ವಿಶ್ವಕಪ್ ಗೆ ಗುರಿ ಇಟ್ಟ ಭಾರತ – SA ವಿರುದ್ಧ 6 ಪಂದ್ಯಗಳ ODI ಸರಣಿ!
ಗಿಲ್ & ಗಂಭೀರ್ ಪ್ಲ್ಯಾನ್ ಹೇಗಿದೆ?

ವಿಶ್ವಕಪ್ ಗೆ ಗುರಿ ಇಟ್ಟ ಭಾರತ – SA ವಿರುದ್ಧ 6 ಪಂದ್ಯಗಳ ODI ಸರಣಿ!ಗಿಲ್ & ಗಂಭೀರ್ ಪ್ಲ್ಯಾನ್ ಹೇಗಿದೆ?

ಅಫ್ಘಾನಿಸ್ತಾನ ವಿರುದ್ಧದ ಟಿ-20ಐ ಸರಣಿ ಗೆದ್ದಿರೋ ಟೀಂ ಇಂಡಿಯಾ ಈಗ ಬ್ಯಾಕ್ ಟು ಬ್ಯಾಕ್ ಶೆಡ್ಯೂಲ್​ಗಳಲ್ಲಿ ಬ್ಯುಸಿ ಇದೆ. ನೆಕ್ಸ್​ಟ್ ವೀಕ್​ನಿಂದ ಏಷ್ಯನ್ ಗೇಮ್ಸ್ ನಲ್ಲಿ ಆಡ್ಬೇಕಿದೆ. ಹಾಗೇ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯೂ ಶುರುವಾಗ್ತಿದೆ. ಆದ್ರೆ ಭಾರತಕ್ಕಿರೋ ಬಿಗ್ಗೆಸ್ಟ್ ಟಾಸ್ಕ್ ಅಂದ್ರೆ 2027ರ ಏಕದಿನ ವಿಶ್ವಕಪ್. ಐಸಿಸಿಯ ಈ ಮೆಗಾಟೂರ್ನಮೆಂಟ್​ಗೆ ಇನ್ನೂ ಒಂದು ವರ್ಷ ಬಾಕಿ ಇದ್ರೂ ಈಗಿನಿಂದಲೇ ಟೀಂ ಸಿದ್ಧವಾಗ್ತಿದೆ. ಹಾಗೇ ಶತಾಯ ಗತಾಯ ಕಪ್ ಗೆಲ್ಲಲೇಬೇಕು ಅಂತಾ ಪಣತೊಟ್ಟಿರೋ ಕ್ಯಾಪ್ಟನ್ ಶುಭ್​ಮನ್ ಗಿಲ್ ಮತ್ತು ಕೋಚ್ ಗೌತಮ್ ಗಂಭೀರ್ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ.

ಇದನ್ನೂ ಓದಿ : 

2027ರ ICC ಪುರುಷರ ಏಕದಿನ ವಿಶ್ವಕಪ್ ಅಕ್ಟೋಬರ್ ಹಾಗೇ ನವೆಂಬರ್ ತಿಂಗಳಲ್ಲಿ ನಡೆಯಲಿದ್ದು ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಆತಿಥ್ಯ ವಹಿಸ್ತಾ ಇವೆ. ಅಕ್ಟೋಬರ್ 4ರಿಂದ ನವೆಂಬರ್ 21ರವರೆಗೆ ನಡೆಯಲಿರೋ ಈ ಟೂರ್ನಮೆಂಟ್​ನಲ್ಲಿ ಒಟ್ಟು 14 ಟೀಮ್ಸ್​ ಪಾರ್ಟಿಸಿಪೇಟ್ ಮಾಡ್ತಿದ್ದು ಒಟ್ಟು 54 ಪಂದ್ಯಗಳು ನಡೆಯಲಿವೆ. ಈ ಮೂರು ದೇಶಗಳ ಒಟ್ಟು 12 ಸ್ಟೇಡಿಯಮ್​ಗಳಲ್ಲಿ ಮ್ಯಾಚಸ್ ಫಿಕ್ಸ್ ಆಗಿವೆ. ಈ ಪೈಕಿ ದಕ್ಷಿಣ ಆಫ್ರಿಕಾದ 8 ಸ್ಥಳಗಳಲ್ಲಿ ಪಂದ್ಯಗಳು ನಿಗದಿಯಾಗಿವೆ. ಸೋ ಇದನ್ನೇ ಎನ್​ಕ್ಯಾಶ್ ಮಾಡಿಕೊಳ್ಳೋಕೆ ಮುಂದಾಗಿರೋ ಭಾರತ ಹೊಸ ಐಡಿಯಾ ಮಾಡಿದೆ.

ವಿಶ್ವಕಪ್ ಆರಂಭಕ್ಕೂ ಮುನ್ನ ಸೌತ್ ಆಫ್ರಿಕಾದಲ್ಲಿ ಏಕದಿನ ಸರಣಿ ಪ್ಲ್ಯಾನ್!

2027ರ ವಿಶ್ವಕಪ್ ಪಂದ್ಯಗಳ ಪೈಕಿ ಸಾಕಷ್ಟು ಮ್ಯಾಚಸ್ ದಕ್ಷಿಣ ಆಫ್ರಿಕಾದಲ್ಲೇ ನಡೆಯಲಿದ್ದು, ಟೀಂ ಇಂಡಿಯಾ ಮ್ಯಾನೇಜ್​ಮೆಂಟ್ ಇದಕ್ಕಾಗಿ ಒಂದು ಪ್ಲ್ಯಾನ್ ಮಾಡಿದೆ. ಅಂದ್ರೆ ಟೂರ್ನಿ ಆರಂಭಕ್ಕೂ ಮುನ್ನ ದಕ್ಷಿಣ ಆಫ್ರಿಕಾದಲ್ಲಿ ಉಭಯ ತಂಡಗಳ ನಡುವೆ ಏಕದಿನ ಸರಣಿಯನ್ನು ಆಯೋಜನೆ ಮಾಡುವ ಬಗ್ಗೆ  ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಕ್ರಿಕೆಟ್ ದಕ್ಷಿಣ ಆಫ್ರಿಕಾ ಜೊತೆ ಮಾತುಕತೆ ನಡೆಸಿದೆ.  ತಂಡದ ನಾಯಕ ಶುಭ್​ಮನ್ ಗಿಲ್ ಮತ್ತು ಕೋಚ್ ಗೌತಮ್ ಗಂಭೀರ್ ನೇತೃತ್ವದ ಭಾರತೀಯ ತಂಡದ ಆಡಳಿತ ಮಂಡಳಿ ಮನವಿ ಮೇರೆಗೆ ಬಿಸಿಸಿಐ ಮಾತುಕತೆ ನಡೆಸಿದೆ. ಪ್ರಸ್ತುತ BCCI ಘೋಷಿಸಿರುವ 2026-27ರ ವೇಳಾಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಇಲ್ಲ. ವೆಸ್ಟ್ ಇಂಡೀಸ್, ಶ್ರೀಲಂಕಾ ಮತ್ತು ಜಿಂಬಾಬ್ವೆ ವಿರುದ್ಧ ODI ಸರಣಿಗಳು ನಿಗದಿಯಾಗಿವೆ. ಅದೂ ಅಲ್ದೇ ಭಾರತ ತಂಡವು 2023 ರ ಡಿಸೆಂಬರ್​ನಲ್ಲಿ  ಕೆಎಲ್ ರಾಹುಲ್ ನೇತೃತ್ವದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಕೊನೆಯ ಬಾರಿಗೆ ಏಕದಿನ ಸರಣಿಯನ್ನು ಆಡಿತ್ತು. ಹೀಗಾಗಿ ಮುಂದಿನ ವರ್ಷ ದಕ್ಷಿಣ ಆಫ್ರಿಕಾದಲ್ಲಿ ವಿಶ್ವಕಪ್​ಗೂ ಮುನ್ನ ಸರಣಿ ಆಯೋಜನೆ ಮಾಡಿದ್ರೆ ಸಾಕಷ್ಟು ಲಾಭಗಳಿವೆ. ಅಲ್ಲಿನ ಬೌನ್ಸ್, ವೇಗ, ಹವಾಮಾನ ಮತ್ತು ಪಿಚ್ ಪರಿಸ್ಥಿತಿಗಳಿಗೆ ಮೊದಲೇ ಹೊಂದಿಕೊಳ್ಳುವುದು ಭಾರತಕ್ಕೆ ಸಹಾಯ ಮಾಡಬಹುದು.

ಏಕದಿನ ಮಾದರಿಯಲ್ಲಿ ಸೌತ್ ಆಫ್ರಿಕಾದಲ್ಲಿ ಪರದಾಡಿರುವ ಭಾರತ!

ದಕ್ಷಿಣ ಆಫ್ರಿಕಾದಲ್ಲಿ ಭಾರತದ ಏಕದಿನ ಪಂದ್ಯಗಳ ಫಲಿತಾಂಶಗಳನ್ನ ನೋಡಿದಾಗ ಸಾಕಷ್ಟು ಸ್ಟ್ರಗಲ್ ಇರೋದು ಕೂಡ ಗೊತ್ತಾಗ್ತಿದೆ. ಮೆನ್ ಇನ್ ಬ್ಲೂ ತಂಡವು ಸೌತ್ ಆಫ್ರಿಕಾದಲ್ಲಿ ಒಟ್ಟು 59 ಏಕದಿನ ಪಂದ್ಯಗಳನ್ನು ಆಡಿದ್ದು, 24 ಪಂದ್ಯಗಳನ್ನು ಗೆದ್ದು 31 ಪಂದ್ಯಗಳಲ್ಲಿ ಸೋತಿದೆ. ಮೂರು ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿದ್ದರೆ, ಒಂದು ಪಂದ್ಯ ಟೈನಲ್ಲಿ ಕೊನೆಗೊಂಡಿದೆ. ಹೀಗಾಗಿ 2027ರ ವಿಶ್ವಕಪ್​ಗೂ ಮುನ್ನ 4 ರಿಂದ 6 ಪಂದ್ಯಗಳ ಮೆಗಾ ಸರಣಿಗೆ ಪ್ಲ್ಯಾನ್ ಮಾಡಿದ್ದಾರೆ. ಹಾಗೇನಾದ್ರೂ ಸೌತ್ ಆಫ್ರಿಕಾ ಕ್ರಿಕೆಟ್ ಮಂಡಳಿ ಒಪ್ಪಿಕೊಂಡ್ರೆ 2027ರ ಐಪಿಎಲ್ ಬಳಿಕ ಸರಣಿಗೆ ಡೇಟ್ ಫೈನಲ್ ಮಾಡಲಾಗುತ್ತೆ.

ಇನ್ನು ದಕ್ಷಿಣ ಆಫ್ರಿಕಾ ಕೊನೆಯ ಬಾರಿಗೆ 2007ರಲ್ಲಿ ಪುರುಷರ ಐಸಿಸಿ ವಿಶ್ವಕಪ್ ಆಯೋಜಿಸಿತ್ತು. ಅದು ಚೊಚ್ಚಲ ಆವೃತ್ತಿಯ ಟಿ20 ವಿಶ್ವಕಪ್‌. ಎಂಎಸ್ ಧೋನಿ ನೇತೃತ್ವದಲ್ಲಿ ಭಾರತ ಟಿ 20 ವಿಶ್ವಕಪ್‌ ಗೆದ್ದುಕೊಂಡಿತ್ತು. ದಕ್ಷಿಣ ಆಫ್ರಿಕಾದಲ್ಲಿ ಆಯೋಜಿಸಲಾಗಿದ್ದ ಕೊನೆಯ ಏಕದಿನ ವಿಶ್ವಕಪ್‌ನಲ್ಲಿ, ಭಾರತ ಫೈನಲ್ ತಲುಪಿತ್ತು. ಆದರೆ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಫೈನಲ್‌ನಲ್ಲಿ 125 ರನ್‌ಗಳ ಸೋಲನ್ನು ಅನುಭವಿಸಿತ್ತು. ಹೀಗಾಗಿ 2027ರ ಏಕದಿನ ವಿಶ್ವಕಪ್​ನಲ್ಲಿ ಎಚ್ಚರಿಕೆಯ ಹೆಜ್ಜೆ ಇಡೋಕೆ ಮುಂದಾಗಿದೆ.

Shantha Kumari

Leave a Reply

Your email address will not be published. Required fields are marked *