ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್ನಲ್ಲಿ ಚಿನ್ನ ಗೆದ್ದ ಭಾರತ – ದಾಖಲೆ ಬರೆದ ಕೌರ್ ಪಡೆ

ಏಷ್ಯನ್ ಗೇಮ್ಸ್ ಫೈನಲ್ನಲ್ಲಿ ಟೀಮ್ ಇಂಡಿಯಾ ಮಹಿಳಾ ಟೀಮ್ ಇತಿಹಾಸ ಬರೆದಿದೆ. ಏಷ್ಯನ್ ಗೇಮ್ಸ್ ಮಹಿಳಾ ಟಿ20 ಟೂರ್ನಿಯ ಫೈನಲ್ನಲ್ಲಿ ಭಾರತ ಚಿನ್ನ ಗೆದ್ದಿದೆ.
ಇದನ್ನೂ ಓದಿ:CSKಗೆ ಹೊಸ ಕೋಚ್ ಆಯ್ಕೆ ! – ಸ್ಟೀಫನ್ ಫ್ಲೆಮಿಂಗ್ ಜಾಗಕ್ಕೆ ಜಹೀರ್ ಖಾನ್
ಜಪಾನ್ನ ಐಚಿ ಪ್ರಿಫೆಕ್ಚರಲ್ ಕೊರೊಗಿ ಸ್ಪೋರ್ಟ್ಸ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2026ರ ಮಹಿಳಾ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕೌರ್ ಪಡೆ ಇತಿಹಾಸ ಸೃಷ್ಟಿಸಿದೆ. ಶ್ರೀಲಂಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 20 ಓವರ್ಗಳಲ್ಲಿ 216 ರನ್ಗಳ ಬೃಹತ್ ಮೊತ್ತ ಕಲೆಹಾಕಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕಿ ಹರ್ಮನ್ಪ್ರೀತ್ ಕೌರ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಸ್ಫೋಟಕ ಜೊತೆಯಾಟ ಆಡಿದರು. ಭಾರತದ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನಾ ಅರ್ಧಶತಕ ಸಿಡಿಸಿದರು. 45 ಎಸೆತಗಳಲ್ಲಿ 79 ರನ್ ಗಳಿಸಿದ ಮಂಧಾನಾ, 5 ಬೌಂಡರಿ ಮತ್ತು 7 ಸಿಕ್ಸರ್ಗಳನ್ನು ಸಿಡಿಸಿದರು. ಶಫಾಲಿ ವರ್ಮಾ 29 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 3 ಬೌಂಡರಿ ಒಳಗೊಂಡ 48 ರನ್ ಗಳಿಸಿ ಕೇವಲ 2 ರನ್ಗಳಿಂದ ಅರ್ಧಶತಕ ವಂಚಿತರಾಗಿ ಔಟಾದರು.
ವಿಕೆಟ್ಕೀಪರ್ ರಿಚಾ ಘೋಷ್ ಬೊಂಬಾಟ್ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 22 ಎಸೆತಗಳನ್ನು ಎದುರಿಸಿದ ರಿಚಾ, 6 ಬೌಂಡರಿ ಮತ್ತು 3 ಭರ್ಜರಿ ಸಿಕ್ಸರ್ಗಳೊಂದಿಗೆ 49 ರನ್ ಸಿಡಿಸಿದರು. ಭಾರತ ತಂಡ 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 216 ರನ್ಗಳ ಬೃಹತ್ ಮೊತ್ತ ಕಲೆಹಾಕಿದೆ. ಈ ಮೂಲಕ ಏಷ್ಯನ್ ಗೇಮ್ಸ್ ಮಹಿಳಾ ಟಿ20 ಟೂರ್ನಿಯ ಫೈನಲ್ನಲ್ಲಿ ಟೀಮ್ ಇಂಡಿಯಾ ಹೊಸ ದಾಖಲೆ ಬರೆದಿದೆ. ಜೊತೆಗೆ ತನ್ನದೇ ದಾಖಲೆಯನ್ನು ಬ್ರೇಕ್ ಮಾಡಿದೆ. ಈ ಹಿಂದೆ ಬಾಂಗ್ಲಾದೇಶ್ ವಿರುದ್ಧ ಬಾರಿಸಿದ್ದ 195 ರನ್ಗಳ ದಾಖಲೆಯನ್ನು ಮುರಿದು ಭಾರತ ಹೊಸ ಇತಿಹಾಸ ನಿರ್ಮಿಸಿದೆ.
217 ರನ್ಗಳ ಗುರಿ ಪಡೆದ ಶ್ರೀಲಂಕಾ ಪಡೆ, ಭಾರತದ ಬೌಲಿಂಗ್ ದಾಳಿ ಎದುರಿಸಲು ವಿಫಲವಾಯಿತು. 69 ರನ್ಗಳಿಗೆ ಆಲೌಟ್ ಆಗುವ ಮೂಲಕ ಲಂಕಾ ಮಹಿಳಾ ತಂಡ ಭಾರತ ತಂಡದ ಮುಂದೆ ಸೋಲುಪ್ಪಿಕೊಂಡಿದೆ. ಭಾರತ ಮಹಿಳಾ ತಂಡ ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ನೋಡಿರಿ

