ಗೋವಾದಲ್ಲಿ IPL ಬಿಗ್ AUCTION – ವೈಭವ್ಗೆ ಕಿವೀಸ್ ಕೋಚ್ ಸವಾಲ್
IPL 2027ರ ಆಟಗಾರರ ಹರಾಜು ಡಿಸೆಂಬರ್ನಲ್ಲಿ ಗೋವಾದಲ್ಲಿ ನಡೆಯಲಿದೆ ಎಂದು BCCI ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ. ಕಳೆದ ಮೂರು ವರ್ಷ ವಿದೇಶಗಳಲ್ಲಿ ನಡೆದಿದ್ದ IPL ಹರಾಜು ಇದೀಗ ಮತ್ತೆ ಭಾರತಕ್ಕೆ ಮರಳಿದೆ. ಡಿಸೆಂಬರ್ನಲ್ಲಿ ಹರಾಜು ನಡೆಯಲಿದ್ದು, ಫ್ರಾಂಚೈಸಿಗಳು ಹೊಸ ಆಟಗಾರರಿಗಾಗಿ ಹೇಗೆ ತಂತ್ರ ರೂಪಿಸುತ್ತವೆ ಎಂಬ ಕುತೂಹಲ ಹೆಚ್ಚಾಗಿದೆ.
2027ರ IPL ಸೀಸನ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಲಿ ಚಾಂಪಿಯನ್ ಆಗಿ ಪ್ರವೇಶಿಸಲಿದೆ. RCB 2025 ಮತ್ತು 2026ರಲ್ಲಿ ಸತತ ಎರಡು IPL ಪ್ರಶಸ್ತಿಗಳನ್ನು ಗೆದ್ದಿದೆ. ಇದೀಗ ಮೂರನೇ ಪ್ರಶಸ್ತಿಗಾಗಿ ತಂಡದ ಸಿದ್ಧತೆ ಮತ್ತು ಹರಾಜಿನ ತಂತ್ರದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಗೋವಾದಲ್ಲಿ ನಡೆಯೋ ಆಕ್ಷನ್ನಲ್ಲಿ ಯಾವ ತರ ತಂಡವನ್ನ ಕಟ್ಟಿಕೊಳ್ಳುತ್ತೆ ಅನ್ನೋ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗಿದೆ.
ಭಾರತ ಪುರುಷರ ಕ್ರಿಕೆಟ್ ತಂಡದ ಮುಖ್ಯ ಆಯ್ಕೆಗಾರರಾಗಿರುವ ಅಜಿತ್ ಅಗರ್ಕರ್ ಅವರ ಒಪ್ಪಂದದ ಅವಧಿ ಮುಕ್ತಾಯಗೊಳ್ಳಲಿದ್ದು, ಅವರು ತಮ್ಮ ಹುದ್ದೆಯಿಂದ ನಿರ್ಗಮಿಸಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಅಕ್ಟೋಬರ್ 4, 2026 ರಂದು ಅಗರ್ಕರ್ ಅವರ ಪ್ರಸ್ತುತ ಒಪ್ಪಂದ ಮುಕ್ತಾಯವಾಗಲಿದ್ದು, ಆ ಬಳಿಕ ಈ ಮಹತ್ವದ ಹುದ್ದೆ ಅಧಿಕೃತವಾಗಿ ತೆರವಾಗಲಿದೆ ಎಂದಿದ್ದಾರೆ.
ಭಾರತ U19 ತಂಡ ಆಸ್ಟ್ರೇಲಿಯಾವನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದ್ದು, ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಸೆಹ್ವಾಗ್ ಉತ್ತಮ ಆರಂಭ ಪಡೆದ್ರು. ಮೂರು ಪಂದ್ಯಗಳಲ್ಲಿ 19 ಬೌಂಡರಿ ಸಹಿತ 109 ರನ್ ಗಳಿಸಿ ತಮ್ಮ ಚೊಚ್ಚಲ ಸರಣಿಯಲ್ಲಿ ಭರವಸೆ ಮೂಡಿಸಿದ್ದಾರೆ. ಆರ್ಯವೀರ್ ಭವಿಷ್ಯದ ಕ್ರಿಕೆಟ್ಗೆ ಉತ್ತಮ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಕೌರ್ GOLDEN ಗುಡ್ ಬೈ? – ಸ್ಮೃತಿ ಮಂದಾನಗೆ ಒಲಿಯುತ್ತಾ ಕ್ಯಾಪ್ಟನ್ಸಿ?
ಸಾಮಾಜಿಕ ಮಾಧ್ಯಮ ಅಥವಾ ಹೊರಗಿನ ಟೀಕೆಗಳನ್ನ ಆಧರಿಸಿ ಅಂತಿಮ ತಂಡವನ್ನು ನಿರ್ಧರಿಸುವುದಿಲ್ಲ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ. ಜನಪ್ರಿಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸುಲಭ. ಆದರೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕಷ್ಟ. ನಾವು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಗಂಭೀರ್ ಹೇಳಿದ್ದಾರೆ.
ಭಾರತವು ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯನ್ನು ಸೆಪ್ಟೆಂಬರ್ 27 ರಂದು ಗ್ರೀನ್ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆರಂಭ ಆಗಲಿದ್ದು. ಕೊಹ್ಲಿ ಈಗಾಗಲೇ ಈ ಪಂದ್ಯಕ್ಕೆ ತಿರುವನಂತಪುರಕ್ಕೆ ಆಗಮಿಸಿದ್ದಾರೆ. ಭದ್ರತಾ ಸಿಬ್ಬಂದಿ ಅವರನ್ನು ಟರ್ಮಿನಲ್ ಮೂಲಕ ಕರೆದೊಯ್ದರು. ನಂತರ ಅವರು ತಂಡದ ಹೋಟೆಲ್ಗೆ ತೆರಳಿದರು, ಅಲ್ಲಿ ಸಿಬ್ಬಂದಿ ಅವರಿಗೆ ಸಾಂಪ್ರದಾಯಿಕ ಸ್ವಾಗತವನ್ನು ನೀಡಿದರು. ಕೊಹ್ಲಿಗೆ ದೊರೆತ ಅದ್ಧೂರಿ ಸ್ವಾಗತದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಏಷ್ಯನ್ ಗೇಮ್ಸ್ 2026 ಕೂಟದಲ್ಲಿ ಆಡುವ ಸಲುವಾಗಿ ಟೀಂ ಇಂಡಿಯಾದ ಜೊತೆ ಜಪಾನ್ ತಲುಪಿರುವ ಜಸ್ಪ್ರೀತ್ ಬುಮ್ರಾ ಅವರು ದಿಂಬು ಖರೀದಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಈ ಪೋಸ್ಟ್ ನೋಡಿದ ಜಸ್ಪ್ರೀತ್ ಬುಮ್ರಾ ಅವರ ಪತ್ನಿ ಹಾಗೂ ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಅವರು, ಇದೊಂದನ್ನು ಮಾಡಲು ನೀನು ಅಷ್ಟೊಂದು ದೂರ ಜಪಾನ್ ಗೆ ಹೋದೆಯಾ? ಎಂದು ಹಾಸ್ಯಾಸ್ಪದವಾಗಿ ಕಾಮೆಂಟ್ ಮಾಡಿದ್ದಾರೆ.
ವೈಭವ್ ಸೂರ್ಯವಂಶಿ ಅವರ ಅದ್ಭುತ ಬ್ಯಾಟಿಂಗ್ ತಂತ್ರಕ್ಕೆ ನ್ಯೂಜಿಲೆಂಡ್ ತಂಡದ ಮುಖ್ಯ ಕೋಚ್ ರಾಬ್ ವಾಲ್ಟರ್ ಸವಾಲು ನೀಡಿದ್ದಾರೆ. ನಮ್ಮ ಮೈದಾನದಲ್ಲಿ ವೇಗದ ಬೌಲಿಂಗ್ ಮತ್ತು ಬೌನ್ಸ್ ಎದುರಿಸುವಾಗ ವೈಭವ್ ಸೂರ್ಯವಂಶಿ ಒತ್ತಡವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ನೋಡಲು ನಾನು ಕಾತುರನಾಗಿದ್ದೇನೆ ಎಂದು ವಾಲ್ಟರ್ ಹೇಳಿದ್ದಾರೆ.
2026 ಏಷ್ಯನ್ ಗೇಮ್ಸ್ನ ಪುರುಷರ ಕ್ರಿಕೆಟ್ ಪಂದ್ಯಗಳು ಇಂದಿನಿಂದ ಆರಂಭವಾಗಿವೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಸೇರಿದಂತೆ ಪ್ರಮುಖ ತಂಡಗಳು ಕಣದಲ್ಲಿವೆ. ಟಿ20 ಮಾದರಿಯಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಭಾರತ ನೇರವಾಗಿ ಕ್ವಾರ್ಟರ್ಫೈನಲ್ ಹಂತಕ್ಕೆ ಪ್ರವೇಶಿಸಿದೆ.
ಏಷ್ಯನ್ ಗೇಮ್ಸ್ ಪುರುಷರ ಕ್ರಿಕೆಟ್ನಲ್ಲಿ ಅಫ್ಘಾನಿಸ್ತಾನ ತನ್ನ ಮೊದಲ ಪಂದ್ಯದಲ್ಲೇ ಆತಿಥೇಯ ಜಪಾನ್ ವಿರುದ್ಧ 48 ರನ್ಗಳ ಗೆಲುವು ದಾಖಲಿಸಿದೆ. ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ 20 ಓವರ್ಗಳಲ್ಲಿ 129/6 ಗಳಿಸಿತು. ಜಪಾನ್ ತಂಡವನ್ನು ನಿಯಂತ್ರಿಸಿದ ಅಫ್ಘಾನ್ ಬೌಲರ್ಗಳು ಗೆಲುವನ್ನು ಸುಲಭಗೊಳಿಸಿದರು.

ನೋಡಿರಿ

