ಬಿಗ್‌ಬಾಸ್ ಮನೆಯಲ್ಲಿ ಎಲಿಮಿನೇಶನ್ ಶಾಕ್ – ಬಿಕ್ಕಿಬಿಕ್ಕಿ ಅತ್ತ ಗಗನ್, ತಾಂಡವ್

ಬಿಗ್‌ಬಾಸ್ ಮನೆಯಲ್ಲಿ ಎಲಿಮಿನೇಶನ್ ಶಾಕ್ – ಬಿಕ್ಕಿಬಿಕ್ಕಿ ಅತ್ತ ಗಗನ್, ತಾಂಡವ್

ಬಿಗ್​ಬಾಸ್​ ಮನೆಯಲ್ಲಿ ಈಗ ಎಮರ್ಜೆನ್ಸಿ ಎಕ್ಸಿಟ್​ ಹೆಸರಿನಲ್ಲಿ ಎಲಿಮಿನೇಷನ್​ ನಡೆಯುತ್ತಿದೆ. ಸ್ಪರ್ಧಿಗಳನ್ನು ನಾಮಿನೇಟ್ ಮಾಡುವ ಮೂಲಕ ಮಿಡ್ ವೀಕ್ ಎಲಿಮಿನೇಷನ್ ನಡೆಯುತ್ತಿದ್ದು, ಯಾರು ಹೊರಕ್ಕೆ ಹೋಗಲಿದ್ದಾರೆ ಎಂಬ ಕುತೂಹಲ ಗರಿಗೆದರಿದೆ. ಇದರ ಮಧ್ಯೆ, ಗಗನ್ ಮತ್ತು ತಾಂಡವ್ ಎಲಿಮಿನೇಶನ್ ಪ್ರಕ್ರಿಯೆ ವೇಳೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಇದನ್ನೂ ಓದಿ:ಎಮರ್ಜೆನ್ಸಿ ಎಕ್ಸಿಟ್‌ನಲ್ಲಿ ಮೂವರು ಔಟ್ – ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡ್ತಾರಾ ಗಿಚ್ಚಿ ಗಿಲಿಗಿಲಿ ಪ್ರಶಾಂತ್?

ಬಿಗ್​ಬಾಸ್​ ಮನೆಯಲ್ಲಿ ಈ ವಾರ ಮಿಡ್​ವೀಕ್​​ ಎಲಿಮಿನೇಷನ್​​ ಪ್ರಕ್ರಿಯೆ ನಡೆಯುತ್ತಿದೆ. ಎಮರ್ಜೆನ್ಸಿ ಎಕ್ಸಿಟ್​​ನಲ್ಲಿ ಮೂವರು ಸ್ಪರ್ಧಿಗಳು ಮನೆಯಿಂದ ಹೊರನಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ಪ್ರಕ್ರಿಯೆ ವೇಳೆ ಜಗ್ಗಿ, ಗಗನ್​ ಮತ್ತು ತಾಂಡವ್​ ಕಣ್ಣೀರು ಹಾಕಿದ್ದಾರೆ.

ಈ ಬಾರಿ ಮನೆಯಿಂದ ಹೊರಗಡೆ ಹೋಗಲು ಸಂಗೀತಾ ಅವರನ್ನು ಹೊರತುಪಡಿಸಿ ಎಲ್ಲರೂ ನಾಮಿನೇಟ್ ಆಗಿದ್ದಾರೆ. ಮಿಡ್‌ವೀಕ್ ಎಲಿಮಿನೇಷ್‌ನಿಂದ ತಪ್ಪಿಸಿಕೊಳ್ಳುವ ಕೊನೆಯ ಟಾಸ್ಕ್‌ನಲ್ಲಿ ಧನುಷ್, ಕಿರಣ್, ಕಾವ್ಯಾ ಮತ್ತು ಆಸಿಯಾ ಇದ್ದಾರೆ. ಮತ್ತೊಂದೆಡೆ ನಾಮಿನೇಷನ್‌ನಲ್ಲಿ ತಾಂಡವ್ ರಾಮ್, ಗಗನ್ ಚಿನ್ನಪ್ಪ, ಜಗದೀಶ್, ಸೌಂದರ್ಯಾ ಶೆಟ್ಟ, ಮಂಜ, ಯಶಸ್, ವೈಷ್ಣವಿ ಕೌಂಡಿನ್ಯ, ಲಿಖಿತ್ ಇದ್ದಾರೆ. ಕೆಲ ಮಾಹಿತಿಗಳ ಪ್ರಕಾರ, ಸೌಂದರ್ಯಾ ಶೆಟ್ಟಿ, ಆಸಿಯಾ, ಧನುಷ್ ಮೊದಲ ಹಂತದಲ್ಲಿ ಸೇವ್ ಆಗಿದ್ದಾರೆ ಎನ್ನಲಾಗುತ್ತಿದೆ. ಹಾಗಾದ್ರೆ ಮನೆಯಿಂದ ಹೊರಗೆ ಹೋಗುವ ಮೂವರು ಸ್ಪರ್ಧಿಗಳ್ಯಾರು? ಹಾಗೆಯೇ ಮನೆ ಪ್ರವೇಶಿಸುವ ಮೂವರು ಯಾರು? ಎಂಬುದರ ಬಗ್ಗೆ ಕುತೂಹಲ ಮೂಡಿದೆ.

ಈಗಾಗಲೇ ಬಿಗ್‌ಬಾಸ್ ಪ್ರೋಮೋದಲ್ಲಿ ಗಗನ್ ಮತ್ತು ತಾಂಡವ್ ಕಣ್ಣೀರು ಹಾಕಿದ್ದು ತೋರಿಸಲಾಗಿದೆ. ಜಗ್ಗಿ ಕೂಡಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಲಿಖಿತ್ ಮತ್ತು ಮಂಜು ಈ ವಾರ ಮನೆಯಿಂದ ಹೊರನಡೆಯುವ ಸಾಧ್ಯತೆಯೂ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.

 

Sulekha

Leave a Reply

Your email address will not be published. Required fields are marked *