ಟೀಂ ಇಂಡಿಯಾ 11 Vs ವರ್ಲ್ಡ್ XI – ಬಲಿಷ್ಠರು Vs ಶ್ರೇಷ್ಠರ ಕಾಳಗ ಹೇಗಿರುತ್ತೆ?
ODI & T20I ಫೈಟ್ ನಲ್ಲಿ ಯಾರೆಲ್ಲಾ?

ಟೀಂ ಇಂಡಿಯಾ 11 Vs ವರ್ಲ್ಡ್ XI – ಬಲಿಷ್ಠರು Vs ಶ್ರೇಷ್ಠರ ಕಾಳಗ ಹೇಗಿರುತ್ತೆ?ODI & T20I ಫೈಟ್ ನಲ್ಲಿ ಯಾರೆಲ್ಲಾ?

ವಿಶ್ವಕ್ರಿಕೆಟ್​ನಲ್ಲಿ ಟೀಂ ಇಂಡಿಯಾ ದಿ ಬೆಸ್ಟ್ ಟೀಂ. ಮತ್ತೊಂದ್ಕಡೆ ಜಗತ್ತಿನ ಬೇರೆ ಬೇರೆ ತಂಡಗಳಲ್ಲೂ ವಿಶ್ವಶ್ರೇಷ್ಠ ಆಟಗಾರರಿದ್ದಾರೆ. ಈಗ ಭಾರತದ ಬಲಿಷ್ಠರು ವರ್ಸಸ್ ವಿಶ್ವಶ್ರೇಷ್ಠರ ನಡುವಿನ ಹೈವೋಲ್ಟೇಜ್ ಕಾಳಗಕ್ಕೆ ಬಿಸಿಸಿಐ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಬ್ಲಾಕ್ ಬಸ್ಟರ್ ಪಂದ್ಯ ಆಯೋಜನೆಗೆ ವೇದಿಕೆ ಸಿದ್ಧವಾಗ್ತಿದೆ.

ಇದನ್ನೂ ಓದಿ : ವೈಭವ್ ಸಂಬಳ ₹4 ಕೋಟಿ? – ಕೋಟಿ ಕೋಟಿ ದುಡಿದ್ರೂ ಕೈಗೆ ಸಿಗಲ್ಲ?

ವಿಶ್ವಕ್ರಿಕೆಟ್​ನಲ್ಲಿ ಬಾಸ್ ಆಗಿರೋ ಬಿಸಿಸಿಐ ಈಗ ಕ್ರಿಕೆಟ್​ನಲ್ಲಿ ಹಿಂದೆಂದೂ ನಡೆಯದ ಮಹಾಚರಿತ್ರೆಯನ್ನ ಸೃಷ್ಟಿಸೋಕೆ ಸಿದ್ಧವಾಗ್ತಿದೆ. ಬಿಸಿಸಿಐ ತನ್ನ 100ನೇ ವರ್ಷದ ಸಂಭ್ರಮಾಚರಣೆಗೆ ಹೊಸ ಹೆಜ್ಜೆಇಟ್ಟಿದೆ. ಅಂದ್ರೆ ಭಾರತ ತಂಡ ಹಾಗೇ ವಿಶ್ವ ಇಲೆವೆನ್ ನಡುವೆ ಒಂದು ಬ್ಲಾಕ್‌ಬಸ್ಟರ್ ಪಂದ್ಯ ಆಯೋಜನೆ ಮಾಡೋಕೆ ಮುಂದಾಗಿದೆ. ಕಳೆದ ಶುಕ್ರವಾರ ಬಿಸಿಸಿಐನ 95ನೇ ವಾರ್ಷಿಕ ಮಹಾಸಭೆಯಲ್ಲಿ ಈ ಬಗ್ಗೆ ಅಫಿಶಿಯಲ್ ಆಗಿಯೇ ಪ್ರಸ್ತಾವನೆ ಸಲ್ಲಿಕೆಯಾಗಿದೆ. 1928ರಲ್ಲಿ ಸ್ಥಾಪನೆಯಾದ ಬಿಸಿಸಿಐ, 2028ಕ್ಕೆ 100 ವರ್ಷಗಳನ್ನು ಪೂರೈಸಲಿದೆ. ಈ ಐತಿಹಾಸಿಕ ಶತಮಾನೋತ್ಸವದ ಆಚರಣೆಗಳು ಡಿಸೆಂಬರ್ 2027 ರಿಂದ ಆರಂಭವಾಗಿ ಇಡೀ 2028ರ ವರ್ಷವಿಡೀ ನಡೆಯಲಿವೆ. ಹಾಗೇ ವನ್ನ ಕ್ರಿಕೆಟ್ ಇತಿಹಾಸದಲ್ಲಿ ಎಂದೆಂದೂ ಉಳಿಯುವಂಥ ಪಂದ್ಯಗಳ ಆಯೋಜನೆಗೆ ಮುಂದಾಗಿದೆ.

ಒಂದು ಟಿ-20ಐ ಹಾಗೇ ಒಂದು ಏಕದಿನ ಮಾದರಿ ಪಂದ್ಯಕ್ಕೆ ಪ್ಲ್ಯಾನ್!

ಪ್ರಸ್ತುತ ಬಿಸಿಸಿಐ ಈ ಶತಮಾನೋತ್ಸವದ ಮೇಲ್ವಿಚಾರಣೆಗಾಗಿ ವಿಶೇಷ ಸಮಿತಿಯೊಂದನ್ನು ರಚಿಸಲಿದ್ದು, ಅದಾದ ಬಳಿಕ ಮ್ಯಾಚ್ ಡೇಟ್, ಫಾರ್ಮೆಟ್ ಮತ್ತು ಆಟಗಾರರ ಲಿಸ್ಟ್​ನ ಫೈನಲ್ ಮಾಡಲಿದೆ. ಇತ್ತೀಚಿನ ವರದಿಗಳ ಪ್ರಕಾರ  100ನೇ ವರ್ಷದ ಸಂಭ್ರಮಾಚರಣೆಯ ಭಾಗವಾಗಿ ಒಂದು ಏಕದಿನ ಮತ್ತು ಒಂದು ಟಿ20 ಪಂದ್ಯವನ್ನು ನಡೆಸುವ ಸಾಧ್ಯತೆಗಳಿವೆ. ವಿಶ್ವದ ಅತ್ಯಂತ ಬಲಿಷ್ಠ ಕ್ರಿಕೆಟ್ ಮಂಡಳಿಯಾದ ಬಿಸಿಸಿಐ, ಜಗತ್ತಿನ ಘಟಾನುಘಟಿ ಆಟಗಾರರನ್ನು ಒಳಗೊಂಡ ‘ವಿಶ್ವ ಇಲೆವೆನ್’ ತಂಡವನ್ನು ಭಾರತಕ್ಕೆ ಆಹ್ವಾನಿಸಿ ಕ್ರೀಡಾ ಹಬ್ಬವನ್ನು ಸೃಷ್ಟಿಸಲು  ಸಿದ್ಧತೆ ನಡೆಸುತ್ತಿದೆ. ಅದೂ ಅಲ್ದೇ ಭಾರತೀಯ ಪುರುಷರ ಕ್ರಿಕೆಟ್ ತಂಡವು ಇದುವರೆಗೆ ಐಸಿಸಿ  ಮಾನ್ಯತೆ ಪಡೆದ ಯಾವುದೇ ಅಧಿಕೃತ ಅಂತರರಾಷ್ಟ್ರೀಯ ಪಂದ್ಯವನ್ನು ‘ಐಸಿಸಿ ವರ್ಲ್ಡ್ ಇಲೆವೆನ್’ ವಿರುದ್ಧ ಆಡಿಲ್ಲ. ಇದೇ ಕಾರಣಕ್ಕೆ ಬಿಸಿಸಿಐ ಪ್ರಸ್ತಾವನೆ ಮಾಡಿರುವ ಈ ಶತಮಾನೋತ್ಸವದ ಪಂದ್ಯವು ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಅಪರೂಪದ ಮತ್ತು ಐತಿಹಾಸಿಕ ಕ್ಷಣವಾಗಲಿದೆ. ಌಂಡ್ ಇಲ್ಲಿ ಭಾರತ ತಂಡವು ನೇರವಾಗಿ ವರ್ಲ್ಡ್ ಇಲೆವೆನ್ ವಿರುದ್ಧ ಆಡದಿದ್ದರೂ, ಭಾರತದ ಪ್ರಮುಖ ಆಟಗಾರರು ಬೇರೆ ದೇಶಗಳ ವಿರುದ್ಧ ನಡೆದ ಪಂದ್ಯಗಳಲ್ಲಿ ‘ವಿಶ್ವ ಇಲೆವೆನ್’ ತಂಡದ ಭಾಗವಾಗಿ ಆಡಿದ್ದಾರೆ. 2018ರಲ್ಲಿ ಲಾರ್ಡ್ಸ್ ಮೈದಾನದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಚಾರಿಟಿ ಟಿ20 ಪಂದ್ಯದಲ್ಲಿ ಭಾರತದ ದಿನೇಶ್ ಕಾರ್ತಿಕ್ ಮತ್ತು ಹಾರ್ದಿಕ್ ಪಾಂಡ್ಯ ಅವರು ಐಸಿಸಿ ರೆಸ್ಟ್ ಆಫ್ ದಿ ವರ್ಲ್ಡ್ XI ತಂಡವನ್ನು ಪ್ರತಿನಿಧಿಸಿದ್ದರು. ಹಾಗೇನಾದ್ರೂ 2027-2028ರ ಬಿಸಿಸಿಐ ಶತಮಾನೋತ್ಸವದ ವೇಳೆ ಈ ಪಂದ್ಯಕ್ಕೆ ಐಸಿಸಿ ಅಧಿಕೃತ ಅಂತರರಾಷ್ಟ್ರೀಯ ಟಿ20 ಅಥವಾ ಏಕದಿನ ಪಂದ್ಯದ ಮಾನ್ಯತೆ ನೀಡಿದ್ದೇ ಆದ್ರೆ ಭಾರತ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಅಧಿಕೃತ ಇಂಡಿಯಾ 11 ವರ್ಸಸ್ ವರ್ಲ್ಡ್ XI  ಫೈಟ್ ಆಗಲಿದೆ. ಅಭಿಮಾನಿಗಳು ಹಿಂದೆಂದೂ ಕಂಡಿರದ ರಣರೋಚಕ ಪಂದ್ಯಕ್ಕೆ ಸಾಕ್ಷಿಯಾಗಲಿದ್ದಾರೆ.

Shantha Kumari

Leave a Reply

Your email address will not be published. Required fields are marked *