13 ವರ್ಷಗಳ ಬಳಿಕ BIG ತೀರ್ಪು! 10 ಮಾವೋವಾದಿಗಳಿಗೆ ಮ*ರಣದಂಡನೆ!

13 ವರ್ಷಗಳ ಬಳಿಕ BIG ತೀರ್ಪು! 10 ಮಾವೋವಾದಿಗಳಿಗೆ ಮ*ರಣದಂಡನೆ!

ಜಿರಾಮ್ ಘಾಟಿ ಹತ್ಯಾಕಾಂಡ ಪ್ರಕರಣದಲ್ಲಿ 13 ವರ್ಷಗಳ ಬಳಿಕ ಮಹತ್ವದ ತೀರ್ಪು ಹೊರಬಿದ್ದಿದೆ. 2013ರ ಮೇ 25ರಂದು ಛತ್ತೀಸ್‌ಗಢದ ಬಸ್ತರ್ ಜಿಲ್ಲೆಯ ಜಿರಾಮ್ ಘಾಟಿಯಲ್ಲಿ ಕಾಂಗ್ರೆಸ್ ನಾಯಕರಿದ್ದ ಪರಿವರ್ತನಾ ಯಾತ್ರೆಯ ವಾಹನಗಳ ಮೇಲೆ ಮಾವೋವಾದಿಗಳು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕರು ಸೇರಿದಂತೆ 29 ಮಂದಿ ಮೃತಪಟ್ಟಿದ್ದರು.

ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ, ಅಂದರೆ NIA, ಕೈಗೆತ್ತಿಕೊಂಡಿತ್ತು. ಒಂದು ದಶಕಕ್ಕೂ ಹೆಚ್ಚು ಕಾಲ ನಡೆದ ವಿಚಾರಣೆಯ ಬಳಿಕ, ಜಗದಲ್‌ಪುರದ ವಿಶೇಷ NIA ನ್ಯಾಯಾಲಯವು ಪ್ರಕರಣದ 10 ಆರೋಪಿಗಳನ್ನು ಸೆಪ್ಟೆಂಬರ್ 5ರಂದು ದೋಷಿಗಳೆಂದು ಘೋಷಿಸಿತ್ತು. ಇದೀಗ ಸೆಪ್ಟೆಂಬರ್ 16ರಂದು ಇದೇ 10 ಮಂದಿ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪತ್ನಿ ಮೇಲೆ ಆ್ಯ*ಸಿಡ್ ದಾ*ಳಿ! ಮ*ಚ್ಚಿನಿಂದ ಕೊ*ಚ್ಚಿ ಕೊ*ಲೆಗೆ ಯತ್ನ

ಪ್ರಕರಣದಲ್ಲಿ ಶಿಕ್ಷೆಗೊಳಗಾದವರಲ್ಲಿ ಇಬ್ಬರು ಮಹಿಳೆಯರೂ ಸೇರಿದ್ದಾರೆ. 10 ಮಂದಿಗೆ ವಿಧಿಸಿರುವ ಮರಣದಂಡನೆಯನ್ನು ಜಾರಿಗೊಳಿಸಲು ಮೇಲ್ಮನವಿ ಸೇರಿದಂತೆ ಮುಂದಿನ ಕಾನೂನು ಪ್ರಕ್ರಿಯೆಗಳು ಪೂರ್ಣಗೊಳ್ಳಬೇಕಿದೆ. ಆರೋಪಿಗಳಿಗೆ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಅವಕಾಶವೂ ಇದೆ.

ಈ ತೀರ್ಪಿನೊಂದಿಗೆ 13 ವರ್ಷಗಳ ಹಿಂದಿನ ಜಿರಾಮ್ ಘಾಟಿ ದಾಳಿ ಪ್ರಕರಣದಲ್ಲಿ ಮಹತ್ವದ ಕಾನೂನು ಬೆಳವಣಿಗೆ ನಡೆದಿದೆ.

Kishor KV

Leave a Reply

Your email address will not be published. Required fields are marked *