ಚಾಂಪಿಯನ್ಸ್ ಸದ್ದಡಗಿಸಿದ ರಜತ್ – ಗೆದ್ದೇ ಇಲ್ಲ CSK, MI, KKR
RCB ಲಕ್ಕಿ ಕ್ಯಾಪ್ಟನ್ ಪಾಟಿದಾರ್

ಚಾಂಪಿಯನ್ಸ್ ಸದ್ದಡಗಿಸಿದ ರಜತ್ – ಗೆದ್ದೇ ಇಲ್ಲ CSK, MI, KKRRCB ಲಕ್ಕಿ ಕ್ಯಾಪ್ಟನ್ ಪಾಟಿದಾರ್

ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಿರೋ ಕ್ರೇಜ್​ನ ಯಾವ ತಂಡವೂ ಬೀಟ್ ಮಾಡೋಕೆ ಆಗಲ್ಲ. ಌಂಡ್ ಕಳೆದ ಎರಡು ಆವೃತ್ತಿಗಳಲ್ಲಿ ಬ್ಯಾಕ್ ಟು ಬ್ಯಾಕ್ ಟ್ರೋಫಿಗಳನ್ನ ಗೆದ್ದ ಮೇಲಂತೂ ಆರ್​ಸಿಬಿ ಹವಾ ನೆಕ್ಸ್​ಟ್ ಲೆವೆಲ್​ನಲ್ಲಿದೆ. ತಂಡದ ನಾಯಕನಾಗಿ ರಜತ್ ಪಾಟಿದಾರ್ ಯಶಸ್ವೀ ತಂಡಗಳ ವಿರುದ್ಧ ಅದ್ಭುತ ದಾಖಲೆಗಳನ್ನ ಹೊಂದಿದ್ದಾರೆ. 13 ಟ್ರೋಫಿಗಳನ್ನ ಗೆದ್ದಿರೋ 3 ತಂಡಗಳು ಬೆಂಗಳೂರು ವಿರುದ್ಧ ಕಳೆದ ಎರಡು ವರ್ಷಗಳಲ್ಲಿ ಒಂದೇ ಒಂದು ಪಂದ್ಯ ಗೆದ್ದಿದೆ.

ಇದನ್ನೂ ಓದಿ : ಸಂಜು ವೈ-ಫೈ ಆಫ್ – ವೈಭವ್‌ಗೆ ಇನ್ನಿಲ್ಲ ಅವಕಾಶ! CSK ಕೋಚ್ MS ಧೋನಿ?

ರಜತ್ ಪಾಟಿದಾರ್ 2025ರಿಂದ ಬೆಂಗಳೂರು ತಂಡದ ಕ್ಯಾಪ್ಟನ್ ಆಗಿ ಲೀಡ್ ಮಾಡ್ತಿದ್ದಾರೆ. ನಾಯಕತ್ವ ವಹಿಸಿಕೊಂಡ ಮೊದಲ ವರ್ಷವೇ ಬೆಂಗಳೂರು ತಂಡಕ್ಕೆ ಚೊಚ್ಚಲ ಟ್ರೋಫಿ ಗೆಲ್ಲಿಸಿಕೊಟ್ರು. ಹಾಗೇ ತಮ್ಮ ನಾಯಕತ್ವದಲ್ಲೇ ಎರಡನೇ ವರ್ಷವೂ ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸಿದ್ದು ಈಗ ಹ್ಯಾಟ್ರಿಕ್ ಟ್ರೋಫಿ ಗೆಲುವಿನ ಕ್ಯೂನಲ್ಲಿದ್ದಾರೆ. ಪಾಟಿದಾರ್ ಸಾರಥ್ಯದಲ್ಲಿ ಬೆಂಗಳೂರು ತಂಡ ಮೂರು ಯಶಸ್ವೀತಂಡಗಳ ವಿರುದ್ಧ ನೋ ಲಾಸ್ ಜರ್ನಿ ದಾಖಲೆ ಬರೆದಿದೆ.

2 ವರ್ಷಗಳಿಂದ ಕೆಕೆಆರ್, ಸಿಎಸ್ ಕೆ & ಎಂಐ ವಿರುದ್ಧ ಸೋತೇ ಇಲ್ಲ!

ಐಪಿಎಲ್ ನಲ್ಲಿ ಅತೀ ಹೆಚ್ಚು ಬಾರಿ ಅಂದ್ರೆ ಐದೈದು ಸಲ ಟ್ರೋಫಿ ಗೆದ್ದಿರೋ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಹಾಗೇ ಮೂರು ಸಲ ಕಪ್ ಗೆದ್ದಿರೋ ಕೊಲ್ಕತ್ತಾ ನೈಟ್ ರೈಡರ್ಸ್. ಟೋಟಲ್ 19 ಸೀಸನ್​ಗಳಲ್ಲಿ 13 ಕಪ್​ಗಳು ಈ ಮೂರು ತಂಡಗಳ ಬಳಿಯೇ ಇದೆ. ಹೀಗಿರುವಾಗ ಈ ಮೂರೂ ತಂಡಗಳು ಕಳೆದ ಎರಡು ವರ್ಷಗಳಿಂದ ಬೆಂಗಳೂರು ತಂಡದ ವಿರುದ್ಧ ಒಂದೇ ಒಂದು ಪಂದ್ಯವನ್ನ ಗೆಲ್ಲೋಕಾಗಿಲ್ಲ. ಪಾಟಿದಾರ್ ಬೆಂಗಳೂರು ಕ್ಯಾಪ್ಟನ್ ಆದ್ಮೇಲೆ ಈ ಮೂರು ಚಾಂಪಿಯನ್ ತಂಡಗಳ ವಿರುದ್ಧ ಒಟ್ಟು 8 ಪಂದ್ಯಗಳನ್ನ ಆಡಿದ್ದು ಎಂಟರಲ್ಲೂ ಗೆದ್ದು Undefeated Record ಮಾಡಿದ್ದಾರೆ. ಈ ಮೂರೂ ತಂಡಗಳಿಗೂ ಕಳೆದ ಎರಡು ವರ್ಷಗಳಿಂದ ಬೆಂಗಳೂರು ವಿರುದ್ಧ ಸಿಂಗಲ್ ಮ್ಯಾಚ್ ಕೂಡ ವಿನ್ ಆಗೋಕೆ ಆಗಿಲ್ಲ.

ಆರ್ ಸಿಬಿ ಅಜೇಯ ಸಾಧನೆ!

ಕಳೆದ 2 ವರ್ಷಗಳಲ್ಲಿ ಚೆನ್ನೈ ವಿರುದ್ಧ 3 ಪಂದ್ಯ ಆಡಿದ್ದು ಮೂರರಲ್ಲೂ ಗೆಲುವು

ಮುಂಬೈ ಇಂಡಿಯನ್ಸ್ ವಿರುದ್ಧ ಮೂರೂ ಪಂದ್ಯ ಗೆದ್ದು 3-0 ಕ್ಲೀನ್ ರೆಕಾರ್ಡ್

ಕೊಲ್ಕತ್ತಾ ವಿರುದ್ಧ ಒಂದು ಪಂದ್ಯ ಮಳೆಗೆ ರದ್ದು, ಉಳಿದ 2 ಪಂದ್ಯಗಳಲ್ಲಿ ಗೆಲುವು

ಹೀಗೆ ಪಾಟಿದಾರ್ ನಾಯಕತ್ವದಲ್ಲಿ ಬೆಂಗಳೂರು ತಂಡ ಅತ್ಯದ್ಭುತ ಗೆಲುವುಗಳನ್ನ ಕಂಡಿದೆ. ಹಾಗೇ ಒಂದೇ ಸೀಸನ್‌ನಲ್ಲಿ ಚೆನ್ನೈನ ಚೇಪಾಕ್‌ನಲ್ಲಿ CSK ತಂಡವನ್ನು, ಮುಂಬೈನ ವಾಂಖೆಡೆಯಲ್ಲಿ MI ತಂಡವನ್ನು ಮತ್ತು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ KKR ತಂಡವನ್ನು ಅವರದೇ ತವರು ಮೈದಾನದಲ್ಲಿ ಸೋಲಿಸಿದ ಭಾರತದ ಅತ್ಯಂತ ಯಶಸ್ವಿ ನಾಯಕರಲ್ಲಿ ರಜತ್ ಪಾಟಿದಾರ್ ಕೂಡ ಒಬ್ಬರಾಗಿದ್ದಾರೆ. ಈ ಸಾಧನೆ ಮಾಡಿದ ಐಪಿಎಲ್ ಇತಿಹಾಸದ 2ನೇ ನಾಯಕ ಎನಿಸಿಕೊಂಡರು. ಅದ್ರಲ್ಲೂ ಚೆನ್ನೈ ತಂಡವನ್ನ ಚೇಪಾಕ್ ಕ್ರೀಡಾಂಗಣದಲ್ಲಿ ಅವರದೇ ನೆಲದಲ್ಲಿ 17 ವರ್ಷಗಳ ನಂತರ ಸೋಲಿಸಿದ್ದು ದೊಡ್ಡ ಕಂ ಬ್ಯಾಕ್ ಆಗಿತ್ತು. ಹಾಗೇ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 10 ವರ್ಷಗಳ ನಂತರ ಆರ್‌ಸಿಬಿಗೆ ಸಿಕ್ಕ ಗೆಲುವಾಗಿತ್ತು. ಹಾಗಂತ ಕ್ಯಾಪ್ಟನ್ಸಿಯಲ್ಲಿ ಅಷ್ಟೇ ಅಲ್ಲ. ಕ್ಯಾಪ್ಟನ್ಸಿ ಪ್ರೆಶರ್ ಜೊತೆಯೂ ಬ್ಯಾಟರ್ ಆಗಿಯೂ ಕೂಡ ಅದ್ಭುತ ಪ್ರದರ್ಶನ ನೀಡಿದ್ದಾರೆ.

ಬ್ಯಾಟಿಂಗ್ ನಲ್ಲೂ ಶಕ್ತಿಯಾಗಿ ನಿಲ್ಲುತ್ತಿರುವ ಪಾಟಿದಾರ್!

ಬೆಂಗಳೂರು ಪರ ಮಿಡಲ್ ಆರ್ಡರ್​ನಲ್ಲಿ ಅಗ್ರೆಸ್ಸಿವ್ ಬ್ಯಾಟಿಂಗ್ ಇಂಟೆಂಟ್ ಮೂಲಕ ಗೇಮ್ ಚೇಂಜರ್ ಆಗ್ತಿದ್ದಾರೆ. 2026 ರ ಸೀಸನ್‌ನಲ್ಲಿ 15 ಪಂದ್ಯಗಳಿಂದ 41.75 ರ ಸರಾಸರಿಯಲ್ಲಿ 501 ರನ್‌ಗಳನ್ನು ಚಚ್ಚಿದರು. 2026ರ ಕ್ವಾಲಿಫೈಯರ್ 1 ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಕೇವಲ 33 ಎಸೆತಗಳಲ್ಲಿ ಅಜೇಯ 93 ರನ್ ಸಿಡಿಸಿ ಡೈರೆಕ್ಟ್ ಫಿನಾಲೆ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಇವ್ರ ಪ್ರದರ್ಶನ ತುಂಬಾನೇ ಮುಖ್ಯವಾಗಿತ್ತು. ಕೂಲ್ ಌಂಡ್ ಕಾಮ್ ಆಗಿಯೇ ತಂಡವನ್ನ ಲೀಡ್ ಮಾಡೋ ಪಾಟಿದಾರ್ ಅಡಿಯಲ್ಲಿ ವಿರಾಟ್ ಕೊಹ್ಲಿಯಂತಹ ಶ್ರೇಷ್ಠ ಆಟಗಾರರೂ ಕೂಡ ಫ್ರೀಯಾಗಿ ಆಡ್ತಿರೋದು ಅವ್ರ ಲೀಡರ್​ಶಿಪ್​ನ ಪ್ಲಸ್ ಪಾಯಿಂಟ್ ಆಗಿದೆ.

Shantha Kumari

Leave a Reply

Your email address will not be published. Required fields are marked *