ಸಿಎಂ ವಿಜಯ್ ಮಗನ ಸಿನಿಮಾಕ್ಕೆ ಕಿಚ್ಚನ ಮಗಳ ಹಾಡು- ಸಾನ್ವಿ ಸುದೀಪ್ ಹಾಡಿಗೆ ಚೇಸನ್ ಸಂಜಯ್ ಫಿದಾ

ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಮಗಳು ಸಾನ್ವಿ ಸುದೀಪ್ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ತಮಿಳುನಾಡು ಸಿಎಂ ವಿಜಯ್ ಮಗನ ಸಿನಿಮಾಕ್ಕೆ ಸಾನ್ವಿ ಹಾಡು ಹೇಳಿದ್ದಾರೆ. ಸಿಗ್ಮಾ ಚಿತ್ರದ ಈ ಹಾಡು ರಿಲೀಸ್ ಆಗಿದ್ದು ಅಭಿಮಾನಿಗಳ ಮನ ಗೆದ್ದಿದೆ.
ಇದನ್ನೂ ಓದಿ:ಎಮರ್ಜೆನ್ಸಿ ಎಕ್ಸಿಟ್‌ನಲ್ಲಿ ಮೂವರು ಔಟ್ – ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡ್ತಾರಾ ಗಿಚ್ಚಿ ಗಿಲಿಗಿಲಿ ಪ್ರಶಾಂತ್?
ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಸುದೀಪ್ ತಮಿಳು ಸಿನಿಮಾದಲ್ಲಿ ಹಾಡುವ ಮೂಲಕ ಮೊದಲ ಚಿತ್ರದಲ್ಲಿಯೇ ಅಭಿಮಾನಿಗಳ ಮನಗೆದ್ದಿದ್ದಾರೆ. ತಮಿಳುನಾಡು ಸಿಎಂ ವಿಜಯ್ ಪುತ್ರನ ಸಿನಿಮಾ ಸಿಗ್ಮಾದಲ್ಲಿ ಸಾನ್ವಿ ಸುದೀಪ್ ಹಾಡಿದ್ದಾರೆ. ತಮ್ಮ ಚಿತ್ರ ಜೀವನದ ಮೊದಲ ತಮಿಳು ಸಾಂಗ್ ಸುಲೋಚನಾ ಗೀತೆಗೆ ಸಾನ್ವಿ ದನಿಯಾಗಿದ್ದು, ಹಾಡು ಕೂಡಾ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಹಿಂದೆ ಸಾನ್ವಿ, ಮಾರ್ಕ್ ಚಿತ್ರದ ಮಸ್ತ್ ಮಲೈಕಾ ಹಾಡು ಹಾಡಿದ್ದರು. ಈ ಹಾಡು ಕೂಡಾ ಸೂಪರ್ ಹಿಟ್ ಆಗಿತ್ತು. ಮ್ಯಾಂಗೋ ಪಚ್ಚ ಚಿತ್ರದಲ್ಲಿ ಅರಗಿಣಿಯೆ ಅನ್ನುವ ಹಾಡು ಹಾಡಿದ್ದಾರೆ. ಈ ಎರಡೂ ಚಿತ್ರಗಳ ಹಾಡಿನ ಯಶಸ್ಸಿನ ಬಳಿಕ ಈಗ ಜೇಸನ್ ಸಂಜಯ್ ಅವರ ಚಿತ್ರ ಸಿಗ್ಮಾಕ್ಕೆ ಹಾಡಿದ್ದಾರೆ. ಚೇಸನ್ ಸಂಜಯ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಈ ಚಿತ್ರಕ್ಕೆ ಎಸ್.ಥಮನ್ ಮ್ಯೂಸಿಕ್ ಮಾಡಿದ್ದಾರೆ. ಇವರ ಸಂಗೀತದಲ್ಲಿ ಸಾನ್ವಿ ಸುದೀಪ್ ಹಾಡಿದ್ದಾರೆ.
ಸಿಗ್ಮಾ ಚಿತ್ರದ ಸುಲೋಚನಾ ಹಾಡಿನ ಅಡಿಯೋ ರಿಲೀಸ್ ಆಗಿದೆ. ಸಿಗ್ಮಾ ಚಿತ್ರ ಅಕ್ಟೋಬರ್-2 ರಂದು ರಿಲೀಸ್ ಆಗಲಿದೆ. ಡೈರೆಕ್ಟರ್ ಜೇಸನ್ ಸಂಜಯ್ ಮೊದಲ ನಿರ್ದೇಶನದ ಚಿತ್ರದ ಇದಾಗಿದೆ.

ನೋಡಿರಿ

