ಏಷ್ಯಾಕಪ್ ಗೆ ಭಾರತ ಅವಮಾನ – ಜೋಕರ್ ನಖ್ವಿಯ ಹೊಸ ನಾಟಕ
ಟ್ರೋಫಿ ಹೆಸ್ರಲ್ಲಿ PAK ಕಿರಿಕ್

ಏಷ್ಯಾಕಪ್ ಗೆ ಭಾರತ ಅವಮಾನ – ಜೋಕರ್ ನಖ್ವಿಯ ಹೊಸ ನಾಟಕಟ್ರೋಫಿ ಹೆಸ್ರಲ್ಲಿ PAK ಕಿರಿಕ್

2026ರ ಮಹಿಳಾ ಏಷ್ಯಾಕಪ್ ಗೆದ್ದ ಭಾರತ ಮಹಿಳಾ ತಂಡ ಮೊಹ್ಸಿನ್ ನಖ್ವಿ ಕೈಯಿಂದ ಟ್ರೋಫಿ ತಗೊಳಲಿಲ್ಲ. ಭಾರತದ ಇಂಥಾದ್ದೊಂದು ನಿರ್ಧಾರಕ್ಕೆ ಕಾರಣ ಏನು ಅನ್ನೋದನ್ನು ಕೂಡ ಈಗಾಗ್ಲೇ ಕ್ಲಿಯರ್ ಮಾಡಿದ್ದಾರೆ. ಆದ್ರೆ ಈಗ ಭಾರತದ ನಡೆಯ ಬಗ್ಗೆ ಹೊಸ ಚರ್ಚೆ ಶುರುವಾಗಿದೆ. ಟೀಂ ಇಂಡಿಯಾ ಏಷ್ಯಾಕಪ್​ನೇ ಅವಮಾನ ಮಾಡಿದೆ ಎನ್ನುವ ವಾದ ನಡೀತಿದೆ. ಪಾಕ್​ನ ಮಾಜಿ ಕ್ರಿಕೆಟರ್ಸ್ ವಿಚಾರವನ್ನ ಟರ್ನ್ ಮಾಡಿದ್ದಾರೆ.

ಇದನ್ನೂ ಓದಿ : ಸಂಜು ಸಾಕಾ.. ಸೂರ್ಯವಂಶಿ ಬೇಕಾ – ವರುಣ್ ಇಂಜುರಿ ಭಾರತಕ್ಕೆ ಹೊಡೆತ

ಒಂದು ವರ್ಷ.. ಜಸ್ಟ್ ಒಂದೇ ವರ್ಷದ ಅವಧಿಯೊಳಗೆ ಭಾರತ ಎರಡೆರಡು ಏಷ್ಯಾಕಪ್ ಟ್ರೋಫಿಗಳನ್ನ ಗೆದ್ದಿದೆ. 2025ರ ಸೆಪ್ಟೆಂಬರ್ 28 ಒಂಬತ್ತನೇ ಬಾರಿಗೆ ಏಷ್ಯಾಕಪ್ ಗೆದ್ದ ಭಾರತದ ಮೆನ್ಸ್ ಟೀಂ ನಖ್ವಿ ಕೈಯಿಂದ ಟ್ರೋಫಿಯನ್ನ ಸ್ವೀಕಾರ ಮಾಡ್ಲಿಲ್ಲ. ಈಗ 2026ರ ಸೆಪ್ಟೆಂಬರ್ 13ರಂದು ದುಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ   ಎಂಟನೇ ಪ್ರಶಸ್ತಿ ಗೆದ್ದ ಭಾರತೀಯ ಮಹಿಳಾ ತಂಡ ಕೂಡ ಅದನ್ನೇ ರಿಪೀಟ್ ಮಾಡಿದೆ. ಹಾಗೇ ಪಿಸಿಬಿ ಅಧ್ಯಕ್ಷ ಜೊತೆಗ ಪಾಕಿಸ್ತಾನ ಸರ್ಕಾರದ ಸಚಿವರೂ ಆಗಿರೋ ಮೊಹ್ಸಿನ್ ನಖ್ವಿ ಕೈಯಿಂದ ಟ್ರೋಫಿ ತಗೊಳ್ಳಲ್ಲ ಅನ್ನೋದು ಭಾರತದ ಸ್ಪಷ್ಟನೆ. ಆದ್ರೆ ಇದನ್ನ ಡೈಜೆಸ್ಟ್ ಮಾಡಿಕೊಳ್ಳೋಕೆ ಆಗದ ಪಾಕ್​ನಲ್ಲಿ ಕೆಲವ್ರು ಹೊಸ ವರಸೆ ತೆಗೆದಿದ್ದಾರೆ. ಪಾಕಿಸ್ತಾನಿ ಮಾಧ್ಯಮಗಳು ಮತ್ತು ಕ್ರೀಡಾ ವಿಶ್ಲೇಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತವು ಕ್ರೀಡೆಯಲ್ಲಿ ರಾಜಕೀಯವನ್ನು ಬೆರೆಸುತ್ತಿದೆ ಎನ್ನುತ್ತಿದ್ದಾರೆ.

ಭಾರತದಿಂದ ಮುಜುಗರ.. ಪಾಕ್ ನಲ್ಲಿ ಅಸಮಾಧಾನ ಸ್ಫೋಟ!

ಯಾವಾಗ ಭಾರತ ಸತತ ಎರಡು ಟ್ರೋಫಿಗಳನ್ನ ನಿರಾಕರಿಸಿತೋ ಕೇವಲ ಮೊಹ್ಸಿನ್ ನಖ್ವಿಗಷ್ಟೇ ಅಲ್ಲ ಇಡೀ ಪಾಕಿಸ್ತಾನಕ್ಕೆ ಮುಜುಗರವಾಗಿದೆ. ಇದ್ರಿಂದಾಗಿ ಇಲ್ಲಸಲ್ಲದ ಆರೋಪಗಳನ್ನ ಮಾಡ್ತಿದ್ದಾರೆ. ಪಾಕ್ ಮಾಜಿ ಆಟಗಾರ ಮೊಹಮ್ಮದ್ ಯೂಸುಫ್ ತಮ್ಮ ಎಕ್ಸ್​ ಖಾತೆಯಲ್ಲಿ ಈ ಬಗ್ಗೆ ಬರ್ಕೊಂಡಿದ್ದಾರೆ. ಯಾವಾಗ ರಾಷ್ಟ್ರೀಯ ಹೆಮ್ಮೆ ಎಂಬುದು ಅಹಂಕಾರವಾಗಿ ಬದಲಾಗುತ್ತದೆಯೋ, ಆಗ ಗೆಲುವಿಗೆ ಯಾವುದೇ ಗೌರವ ಸಿಗುವುದಿಲ್ಲ. ಒಂದು ತಂಡ ಪಂದ್ಯವನ್ನು ಗೆಲ್ಲಬಹುದು, ಆದರೆ ವಿನಮ್ರತೆ ಇಲ್ಲದ ದೇಶ ಯಾವತ್ತಿದ್ದರೂ ಸೋತಂತೆ! ಇಲ್ಲಿ ಟ್ರೋಫಿ ಮುಖ್ಯವಲ್ಲ, ಅಹಂಕಾರವಷ್ಟೇ ಎದ್ದು ಕಾಣುತ್ತಿದೆ ಎಂದು ಬರೆದಿದ್ದಾರೆ. ಅಷ್ಟೇ ಅಲ್ಲದೆ ಇದು ಕೇವಲ ಮೊಹ್ಸಿನ್ ನಖ್ವಿ ಎಂಬ ವೈಯಕ್ತಿಕ ನಾಯಕನಿಗೆ ಆದ ಅವಮಾನವಲ್ಲ, ಬದಲಿಗೆ ಇಡೀ ಪಾಕಿಸ್ತಾನ ದೇಶಕ್ಕೆ ಜಾಗತಿಕ ಮಟ್ಟದಲ್ಲಿ ಆದ ದೊಡ್ಡ ಬೇಸರದ ಸಂಗತಿ ಎಂದಿದ್ದಾರೆ. ಮತ್ತೊಂದೆಡೆ ಎರಡು ಸಲ ಪೋಡಿಯಂ ಮೇಲೆ ಜೋಕರ್ ಆಗಿರೋ ನಖ್ವಿ ಕೂಡ ಕ್ಯಾತೆ ತೆಗೆದಿದ್ದಾರೆ. ಐಸಿಸಿ ಸಭೆಯಲ್ಲೂ ಈ ವಿಷಯವನ್ನು ಪ್ರಸ್ತಾಪಿಸಿರುವ ನಖ್ವಿ ಒಂದು ವೇಳೆ ಪಾಕಿಸ್ತಾನ ತಂಡವು ಭಾರತೀಯ ಅಧಿಕಾರಿಯಿಂದ ಟ್ರೋಫಿ ಪಡೆಯಲು ನಿರಾಕರಿಸಿದ್ದರೆ ಐಸಿಸಿ ಸುಮ್ಮನಿರುತ್ತಿತ್ತೇ ಎಂದು ಪ್ರಶ್ನಿಸಿದ್ದಾರೆ. ಇದೆಲ್ಲದ್ರ ನಡುವೆ ಟ್ರೋಫಿ ವಿಚಾರವನ್ನ ಎಳೆದು ತಂದಿದ್ದಾರೆ.

ಏಷ್ಯಾಕಪ್ ಟ್ರೋಫಿಗೆ ಅವಮಾನ ಮಾಡಿತಾ ಟೀಂ ಇಂಡಿಯಾ?

ಪಿಸಿಬಿ ಅಧ್ಯಕ್ಷ ಜೊತೆಗೆ ಪಾಕ್ ಸಚಿವನೂ ಆಗಿರೋ ನಖ್ವಿ ಕೈಯಿಂದ ಟ್ರೋಫಿ ಪಡೆಯಲ್ಲ ಅಂತಾ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ಗೆ ಬಿಸಿಸಿಐ ಮೊದಲೇ ಲಿಖಿತವಾಗಿ ತಿಳಿಸಿತ್ತು. ಌಂಡ್ ಪೋಡಿಯಂ ಮೇಲೆ ಹೆಜ್ಜೆ ಕೂಡ ಇಡಲ್ಲ ಅನ್ನೋದನ್ನ ಕ್ಲಿಯರ್ ಮಾಡಿದ್ರು. ಆದ್ರೆ ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳ ನಾಯಕರು ಅಥವಾ ಆಟಗಾರರ ನಡುವಿನ ಭಿನ್ನಾಭಿಪ್ರಾಯಗಳಿಂದ ಟ್ರೋಫಿಯನ್ನು ಯಾಕೆ ವಿವಾದಕ್ಕೆ ಎಳೆದು ತರಬೇಕು. ಬಿಸಿಸಿಐ ಅಥವಾ ಮೊಹ್ಸಿನ್ ನಖ್ವಿ ಕ್ರೀಡಾ ನಿಲುವು ತೆಗೆದುಕೊಳ್ಳಬೇಕಿತ್ತು ಮತ್ತು ಏಷ್ಯನ್ ಕ್ರಿಕೆಟ್‌ನಲ್ಲಿ ಪ್ರಾಬಲ್ಯದ ಸಂಕೇತವಾಗಿರುವ ಟ್ರೋಫಿಯನ್ನು ಅವಮಾನಿಸಬಾರದು. ಪಂದ್ಯ ಕೂಡ ದುಬೈನಲ್ಲಿ ನಡೆದಿದೆ. ಯಾವುದೇ ಟೂರ್ನಮೆಂಟ್ ಅಥವಾ ಕಾಂಪಿಟೇಷನ್ ಬಗ್ಗೆ ಮಾತನಾಡುವಾಗ, ಟ್ರೋಫಿ ಪ್ರದಾನವಿಲ್ಲದೆ ಅದು ಇನ್ ಕಂಪ್ಲೀಟ್ ಆಗುತ್ತೆ. ಈಗ ರಾಷ್ಟ್ರಗಳ ನಡುವೆ ವೈಮನಸ್ಸುಗಳು ಇದ್ದಾಗ ಅದನ್ನ ರಾಜತಾಂತ್ರಿಕವಾಗಿಯೇ ಕ್ಲಿಯರ್ ಮಾಡಿಕೊಳ್ಬೇಕು. ಅದನ್ನ ಬಿಟ್ಟು ಕ್ರೀಡೆಗಳಲ್ಲಿ ಯಾಕೆ ಅದನ್ನ ರಿವೇಂಜ್ ಥರ ತೀರಿಸಿಕೊಳ್ತಿದ್ದೀರಿ. ಆಟ ಮತ್ತು ಸಂಪ್ರದಾಯದ ಬಗ್ಗೆ ಗೌರವ ಇಟ್ಟುಕೊಳ್ಳೋದೇ ಮುಖ್ಯವಾಗಿರುತ್ತೆ ಅಂತಿದ್ದಾರೆ. ಹಾಗೇ ನೋ ಶೇಕ್ ಹ್ಯಾಂಡ್ ಪಾಲಿಸಿಯನ್ನೂ ಪ್ರಶ್ನೆ ಮಾಡಿದ್ದಾರೆ.

ಕ್ರೀಡೆಯಲ್ಲಿ ಕೈಕುಲುಕುವುದು ಸಾಮಾನ್ಯ ನಿಯಮ!

ಇನ್ನು ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಗಳಲ್ಲಿ ಈಗ ಪರಸ್ಪರ ಶೇಕ್ ಹ್ಯಾಂಡ್ ಮಾಡ್ತಿಲ್ಲ. ಇದನ್ನೂ ಕೂಡ ಪ್ರಶ್ನೆ ಮಾಡಲಾಗ್ತಿದೆ.  ಕ್ರೀಡೆಯಲ್ಲಿ ಕೈಕುಲುಕುವುದು ಜಗತ್ತಿನ ಕಾಮನ್ ಗೆಶ್ಚರ್. ಇಬ್ಬರು ಸ್ಪರ್ಧಿಗಳು ಮುಖಾಮುಖಿ ಆಗ್ತಾರೆ. ಅದ್ರಲ್ಲಿ ಒಬ್ಬರು ಗೆಲ್ಲುತ್ತಾರೆ, ಒಬ್ಬರು ಸೋಲುತ್ತಾರೆ ಮತ್ತು ಇಬ್ಬರೂ ಒಂದೇ ಯುದ್ಧಭೂಮಿಯನ್ನು ಹಂಚಿಕೊಂಡಿದ್ದೇವೆಂದು ಒಪ್ಪಿಕೊಳ್ಳುತ್ತಾರೆ. ಹಾಗಂತ ರಾಜಕೀಯವಾಗಿ ಏನೇ  ಆಗಿದ್ರೂ ಅದನ್ನ ಒಪ್ಪಿಕೊಳ್ಳುತ್ತೇವೆ ಅನ್ನೋ ಅರ್ಥ ಇರಲ್ಲ. ಕೈಕುಲುಕಿದ್ರೆ ನಾವು ಆಟವನ್ನು ಆಡಿದ್ದೇವೆ ಮತ್ತು ಸ್ಪರ್ಧೆಯನ್ನು ಗೌರವಿಸೋಣ ಎಂದಷ್ಟೇ ಅರ್ಥ ಇರುತ್ತೆ. ಬಹುಶಃ ಮುಂದಿನ ದಿನಗಳಲ್ಲೂ ಇಂಥದ್ದೇ ಸಿಚುಯೇಷನ್ಸ್ ಬಂದ್ರೆ  ಮ್ಯಾಚ್ ರೆಫರಿಯೇ ಭವಿಷ್ಯದಲ್ಲಿ ಟ್ರೋಫಿಯನ್ನು ಪ್ರದಾನ ಮಾಡುವಂತೆ ಎರಡೂ ತಂಡಗಳು ಒಪ್ಪಿಕೊಳ್ಳಬೇಕಾಗುತ್ತೆ ಎಂದಿದ್ದಾರೆ. ಅಷ್ಟೇ ಅಲ್ಲದೆ ಭಾರತವೇ ತಮ್ಮ ಕೈಯಿಂದ ಟ್ರೋಫಿ ಸ್ವೀಕಾರ ಮಾಡಲ್ಲ ಅಂದಾಗ ಬಹುಶಃ ನಖ್ವಿಯೇ ಅದನ್ನ ಒಪ್ಪಿಕೊಳ್ಳಬಹುದು. 2025 ರಲ್ಲಿ, ಯುಎಇ ಕ್ರಿಕೆಟ್ ಮಂಡಳಿಯ ಉನ್ನತ ಅಧಿಕಾರಿ ಖಾಲಿದ್ ಅಲ್ ಜರೂನಿ ಏಷ್ಯಾ ಕಪ್ ಟ್ರೋಫಿಯನ್ನು ಪ್ರದಾನ ಮಾಡಬೇಕೆಂಬ ಸಲಹೆಯನ್ನು ನಖ್ವಿ ಒಪ್ಪಿರಲಿಲ್ಲ. ತಾನಲ್ಲದಿದ್ದರೆ, ಯಾರೂ ಆ ಗೌರವವನ್ನು ನೀಡಬಾರದು ಅಂತಾ ಪಟ್ಟು ಹಿಡಿದಿದ್ರು. ಆದ್ರೆ ಟ್ರೋಫಿ ಎಂದಾದರೂ ಏನಾದರೂ ತಪ್ಪು ಮಾಡಿದೆಯೇ? ಫೈನಲ್ ಪಂದ್ಯದ ಕೊನೆಯಲ್ಲಿ ಟ್ರೋಫಿ ಅನಾಥವಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಆದ್ರೆ ಇಲ್ಲಿ ಒಂದು ವಿಚಾರವನ್ನ ಕ್ಲಿಯರ್ ಮಾಡ್ಬೇಕು. ಭಾರತ ಟ್ರೋಫಿ ತೆಗೆದುಕೊಳ್ಳದಿದ್ದಕ್ಕೆ ಅವಮಾನವಾಗಿ ಈಗ ಟ್ರೋಫಿಯನ್ನ ಮಧ್ಯೆ ಎಳೆದು ತರ್ತಿದ್ದಾರೆ. ಆದ್ರೆ ಅದನ್ನ ಬಿಟ್ಟು ತಮ್ಮ ತಂಡ ಯಾಕೆ ಗೆಲ್ತಿಲ್ಲ ಅನ್ನೋದನ್ನ ಇವ್ರು ಮೊದ್ಲು ಯೋಚನೆ ಮಾಡ್ಬೇಕು. ಪುರುಷರ ಏಷ್ಯಾಕಪ್ ವಿಭಾಗದಲ್ಲಿ ಭಾರತ 9 ಸಲ ಟ್ರೋಫಿ ಗೆದ್ರೆ ಪಾಕಿಸ್ತಾನ 2 ಸಲ ಅಷ್ಟೇ ಗೆದ್ದಿದೆ. ಮತ್ತೊಂದೆಡೆ 10 ಆವೃತ್ತಿಗಳು ನಡೆದಿರೋ ಮಹಿಳಾ ಏಷ್ಯಾಕಪ್​ನಲ್ಲಿ ಭಾರತ ಹತ್ತೂ ಸಲವೂ ಫೈನಲ್​ಗೆ ಬಂದಿದೆ. 8 ಸಲ ಚಾಂಪಿಯನ್ಸ್ ಆಗಿದೆ. ಆದ್ರೆ ಪಾಕ್​ನ ಮಹಿಳಾ ತಂಡ ಇದುವರೆಗೆ ಒಂದೇ ಒಂದು ಭಾರಿಯೂ ಟ್ರೋಫಿ ಗೆದ್ದಿಲ್ಲ. ಟ್ರೋಫಿ ಗೆಲ್ಲೋದಿರ್ಲಿ ಒಂದೇ ಒಂದು ಸಲ ಕೂಡ ಫೈನಲ್​ಗೆ ಬಂದಿಲ್ಲ. ಹೀಗಿರುವಾಗ ಭಾರತ ಗೆದ್ದ ಮೇಲೆ ಕೊಂಕು ತೆಗೆದು ತಮ್ಮ ಬೇಳೆ ಬೇಯಿಸಿಕೊಳ್ಳೋಕೆ ನೋಡ್ತಿದ್ದಾರೆ ಅಷ್ಟೇ.

Shantha Kumari

Leave a Reply

Your email address will not be published. Required fields are marked *