ಬಲಿಷ್ಠ ಭಾರತಕ್ಕೆ ಜಪಾನ್ ಲೆಕ್ಕನಾ? – ಫಸ್ಟ್ ಬ್ಯಾಟಿಂಗ್ ಸಿಕ್ರೆ 300+ ರನ್ಸ್?
ಪ್ಲೇಯಿಂಗ್ 11 ಟ್ವಿಸ್ಟ್ ಕೊಟ್ಟ BCCI

ಬಲಿಷ್ಠ ಭಾರತಕ್ಕೆ ಜಪಾನ್ ಲೆಕ್ಕನಾ? – ಫಸ್ಟ್ ಬ್ಯಾಟಿಂಗ್ ಸಿಕ್ರೆ 300+ ರನ್ಸ್?ಪ್ಲೇಯಿಂಗ್ 11 ಟ್ವಿಸ್ಟ್ ಕೊಟ್ಟ BCCI

ಅಫ್ಘಾನಿಸ್ತಾನ ವಿರುದ್ಧದ ಟಿ-20ಐ ಸರಣಿಯನ್ನ ಭರ್ಜರಿಯಾಗಿ ಗೆದ್ದಿರೋ ಟೀಂ ಇಂಡಿಯಾ ಸಾಲಿಡ್ ಫಾರ್ಮ್​ನಲ್ಲಿದೆ. ಈಗ ಏಷ್ಯನ್ ಗೇಮ್ಸ್​ ಮೆಡಲ್ ಮೇಲೂ ಕಣ್ಣಿಟ್ಟಿದ್ದು ಭಾರತವೇ ಇಲ್ಲೂ ಗೆಲ್ಲುವಂಥ ಫೇವರೆಟ್ ಟೀಂ. ಆದ್ರೆ ಅಫಿಶಿಯಲ್ ಆಗಿ ಭಾರತದ ಜರ್ನಿ ಸ್ಟಾರ್ಟ್ ಆಗೋ ಮುನ್ನ ಜಪಾನ್ ವಿರುದ್ಧ ಒಂದು ಟಿ-20ಐ ಮ್ಯಾಚ್​ ಆಡ್ಬೇಕಿದೆ.

ಇದನ್ನೂ ಓದಿ : BCCI ಕ್ಯಾಂಪ್ ಗೆ ಸಚಿನ್, ದ್ರಾವಿಡ್? – ಭಾರತ ಕ್ರಿಕೆಟ್ ನಲ್ಲಿ ದಿಗ್ಗಜರ ಕ್ರಾಂತಿ 

ಒಂದ್ಕಡೆ ಟಿ-20 ವಿಶ್ವಕಪ್​ನಲ್ಲಿ ಬ್ಯಾಕ್ ಟು ಬ್ಯಾಕ್ ಚಾಂಪಿಯನ್ಸ್ ಆಗಿರೋ ಟೀಂ ಇಂಡಿಯಾದ ಬಲಿಷ್ಠ ಪಡೆ.. ಮತ್ತೊಂದ್ಕಡೆ ಕ್ರಿಕೆಟ್ ಫೀಲ್ಡಲ್ಲಿ ಈಗಷ್ಟೇ ಅಂಬೆಗಾಲಿಡುತ್ತಾ ಬೆಳೆಯುತ್ತಿರೋ ಕ್ರಿಕೆಟ್ ಶಿಶು ಜಪಾನ್ ಇನ್ನೊಂದ್ಕಡೆ. ಈಗ ಬಲಿಷ್ಠರು ವರ್ಸಸ್ ಶಿಶುಗಳ ನಡುವಿನ ಕಾಳಗಕ್ಕೆ ಕೌಂಟ್​ಡೌನ್ ಸ್ಟಾರ್ಟ್ ಆಗಿದೆ. ನಾಳೆ ಭಾರತ ಮತ್ತು ಜಪಾನ್ ನಡುವೆ ಐತಿಹಾಸಿಕ ಟಿ20 ಪಂದ್ಯ ನಡೆಯಲಿದೆ. ಭಾರತೀಯ ಕಾಲಮಾನ ಮಂಗಳವಾರ ಬೆಳಗ್ಗೆ 9.30ಕ್ಕೆ ಈ ಪಂದ್ಯ ಆರಂಭ ಆಗಲಿದೆ. ಭಾರತ ಹಾಗೂ ಜಪಾನ್ ದೇಶಗಳ ನಡುವಿನ 75 ವರ್ಷಗಳ ಡಿಪ್ಲೊಮೇಟಿಕ್ ರಿಲೇಷನ್​ಶಿಪ್ ನೆನಪಿಗಾಗಿ ಹಾಗೇ ಜಪಾನ್‌ನಲ್ಲಿ ಕ್ರಿಕೆಟ್​ಗೆ ಸಪೋರ್ಟ್ ನೀಡೋ ಉದ್ದೇಶದಿಂದ ಸ್ಪೋರ್ಟ್ 75  ಸರಣಿಯ ಅಡಿಯಲ್ಲಿ ಏಕೈಕ ಟಿ20 ವಿಶೇಷ ಪಂದ್ಯವನ್ನ ಆಯೋಜನೆ ಮಾಡ್ಲಾಗಿದೆ. ಸೀನಿಯರ್ ಪುರುಷರ ಅಂತರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ಭಾರತ ಮತ್ತು ಜಪಾನ್ ಮುಖಾಮುಖಿಯಾಗುತ್ತಿರುವುದು ಇದೇ ಮೊದಲು. ಹೀಗಿದ್ರೂ ಈ ಪಂದ್ಯದ ಬಗ್ಗೆ ಇಡೀ ಕ್ರಿಕೆಟ್ ಜಗತ್ತೇ ಕ್ಯೂರಿಯಸ್ ಆಗಿದೆ.

ಫಸ್ಟ್ ಬ್ಯಾಟಿಂಗ್ ಸಿಕ್ರೆ ಭಾರತದಿಂದ 300+ ಟಾರ್ಗೆಟ್ ಪಕ್ಕಾ?

ಜಪಾನ್ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಸದಸ್ಯ ರಾಷ್ಟ್ರದೊಂದಿಗೆ ಟಿ20ಐ ಪಂದ್ಯವನ್ನು ಆಯೋಜಿಸುತ್ತಿದೆ. ಏಕೈಕ ಟಿ20ಐ ಪಂದ್ಯವು ಸಾನೋ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಐಸಿಸಿ ಪುರುಷರ ಏಕದಿನ ತಂಡ ಶ್ರೇಯಾಂಕದಲ್ಲಿ ಭಾರತ ಪ್ರಸ್ತುತ 269 ರೇಟಿಂಗ್‌ನೊಂದಿಗೆ 2 ನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಜಪಾನ್ ಪ್ರಸ್ತುತ ಐಸಿಸಿ ಪುರುಷರ ಏಕದಿನ ತಂಡ ಶ್ರೇಯಾಂಕದಲ್ಲಿ 74 ರೇಟಿಂಗ್‌ನೊಂದಿಗೆ 41 ನೇ ಸ್ಥಾನದಲ್ಲಿದೆ. ಟಿ-20ಐ ಫಾರ್ಮೆಟ್​ನಲ್ಲಿ ಭಾರತದ ಯಂಗ್ ಇಂಡಿಯಾ ಬ್ಯಾಟಿಂಗ್​ ವಿಭಾಗದಲ್ಲಿ ವರ್ಲ್ಡ್ ಮೋಸ್ಟ್ ಡೇಂಜರಸ್ ಟೀಂ ಆಗಿದೆ. ಒಂದ್ಕಡೆ ಕ್ಲಾಸಿಸ್ ಸಂಜು ಸ್ಯಾಮ್ಸನ್, ಇನ್ನೊಂದ್ಕಡೆ ಸುನಾಮಿ ಬ್ಯಾಟರ್ ಅಭಿಷೇಕ್ ಶರ್ಮಾ ಮತ್ತೊಂದೆಡೆ ಸ್ಫೋಟಕ ಹಿಟ್ಟರ್ ವೈಭವ್ ಸೂರ್ಯವಂಶಿ, ಪಾಕೆಟ್ ಡೈನಮೋ ಇಶಾನ್ ಕಿಶನ್ ಹೀಗೆ ಭಾರತದ ಬ್ಯಾಟಿಂಗ್ ಟಾಪ್ ಆರ್ಡರ್​​ನಲ್ಲೇ ಡೇಂಜರಸ್ ಪ್ಲೇಯರ್ಸ್ ಇದ್ದಾರೆ. ಪವರ್ ಪ್ಲೇನಲ್ಲೇ ಇಡೀ ಪಂದ್ಯದ ದಿಕ್ಕನ್ನೇ ಬದಲಿಸೋ ಗೇಮ್ ಚೇಂಜರ್ಸ್. ಇತ್ತೀಚೆಗೆ ಅಫ್ಘಾನಿಸ್ತಾನ ವಿರುದ್ಧದ ಟಿ-20ಐ ಸರಣಿಯಲ್ಲಿ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಓಪನಿಂಗ್ ಪೇರ್ ಧೂಳೆಬ್ಬಿಸಿತ್ತು. ಅದ್ರಲ್ಲೂ ಅಭಿಷೇಕ್ ಶರ್ಮಾ ಮೂರೂ ಪಂದ್ಯಗಳಲ್ಲೂ ಸೂಪರ್ ಡೂಪರ್ ಬ್ಯಾಟಿಂಗ್ ಪ್ರದರ್ಶನ ನೀಡಿದ್ರು. ಕೊನೇ ಮ್ಯಾಚಲ್ಲಂತೂ ಜಸ್ಟ್ 30 ಬಾಲಲ್ಲೇ ಸೆಂಚುರಿ ಸಿಡಿಸಿ ಫಾಸ್ಟೆಸ್ಟ್ ಹಂಡ್ರೆಡ್ ಇತಿಹಾಸ ಬರೆದಿದ್ರು. ಹೀಗಿರುವಾಗ ಜಪಾನ್​ನಂಥ ಶಿಶುವಿನ ವಿರುದ್ಧ ಇನ್ನೆಷ್ಟು ರನ್ಸ್ ಹೊಡೆಯುತ್ತಾರೋ ಅನ್ನೋದೇ ಹಾಟ್ ಟಾಪಿಕ್ ಆಗಿದೆ. ಹಾಗೇನಾದ್ರೂ ಟೀಂ ಇಂಡಿಯಾಗೆ ಫಸ್ಟ್ ಬ್ಯಾಟಿಂಗ್ ಮಾಡೋಕೆ ಅವಕಾಶ ಸಿಕ್ರೆ ಬಹುಶಃ 300+ ರನ್ಸ್ ಟಾರ್ಗೆಟ್ ಸೆಟ್ ಮಾಡಬಹುದು ಅನ್ನೋ ಟ್ರೆಂಡ್ ಜೋರಾಗಿದೆ. ಹೀಗಿದ್ರೂ ಭಾರತ ಪ್ಲೇಯಿಂಗ್ 11ನಲ್ಲಿ ಟ್ವಿಸ್ಟ್ ಕೊಡೋ ಚರ್ಚೆಯೂ ಇದೆ.

ಬೆಂಚ್ ಕಾದವರಿಗೆ ಚಾನ್ಸ್ ಕೊಡ್ತಾರಾ ಗಂಭೀರ್ & ಟೀಂ?

ಅಷ್ಟಕ್ಕೂ ಜಪಾನ್ ವಿರುದ್ಧದ ಏಕೈಕ ಪಂದ್ಯದಿಂದ ಭಾರತಕ್ಕೆ ಸಾಕಷ್ಟು ಲಾಭಗಳೂ ಇವೆ. ಜಪಾನ್‌ನ ನಗೋಯಾದಲ್ಲಿ ಸದ್ಯದಲ್ಲೇ ಏಷ್ಯನ್ ಗೇಮ್ಸ್ 2026 ರ ಕ್ರಿಕೆಟ್ ಮ್ಯಾಚಸ್ ಆರಂಭವಾಗಲಿವೆ. ಇದಕ್ಕೂ ಮುನ್ನ ಜಪಾನ್‌ನ ಪಿಚ್ ಹಾಗೂ ಹವಾಮಾನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಶ್ರೇಯಸ್ ಅಯ್ಯರ್ ನೇತೃತ್ವದ ಭಾರತ ತಂಡಕ್ಕೆ ಈ ಪಂದ್ಯ ಅತ್ಯುತ್ತಮ ಅಭ್ಯಾಸ ವೇದಿಕೆಯಾಗಿದೆ. ಭಾರತ ತಂಡವು ಈ ಪಂದ್ಯದ ಬೆನ್ನಲ್ಲೇ ಏಷ್ಯನ್ ಗೇಮ್ಸ್ ಅಭಿಯಾನವನ್ನು ಆರಂಭಿಸಲಿದೆ. ಭಾರತ ಮೆನ್ಸ್ ಟೀಂ ನೇರವಾಗಿ ಕ್ವಾರ್ಟರ್ ಫೈನಲ್ ಹಂತಕ್ಕೆ ಅರ್ಹತೆ ಪಡೆದಿರೋದ್ರಿಂದ ಸೆಪ್ಟೆಂಬರ್ 28ಕ್ಕೆ ಗ್ರೂಪ್ ಎ ರನ್ನರ್ ಅಪ್ ವಿರುದ್ಧ ಅಖಾಡಕ್ಕಿಳಿಯಲಿದೆ. ಇನ್ನು ಜಪಾನ್ ವಿರುದ್ಧದ ಮ್ಯಾಚಲ್ಲಿ ಭಾರತದ ಪ್ಲೇಯಿಂಗ್ 11ನಲ್ಲಿ ಬದಲಾವಣೆ ಮಾಡೋ ಚಾನ್ಸಸ್ ಇದೆ. ಅಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ಬೆಂಚ್ ಕಾದವರಿಗೆ ಈಗ ಜಪಾನ್ ವಿರುದ್ಧದ ಮ್ಯಾಚಲ್ಲಿ ಅವಕಾಶ ನೀಡೋಕೆ ಮ್ಯಾನೇಜ್​ಮೆಂಟ್ ಮುಂದಾಗಿದೆ. ಅಷ್ಟೇ ಅಲ್ಲದೇ ಈ ಪ್ರವಾಸದಲ್ಲಿ ಜಸ್ಪ್ರಿತ್ ಬುಮ್ರಾ, ಸಂಜು ಸ್ಯಾಮ್ಸನ್ ಮತ್ತು ಶಿವಂ ದುಬೆಯಂತರ ಸೀನಿಯರ್ ಪ್ಲೇಯರ್ಸ್ ಜೊತೆ ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿಯಂತರ ಯಂಗ್ ಪ್ಲೇಯರ್​ಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಫಾರ್ಮ್ ಕಂಡುಕೊಳ್ಳಲು ಇದೊಂದು ಸುವರ್ಣ ಅವಕಾಶವಾಗಿದೆ.

ಹೀಗೆ ಭಾರತ ಬ್ಯಾಟಿಂಗ್, ಬೌಲಿಂಗ್, ಆಲ್​ರೌಂಡರ್ಸ್ ಹೀಗೆ ಎಲ್ಲಾ ಮಾದರಿಗಳಲ್ಲೂ ಸ್ಟ್ರಾಂಗ್ ಆಗಿ ರೆಡಿ ಆಗಿದೆ ಮತ್ತೊಂದೆಡೆ ವಿಶ್ವಚಾಂಪಿಯನ್ಸ್ ವಿರುದ್ಧ ಕಣಕ್ಕಿಳಿಯೋಕೆ ಜಪಾನ್ ಪ್ಲೇಯರ್ಸ್ ಕೂಡ ಫುಲ್ ಎಕ್ಸೈಟ್ ಆಗಿದ್ದಾರೆ. ಜಪಾನ್ ತಂಡವನ್ನು ಅಲ್ಲಿನ ಸ್ಟಾರ್ ಪ್ಲೇಯರ್ ಕೆಂಡೆಲ್ ಕಡೋವಾಕಿ-ಫ್ಲೆಮಿಂಗ್ ಕ್ಯಾಪ್ಟನ್ ಆಗಿ ಲೀಡ್ ಮಾಡ್ತಿದ್ದಾರೆ. ಹಾಗೇ  ಜೇಕ್ ಕುಸುಡಾ-ನೈರ್ನ್ ಜಪಾನ್ ಪರ ಪಾದಾರ್ಪಣೆ ಮಾಡುತ್ತಿದ್ದರೆ, ತ್ಸುಯೋಶಿ ಟಕಾಡಾ 13 ವರ್ಷಗಳ ನಂತರ ತಂಡಕ್ಕೆ ಮರಳುತ್ತಿದ್ದಾರೆ. ಜಪಾನ್‌ನ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಮಕೊಟೊ ತನಿಯಾಮಾ ಕೂಡ ತಂಡದಲ್ಲಿದ್ದಾರೆ. ಹೀಗಾಗಿ ಜಪಾನ್ ಕೂಡ ಭಾರತಕ್ಕೆ ಫೈಟ್ ಕೊಡೋ ಮೈಂಡ್​ಸೆಟ್​ನಲ್ಲಿದ್ದಾರೆ.

Shantha Kumari

Leave a Reply

Your email address will not be published. Required fields are marked *