ವಿಂಡೀಸ್ ಸರಣಿ.. ವಿಶ್ವಕಪ್ ಬಾಣ – RO-KO ಫಾರ್ಮ್ ಭಾರತಕ್ಕೆ ಪ್ಲಸ್
3 ODI ಪಂದ್ಯಗಳಿಂದ ಲಾಭಗಳೆಷ್ಟು?

ವಿಂಡೀಸ್ ಸರಣಿ.. ವಿಶ್ವಕಪ್ ಬಾಣ – RO-KO ಫಾರ್ಮ್ ಭಾರತಕ್ಕೆ ಪ್ಲಸ್3 ODI ಪಂದ್ಯಗಳಿಂದ ಲಾಭಗಳೆಷ್ಟು?

ಅಫ್ಘಾನಿಸ್ತಾನ ವಿರುದ್ಧದ ಸರಣಿ ಗೆದ್ದು ಏಷ್ಯನ್ ಗೇಮ್ಸ್​ನಲ್ಲೂ ಗೋಲ್ಡ್ ಮೆಡಲ್ ಮೇಲೆ ಕಣ್ಣಿಟ್ಟಿರೋ ಟೀಂ ಇಂಡಿಯಾಗೆ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ತುಂಬಾನೇ ಮುಖ್ಯ. ಯಾಕಂದ್ರೆ ಭಾರತದ ಮುಂದಿರೋ ಅತಿದೊಡ್ಡ ಟಾಸ್ಕ್ ಅಂದ್ರೆ 2027ರ ಏಕದಿನ ವಿಶ್ವಕಪ್. ಈ ಮೆಗಾ ಟೂರ್ನಮೆಂಟ್​ಗೆ ಇನ್ನೂ ಒಂದು ವರ್ಷ ಬಾಕಿ ಇದ್ರೂ ವಿಂಡೀಸ್ ವಿರುದ್ಧದ ಸರಣಿಯೇ ದಿಕ್ಸೂಚಿಯಾಗುತ್ತೆ. ಹಲವು ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಭಾರತಕ್ಕೆ ಈ ಸರಣಿ ಅಶ್ವಮೇಧಯಾಗದಂತಿದ್ರೆ ವಿಂಡೀಸ್ ಪಡೆ ಮರುಜನ್ಮಕ್ಕಾಗಿ ಕಾಯ್ತಿದೆ.

ಇದನ್ನೂ ಓದಿ : 3ನೇ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಭಾರತಕ್ಕೆ ಭರ್ಜರಿ ಜಯ – ಸರಣಿ ಕ್ಲೀನ್‌ಸ್ವೀಪ್

ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಕೇವಲ 3 ಪಂದ್ಯಗಳ ಸರಣಿಯಲ್ಲ. 2027ರ ಏಕದಿನ ವಿಶ್ವಕಪ್‌ಗೆ ಯಾರು, ಯಾವ ರೋಲ್​ನಲ್ಲಿ ಬೇಕು ಅನ್ನೋದನ್ನ ಟೆಸ್ಟ್ ಮಾಡೋ ಟೈಂ. ಭಾರತ ಮುಂದಿನ ODI ಸರಣಿಗಳಲ್ಲೂ ಇದೇ ಕೋರ್ ಟೀಮ್​ಗೆ ಚಾನ್ಸ್ ನೀಡಬೇಕಾ ಅಥವಾ ಎಲ್ಲಿ ಬದಲಾವಣೆ ಮಾಡ್ಬೇಕು ಅನ್ನೋ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.

ವಿಂಡೀಸ್ ಸರಣಿಯಲ್ಲಿ ಮ್ಯಾನೇಜ್ ಮೆಂಟ್ ಗೆ ಸಿಗಲಿದೆ ಕ್ಲಾರಿಟಿ!

ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ODI ಸರಣಿ ಸೆಪ್ಟೆಂಬರ್ 27ರಿಂದ ಆರಂಭವಾಗಲಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ODI ತಂಡಕ್ಕೆ ಮರಳಿದ್ದು, ಶುಭಮನ್ ಗಿಲ್ ನಾಯಕತ್ವ ವಹಿಸಲಿದ್ದಾರೆ. ಈ ಸರಣಿಯನ್ನು 2027ರ ODI ವಿಶ್ವಕಪ್‌ಗಾಗಿ ತಂಡದ ಕಂಪೋಸಿಷನ್ ಟೆಸ್ಟ್ ಮಾಡಬಹುದು. ಹಾಗೇ ಒಂದಷ್ಟು ಆಟಗಾರರ ಬಗೆಗಿನ ಫ್ಯೂಚರ್ ಪ್ಲ್ಯಾನ್​ಗಳು ಕೂಡ ಗೊತ್ತಾಗಲಿದೆ.

ವಿಂಡೀಸ್ ಸರಣಿಯ ಮಹತ್ವ!

ರೋಹಿತ್ & ಕೊಹ್ಲಿ ಅವರ ಫಾರ್ಮ್ ಮತ್ತು ಭವಿಷ್ಯದ ನಿರ್ಧಾರ

ವಿಶ್ವಕಪ್ ತಂಡವನ್ನ ಲೀಡ್ ಮಾಡಲಿರುವ ಗಿಲ್ ಅವ್ರ ಸ್ಕಿಲ್ ಪರೀಕ್ಷೆ

ದಕ್ಷಿಣ ಆಫ್ರಿಕಾದಲ್ಲಿ ವೇಗದ ಬೌಲಿಂಗ್ ಆಲ್ ರೌಂಡರ್ಸ್ ಅಗತ್ಯ ಹೆಚ್ಚು

ಯುವ ಆಲ್-ರೌಂಡರ್‌ ಗಳ ಫಿಟ್ನೆಸ್ ಮತ್ತು ಬ್ಯಾಟಿಂಗ್ ಡೆಪ್ತ್ ಬಗ್ಗೆ ಐಡಿಯಾ

ನಿತೀಶ್, ಬ್ರಾರ್ ಮತ್ತು ನಮನ್ ಧೀರ್ ರಂಥ ಹೊಸಬರಿಗೂ ಸೆಟ್ ಆಗಲು ಟೈಂ

ವಿಶ್ವಕಪ್ ಗೆ 1 ವರ್ಷ ಇರೋದ್ರಿಂದ ಯಾರು ಬೇಕು ಯಾರು ಬೇಡ ಅನ್ನೋ ಕ್ಲಾರಿಟಿ

ಬ್ಯಾಟಿಂಗ್ ಕಾಂಬಿನೇಷನ್ ನಲ್ಲಿ ಬದಲಾವಣೆ ಮತ್ತು ಬ್ಯಾಕಪ್ ಪ್ಲೇಯರ್ಸ್ ನಿರ್ಧಾರ

ಹೀಗೆ ಸಾಕಷ್ಟು ವಿಚಾರಗಳಲ್ಲಿ ಭಾರತಕ್ಕೆ ವೆಸ್ಟ್ ಇಂಡೀಸ್ ವಿರುದ್ಧದ ಸರಣಿ  ಸಹಾಯಕವಾಗಲಿದೆ. ಉಭಯ ತಂಡಗಳ ಮುಖಾಮುಖಿಯಲ್ಲಿ ಕಳೆದ 15 ವರ್ಷಗಳ ರೆಕಾರ್ಡ್ಸ್ ನೋಡಿದಾಗ ಭಾರತವೇ ಈ ಸರಣಿಯನ್ನೂ ಗೆಲ್ಲುವಂಥ ಫೇವರೆಟ್ ಟೀಂ ಆಗಿ ಕಾಣ್ತಿದೆ. ಯಾಕಂದ್ರೆ ಆರಂಭಿಕ ದಶಕಗಳಲ್ಲಿ ವೆಸ್ಟ್ ಇಂಡೀಸ್ ಅಧಿಪತ್ಯ ಸಾಧಿಸಿದ್ದರೆ, ಕಳೆದ 15 ವರ್ಷಗಳಿಂದ ಟೀಮ್ ಇಂಡಿಯಾ ಸಂಪೂರ್ಣ ಪ್ರಾಬಲ್ಯ ಮೆರೆದಿದೆ.  ಇದುವರೆಗೆ 142 ಪಂದ್ಯಗಳಲ್ಲಿ ಎರಡೂ ತಂಡಗಳು ಮುಖಾಮುಖಿ ಆಗಿದ್ದು ಇದ್ರಲ್ಲಿ ಭಾರತ 72 ಪಂದ್ಯಗಳನ್ನ ಗೆದ್ದಿದ್ರೆ ಕೆರೆಬಿಯನ್ ಕಲಿಗಳು 64 ಸಲ ವಿನ್ ಆಗಿದ್ದಾರೆ. ಆದ್ರೆ ಇತ್ತೀಚೆಗೆ ವೆಸ್ಟ್ ಇಂಡೀಸ್ ಖದರ್ ಕಳ್ಕೊಂಡಿದೆ. ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಸತತವಾಗಿ 13 ಏಕದಿನ ಸರಣಿಗಳನ್ನು ಗೆದ್ದು ವಿಶ್ವ ದಾಖಲೆ ಬರೆದಿದೆ. ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಕೊನೆಯ ಬಾರಿಗೆ ದ್ವಿಪಕ್ಷೀಯ ಏಕದಿನ ಸರಣಿಯನ್ನು ಸೋತಿದ್ದು 2006 ರಲ್ಲಿ (ವೆಸ್ಟ್ ಇಂಡೀಸ್ ಪ್ರವಾಸದಲ್ಲಿ 1-4 ರಿಂದ ಸೋತಿತ್ತು). ಅದಾದ ನಂತರ ಇಂದಿನವರೆಗೂ ಭಾರತ ಒಂದೂ ಏಕದಿನ ಸರಣಿಯನ್ನು ಅವರ ವಿರುದ್ಧ ಸೋತಿಲ್ಲ. ಹೀಗಾಗಿ ಟೀಂ ಇಂಡಿಯಾ ಈ ಬಾರಿಯೂ ಕೂಡ ಗೆದ್ದು ಅಜೇಯವಿಜಯಯಾತ್ರೆಯನ್ನ ಮುಂದುವರಿಸೋ ಪ್ಲ್ಯಾನ್​ನಲ್ಲಿದ್ದಾರೆ. ಆದ್ರೆ ವಿಂಡೀಸ್ ಪಡೆ ಸತತ ಸೋಲುಗಳಿಂದ ಕಂಗೆಟ್ಟಿದ್ದು ಸೋಲಿನ ಸರಪಳಿಯನ್ನ ಕಳಚೋಕೆ ಕಾಯ್ತಿದ್ದಾರೆ. ಹೀಗಾಗಿ ಈ ಸರಣಿ ಎರಡೂ ತಂಡಗಳಿಗೂ ಕೂಡ ತುಂಬಾನೇ ಮುಖ್ಯವಾಗಿದೆ.

Shantha Kumari

Leave a Reply

Your email address will not be published. Required fields are marked *