ಕೋರ್ಟ್ ಆವರಣಕ್ಕೆ ನುಗ್ಗಿ ಸಿಕ್ಕಸಿಕ್ಕವರ ಮೇಲೆ ದಾಳಿ – ಚಿರತೆ ಅಟ್ಟಹಾಸಕ್ಕೆ ಅದೆಷ್ಟು ಜನ ಆಸ್ಪತ್ರೆಪಾಲು!?

ಕೋರ್ಟ್ ಆವರಣಕ್ಕೆ ನುಗ್ಗಿ ಸಿಕ್ಕಸಿಕ್ಕವರ ಮೇಲೆ ದಾಳಿ – ಚಿರತೆ ಅಟ್ಟಹಾಸಕ್ಕೆ ಅದೆಷ್ಟು ಜನ ಆಸ್ಪತ್ರೆಪಾಲು!?

ಇಷ್ಟು ದಿನ ಚಿರತೆಗಳು ಗ್ರಾಮಗಳಿಗೆ ನುಗ್ಗಿ, ನಗರಗಳಿಗೆ ಲಗ್ಗೆ ಇಟ್ಟು ಮನುಷ್ಯರ ಮೇಲೆ ದಾಳಿ ಮಾಡೋದನ್ನ ಕೇಳಿದ್ದೀರಾ. ಆದ್ರೆ ಇವತ್ತು ಉತ್ತರ ಪ್ರದೇಶದಲ್ಲಿ ಕೋರ್ಟ್ ಆವರಣಕ್ಕೇ ನುಗ್ಗಿರೋ ಚಿರತೆ ಹಲವರ ಮೇಲೆ ದಾಳಿ ನಡೆಸಿದೆ.

ಇದನ್ನೂ ಓದಿ : ಕುಸಿದು ಬಿದ್ದ ಆನೆ ರಕ್ಷಣೆಗೆ ಭಾರತೀಯ ಸೇನೆ ಸಾಥ್ – ಹೇಗಿದೆ ಗೊತ್ತಾ ‘ಆಪರೇಷನ್ ಮೋತಿ’..!?

ಹೌದು. ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲಾ ನ್ಯಾಯಾಲಯದ ಆವರಣಕ್ಕೆ ನುಗ್ಗಿರೋ ಚಿರತೆ ಸಿಕ್ಕ ಸಿಕ್ಕವರ ಮೇಲೆಲ್ಲಾ ದಾಳಿ ನಡೆಸಿದೆ. ಪರಿಣಾಮ ಹಲವರು ಗಾಯಗೊಂಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಚಿರತೆ ಸೆರೆಗೆ ಹರಸಾಹಸ ಪಟ್ಟಿದ್ದಾರೆ.

ಗಾಜಿಯಾಬಾದ್‌ನ ಕೋರ್ಟ್​ನ ಹಳೆಯ ಕಟ್ಟಡದ ಬಳಿಯಿದ್ದ ವಕೀಲ, ಶೂ ಪಾಲೀಶ್‌ ಮಾಡುತ್ತಿದ್ದ ವ್ಯಕ್ತಿ ಹಾಗೂ ಪೊಲೀಸರ ಮೇಲೆ ದಾಳಿ ಮಾಡಿದೆ. ಶೂ ಪಾಲಿಶ್‌ ಮಾಡುತ್ತಿದ್ದ ವ್ಯಕ್ತಿಯ ಕಿವಿಯನ್ನು ಚಿರತೆ ಹರಿದು ಹಾಕಿದೆ. ಆತ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿರತೆ ಪ್ರವೇಶಿಸಿದ ಕೂಡಲೇ ಹಳೆ ಕಟ್ಟಡದ ಕೋರ್ಟ್‌ ಕೋಣೆಗಳನ್ನು ಖಾಲಿ ಮಾಡಲಾಗಿತ್ತು. ಸುಮಾರು 30 ನಿಮಿಷಗಳ ಕಾಲ ನ್ಯಾಯಾಲಯದ ಆವರಣದಲ್ಲಿ ಚಿರತೆ ಓಡಾಡಿದೆ ಎಂದು ಹೇಳಲಾಗುತ್ತಿದೆ.

ಹಲವರ ಮೇಲೆ ದಾಳಿ ಮಾಡಿದ್ದ ಚಿರತೆಯನ್ನ ಕೋರ್ಟ್ ಕಟ್ಟಡದ ಕಬ್ಬಿಣದ ಗ್ರಿಲ್‌ನ ಅಂಚಿನಲ್ಲಿ ಲಾಕ್ ಮಾಡಲಾಗಿತ್ತು. ಚಿರತೆ ಎಂಟ್ರಿ ಬೆನ್ನಲ್ಲಿಯೇ ಇಡೀ ನ್ಯಾಯಾಲಯದಲ್ಲಿ ಆತಂಕ ಹಾಗೂ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಪ್ರತ್ಯಕ್ಷದರ್ಶಿಗಳ ಮಾಹಿತಿಯ ಪ್ರಕಾರ, ಚಿರತೆ ಮೊದಲು ಸಿಜೆಎಂ ನ್ಯಾಯಾಲಯದ ಕಟ್ಟಡದ ಮೆಟ್ಟಿಲುಗಳ ಕೆಳಗೆ ಕಾಣಿಸಿಕೊಂಡಿತ್ತು. ಈ ವೇಳೆ ಜನರನ್ನು ನೋಡಿ ಅಲ್ಲಿಂದ ಚಿರತೆ ಓಡಿಹೋಯಿತು. ಬಳಿಕ ಹೆಚ್ಚಿನ ಜನರನ್ನ ನೋಡಿ ಆಕ್ರಮಣಕ್ಕೆ ಇಳಿಯಿತು. ಪೊಲೀಸರು, ವಕೀಲರು, ಶೂ ಪಾಲಿಶ್ ಮಾಡುವವರ ಮೇಲೆ ದಾಳಿ ಮಾಡಿದ್ದು ಹಲವರು ಗಾಯಗೊಂಡಿದ್ದಾರೆ’ ಎಂದು ತಿಳಿಸಿದ್ದಾರೆ.

ಚಿರತೆ ಪ್ರತ್ಯಕ್ಷವಾದ ಸುಮಾರು ಅರ್ಧ ಗಂಟೆಯ ನಂತರ ಅರಣ್ಯ ಇಲಾಖೆಯ 12 ಮಂದಿಯ ತಂಡ ರಕ್ಷಣೆಗೆ ಧಾವಿಸಿದೆ. ಬಲೆ ಮತ್ತು ಬೋನ್ ಇಟ್ಟು ಕಾರ್ಯಾಚರಣೆ ನಡೆಸಿದ್ದಾರೆ. ನ್ಯಾಯಾಲಯದ ಸಿಬ್ಬಂದಿ, ನೌಕರರು, ವಕೀಲರು ಸೇರಿದಂತೆ ನೂರಾರು ಮಂದಿ ಕಟ್ಟಡದ ಹೊರಗೆ ಜಮಾಯಿಸಿದ್ದರು. ಸತತ ಕಾರ್ಯಾಚರಣೆ ಬಳಿಕ ಚಿರತೆಯನ್ನ ಸೆರೆ ಹಿಡಿಯಲಾಗಿದೆ.

suddiyaana