ಮ್ಯಾಚ್ ಫಿಕ್ಸಿಂಗ್ ಚಾಳಿ ಬಿಡದ CSK – ಪಂದ್ಯಕ್ಕೂ ಮೊದ್ಲೇ ಪ್ಲೇಯಿಂಗ್ 11 ಡೀಲ್
ಫ್ರಾಂಚೈಸಿ ದಿಢೀರ್ ಸಭೆ.. ಬ್ಯಾನ್ ಭೀತಿನಾ?

ಮ್ಯಾಚ್ ಫಿಕ್ಸಿಂಗ್ ಚಾಳಿ ಬಿಡದ CSK – ಪಂದ್ಯಕ್ಕೂ ಮೊದ್ಲೇ ಪ್ಲೇಯಿಂಗ್ 11 ಡೀಲ್ಫ್ರಾಂಚೈಸಿ ದಿಢೀರ್ ಸಭೆ.. ಬ್ಯಾನ್ ಭೀತಿನಾ?

ಐಪಿಎಲ್​ನಲ್ಲಿ ಮೋಸ್ಟ್ ಸಕ್ಸಸ್​ಫುಲ್ ಟೀಮ್​ಗಳ ಲಿಸ್ಟ್​ನಲ್ಲಿ ಟಾಪ್​ನಲ್ಲಿ ನಿಲ್ಲುವಂಥ ತಂಡ ಚೆನ್ನೈ ಸೂಪರ್ ಕಿಂಗ್ಸ್. ಐದೈದು ಟ್ರೋಫಿಗಳನ್ನ ಗೆದ್ದಿದ್ದಾರೆ. ಅಟ್​ದಿ ಸೇಮ್ ಟೈಂ ಮ್ಯಾಚ್ ಫಿಕ್ಸಿಂಗ್ ಅನ್ನೋ ಮುಜುಗರವನ್ನೂ ಅನುಭವಿಸಿದೆ. ನಾವೆಷ್ಟೇ ಗ್ರೇಟ್ ಅಂತಾ ಹೇಳಿದ್ರೂ ಈ ಫಿಕ್ಸಿಂಗ್ ಅನ್ನೋ ಟ್ಯಾಗ್​ಲೈನ್ ನಿಂದ ಹೊರಬರೋಕಂತೂ ಆಗಲ್ಲ. ಈಗ ಗಾಯದ ಮೇಲೆ ಬರೆ ಎನ್ನುವಂತೆ ಮತ್ತೆ ಫಿಕ್ಸಿಂಗ್ ಸುಳಿಗೆ ಬಿದ್ದಿದ್ದಾರೆ.

ಇದನ್ನೂ ಓದಿ : ಏಷ್ಯನ್ ಗೇಮ್ಸ್ ನಲ್ಲಿ IND Vs PAK? – ಗೋಲ್ಡನ್ ಮೆಡಲ್ ಗಾಗಿ ಗುದ್ದಾಡ್ತಾರಾ?

ಐಪಿಎಲ್​ನಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ ಎರಡು ವರ್ಷಗಳ ಕಾಲ ಬ್ಯಾನ್ ಆಗಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌  ತಂಡದ ಮೇಲೆ ಮತ್ತೊಮ್ಮೆ ಫಿಕ್ಸಿಂಗ್‌ ತೂಗುಗತ್ತಿ ನೇತಾಡ್ತಿದೆ. ಹಾಗಂತ ಇದು ಹಳೇ ಕೇಸ್ ಅಲ್ಲ. ಫ್ರೆಶ್ ಕಾಂಟ್ರವರ್ಸಿ. 2025ರ ಐಪಿಎಲ್ ನಲ್ಲಿ CSK ತಂಡವು ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದೆ ಎನ್ನುವಂಥ ಗಂಭೀರ ಆರೋಪ ಕೇಳಿ ಬಂದಿದೆ. ತೆಹಲ್ಕಾದ ಸ್ಟಿಂಗ್ ಆಪರೇಷನ್​ನಲ್ಲಿ ಇಂಥಾದ್ದೊಂದು ಡೀಲ್ ಬಯಲಾಗಿದೆ.

ಪಂದ್ಯಕ್ಕೂ ಮೊದಲೇ ಪ್ಲೇಯಿಂಗ್ 11 ಬಗ್ಗೆ ಮಾಹಿತಿ ರಿವೀಲ್?

ತೆಹಲ್ಕಾ ನಡೆಸಿದ ಸ್ಟಿಂಗ್ ಆಪರೇಷನ್ ಐಪಿಎಲ್ 2025ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಒಳಗೊಂಡ ಐದು ಪಂದ್ಯಗಳು ಫಿಕ್ಸಿಂಗ್ ಆಗಿವೆ ಎಂದು ವರದಿಯಾಗಿದೆ. ಹಲ್ಕಾ ವೆಬ್‌ಸೈಟ್ ಇತ್ತೀಚೆಗೆ ಬಹಿರಂಗಪಡಿಸಿದ ಮಾಹಿತಿಯ ಪ್ರಕಾರ, ಸಿಎಸ್‌ಕೆ ಆಟಗಾರನೊಬ್ಬ ದೆಹಲಿಯ ಮಾಜಿ ಪ್ರಥಮ ದರ್ಜೆ ಆಟಗಾರನಿಗೆ ಗೌಪ್ಯ ಮಾಹಿತಿಯನ್ನು ಒದಗಿಸುತ್ತಿದ್ದನೆಂದು ಆರೋಪಿಸಲಾಗಿದೆ. ರಣಜಿ ಮಾಜಿ ಪ್ಲೇಯರ್ ಆಗಿರುವಂತ ರಚಿತ್ ಭಾಟಿಯಾ 2025ರ IPLನಲ್ಲಿ CSKಗೆ ಸಂಬಂಧಿಸಿದ ಇನ್​ಸೈಡ್ ಮಾಹಿತಿಗಳನ್ನ ಬುಕ್ಕಿಗಳಿಗೆ ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ಐದು ಪಂದ್ಯಗಳಿಗೆ ಒಟ್ಟು ಸುಮಾರು ₹3 ಕೋಟಿ ಪಡೆದಿದ್ದಾಗಿ ಹೇಳಿದ್ದಾರೆ ಎನ್ನಲಾಗಿದೆ. ಆರೋಪದ ಪ್ರಕಾರ ತಂಡದ ಪ್ಲೇಯಿಂಗ್ XI ಹಾಗೂ ಟೀಮ್ ಒಳಗಿನ ಮಾಹಿತಿಯನ್ನು ಪಂದ್ಯಕ್ಕೂ ಮುನ್ನನೇ ಪಡೆದು ಅದನ್ನ ಬುಕ್ಕಿಗಳಿಗೆ ಹಣ ಪಡೆದು ಮಾಹಿತಿ ನೀಡ್ತಿದ್ರು ಎನ್ನಲಾಗಿದೆ. ಆದ್ರೆ ಸಿಎಸ್​ಕೆಯಲ್ಲಿ ಯಾರು ಇಂಥಾ ಕೆಲ್ಸ ಮಾಡ್ತಿದ್ರು ಅನ್ನೋದನ್ನ ಅಂದ್ರೆ ಆಟಗಾರನ ಹೆಸರನ್ನ ಎಲ್ಲೂ ರಿವೀಲ್ ಮಾಡಿಲ್ಲ. ದೆಹಲಿಯ ಯುವ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ವಂಶ್ ಬೇಡಿ ಸ್ಪಾಟ್ ಫಿಕ್ಸಿಂಗ್ ಹಗರಣದ ಆರೋಪದ ವಿವಾದದಲ್ಲಿ ಸಿಲುಕಿದ್ದಾರೆ.

ನನ್ನಿಂದ ಫಿಕ್ಸಿಂಗ್ ನಡೆದಿಲ್ಲ ಎಂದಿರುವ ವಂಶ್ ಬೇಡಿ!

ಅಷ್ಟಕ್ಕೂ ವಂಶ್ ಬೇಡಿ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗ್ತಿದೆ. ಸ್ಟಿಂಗ್ ಆಪರೇಷನ್ ಸುತ್ತಲಿನ ವಿವಾದ ಮತ್ತು ತಮ್ಮ ವಿರುದ್ಧದ ಆರೋಪಗಳ ಮಾತನಾಡಿದ್ದಾರೆ. ನನ್ನ ವಿರುದ್ಧದ  ಮ್ಯಾಚ್ ಫಿಕ್ಸಿಂಗ್ ವರದಿಗಳು ಸಂಪೂರ್ಣವಾಗಿ ಸುಳ್ಳು ಮತ್ತು ಮಾನನಷ್ಟಕರ ಎಂದಿದ್ದಾರೆ. ಅಷ್ಟಕ್ಕೂ ವಂಶ್ ಬೇಡಿ ಐಪಿಎಲ್ 2025 ರ ಸಮಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಭಾಗವಾಗಿದ್ದರು. ನಂತರ ಅವರು ದೆಹಲಿ ಪ್ರೀಮಿಯರ್ ಲೀಗ್ (DPL) ನಲ್ಲಿ ಸೆಂಟ್ರಲ್ ದೆಹಲಿ ಕಿಂಗ್ಸ್ ಪರ ಕಣಕ್ಕಿಳಿದಿದ್ದರು.ಮತ್ತೊಂದೆಡೆ ರಚಿತ್ ಭಾಟಿಯಾ ಅವರ ಸ್ಟಿಂಗ್ ಆಪರೇಷನ್‌ನಲ್ಲಿ ಉಲ್ಲೇಖಿಸಲಾದ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ತಾನು ಅಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಅಂತಹ ಯಾವುದೇ ಚಟುವಟಿಕೆ ಅಥವಾ ಆಪಾದಿತ ಮ್ಯಾಚ್ ಫಿಕ್ಸಿಂಗ್‌ಗೂ ತನಗೆ ಯಾವುದೇ ಸಂಬಂಧವಿಲ್ಲ. ತಮ್ಮ ಹೆಸರನ್ನು ಸುಖಾಸುಮ್ಮನೆ ಸೇರಿಸಿದ್ದಾರೆ. ಯಾವುದೇ ಸಾಕ್ಷಿಗಳಿಲ್ಲ. ಇಂಥವ್ರ ವಿರುದ್ಧ ಕಾನೂನು ಕ್ರಮ ಕೈಗೊಳ್ಳೋದಾಗಿ ಹೇಳಿದ್ದಾರೆ. ಯಾವಾಗ ಚೆನ್ನೈ ತಂಡದ ಹೆಸರು ಮತ್ತೆ ಮ್ಯಾಚ್ ಫಿಕ್ಸಿಂಗ್ ಸುಳಿಯಲ್ಲಿ ಸಿಲುಕಿತೋ ಫ್ರಾಂಚೈಸಿ ಅಲರ್ಟ್ ಆಗಿದೆ.

ವಾರ್ಷಿಕ ಸಭೆಯಲ್ಲಿ ಮುಂದಿನ ನಿರ್ಧಾರ ಎಂದ ಚೆನ್ನೈ ಫ್ರಾಂಚೈಸಿ!

ಈಗಾಗ್ಲೇ ಮ್ಯಾಚ್ ಫಿಕ್ಸಿಂಗ್​ನಿಂದ ತೀವ್ರ ಮುಖಭಂಗಕ್ಕೆ ಒಳಗಾಗಿರೋ ಚೆನ್ನೈ ಫ್ರಾಂಚೈಸಿ ಈ ಸಲ ಬೇಗನೇ ಅಲರ್ಟ್ ಆಗಿದೆ.  ಸೆಪ್ಟೆಂಬರ್ 25ರಂದು ನಡೆಯಲಿರುವ ವಾರ್ಷಿಕ ಸಭೆಯಲ್ಲಿ ಫಿಕ್ಸಿಂಗ್ ಆರೋಪಗಳ ಕುರಿತು ಚರ್ಚಿಸಿ, ಪರಿಶೀಲನೆಯ ಬಳಿಕ ಸೂಕ್ತ ಕ್ರಮದ ಬಗ್ಗೆ ನಿರ್ಧರಿಸಲು CSK ಮುಂದಾಗಿದೆ.  ಪ್ರಸ್ತುತ ಇರುವುದು ಸ್ಟಿಂಗ್ ಆಪರೇಷನ್‌ನಲ್ಲಿ ಬಂದ ಆರೋಪಗಳು + ಅವುಗಳ ಕುರಿತು ನಡೆಯುತ್ತಿರುವ ಪರಿಶೀಲನೆ. ತನಿಖೆಯಲ್ಲಿ ಆರೋಪಗಳು ಸಾಬೀತಾದರೆ ಮಾತ್ರ ಮುಂದಿನ ಕ್ರಮದ ಬಗ್ಗೆ ಸ್ಪಷ್ಟತೆ ಬರಲಿದೆ. ತನಿಖೆಯ ಬಳಿಕ ಯಾವ ಆಟಗಾರ ಅಥವಾ ಅಧಿಕಾರಿ ಒಳಗಿನ ಮಾಹಿತಿಯನ್ನು ಅನಧಿಕೃತವಾಗಿ ಹಂಚಿಕೊಂಡಿದ್ದಾನೆ? ಯಾರಾದರೂ ಹಣ ಪಡೆದಿದ್ದಾರಾ? ಪಂದ್ಯದ ಫಲಿತಾಂಶ ಅಥವಾ ಯಾವುದೇ ನಿರ್ದಿಷ್ಟ ಘಟನೆ ಮೇಲೆ ಪ್ರಭಾವ ಬೀರಲಾಗಿದೆಯೇ? ಅನ್ನೋದ್ರ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ತಾರೆ. ಈಗಾಗ್ಲೇ ಚೆನ್ನೈ ಫ್ರಾಂಚೈಸಿ ಇದೇ ಫಿಕ್ಸಿಂಗ್ ನಲ್ಲಿ ಸಿಲುಕಿ 2 ವರ್ಷ ಬ್ಯಾನ್ ಆಗಿತ್ತು. 2013 ರ ಐಪಿಎಲ್ ಸರಣಿಯಲ್ಲಿ ನಡೆದ ಸ್ಪಾಟ್ ಫಿಕ್ಸಿಂಗ್ ಮತ್ತು ಅಕ್ರಮ ಬೆಟ್ಟಿಂಗ್ ಹಗರಣದದಲ್ಲಿ 2016 ಮತ್ತು 2017 ರ ಸೀಸನ್‌ಗಳಿಗಾಗಿ ಎರಡು ವರ್ಷಗಳ ಕಾಲ ನಿಷೇಧಿಸಲಾಗಿತ್ತು. ಸಿಎಸ್‌ಕೆ ತಂಡದ ಪ್ರಮುಖ ಅಧಿಕಾರಿಯಾಗಿದ್ದ ಗುರುನಾಥ್ ಮೇಯಪ್ಪನ್ ಅವರು ಅಕ್ರಮ ಬೆಟ್ಟಿಂಗ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಸಾಬೀತಾಯಿತು. ಈ ಕಾರಣಕ್ಕಾಗಿ ಅವರಿಗೆ ಕ್ರಿಕೆಟ್ ಚಟುವಟಿಕೆಗಳಿಂದ ಜೀವಿತಾವಧಿ ನಿಷೇಧ ಹೇರಲಾಯಿತು. 2018 ರಲ್ಲಿ ಐಪಿಎಲ್‌ಗೆ ಮತ್ತೆ ಕಂ ಬ್ಯಾಕ್ ಮಾಡಿದ ಚೆನ್ನೈ ತಂಡ ಅದೇ ವರ್ಷ ಟ್ರೋಫಿಯನ್ನೂ ಗೆದ್ದಿತ್ತು. ಅಂದಿನಿಂದ ಇಂದಿನವರೆಗೂ ಚೆನ್ನೈ ತಂಡಕ್ಕೆ ಫಿಕ್ಸಿಂಗ್ ಅನ್ನೋದು ಕಪ್ಪುಚುಕ್ಕೆಯಾಗಿ ಉಳಿದಿದೆ. ಈಗ ಮತ್ತೆ ಫಿಕ್ಸಿಂಗ್ ಆರೋಪಗಳು ಬರ್ತಿದ್ದು ಫ್ರಾಂಚೈಸಿ ಮತ್ತೆ ತಲೆಕೆಡಿಸಿಕೊಂಡಿದೆ.

Shantha Kumari

Leave a Reply

Your email address will not be published. Required fields are marked *