ಯೆಲ್ಲೋ ಆರ್ಮಿಗಿನ್ನು ಜಹೀರ್ ಗುರು – ಬಿದ್ದಿರೋ ಚೆನ್ನೈನಲ್ಲಿ POWER ಬರುತ್ತಾ?
3 ಸೀಸನ್.. ಪ್ಲೇಆಫ್ಸ್ ಫೇಲ್.. 2027?

ಯೆಲ್ಲೋ ಆರ್ಮಿಗಿನ್ನು ಜಹೀರ್ ಗುರು – ಬಿದ್ದಿರೋ ಚೆನ್ನೈನಲ್ಲಿ POWER ಬರುತ್ತಾ?3 ಸೀಸನ್.. ಪ್ಲೇಆಫ್ಸ್ ಫೇಲ್.. 2027?

ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಯಾರಾಗ್ತಾರೆ ಹೆಡ್ ಕೋಚ್ ಅನ್ನೋ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಟೀಂ ಇಂಡಿಯಾದ ಮಾಜಿ ಸ್ಟಾರ್ ಝಹೀರ್ ಖಾನ್ ರನ್ನು ಕೋಚ್ ಆಗಿ ಫ್ರಾಂಚೈಸಿ ನೇಮಕ ಮಾಡಿದೆ. ಕಳೆದ ಮೂರು ಆವೃತ್ತಿಗಳಿಂದ ಪ್ಲೇಆಫ್ ಗೂ ಕಾಲಿಡದ ಸಿಎಸ್ ಕೆಗೆ ಜಹೀರ್ ಖಾನ್ ಶಕ್ತಿ ತುಂಬುತ್ತಾರಾ ಅನ್ನೋ ಬಗ್ಗೆ ಪ್ರಶ್ನೆ ಮೂಡಿದೆ.

ಇದನ್ನೂ ಓದಿ : ಚಿನ್ನಕ್ಕಾಗಿ ಭಾರತ vs ಶ್ರೀಲಂಕಾ ಫೈಟ್ ! – ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ

ಸಿಎಸ್​ಕೆ ಪರ 17 ವರ್ಷಗಳ ಕಾಲ ಕೋಚ್​ ಆಗಿದ್ದ ಸ್ಟೀಫನ್ ಫ್ಲೆಮಿಂಗ್ ಐಪಿಎಲ್ 2026ರ ಬಳಿಕ  ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಇಂಗ್ಲೆಂಡ್ ತಂಡದ ಟೆಸ್ಟ್ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೆ ಚೆನ್ನೈ ಸೂಪರ್ ಕಿಂಗ್ಸ್ ಹೊಸ ಕೋಚ್ ರೇಸ್ ನಲ್ಲಿ ಸಾಕಷ್ಟು ಹೆಸರುಗಳು ಕೇಳಿ ಬಂದಿದ್ವು. ಇದೀಗ ಅನುಭವಿ ಬೌಲರ್ ಜಹೀರ್ ಖಾನ್ ಅವರಿಗೆ ಈ ಜವಾಬ್ದಾರಿಯನ್ನು ನೀಡಲಾಗಿದೆ.

ಜಹೀರ್ ಗೆ ಫುಲ್ ಫ್ರೀಡಂ ನೀಡಿದ ಚೆನ್ನೈ ಫ್ರಾಂಚೈಸಿ!

ಚೆನ್ನೈ ತಂಡದ ಕೋಚ್ ಆದ ಬಳಿಕ ಜಹೀರ್ ಖಾನ್ ಅವರಿಗೆ ಫ್ರಾಂಚೈಸಿ ಫುಲ್ ಫ್ರೀಡಂ ನೀಡಲು ಮುಂದಾಗಿದೆ. ಅಂದ್ರೆ ತಮ್ಮ ಕೋಚಿಂಗ್ ವಿಭಾಗವನ್ನು ತಮ್ಮಿಷ್ಟದಂತೆ ರಚಿಸಲು  ಪೂರ್ಣ ಸ್ವಾತಂತ್ರ್ಯ ನೀಡಿದೆ. ತಮಗೆ ಬೇಕಾದವರನ್ನು ಸಹಾಯಕ ಸಿಬ್ಬಂದಿಯಾಗಿ ನೇಮಿಸಿಕೊಳ್ಳಬಹುದಾಗಿದೆ. ಸದ್ಯ ದೇಶೀಯ ಕೋಚ್‌ಗಳಾದ ಶ್ರೀಧರನ್ ಶ್ರೀರಾಮ್ ಮತ್ತು ರಾಜೀವ್ ಕುಮಾರ್ ಅವರ ಮುಂದುವರೆಯುವ ಸಾಧ್ಯತೆಯಿದೆ. ಬ್ಯಾಟಿಂಗ್ ಕೋಚ್ ಮಾತ್ರ ಬದಲಾಗುವ ಸಾಧ್ಯತೆ ಇದೆ. ಸದ್ಯ ಮೈಕೆಲ್ ಹಸ್ಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ಕೋಚ್ ಆಗಿದ್ದು ಫ್ಲೆಮಿಂಗ್ ಹೊರ ನಡೆದಿರೋದ್ರಿಂದ ಅವ್ರೂ ಕೂಡ ಉಳಿಯೋದು ಡೌಟ್ ಇದೆ.  ಬಟ್ ನೂತನ ಕೋಚ್ ಜಹೀರ್ ಮಾತ್ರ ಫುಲ್ ಎಕ್ಸ್​ಟೈಟ್ ಆಗಿದ್ದಾರೆ. ಈ ಬಗ್ಗೆ ಮಾತನಾಡಿರೋ ಜಹೀರ್, ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾದ ಚೆನ್ನೈ ಸೂಪರ್​ ಕಿಂಗ್ಸ್​ ಭಾಗವಾಗಲು ಪ್ರೌಡ್ ಫೀಲ್ ಆಗ್ತಿದೆ. ಒಬ್ಬ ಕ್ರಿಕೆಟಿಗನಾಗಿ ನಾನು ಸಿಎಸ್‌ಕೆ ತಂಡದ ವಿರುದ್ದ ಪಂದ್ಯಗಳನ್ನು ಆಡಿದ್ದೇನೆ ಮತ್ತು ಆನಂದಿಸಿದ್ದೇನೆ. ಇದೀಗ ಈ ದೊಡ್ಡ ಫ್ರಾಂಚೈಸಿಯ ಭಾಗವಾಗುತ್ತಿರುವುದು ಖುಷಿ ತಂದಿದೆ ಎಂದಿದ್ದಾರೆ. ಆದ್ರೆ ಅದೇ ಟೈಮಲ್ಲಿ ಅವ್ರಿಗೆ ಸಾಕಷ್ಟು ಸವಾಲೂಗಳೂ ಇವೆ.

ಕಳೆದ ಮೂರು ಆವೃತ್ತಿಗಳಲ್ಲೂ ಲೀಗ್ ಹಂತದಲ್ಲೇ ಔಟ್!

ಐಪಿಎಲ್‌ನ ಕಳೆದ ಮೂರು ಸೀಸನ್‌ಗಳಲ್ಲಿ (2024, 2025 ಮತ್ತು 2026) ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರದರ್ಶನ ಅಷ್ಟಕ್ಕಷ್ಟೇ ಇದೆ. ಕಳೆದ ಮೂರೂ ಸೀಸನ್‌ನಲ್ಲೂ ಪ್ಲೇಆಫ್‌ ಹಂತಕ್ಕೆ ಅರ್ಹತೆ ಪಡೆಯಲು ಸಾಧ್ಯವಾಗಿಲ್ಲ. 2024 ರಲ್ಲಿ ನಾಯಕತ್ವದ ಬದಲಾವಣೆಯಾಗಿ ರುತುರಾಜ್ ಗಾಯಕ್ವಾಡ್ ತಂಡದ ಚುಕ್ಕಾಣಿ ಹಿಡಿದ ನಂತರದ ಮೂರೂ ವರ್ಷಗಳಲ್ಲಿ ಸಿಎಸ್‌ಕೆ ಲೀಗ್ ಹಂತದಲ್ಲೇ ಹೊರಬಿದ್ದಿದೆ. 2024ರಲ್ಲಿ 5ನೇ ಸ್ಥಾನದಲ್ಲಿ ಲೀಗ್ ಮುಗಿಸಿದ್ರೆ 2025ರಲ್ಲಿ 10ನೇ ಸ್ಥಾನದಲ್ಲಿತ್ತು. ಇನ್ನು 2026ರಲ್ಲಿ 8ನೇ ಸ್ಥಾನ ಪಡೆದಿದೆ. ಹೀಗಾಗಿ ಜಹೀರ್​ ಕೋಚ್ ಆಗಿ ತಂಡವನ್ನ ಮೇಲೆತ್ತ ಬೇಕಾದ ಸವಾಲೂ ಇದೆ.

Shantha Kumari

Leave a Reply

Your email address will not be published. Required fields are marked *