ಭಾರತ ಸೋಲಿಸಲು PAK ಶಪಥ – ಬೆಸ್ಟ್ ಎನ್ನುತ್ತಲೇ ಎಚ್ಚರಿಕೆ ಕೊಟ್ರಾ?
T-20Iನಲ್ಲಿ ಟೀಂ ಇಂಡಿಯಾ ಗ್ರೇಟ್

ಏಷ್ಯನ್ ಗೇಮ್ಸ್ನಲ್ಲಿ ಇಂಡೋ-ಪಾಕ್ ನಡುವೆ ಪಂದ್ಯ ಇರುತ್ತಾ ಅಥವಾ ಇಲ್ವಾ ಅನ್ನೋದು ಇನ್ನೂ ಕನ್ಫರ್ಮ್ ಆಗಿಲ್ಲ. ಒಂದೋ ಇಬ್ಬರೂ ಫೈನಲ್ ಟಿಕೆಟ್ ಪಡೆದ್ರೆ ಮಾತ್ರ ಮುಖಾಮುಖಿ ಆಗ್ಬೋದು. ಇಲ್ಲ ಸೆಮಿಫೈನಲ್ನಲ್ಲಿ ಇಬ್ರೂ ಸೋತ್ರೆ ಬ್ರೋಂಜ್ ಮೆಡಲ್ಗಾಗಿ ಎದುರುಬದುರಾಗ್ಬೋದು. ಇಲ್ದಿದ್ರೆ ಬದ್ಧವೈರಿಗಳ ನಡುವೆ ಒಂದೂ ಪಂದ್ಯ ನಡೆಯದೇ ಏಷ್ಯನ್ ಗೇಮ್ಸ್ ಮುಗಿಸಬೇಕಾಗುತ್ತೆ. ಹೀಗಿದ್ರೂ ಪಾಕಿಸ್ತಾನ ಮಾತ್ರ ಏಷ್ಯನ್ ಗೇಮ್ಸ್ನಲ್ಲಿ ನಾವು ಭಾರತವನ್ನ ಸೋಲಿಸೇ ಸೋಲಿಸುತ್ತೇವೆ ಅಂತಾ ಬಿಲ್ಡಪ್ ಸ್ಟಾರ್ಟ್ ಮಾಡಿದ್ದಾರೆ.
ಇದನ್ನೂ ಓದಿ : 200 ಗೆಲುವು.. ವಿಶ್ವಕ್ಕೆ IND ಬಾಸ್ ಸೋತರು ಹೃದಯ ಗೆದ್ದ JAPAN
ವಿಶ್ವಕ್ರಿಕೆಟ್ನಲ್ಲಿ ಟೀಂ ಇಂಡಿಯಾ ಬಾಸ್. ಅದ್ರಲ್ಲಿ ಎರಡು ಮಾತೇ ಇಲ್ಲ. ವೈಟ್ ಬಾಲ್ ಫಾರ್ಮೆಟ್ನಲ್ಲಂತೂ ಭಾರತದ ಪ್ರದರ್ಶನ ಪೀಕ್ನಲ್ಲಿದೆ. ಕ್ರಿಕೆಟ್‌ನಲ್ಲಿ ಈಗ ಟೀಂ ಇಂಡಿಯಾ ಸೂಪರ್ ಸ್ಟ್ರಾಂಗ್ ಅನ್ನೋದನ್ನ ಪಾಕ್ ಕೂಡ ಒಪ್ಕೊಂಡಿದೆ. ಪಾಕ್ ತಂಡದ ಕೋಚ್ ಮೈಕ್ ಹೆಸನ್ ಓಪನ್ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. 2026ರ ಏಷ್ಯನ್ ಗೇಮ್ಸ್ ಟೂರ್ನಿಗಾಗಿ ಜಪಾನ್‌ಗೆ ಹೊರಡುವ ಮುನ್ನ ಕರಾಚಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರೋ ಹೆಸನ್ ಭಾರತ ತಂಡದ ಶಕ್ತಿಯನ್ನು ಒಪ್ಪಿಕೊಂಡಿದ್ದಾರೆ. ಌಂಡ್ ಸೋಲಿಸುತ್ತೇವೆ ಅನ್ನೋ ಮಾತನ್ನೂ ಹೇಳಿದ್ದಾರೆ.
ಭಾರತ ನಮಗಿಂತ ಬಲಿಷ್ಠ.. ಏಷ್ಯಕಪ್ ಸೋಲಿಗೆ ಏಷ್ಯನ್ ಗೇಮ್ಸ್ ನಲ್ಲಿ ಸೇಡು!
ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಡಾಮಿನೇಷನ್ ಬಗ್ಗೆ ಮಾತನಾಡಿರೋ ಮೈಕ್ ಹೆಸನ್ ಹಲವು ವಿಚಾರಗಳನ್ನ ಪ್ರಸ್ತಾಪ ಮಾಡಿದ್ದಾರೆ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಭಾರತ ತಂಡ ಅತ್ಯುನ್ನತ ಗುಣಮಟ್ಟವನ್ನು ಕಾಯ್ದುಕೊಂಡಿದೆ. ಭಾರತ ತಂಡದ ಫಾರ್ಮ್ ಮತ್ತು ಪರ್ಫಾಮೆನ್ಸ್ ಕ್ಯಾಚ್ ಅಪ್ ಮಾಡೋದು ಪಾಕಿಸ್ತಾನ ತಂಡದ ಮುಂದಿರುವ ಸದ್ಯದ ದೊಡ್ಡ ಸವಾಲಾಗಿದೆ ಅನ್ನೋದನ್ನ ಹೆಸನ್ ಒಪ್ಪಿಕೊಂಡಿದ್ದಾರೆ. ಆದ್ರೆ 2025ರ ಏಷ್ಯಾಕಪ್ನಲ್ಲಿ ಸತತ ಮೂರು ಪಂದ್ಯಗಳಲ್ಲಿ ಭಾರತದ ವಿರುದ್ಧ ಸೋಲು ಮತ್ತು ಟಿ20 ವಿಶ್ವಕಪ್‌ಗಳಲ್ಲಿ ಭಾರತದ ವಿರುದ್ಧ ಎದುರಾದ ಸತತ ಸೋಲುಗಳ ಬಗ್ಗೆಯೂ ಮಾತನಾಡಿದ್ದಾರೆ. ಏಷ್ಯಾ ಕಪ್‌ನಲ್ಲಿ ನಾವು ಭಾರತದ ವಿರುದ್ಧ ಮಾತ್ರ ಸೋತಿದ್ದೆವು. ನಾವು ಫೈನಲ್ ತಲುಪಿದರೂ ಅಲ್ಲಿ ಭಾರತದ ಎದುರು ಸೋತೆವು. ಅವರು ನಮಗಿಂತ ಹೆಚ್ಚು ಬಲಿಷ್ಠವಾಗಿದ್ದರು ಮತ್ತು ಚೆನ್ನಾಗಿ ಆಡಿದ್ರು, ಆದ್ರೆ ಈಗ ಏಷ್ಯನ್ ಗೇಮ್ಸ್ನಲ್ಲಿ ಹಾಗಾಗಲ್ಲ. ಏಷ್ಯನ್ ಗೇಮ್ಸ್‌ನ ನಾಕೌಟ್ ಹಂತದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗುವ ಸಾಧ್ಯತೆಗಳಿದ್ದು, ಹಾಗೇನಾದ್ರೂ ಇಂತಹ ಸಂದರ್ಭ ಸಿಕ್ಕರೆ ಭಾರತ ತಂಡವನ್ನ ಒತ್ತಡಕ್ಕೆ ಸಿಲುಕಿಸುತ್ತೇವೆ. ಭಾರತವನ್ನ ಸೋಲಿಸೋಕೆ ನಾವು ಅತ್ಯುತ್ತಮವಾಗಿ ತಯಾರಿ ನಡೆಸುತ್ತಿದ್ದೇವೆ, ಭಾರತದ ವಿರುದ್ಧ ಆಡುವ ಅವಕಾಶ ಸಿಕ್ಕರೆ ಖಂಡಿತವಾಗಿಯೂ ಅದನ್ನ ಮಾಡಿ ತೋರಿಸುತ್ತೇವೆ ಎನ್ನುವ ಮೂಲಕ ಪಾಕಿಸ್ತಾನ ಸೇಡಿಗಾಗಿ ಕಾಯ್ತಿದೆ ಎಂದಿದ್ದಾರೆ. ಆದ್ರೆ ಬಲಿಷ್ಠ ಭಾರತದ ಮುಂದೆ ಪಾಕ್ ತಂಡ ಗೆಲ್ಲೋಕೆ ಸಾಧ್ಯನ ಅನ್ನೋದೇ ಇಲ್ಲಿರುವಂಥ ಪ್ರಶ್ನೆ.
ಭಾರತ Vs ಪಾಕ್ ಟಿ-20ಐ ರೆಕಾರ್ಡ್ಸ್
ಮಾದರಿ ಭಾರತ ಪಾಕಿಸ್ತಾನ
ಟಿ-20 ವಿಶ್ವಕಪ್ ಚಾಂಪಿಯನ್ಸ್ 2029ರಲ್ಲಿ ಕಪ್
ಏಷ್ಯಾಕಪ್ ಚಾಂಪಿಯನ್ಸ್ ರನ್ನರ್ ಅಪ್
ಏಷ್ಯನ್ ಗೇಮ್ಸ್ ಚಾಂಪಿಯನ್ಸ್ 4ನೇ ಸ್ಥಾನ
ಟಿ-20ಐ ಶ್ರೇಯಾಂಕ ನಂಬರ್ 1 6ನೇ ಸ್ಥಾನ
ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಸಾಹಿಬ್ಜಾದಾ ಫರ್ಹಾನ್
2026ರ ಪಂದ್ಯಗಳು 28 ಪಂದ್ಯ, 19 ವಿನ್ 13 ಪಂದ್ಯ, 8 ವಿನ್
ಬ್ಯಾಟಿಂಗ್ ಶ್ರೇಯಾಂಕ ಕಿಶನ್ & ಅಭಿ ಟಾಪರ್ಸ್ ಫರ್ಹಾನ್ 3ನೇ ಸ್ಥಾನ
ಬೌಲಿಂಗ್ ಶ್ರೇಯಾಂಕ ವರುಣ್ 7ನೇ ಸ್ಥಾನ ಅಬ್ರಾರ್ ಅಹ್ಮದ್ ಟಾಪ್
ಆಲ್ ರೌಂಡರ್ಸ್ ಹಾರ್ದಿಕ್ 7ನೇ ಸ್ಥಾನ ಸೈಮ್ 2ನೇ ಸ್ಥಾನ
ಆಟಗಾರರ ರ್ಯಾಂಕಿಂಗ್ನಲ್ಲಿ ಸ್ವಲ್ಪ ವೇರಿಯೇಷನ್ಸ್ ಇದ್ರೂ ಓವರ್ ಆಲ್ ಪರ್ಫಾಮೆನ್ಸ್ ರಿಸಲ್ಟ್ ಅಂತಾ ನೋಡಿದಾಗ ಅಲ್ಲಿ ಭಾರತವೇ ಬಾಸ್ ಆಗಿದೆ. ಅದ್ರಲ್ಲೂ ಕಳೆದ 5 ಟಿ-20 ಪಂದ್ಯಗಳಲ್ಲೂ ಭಾರತವೇ ಜಯಭೇರಿ ಬಾರಿಸಿದೆ. 2026ರ ಟಿ-20 ವಿಶ್ವಕಪ್‌ನ ಹೈ-ವೋಲ್ಟೇಜ್ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನವನ್ನು 61 ರನ್‌ಗಳ ಬೃಹತ್ ಅಂತರದಿಂದ ಧೂಳೀಪಟ ಮಾಡಿತ್ತು. ಇದರೊಂದಿಗೆ ಟಿ-20 ವಿಶ್ವಕಪ್ ಇತಿಹಾಸದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ 8-1 ರ ದಾಖಲೆಯ ಮುನ್ನಡೆ ಹೊಂದಿದೆ. ಇದೇ ಕಾರಣಕ್ಕೆ ಸ್ವತಃ ಪಾಕಿಸ್ತಾನ ತಂಡದ ಮುಖ್ಯ ಕೋಚ್ ಮೈಕ್ ಹೆಸನ್ ಅವರೇ ಪ್ರಸ್ತುತ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಭಾರತವೇ Benchmark ಟೀಂ ಅನ್ನೋದನ್ನ ಒಪ್ಪಿಕೊಂಡಿದ್ದಾರೆ. ಒಟ್ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಈಗ ಗೆಲ್ಲೋದನ್ನೇ ಮರೆತಿದೆ. ಐಸಿಸಿ ಟೂರ್ನಮೆಂಟ್ಗಳಲ್ಲೂ ಫೈಟ್ ಕೊಡ್ತಿಲ್ಲ.. ಏಷ್ಯಾಕಪ್ನಲ್ಲೂ ಗೆಲ್ಲೋಕೆ ಆಗ್ಲಿಲ್ಲ.. ಆದ್ರೆ ಈಗ ಏಷ್ಯನ್ ಗೇಮ್ಸ್ನಲ್ಲಿ ನಾವು ಭಾರತದ ವಿರುದ್ಧ ಗೆದ್ದೇ ಬಿಡ್ತೀವಿ ಅಂತಾ ಪಾಕಿಸ್ತಾನ ಬಡಾಯಿ ಕೊಚ್ಚಿಕೊಳ್ತಿದೆ. ಅಷ್ಟಕ್ಕೂ ಏಷ್ಯನ್ ಗೇಮ್ಸ್ನಲ್ಲಿ ಇಂಡೋ-ಪಾಕ್ ತಂಡಗಳು ಮುಖಾಮುಖಿ ಆಗೋದೇ ಕನ್ಫರ್ಮ್ ಆಗಿಲ್ಲ. ಬಹುಶಃ ಇದು ಗೊತ್ತಿದ್ದೇ ಬಿಲ್ಡಪ್ ಕೊಟ್ಟಿದ್ದಾರೆ ಅನ್ಸುತ್ತೆ.

ನೋಡಿರಿ

