ಎಮರ್ಜೆನ್ಸಿ ಎಕ್ಸಿಟ್ನಲ್ಲಿ ಮೂವರು ಔಟ್ – ಬಿಗ್ಬಾಸ್ ಮನೆಗೆ ಎಂಟ್ರಿ ಕೊಡ್ತಾರಾ ಗಿಚ್ಚಿ ಗಿಲಿಗಿಲಿ ಪ್ರಶಾಂತ್?
ಕಿಚ್ಚನ ಭೇಟಿಯಾಗದೇ ಹೊರನಡೀತಾರಾ ಮಹಾಕವಿ ಮಂಜ?

ಬಿಗ್ ಬಾಸ್ ಕನ್ನಡ ಸೀಸನ್ 13ನಲ್ಲಿ ಈ ವಾರದಲ್ಲಿ ಮೂವರು ಸ್ಪರ್ಧಿಗಳು ಹೊರನಡೆಯಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಮಹಾಕವಿ ಮಂಜ, ಲಿಖಿತ್ ಜೊತೆ ಇನ್ನೊಬ್ಬ ಸ್ಪರ್ಧಿಯ ಆಟವೂ ಕೂಡಾ ಕೊನೆಗೊಳ್ಳಲಿದೆ. ಜೊತೆಗೆ ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ಗಿಚ್ಚಿಗಿಲಿಗಿಲಿ ಖ್ಯಾತಿಯ ಪ್ರಶಾಂತ್ ಮನೆಯೊಳಗೆ ಎಂಟ್ರಿಯಾಗಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಇದನ್ನೂ ಓದಿ:ಕಿಚ್ಚನ ಕ್ಲಾಸ್ಗೂ ಜಗ್ಗದ ಮಂಜ! – ವೈಷ್ಣವಿ ಜೊತೆ ಮತ್ತೆ ರಂಪಾಟ
ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಈ ಬಾರಿ ಅಂದುಕೊಂಡಷ್ಟು ಚೆನ್ನಾಗಿ ನಡೆಯುತ್ತಿಲ್ಲ. ಹೀಗಾಗಿ ಬಿಗ್ಬಾಸ್ ಮನೆಯಲ್ಲಿ ದಿಢೀರ್ ಬೆಳವಣಿಗೆಯಾಗುವ ನಿರೀಕ್ಷೆಯಿದೆ. ಈ ವಾರ ಎಮರ್ಜೆನ್ಸಿ ಎಕ್ಸಿಟ್ ನಲ್ಲಿ ಮೂವರು ಸ್ಪರ್ಧಿಗಳು ಹೊರಹೋದರೂ ಅಚ್ಚರಿಯೇನಿಲ್ಲ. ಮೂವರ ಪೈಕಿ ಮಹಾಕವಿ ಮಂಜು ಆಟ ಈ ವಾರ ಮುಕ್ತಾಯಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಕಿಚ್ಚ ಸುದೀಪ್ ಅವರನ್ನು ಭೇಟಿಯಾಗದೇ ಮಂಜು ಹೊರಗೆ ಹೋಗಬಹುದು ಎಂದು ವರದಿಯಾಗಿದೆ. ಜೊತೆಗೆ ಲಿಖಿತ್ ಆಟ ಕೂಡಾ ಕೊನೆಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.
ವೈಲ್ಡ್ಕಾರ್ಡ್ ಎಂಟ್ರಿಯಲ್ಲಿ ಹೊಸ ಸ್ಪರ್ಧಿಗಳಾಗಿ ಮೂರು ಜನ ಬರಬಹುದು ಎಂದು ಹೇಳಲಾಗುತ್ತಿದೆ. ನಟಿ ವಿಜಯಲಕ್ಷ್ಮೀ ಮತ್ತು ಗಿಚ್ಚಿ ಗಿಲಿಗಿಲಿ ಖ್ಯಾತಿಯ ಪ್ರಶಾಂತ್ ಗೌಡ ಅವರು ಬಿಗ್ಬಾಸ್ ಮನೆಗೆ ಮನ ಗೆದ್ದಿರುವ ಕಾಮಿಡಿ ಕಲಾವಿದರು. ತಮ್ಮ ಕಾಮಿಡಿ ಟೈಮಿಂಗ್ ಹಾಗೂ ಸಹಜ ನಿರೂಪಣೆಯಿಂದ ಗಮನ ಸೆಳೆದಿರುವ ಅವರು ‘ಕ್ವಾಟ್ಲೆ ಕಿಚನ್’ ಮೊದಲ ಸೀಸನ್ನ ವಿಜೇತರಾಗಿಯೂ ಗುರುತಿಸಿಕೊಂಡಿದ್ದಾರೆ. ಕಿರುತೆರೆಯಲ್ಲಿ ತಮ್ಮದೇ ಆದ ಸ್ಥಾನ ನಿರ್ಮಿಸಿಕೊಂಡಿರುವ ಪ್ರಶಾಂತ್, ಇತ್ತೀಚಿನ ದಿನಗಳಲ್ಲಿ ಉದ್ಯಮ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ತಮ್ಮ ವೃತ್ತಿಜೀವನಕ್ಕೆ ಮತ್ತೊಂದು ಆಯಾಮ ನೀಡಿರುವ ಅವರು ಇತ್ತೀಚೆಗೆ ಸೆಲೆಬ್ರೇಟ್ ಲೈಫ್ ಹೆಸರಿನ ಐಷಾರಾಮಿ ಸಲೂನ್ನ್ನು ಕೂಡ ಆರಂಭಿಸಿದ್ದಾರೆ. ಪ್ರಶಾಂತ್ ಗೌಡ, ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ಸಂಭ್ರಮದ ಬೆನ್ನಲ್ಲೇ ಇದೀಗ ಬಿಗ್ ಬಾಸ್ ಮನೆಗೆ ಎಂಟ್ರಿಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ನೋಡಿರಿ

