ಅಭಿಷೇಕ್ ಶರ್ಮಾ ಮತ್ತೊಂದು ದಾಖಲೆ – ಸೆಂಚುರಿ ಸರದಾರನಿಗೆ ಇದು ಬೇಕಿತ್ತಾ?
ದೇಶದಲ್ಲಿ ಮಾತ್ರ ಹುಲಿನಾ?

ಅಭಿಷೇಕ್ ಶರ್ಮಾ ಅಂದ್ರೇನೇ ಹಾಗೇ. ಫಸ್ಟ್ ಬಾಲ್ನಿಂದಲೇ ಬೌಂಡರಿ ಅಥವಾ ಸಿಕ್ಸರ್ ಬಾರಿಸೋ ಅಗ್ರೆಸ್ಸಿವ್ ಬ್ಯಾಟರ್. ಆಲ್ರೆಡಿ ಟಿ-20ಐ ಫಾರ್ಮೆಟ್ನಲ್ಲಿ ವರ್ಲ್ಡ್ ಕ್ರಿಕೆಟ್ನ ಮೋಸ್ಟ್ ಡೇಂಜರಸ್ ಬ್ಯಾಟರ್ ಆಗಿದ್ದಾರೆ. ಇತ್ತೀಚೆಗಷ್ಟೇ ಅಫ್ಘಾನಿಸ್ತಾನ ವಿರುದ್ಧದ ಲಾಸ್ಟ್ ಮ್ಯಾಚಲ್ಲಿ 30 ಬಾಲಲ್ಲೇ ಸೆಂಚುರಿ ಬಾರಿಸಿ ಫಾಸ್ಟೆಸ್ಟ್ ಸೆಂಚುರಿ ಅನ್ನೋ ವರ್ಲ್ಡ್ ರೆಕಾರ್ಡ್ನೂ ಮಾಡಿದ್ದಾರೆ. ಅಟ್ ದಿ ಸೇಮ್ ಟೈಂ ಅಭಿಷೇಕ್ ಶರ್ಮಾ ಬೇಡದೇ ಇರೋ ರೆಕಾರ್ಡ್ನೂ ಮಾಡಿದ್ದಾರೆ.
ಇದನ್ನೂ ಓದಿ : ಟೀಂ ಇಂಡಿಯಾ 11 Vs ವರ್ಲ್ಡ್ XI – ಬಲಿಷ್ಠರು Vs ಶ್ರೇಷ್ಠರ ಕಾಳಗ ಹೇಗಿರುತ್ತೆ?
ಕಳೆದ ವಾರ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ-20ಐ ಸರಣಿಯಲ್ಲಿ ಅಭಿಷೇಕ್ ಶರ್ಮಾ ಸುನಾಮಿ ಎಬ್ಬಿಸಿದ್ರು. ಕೊನೆಯ ಪಂದ್ಯದಲ್ಲಿ ಸ್ಫೋಟಕ ಸೆಂಚುರಿಯ ದಾಖಲೆ ಕೂಡ ಮಾಡಿದ್ರು. ಹೀಗಾಗಿ ಜಪಾನ್ ವಿರುದ್ಧದ ಏಕೈಕ ಪಂದ್ಯದಲ್ಲಿ ಅಭಿಷೇಕ್ ಶರ್ಮಾರನ್ನ ತಡೆಯೋಕೆ ಆಗಲ್ಲ. ಆಫ್ಘನ್ ವಿರುದ್ಧವೇ ಈ ರೇಂಜ್ಗೆ ಬ್ಯಾಟಿಂಗ್ ಮಾಡಿದ್ದಾರೆ ಅಂದ್ರೆ ಜಪಾನ್ ಬೌಲರ್ಗಳನ್ನ ಚೆಂಡಾಡಿಬಿಡ್ತಾರೆ ಅಂತಾನೇ ಪ್ರೆಡಿಕ್ಟ್ ಮಾಡಲಾಗಿತ್ತು. ಆದ್ರೆ ಅಲ್ಲಿ ಅಭಿಷೇಕ್ ಶರ್ಮಾ ಫಸ್ಟ್ ಬಾಲಲ್ಲೇ ಪೆವಿಲಿಯನ್ ಸೇರ್ಕೊಂಡ್ರು. ಌಂಡ್ ಇದೇ ಗೋಲ್ಡನ್ ಡಕ್ ಮೂಲಕ ಅಭಿಷೇಕ್ ಕೆರಿಯರ್ಗೆ ಕಪ್ಪುಚುಕ್ಕೆ ಬಿದ್ದಿದೆ.
ಕ್ಯಾಲೆಂಡರ್ ವರ್ಷದಲ್ಲಿ ಅತೀ ಹೆಚ್ಚು ಬಾರಿ ಅಭಿಷೇಕ್ ಡಕ್ ಔಟ್!
ಅಭಿಷೇಕ್ ಶರ್ಮಾ ಸೊನ್ನೆ ಸುತ್ತೋದ್ರಲ್ಲೂ ಈಗ ವರ್ಲ್ಡ್ ಫೇಮಸ್ ಆಗ್ಬಿಟ್ಟಿದ್ದಾರೆ. 2026ರ ಕ್ಯಾಲೆಂಡರ್ ವರ್ಷದಲ್ಲಿ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಡಕ್ ಔಟ್ ಅಂದ್ರೆ ಶೂನ್ಯಕ್ಕೆ ಔಟ್ ಆದ ಅನಗತ್ಯ ಕೆಟ್ಟ ದಾಖಲೆಯನ್ನು ಬರೆದಿದ್ದಾರೆ. ಜಪಾನ್ ವಿರುದ್ಧ ನಡೆದ ಪಂದ್ಯದಲ್ಲಿ ಮೊದಲ ಓವರ್‌ನಲ್ಲೇ ‘ಗೋಲ್ಡನ್ ಡಕ್ ಆಗುವ ಮೂಲಕ, ಒಂದೇ ವರ್ಷದಲ್ಲಿ ಒಟ್ಟು 10 ಬಾರಿ ಟಿ20 ಕ್ರಿಕೆಟ್‌ನಲ್ಲಿ ಸೊನ್ನೆ ಸುತ್ತಿದಂತಾಗಿದೆ. ಈ ಮೂಲಕ ವಿಶ್ವ ಕ್ರಿಕೆಟ್ ಇತಿಹಾಸದಲ್ಲೇ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಬಾರಿ ಡಕ್ ಔಟ್ ಆದ ಬ್ಯಾಟರ್ ಎಂಬ ಬೇಡದೇ ಇರೋ ರೆಕಾರ್ಡ್ ಬರೆದಿದ್ದಾರೆ. ಈ ಹತ್ತು ಡಕ್ ಔಟ್ ಪೈಕಿ ಐದು ಸಲ ವೆರಿ ಫಸ್ಟ್ ಬಾಲ್ನಲ್ಲೇ ವಿಕೆಟ್ ಒಪ್ಪಿಸಿದ್ದಾರೆ. ಈ ವರ್ಷ 7 ಬಾರಿ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಡಕ್ ಔಟ್ ಆದ್ರೆ ಮೂರು ಸಲ ಐಪಿಎಲ್ನಲ್ಲಿ ಖಾತೆ ತೆರೆಯದೇ ಪೆವಿಲಿಯನ್ ಸೇರ್ಕೊಂಡಿದ್ರು.
ಟಿ-20 ವಿಶ್ವಕಪ್ ನಲ್ಲೂ ಹ್ಯಾಟ್ರಿಕ್ ಡಕ್ ಔಟ್ ಆಗಿದ್ದ ಅಭಿಷೇಕ್!
ಸೂರ್ಯಕುಮಾರ್ ಯಾದವ್ ಕ್ಯಾಪ್ಟನ್ಸಿಯಲ್ಲಿ ನಡೆದ 2026ರ ಟಿ-20 ವಿಶ್ವಕಪ್ನಲ್ಲೂ ಅಭಿಷೇಕ್ ಶರ್ಮಾ ಸೈಲೆಂಟ್ ಆಗಿದ್ರು. ಅದ್ರಲ್ಲೂ ಸತತ ಮೂರು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟ್ ಆಗುವ (ಹ್ಯಾಟ್ರಿಕ್ ಡಕ್) ಮೂಲಕ ಅವರು ತೀವ್ರ ಟೀಕೆಗೆ ಒಳಗಾಗಿದ್ದರು. ವಿಶ್ವಕಪ್ ವೇಳೆಯಲ್ಲೇ ಒಂದೇ ವರ್ಷದಲ್ಲಿ ಅತಿ ಹೆಚ್ಚು ಬಾರಿ ಡಕ್ ಔಟ್ ಆಗಿದ್ದ ಭಾರತೀಯರ ದಾಖಲೆ ರೋಹಿತ್ ಶರ್ಮಾ (2018 ರಲ್ಲಿ 6 ಬಾರಿ) ಮತ್ತು ಸಂಜು ಸ್ಯಾಮ್ಸನ್ (2024 ರಲ್ಲಿ 6 ಬಾರಿ) ಹೆಸರಿನಲ್ಲಿತ್ತು. ಅಭಿಷೇಕ್ ಶರ್ಮಾ ಈ ಇಬ್ಬರ ದಾಖಲೆಯನ್ನೂ ಮೀರಿದ್ದರು. ಈಗ ಅಂತಾರಾಷ್ಟ್ರೀಯ ಮಟ್ಟದಲ್ಲೂ ಜಾರಿದ್ದಾರೆ.
ರಶೀದ್ ಖಾನ್ ಮತ್ತು ಶಾದಾಬ್ ಖಾನ್ ಹಿಂದಿಕ್ಕಿದ ಅಭಿಷೇಕ್!
ಪ್ರಸ್ತುತ ಅಭಿಷೇಕ್ ಶರ್ಮಾ ಎಲ್ಲಾ ಮಾದರಿಯ ಟಿ20 ಪಂದ್ಯಗಳನ್ನು ಅಮದ್ರೆ ಅಂತರರಾಷ್ಟ್ರೀಯ + ದೇಶೀಯ ಲೀಗ್‌ಗಳು/ಐಪಿಎಲ್ ಒಳಗೊಂಡಂತೆ, ಭಾರತದ ಅಭಿಷೇಕ್ ಶರ್ಮಾ ವಿಶ್ವದಲ್ಲೇ ಒಂದೇ ವರ್ಷದಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟ್ ಆಗಿದ್ದಾರೆ. ಇದಕ್ಕೂ ಮೊದಲು ರಶೀದ್ ಖಾನ್ (2019) ಮತ್ತು ಶಾದಾಬ್ ಖಾನ್ (2024) ತಲಾ 9 ಡಕ್‌ಗಳೊಂದಿಗೆ ದಾಖಲೆ ಹೊಂದಿದ್ದರು. ಬಟ್ ಬರೀ ಅಂತಾರಾಷ್ಟ್ರೀಯ ಟಿ-20 ಪಂದ್ಯಗಳ ದಾಖಲೆಗಳನ್ನ ನೋಡಿದಾಗ ನಾಲ್ವರು ಪ್ಲೇಯರ್ಸ್ ಮೊದಲ ಸ್ಥಾನದಲ್ಲಿದ್ದಾರೆ. ಅಭಿಷೇಕ್ ಶರ್ಮಾ 7 ಸಲ 2026, ಪಾಕ್ ಆಟಗಾರ ಸೈಮ್ ಅಯೂಬ್ 7 ಸಲ 2025, ರುವಾಂಡಾ ಆಟಗಾರ ಜಾಪಿ ಬಿಮೆನಿಮಾನಾ 7 ಸಲ 2023 ಹಾಗೇ ರುವಾಂಡಾದ ಮತ್ತೊಬ್ಬ ಪ್ಲೇಯರ್ ಒರ್ಚೈಡ್ ತುಯಿಸೆಂಗೆ ಕೂಡ 2023ರದಲ್ಲಿ 7ಸಲ ಡಕ್ ಔಟ್ ಆಗಿದ್ರು. ಸೋ ಅಲ್ಲಿಗೆ ಈ ನಾಲ್ವರೂ ಪ್ಲೇಯರ್ಸ್ ಹೆಸ್ರು ಡಕ್ ಔಟ್ ಲಿಸ್ಟ್ನಲ ಟಾಪ್ನಲ್ಲಿದೆ. ಆದ್ರೆ ಕ್ಯಾಲೆಂಡರ್ ಇಯರ್ನಲ್ಲಿ ಇನ್ನೂ ಮೂರು ತಿಂಗಳು ಬಾಕಿ ಇದ್ದು ಅಭಿಷೇಕ್ ಶರ್ಮಾ ಇನ್ನೊಂದು ಪಂದ್ಯದಲ್ಲಿ ಸೊನ್ನೆ ಸುತ್ತಿದ್ರೆ ಎಲ್ಲರನ್ನೂ ಮೀರಿ ಕೆಟ್ಟ ದಾಖಲೆಯಲ್ಲಿ ತಾನೊಬ್ಬನೇ ನಿಲ್ಲಬೇಕಾಗುತ್ತೆ. ಬಹುಶಃ ಇದಕ್ಕೇ ಇರ್ಬೇಕು ಭಾರತದ ಮಾಜಿ ಆಲ್‌ರೌಂಡರ್ ಸಂದೀಪ್ ಪಾಟೀಲ್ ಅಭಿಷೇಕ್ ರನ್ನು ಬೆಕ್ಕು ಅಂದಿದ್ದು.
ಅಭಿಷೇಕ್ ಶರ್ಮಾ ದೇಶದಲ್ಲಿ ಹುಲಿ.. ವಿದೇಶದಲ್ಲಿ ಬೆಕ್ಕು!
ಭಾರತದ ಪರ ಈಗಾಗ್ಲೇ ಅಭಿಷೇಕ್ ಶರ್ಮಾ ಮತ್ತು ವೈಭವ್ ಸೂರ್ಯವಂಶಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕವೇ ಜಗತ್ತಿನ ಗಮನ ಸೆಳೀತಿದ್ದಾರೆ. ಇವ್ರಿಬ್ಬರ ಬ್ಯಾಟಿಂಗ್ ಶೈಲಿ ಬಗ್ಗೆ ಮಾತ್ನಾಡಿದ್ದ ಸಂದೀಪ್ ಪಾಟೀಲ್ ಎಚ್ಚರಿಕೆಯನ್ನೂ ನೀಡಿದ್ದಾರೆ. ವಿದೇಶಿ ನೆಲದಲ್ಲಿ ಇಬ್ಬರೂ ಆಟಗಾರರ ಬ್ಯಾಟಿಂಗ್ ಫೇಲ್ಯೂರ್ ಹಾಗೇ ಸ್ವಿಂಗ್ ಬೌಲಿಂಗ್ ಎದುರಿಸುವಲ್ಲಿ ಇಬ್ಬರೂ ಎಡವುತ್ತಿದ್ದಾರೆ ಎಂದಿದ್ದಾರೆ. ಅಷ್ಟೇ ಅಲ್ಲ ಭಾರತದಿಂದ ಹೊರಗೆ ಪಂದ್ಯಗಳನ್ನ ಆಡುವಾಗ ಚೆಂಡು ಸ್ವಲ್ಪ ಸ್ವಿಂಗ್ ಆಗಲು ಶುರು ಮಾಡಿದ್ರೆ ಇಬ್ಬರೂ ಸಾಕಷ್ಟು ಸ್ಟ್ರಗಲ್ ಪಡ್ತಾರೆ. ಹೀಗಾಗಿ ಈ ಬಗ್ಗೆ ಎಕ್ಸ್ಟ್ರಾ ವರ್ಕ್ ಮಾಡಲೇಬೇಕು.ಇಲ್ಲದೇ ಇದ್ರೆ ದೇಶದಲ್ಲಿ ಹುಲಿ, ವಿದೇಶದಲ್ಲಿ ಬೆಕ್ಕು ಎನ್ನುವಂತಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಒಟ್ನಲ್ಲಿ ಅಭಿಷೇಕ್ ಶರ್ಮಾ ಪವರ್ ಹಿಟ್ಟರ್. ಪವರ್ ಪ್ಳೇನಲ್ಲೇ ಇಡೀ ಪಂದ್ಯದ ದಿಕ್ಕನ್ನೇ ಬದಲಿಸೋ ಎಬಿಲಿಟಿ ಇದೆ. ಅಟ್ ದಿ ಸೇಮ್ ಟೈಂ ಖಾತೆ ತೆರೆಯದೇ ವಿಕೆಟ್ ಒಪ್ಪಿಸ್ತಿರೋದು ಕೂಡ ಆತಂಕ ಮೂಡಿಸಿದೆ. ಹೀಗಾಗಿ ಅಭಿಷೇಕ್ ಈ ವಿಚಾರದಲ್ಲಿ ಸ್ವಲ್ಪ ಎಕ್ಸ್ಟ್ರಾ ವರ್ಕ್ ಮಾಡಲೇಬೇಕಿದೆ.

ನೋಡಿರಿ
