ತಂಡ ಕ್ಲೀನ್ ಸ್ವೀಪ್ ಆದ್ರೂ ಆಟಗಾರನಿಗೆ ಅದ್ಧೂರಿ ಸ್ವಾಗತ – ಸರಣಿ ಸೋಲಿನಲ್ಲೂ ಪಾಕ್ ಫ್ಯಾನ್ಸ್ ಸಂಭ್ರಮ

ತಂಡ ಕ್ಲೀನ್ ಸ್ವೀಪ್ ಆದ್ರೂ ಆಟಗಾರನಿಗೆ ಅದ್ಧೂರಿ ಸ್ವಾಗತ – ಸರಣಿ ಸೋಲಿನಲ್ಲೂ ಪಾಕ್ ಫ್ಯಾನ್ಸ್ ಸಂಭ್ರಮ

ಪಾಕಿಸ್ತಾನ ಕ್ರಿಕೆಟ್ ಅದೆಷ್ಟರ ಮಟ್ಟಿಗೆ ಹಳ್ಳ ಹಿಡಿದಿದೆ ಅನ್ನೋದನ್ನ ಬಿಡಿಸಿ ಹೇಳ್ಬೇಕಿಲ್ಲ. ಏಷ್ಯಾಕಪ್, ಐಸಿಸಿ ವಿಶ್ವಕಪ್​ನಂಥ ಪ್ರತಿಷ್ಠಿತ ಟ್ರೋಫಿಗಳನ್ನ ಗೆಲ್ಲೋದನ್ನೇ ಮರೆತಿದ್ದಾರೆ. ಸರಣಿಗಳಲ್ಲೂ ಸೋಲೋದನ್ನ ಬಿಟ್ರೆ ಹೊಸತೇನೂ ಇಲ್ಲ. ಹೀಗಿರುವಾಗ ಪಾಕಿಸ್ತಾನದ ಅಭಿಮಾನಿಗಳಿಗೆ ಖುಷಿ ಪಡೋಕೆ ಯಾವ ಸಂದರ್ಭಗಳೂ ಸಿಕ್ಕಿಲ್ಲ. ಇದಕ್ಕಾಗಿ ಅವ್ರು ಹೊಸ ದಾರಿ ಕಂಡುಕೊಂಡಿದ್ದಾರೆ. ಆಟಗಾರರ ಇಂಡಿವಿಶ್ಯುಯಲ್ ಪರ್ಫಾಮೆನ್ಸ್​ನ ಸೆಲೆಬ್ರೇಟ್ ಮಾಡಿದ್ದಾರೆ. ಇತ್ತೀಚೆಗೆ ಇಂಗ್ಲೆಂಡ್​ನಲ್ಲಿ ಪಾಕಿಸ್ತಾನ ಮೂರಕ್ಕೆ ಮೂರೂ ಟೆಸ್ಟ್ ಪಂದ್ಯಗಳಲ್ಲಿ  ಹೀನಾಯವಾಗಿ ಸೋತಿತ್ತು. ಹೀಗಿದ್ರೂ ಈ ಸರಣಿಯಲ್ಲಿ ಆಡಿದ ಅದೊಬ್ಬ ಪ್ಲೇಯರ್​ಗೆ ಮಾತ್ರ ಭರ್ಜರಿ ವೆಲ್ಕಂ ಸಿಕ್ಕಿದೆ. ತಲೆಮೇಲೆ ಹೊತ್ತು ಮೆರೆಸಿದ್ದಾರೆ. ತಂಡ ಕ್ಲೀನ್ ಸ್ವೀಪ್ ಆದ್ರೂ ಆತನಿಗೆ ಮಾತ್ರ ರಾಜಮರ್ಯಾದೆ ಸಿಕ್ಕಿದೆ.

ಇದನ್ನೂ ಓದಿ : ಏಷ್ಯಾಕಪ್ ಗೆ ಭಾರತ ಅವಮಾನ – ಜೋಕರ್ ನಖ್ವಿಯ ಹೊಸ ನಾಟಕ

ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವೆ ಇತ್ತೀಚೆಗೆ ಮೂರು ಪಂದ್ಯಗಳ ಟೆಸ್ಟ್ ಸರಣಿ ನಡೆದಿದ್ದು ಮೂರೂ ಪಂದ್ಯಗಳಲ್ಲೂ ಪಾಕಿಸ್ತಾನ ಸೋತು ವೈಟ್ ವಾಶ್ ಆಗಿತ್ತು. ಆಟಗಾರರ ಪ್ರದರ್ಶನ ಅಂತೂ ತೀರಾ ಕಳಪೆಯಾಗಿತ್ತು. ಸರಣಿಯ ಮಧ್ಯೆಯೇ ಪಾಕ್ ಕ್ರಿಕೆಟ್​ ಮಂಡಳಿಗೆ ಸಾಕಷ್ಟು ಮುಜುಗರದ ಪ್ರಸಂಗಗಳೂ ನಡೆದ್ವು. ಒಂದೇ ಒಂದು ಮ್ಯಾಚಲ್ಲೂ ಫೈಟ್ ಕೊಡದೆ ಹೀನಾಯವಾಗಿ ಸೋತು ತವರಿಗೆ ಮರಳಿದ್ರು. ಹೀಗೆ ಬಂದವರ ಪೈಕಿ ಪಾಕ್ ಆಲ್​ರೌಂಡರ್ ರಜಾವುಲ್ಲಾಗೆ ಗ್ರ್ಯಾಂಡ್ ವೆಲ್ಕಂ ಮಾಡಿದ್ದಾರೆ.

ಸರಣಿ ಸೋತ್ರೂ ರಜಾವುಲ್ಲಾ ಪ್ರದರ್ಶನ ಸಂಭ್ರಮಿಸಿದ ಫ್ಯಾನ್ಸ್!

ಪಾಕಿಸ್ತಾನ ವಿರುದ್ಧದ ಸರಣಿ ಸೋತು ತವರಿಗೆ ವಾಪಸ್ ಆದಾಗ 21 ವರ್ಷದ ಆಲ್ ರೌಂಡರ್ ರಜಾವುಲ್ಲಾಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಇಸ್ಲಾಮಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸ್ತಾ ಇದ್ದಂತೆ ಕುಟುಂಬಸ್ಥರು, ಸ್ನೇಹಿತರು ಹಾಗೂ ನೂರಾರು ಕ್ರಿಕೆಟ್ ಫ್ಯಾನ್ಸ್ ಹೂವಿನ ಹಾರ ಹಾಕಿ, ಗುಲಾಬಿ ದಳಗಳನ್ನು ಮೈಮೇಲೆ ಹಾಕಿ ಶಾಲು ಹೊದಿಸಿ ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ಹಾಗೇ ಫೋಮ್ ಸ್ಪ್ರೇ ಕೂಡ ಹಾಕಿದ್ದಾರೆ. ಇನ್ನು ಇಷ್ಟಕ್ಕೇ ಸೀಮಿತವಾಗದೇ ತಮ್ಮ ಊರಿನಲ್ಲೂ ಅದ್ಧೂರಿ ಮೆರವಣಿಗೆ ಮಾಡಿದ್ದಾರೆ. ಸನ್ಮಾನ ಸಮಾರಂಭ ಏರ್ಪಡಿಸಿ ದಾರಿಯುದ್ದಕ್ಕೂ ಬರ್ತಡೇ ಫೋಮ್ ಸ್ಪ್ರೇ ಸಿಂಪಡಿಸಿ ಮೆರವಣಿಗೆ ಮಾಡಿದ್ದಾರೆ.

ಅಷ್ಟಕ್ಕೂ ಇಲ್ಲಿ ರಜಾವುಲ್ಲಾಗೆ ಈ ಮಟ್ಟಿಗಿನ ವೆಲ್ಕಂ ಸಿಗೋಕೆ ಕಾರಣವೂ ಇದೆ. ಪಾಕಿಸ್ತಾನ ಕ್ರಿಕೆಟ್​ನಲ್ಲಿ ಗೆಲ್ಲೋದೆಲ್ಲಾ ಈಗ ಕನಸಾಗಿದೆ. ಸ್ಟಾರ್ ಕ್ರಿಕೆಟರ್ಸ್ ಅನಿಸಿಕೊಂಡವ್ರೂ ಕೂಡ ಫ್ಲ್ಯಾಪ್ ಆಗಿದ್ದಾರೆ. ಇಂಥಾ ಟೈಮಲ್ಲಿ ಇಂಗ್ಲೆಂಡ್ ವಿರುದ್ಧದ ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಚೊಚ್ಚಲ ಪಂದ್ಯ ಆಡಿದ ರಜಾವುಲ್ಲಾ, ಇಡೀ ಸರಣಿಯಲ್ಲಿ ಪಾಕಿಸ್ತಾನ ಕ್ರಿಕೆಟ್‌ಗೆ ಏಕೈಕ ಆಶಾಕಿರಣವಾಗಿ ಕಂಡಿದ್ದಾರೆ. ಬೌಲಿಂಗ್‌ನಲ್ಲಿ ಕಮಾಲ್ ಮಾಡಿದ ರಜಾವುಲ್ಲಾ ತಾವು ಎಸೆದ ಕೇವಲ 4ನೇ ಎಸೆತದಲ್ಲೇ ಇಂಗ್ಲೆಂಡ್‌ನ ದಿಗ್ಗಜ ಬ್ಯಾಟರ್ ಜೋ ರೂಟ್ ಅವರ ವಿಕೆಟ್ ಪಡೆದು ಎಲ್ಲರ ಗಮನ ಸೆಳೆದ್ರು. ಹಾಗೇ ಮೊದಲ ಇನ್ನಿಂಗ್ಸ್​ನಲ್ಲಿ 4 ವಿಕೆಟ್ ಬೇಟೆಯಾಡಿದ್ರು. ಅಷ್ಟೇ ಅಲ್ಲದೆ ಬ್ಯಾಟಿಂಗ್​ನಲ್ಲೂ ಕೂಡ ಸದ್ದು ಮಾಡಿದ್ರು. 63 ಎಸೆತಗಳಲ್ಲಿ 81 ರನ್ ಚಚ್ಚಿದರು. ಇದ್ರಲ್ಲಿ 4 ಸಿಕ್ಸರ್ ಹಾಗೇ 9 ಸಿಕ್ಸರ್​ಗಳೂ ಸೇರಿದ್ವು. ಈ ಮೂಲಕ ಟೆಸ್ಟ್ ಪದಾರ್ಪಣೆ ಪಂದ್ಯದಲ್ಲೇ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಟಿಮ್ ಸೌಥಿ ಅವರ ವಿಶ್ವ ದಾಖಲೆಯನ್ನು ಬ್ರೇಕ್ ಮಾಡಿದ್ರು.  ಇದೇ ಕಾರಣಕ್ಕೆ ಪಾಕಿಸ್ತಾನ ಫ್ಯೂಚರ್ ಕ್ರಿಕೆಟ್​ಗೆ ಒಬ್ಬ ಭರವಸೆಯ ಆಟಗಾರ ಸಿಕ್ಕಿದ್ದಾನೆ ಅನ್ನೋ ಖುಷಿಯಲ್ಲಿ ಪಾಕಿಸ್ತಾನದಲ್ಲಿ ದೊಡ್ಡ ಜಾತ್ರೆಯನ್ನೇ ಮಾಡಿದ್ದಾರೆ. ಒಟ್ನಲ್ಲಿ ಕ್ರಿಕೆಟ್ ಅಂತಾ ಬಂದಾಗ ಯಾವುದೇ ದೇಶದಲ್ಲೂ ಮಲ್ಟಿನೇಷನ್ಸ್ ಟೂರ್ನಮೆಂಟ್​ಗಳಲ್ಲಿ ಗೆದ್ದಾಗ ಇಡೀ ತಂಡಕ್ಕೆ ಈ ಥರ ವೆಲ್ಕಂ ಸಿಗುತ್ತೆ. ಆದ್ರೆ ಪಾಕ್ ಕ್ರಿಕೆಟ್​ನಲ್ಲಿ ಈಗ ಇಂಥಾ ಅವಕಾಶ ಸಿಗಲ್ಲ. ಏಷ್ಯಾಕಪ್​ನಲ್ಲಿ ಪಾಕಿಸ್ತಾನ ಕೊನೇ ಬಾರಿಗೆ 2012ರಲ್ಲಿ ಟ್ರೋಫಿ ಗೆದ್ದಿರೋದು. ಕಳೆದ 14 ವರ್ಷಗಳಿಂದ ಮತ್ತೆ ಟ್ರೋಫಿ ಸಿಕ್ಕಿಲ್ಲ. ಇನ್ನು 2022ರಲ್ಲಿ ಐಸಿಸಿ ಟಿ-20 ವಿಶ್ವಕಪ್ ಗೆದ್ದಿದ್ದು ಬಿಟ್ರೆ ಮತ್ಯಾವ ವಿಶ್ವಕಪ್​ನಲ್ಲೂ ಫೈನಲ್​ಗೂ ಬಂದಿಲ್ಲ. ಸೋ ಬೇರೆ ದಾರಿ ಇಲ್ದೇ ಆಟಗಾರರ ವೈಯಕ್ತಿಕ ಪ್ರದರ್ಶನಗಳನ್ನೇ ಸೆಲೆಬ್ರೇಟ್ ಮಾಡ್ತಿದ್ದಾರೆ.

Shantha Kumari

Leave a Reply

Your email address will not be published. Required fields are marked *