, ತಮ್ಮ ಮಹಿಳಾ ತಂಡದ ಹೊಸ ಕೋಚ್ ಆಗಿ ಲ್ಯೂಕ್ ವಿಲಿಯಮ್ಸ್ ಅವರನ್ನು ನೇಮಕ ಮಾಡಿದೆ.  ಇವರು ಹಿಂದೆ WPL ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ  ಹೆಡ್ ಕೋಚ್ ಆಗಿ RCB ಮಹಿಳಾ ತಂಡ 2024ರ ಆವೃತ್ತಿಯ ಲೀಗ್ ಅನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ರು.

ದೆಹಲಿ ಪ್ರೀಮಿಯರ್ ಲೀಗ್ನಲ್ಲಿ ಆಟಗಾರನೊಬ್ಬನಿಗೆ ಭ್ರಷ್ಟ ಪ್ರಸ್ತಾವನೆ ಬಂದಿರುವ ಬಗ್ಗೆ ಡಿಡಿಸಿಎ ಬಿಸಿಸಿಐಗೆ ಮಾಹಿತಿ ನೀಡಿದೆ. ಆಟಗಾರನೇ ಈ ವಿಚಾರವನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದಾನೆ ಎಂದು ವರದಿಯಾಗಿದೆ. ಆದರೆ ಈ ಆರೋಪಗಳು ಇನ್ನೂ ತನಿಖೆಯ ಹಂತದಲ್ಲಿದ್ದು, ಯಾವುದೇ ಅಂತಿಮ ತೀರ್ಮಾನಕ್ಕೆ ಬರಬಾರದು ಎಂದು ಡಿಡಿಸಿಎ ಸ್ಪಷ್ಟಪಡಿಸಿದೆ. ಬಿಸಿಸಿಐನ ಆಂಟಿ-ಕರಪ್ಷನ್ ಘಟಕವೂ ವಿಚಾರ ಗಮನಿಸುತ್ತಿದೆ.

ಸೋತಾಗ ಟೀಮ್ ಇಂಡಿಯಾ ವಿರುದ್ಧ ಕೇಳಿಬರುತ್ತಿರುವ ಅತಿಯಾದ ಟೀಕೆಗಳಿಗೆ ಕೋಚ್ ಗೌತಮ್ ಗಂಭೀರ್ ತಮ್ಮದೇ ಶೈಲಿಯಲ್ಲಿ ಬ್ರೇಕ್ ಹಾಕಿದ್ದಾರೆ. 2007ರ ಚೊಚ್ಚಲ ಟಿ20 ವಿಶ್ವಕಪ್ ಗೆಲುವಿನ ನಂತರ ಭಾರತ ಮತ್ತೊಂದು ಟಿ20 ವಿಶ್ವಕಪ್ ಗೆಲ್ಲಲು 2024ರವರೆಗೆ ಕಾಯಬೇಕಾಯಿತು. ಆದರೆ ಈಗಿನ ತಂಡವು ಕೆಲವೇ ತಿಂಗಳುಗಳ ಅಂತರದಲ್ಲಿ ಐಸಿಸಿ ಟ್ರೋಫಿಗಳನ್ನು ಗೆದ್ದು ಬೀಗಿದೆ. ಒಂದೆರಡು ಪಂದ್ಯಗಳ ಸೋಲಿಗೆ ಇಡೀ ತಂಡದ ಸಾಮರ್ಥ್ಯವನ್ನು ಪ್ರಶ್ನಿಸುವ ಕ್ಷಣಿಕ ಪ್ರತಿಕ್ರಿಯೆಗಳನ್ನು ಗಂಭೀರ್  ಸರಿಯಲ್ಲ ಎಂದಿದ್ದಾರೆ.

ರೋಹಿತ್ ಜೊತೆಗಿನ ಸಂಬಂಧದ ಬಗ್ಗೆ ಗೌತಮ್ ಗಂಭೀರ್ ಮನ ಬಿಟ್ಟಿ ಮಾತನಾಡಿದ್ದಾರೆ  ರೋಹಿತ್ ಮತ್ತು ನನ್ನ ನಡುವಿನ ಸಂಬಂಧ ಕೇವಲ ನಾಯಕ ಮತ್ತು ಕೋಚ್‌ಗೆ ಸೀಮಿತವಾಗಿರಲಿಲ್ಲ. ತಾವು ಆಟಗಾರರಾಗಿದ್ದ ದಿನಗಳಿಂದಲೂ ಬೆಳೆದುಬಂದಿದೆ. ರೋಹಿತ್ ತಂಡಕ್ಕೆ ಬಂದಾಗ ನಾನು ಹಿರಿಯ ಆಟಗಾರನಾಗಿದ್ದೆ. ಹೀಗಾಗಿ ಸಂಬಂಧದ ಕುರಿತಾದ ಊಹಾಪೋಹಗಳ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಬೇಡಿ ಎಂದು ಹೇಳಿದ್ದಾರೆ.

ಭಾರತದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಕಮ್‌ಬ್ಯಾಕ್ ಬಗ್ಗೆ ಕೋಚ್ ಗೌತಮ್ ಗಂಭೀರ್ ಮಹತ್ವದ ಮಾತು ಹೇಳಿದ್ದಾರೆ. ಗಾಯದಿಂದ ಮರಳುವ ಆಟಗಾರ ಯಾವುದೇ ರೀತಿಯ ಆತುರ ಮಾಡಬಾರದು. ಸಾಕಷ್ಟು ಪಂದ್ಯಗಳನ್ನು ಆಡಿ ಸಂಪೂರ್ಣ ಸಿದ್ಧತೆ ಮಾಡಿಕೊಂಡ ಬಳಿಕವೇ ಕಮ್‌ಬ್ಯಾಕ್ ಮಾಡಬೇಕು ಎಂದು ಗಂಭೀರ್ ಹೇಳಿದ್ದಾರೆ. ಮುಂದಿನ ಏಕದಿನ ಸರಣಿಗೂ ಮುನ್ನ ಹಾರ್ದಿಕ್ ಫಿಟ್ನೆಸ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಏಷ್ಯನ್ ಗೇಮ್ಸ್‌ನಲ್ಲಿ ಎದುರಾದರೆ ಭಾರತ ತಂಡದ ಮೇಲೆ ಒತ್ತಡ ಹೇರಲು ಪಾಕಿಸ್ತಾನ ಸಜ್ಜಾಗಿದೆ ಎಂದು ಪಾಕ್ ಕೋಚ್ ಮೈಕ್ ಹೆಸ್ಸನ್ ಹೇಳಿದ್ದಾರೆ.  ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಭಾರತವೇ ಪ್ರಸ್ತುತ ಬೆಂಚ್‌ಮಾರ್ಕ್. ಅವರನ್ನು ತಲುಪುವುದು ನಮಗೆ ಬಹು ದೊಡ್ಡ ಸವಾಲು. ನಾವು ಸಹ ಉತ್ತಮವಾಗಿ ಸಿದ್ಧತೆ ನಡೆಸುತ್ತಿದ್ದೇವೆ. ಒಂದು ವೇಳೆ ಭಾರತವನ್ನು ಎದುರಿಸುವ ಅವಕಾಶ ಸಿಕ್ಕರೆ, ಏಷ್ಯಾ ಕಪ್ ಫೈನಲ್‌ನಲ್ಲಿ ನೀಡಿದಂತೆಯೇ ಅವರ ಮೇಲೆ ಒತ್ತಡ ಹೇರಲಿದ್ದೇವೆ ಎಂದಿದ್ದಾರೆ.

ಟೀಮ್​ ಇಂಡಿಯಾ ವಿರುದ್ಧ ಆಡಿದ ಮೇಲೆ ನಮಗೆ ತುಂಬಾ ಗೌರವ ಸಿಕ್ಕಿದೆ ಅಂತ  ಜಪಾನ್ ಕ್ರಿಕೆಟ್ ಸಿಒಒ ಸಂತಸ ಹಂಚಿಕೊಂಡಿದ್ದಾರೆ.  ಸಣ್ಣ ಮತ್ತು ಬೆಳವಣಿಗೆಯ ಹಂತದಲ್ಲಿರುವ ಕ್ರಿಕೆಟ್ ರಾಷ್ಟ್ರಗಳಲ್ಲೂ ಅದ್ಭುತ ಪ್ರತಿಭೆಗಳಿವೆ ಎಂಬುದನ್ನು ಈ ಪಂದ್ಯ ಸಾಬೀತುಪಡಿಸಿದೆ. ಸಾಂಪ್ರದಾಯಿಕ ಕ್ರಿಕೆಟ್ ರಾಷ್ಟ್ರಗಳ ಹೊರತಾಗಿಯೂ ಕ್ರಿಕೆಟ್ ಜಗತ್ತು ವಿಸ್ತರಿಸುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ . ಜಪಾನ್ ಕ್ರಿಕೆಟ್‌ಗೆ ಸಿಗಬೇಕಾದ ನೈಜ ವಿಶ್ವಾಸಾರ್ಹತೆ ಹಾಗೂ ಗೌರವವನ್ನು ತಂದುಕೊಟ್ಟಿದೆ ಎಂದು ಹೇಳಿದ್ದಾರೆ.

ಭಾರತ-ಜಪಾನ್ ಟಿ20 ಪಂದ್ಯದಲ್ಲಿ ನಡೆದ ವೈಡ್ ಬಾಲ್ ವಿವಾದ ಇದೀಗ ಕ್ರಿಕೆಟ್ ವಲಯದಲ್ಲಿ ಚರ್ಚೆಯಾಗುತ್ತಿದೆ. ಭಾರತದ ಗೆಲುವಿನ ಬಳಿಕ ಈ ನಿರ್ಧಾರದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿವೆ. ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಕೂಡ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದು, ಚರ್ಚೆ ಮತ್ತಷ್ಟು ಜೋರಾಗಿದೆ. ಪಂದ್ಯದಲ್ಲಿ ಭಾರತ ಎರಡು ರನ್‌ಗಳ ಅಂತರದಲ್ಲಿ ರೋಚಕ ಗೆಲುವು ಸಾಧಿಸಿತ್ತು.

ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ 16 ರನ್ಗಳ ರೋಚಕ ಗೆಲುವು ಸಾಧಿಸಿದೆ. ನಾಯಕ ಕುಸಾಲ್ ಮೆಂಡಿಸ್ ಭರ್ಜರಿ ಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಶ್ರೀಲಂಕಾ ಮೊದಲು 321 ರನ್ ಗಳಿಸಿತು. ಗುರಿ ಬೆನ್ನತ್ತಿದ ಇಂಗ್ಲೆಂಡ್ 305 ರನ್ಗಳಿಗೆ ಸೀಮಿತವಾಯಿತು. ಈ ಗೆಲುವಿನಿಂದ ಮೂರು ಪಂದ್ಯಗಳ ಸರಣಿ 1-1ರಲ್ಲಿ ಸಮಬಲಗೊಂಡಿದೆ.

ಮೈನವಿರೇಳಿಸುವ ಕ್ಯಾಚ್‌ ಒಂದನ್ನು ಹಿಡಿಯುವ ಮೂಲಕ ದಕ್ಷಿಣ ಆಫ್ರಿಕಾದ ಸ್ಟಾರ್ ಆಲ್-ರೌಂಡರ್ ಮಾರ್ಕೋ ಜಾನ್ಸೆನ್ ಜಾಗತಿಕ ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿದ್ದಾರೆ. ಆಸ್ಟ್ರೇಲಿಯಾದ ಬ್ಯಾಟರ್ ಮ್ಯಾಟ್ ರೆನ್ಷಾ ಬಲವಾಗಿ ಪುಲ್ ಶಾಟ್ ಬಾರಿಸಿದರು. ಆ ಚೆಂಡು ಬೌಂಡರಿ ಹೋಗುತ್ತೆ ಅಂತ ಎಲ್ಲರೂ ಅಂದುಕೊಂಡಿದ್ರು. ಆದರೆ, ಅಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಮಾರ್ಕೊ ಜಾನ್ಸೆನ್ ಮಿಂಚಿನ ವೇಗದಲ್ಲಿ ಓಡಿ ಕೇವಲ ಒಂದೇ ಕೈಯಿಂದ ಅದ್ಭುತವಾಗಿ ಕ್ಯಾಚ್ ಹಿಡಿದರು. ಈ ಸಾಹಸ ಪ್ರದರ್ಶನದ ವಿಡಿಯೋ ಸಖತ್ ವೈರಲ್ ಆಗ್ತಿದೆ.

Kishor KV

Leave a Reply

Your email address will not be published. Required fields are marked *