ಏಷ್ಯನ್ ಗೇಮ್ಸ್ ನಲ್ಲಿ IND Vs PAK? – ಗೋಲ್ಡನ್ ಮೆಡಲ್ ಗಾಗಿ ಗುದ್ದಾಡ್ತಾರಾ?
2 ಚಾನ್ಸ್.. ಸೋಲ್ತಾರಾ.. ಗೆಲ್ತಾರಾ?

ಏಷ್ಯನ್ ಗೇಮ್ಸ್ ನಲ್ಲಿ IND Vs PAK? – ಗೋಲ್ಡನ್ ಮೆಡಲ್ ಗಾಗಿ ಗುದ್ದಾಡ್ತಾರಾ?2 ಚಾನ್ಸ್.. ಸೋಲ್ತಾರಾ.. ಗೆಲ್ತಾರಾ?

ಏಷ್ಯನ್ ಗೇಮ್ಸ್​ನಲ್ಲಿ ಈಗಾಗ್ಲೇ ಟೀಂ ಇಂಡಿಯಾ ಮಹಿಳಾ ಪಡೆ ಗೋಲ್ಡನ್ ಮೆಡಲ್​ಗೆ ಮುತ್ತಿಟ್ಟಿದೆ. ಲಂಕಾ ತಂಡವನ್ನ ಬೆಂಡೆತ್ತಿ ಚಾಂಪಿಯನ್ಸ್ ಆಗಿದ್ದಾರೆ. ಈಗ ನೆಕ್ಸ್​ಟ್ ಮೆನ್ಸ್ ಟೀಂ ಸರದಿ. ಜಪಾನ್ ವಿರುದ್ಧದ ಮ್ಯಾಚಲ್ಲಿ ಜಸ್ಟ್ ಪಾಸ್ ಆಗಿರೋ ಭಾರತಕ್ಕೆ ಮುಂದಿನ ಪಂದ್ಯಗಳಲ್ಲಿ ಬಿಗ್ ಅಲರ್ಟ್ ಮೆಸೇಜ್ ಅಂತೂ ಸಿಕ್ಕಿದೆ. ಇಂಟ್ರೆಸ್ಟಿಂಗ್ ಅಂದ್ರೆ ಇದೇ ಏಷ್ಯನ್ ಗೇಮ್ಸ್​ನಲ್ಲಿ ಭಾರತಕ್ಕೆ ಪಾಕಿಸ್ತಾನ ಎದುರಾಳಿಯಾಗೋ ಚಾನ್ಸಸ್ ಕೂಡ ಇದೆ.

ಇದನ್ನೂ ಓದಿ : ಯೆಲ್ಲೋ ಆರ್ಮಿಗಿನ್ನು ಜಹೀರ್ ಗುರು – ಬಿದ್ದಿರೋ ಚೆನ್ನೈನಲ್ಲಿ POWER ಬರುತ್ತಾ?

ಪುರುಷರ ಟಿ20 ಕ್ರಿಕೆಟ್ ಪಂದ್ಯಾವಳಿಯು ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 3 ರವರೆಗೆ ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿದೆ. ಸೆಪ್ಟೆಂಬರ್ 28ರಂದು ಭಾರತ ಏಷ್ಯನ್ ಗೇಮ್ಸ್​ನಲ್ಲಿ ತನ್ನ ಮೊದಲ ಪಂದ್ಯ ಆಡಲಿದೆ. ಯಾಕಂದ್ರೆ ಐಸಿಸಿ ರ್ಯಾಂಕಿಂಗ್ ಆಧಾರದ ಮೇಲೆ ಡೈರೆಕ್ಟ್ ಕ್ವಾಟರ್ ಫೈನಲ್​ಗೆ ಸೆಲೆಕ್ಟ್ ಆಗಿದ್ದ ಮುಂದಿನ ಸೋಮವಾರ ಗ್ರೂಪ್ ಎನಲ್ಲಿ ರನ್ನರ್ ಅಪ್ ಆಗಿ ಬರುವ ತಂಡದ ವಿರುದ್ಧ ಅಖಾಡಕ್ಕಿಳಿಯಲಿದೆ. ಌಂಡ್ ಈ ಕ್ವಾರ್ಟರ್ ಫೈನಲ್ ಪಂದ್ಯ ಗೆದ್ರೆ ಅಕ್ಟೋಬರ್ 1ಕ್ಕೆ ಸೆಮಿಫೈನಲ್ ಪಂದ್ಯ ಆಡಲಿದೆ. ಇಲ್ಲೂ ಗೆದ್ರೆ ಅಕ್ಟೋಬರ್ 3ಕ್ಕೆ ಗೋಲ್ಡನ್ ಮೆಡಲ್​ಗಾಗಿ ಫೈನಲ್ ಪಂದ್ಯದಲ್ಲಿ ಪೈಪೋಟಿ ನಡೆಸಲಿದೆ. ಌಂಡ್ ಇಲ್ಲಿ ಇಂಡೋ-ಪಾಕ್ ತಂಡಗಳು ಮುಖಾಮುಖಿಯಾಗೋ ಚಾನ್ಸಸ್ ಕೂಡ ಇದೆ.

ಭಾರತ & ಪಾಕ್ ತಂಡಗಳು ಏಷ್ಯನ್ ಗೇಮ್ಸ್ ನಲ್ಲಿ ಮುಖಾಮುಖಿ ಆಗ್ತಾರಾ?

ಪ್ರಸ್ತುತ ಏಷ್ಯನ್ ಗೇಮ್ಸ್​ನ ಶೆಡ್ಯೂಲ್ ಪ್ರಕಾರ ಭಾರತ ಮತ್ತು ಪಾಕಿಸ್ತಾನ ತಂಡಗಳು ಗ್ರೂಪ್‌ ಹಾಗೂ ಕ್ವಾರ್ಟರ್ ಫೈನಲ್ ಹಂತಗಳಲ್ಲಿದ್ದು ಹಾಗೇ ಸೆಮಿಫೈನಲ್‌ವರೆಗೂ ಉಭಯ ತಂಡಗಳು ಮುಖಾಮುಖಿ ಆಗೋಕೆ ಚಾನ್ಸೇ ಇಲ್ಲ. ಹೀಗಿದ್ರೂ 2 ಪಾಸಿಬಲಿಟೀಸ್ ಇದೆ. ಅದ್ರಲ್ಲಿ ಒಂದು ಭಾರತ ಮತ್ತು ಪಾಕಿಸ್ತಾನ ತಂಡಗಳು   ತಮ್ಮ ತಮ್ಮ ಕ್ವಾರ್ಟರ್ ಫೈನಲ್ ಹಾಗೂ ಅಕ್ಟೋಬರ್ 1 ರಂದು ನಡೆಯಲಿರುವ ಸೆಮಿಫೈನಲ್ ಪಂದ್ಯಗಳಲ್ಲಿ ವಿನ್ ಆಗ್ಬೇಕು. ಆಗ ಮಾತ್ರ ಅಕ್ಟೋಬರ್ 3 ರಂದು ನಡೆಯಲಿರುವ ಬಂಗಾರದ ಪದಕದ ಫೈನಲ್ ಪಂದ್ಯದಲ್ಲಿ ಬದ್ಧವೈರಿಗಳು ಮುಖಾಮುಖಿ ಆಗ್ತಾರೆ. ಅಥವಾ ಇನ್ನೂ ಒಂದು ಚಾನ್ಸ್ ಇದೆ. ಒಂದು ವೇಳೆ ಎರಡೂ ತಂಡಗಳು ಸೆಮಿಫೈನಲ್ ಹಂತಕ್ಕೆ ತಲುಪಿ, ಅಲ್ಲಿ ತಮ್ಮ ತಮ್ಮ ಎದುರಾಳಿಗಳ ವಿರುದ್ಧ ಸೋತರೆ, ಅಕ್ಟೋಬರ್ 3 ರಂದೇ ನಡೆಯಲಿರುವ ಕಂಚಿನ ಪದಕದ Bronze Medal  ಪಂದ್ಯದಲ್ಲಿ ಮುಖಾಮುಖಿಯಾಗ್ತಾರೆ.

ಐಸಿಸಿ ಶ್ರೇಯಾಂಕದ ಆಧಾರದಲ್ಲಿ ನೇರವಾಗಿ ಕ್ವಾರ್ಟರ್ ಫೈನಲ್!

ಅಷ್ಟಕ್ಕೂ ಇಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಗ್ರೂಪ್ ಹಂತದ ಪಂದ್ಯಗಳನ್ನ ಆಡಲ್ಲ. ಯಾಕಂದ್ರೆ ಐಸಿಸಿ ಟಿ20 ರ್ಯಾಂಕಿಂಗ್ ಆಧಾರದ ಮೇಲೆ ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಈ ನಾಲ್ಕೂ ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್ ಹಂತಕ್ಕೆ ಅರ್ಹತೆ ಪಡೆದಿವೆ. ಸೆಪ್ಟೆಂಬರ್ 28 ರಂದು ಭಾರತ & ಪಾಕ್ ತಂಡಗಳು ತಮ್ಮ ಕ್ವಾರ್ಟರ್ ಫೈನಲ್ ಪಂದ್ಯಗಳನ್ನು ಆಡಲಿವೆ. ಅಲ್ಲಿಂದ ಇವ್ರ ಜರ್ನಿ ಸ್ಟಾರ್ಟ್ ಆಗಲಿದೆ. ಆರಂಭಿಕ ಹಂತದಲ್ಲಿ ಭಾರತ-ಪಾಕ್ ತಂಡಗಳು ಬೇರೆ ಬೇರೆ ತಂಡಗಳ ವಿರುದ್ಧ ಆಡಬೇಕಿರುವುದರಿಂದ, ಟೂರ್ನಿಯ ಆರಂಭದಲ್ಲೇ ಭಾರತ-ಪಾಕಿಸ್ತಾನ ಪಂದ್ಯ ನಡೆಯುವುದಿಲ್ಲ. ಅಕ್ಟೋಬರ್ 1 ರಂದು ತಮ್ಮ ತಮ್ಮ ಸೆಮಿಫೈನಲ್ ಪಂದ್ಯಗಳಲ್ಲಿ ಇಬ್ಬರೂ ಗೆದ್ರೆ ಮಾತ್ರ ಫೈನಲ್ ನಲ್ಲಿ ಎದುರು ಬದುರಾಗ್ತಾರೆ. ಇಲ್ದಿದ್ರೆ ಇಬ್ಬರೂ ಸೆಮಿಫೈನಲ್‌ನಲ್ಲಿ ಸೋತರೆ ಕಂಚಿನ ಪದಕಕ್ಕಾಗಿ ಹೋರಾಡ್ತಾರೆ.  ಇನ್ನು ಈ ಟೂರ್ನಿಗೆ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಭಾರತ ತಂಡ ಅಖಾಡಕ್ಕಿಳಿದ್ರೆ ಪಾಕಿಸ್ತಾನ ತಂಡವು ಸಾಹಿಬ್ಜಾದಾ ಫರ್ಹಾನ್ ನಾಯಕತ್ವದಲ್ಲಿ ಯುವ ಆಟಗಾರರ ದಂಡನ್ನು ಕಣಕ್ಕಿಳಿಸಿದೆ.

Shantha Kumari

Leave a Reply

Your email address will not be published. Required fields are marked *