ಸಂಜು ವೈ-ಫೈ ಆಫ್ – ವೈಭವ್ಗೆ ಇನ್ನಿಲ್ಲ ಅವಕಾಶ! CSK ಕೋಚ್ MS ಧೋನಿ?

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು
ದೆಹಲಿ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತ ಅಫ್ಘಾನಿಸ್ತಾನವನ್ನು 7 ವಿಕೆಟ್ಗಳಿಂದ ಸೋಲಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 2-0 ಮುನ್ನಡೆ ಪಡೆದು ಸರಣಿಯನ್ನು ತನ್ನದಾಗಿಸಿಕೊಂಡಿದೆ. ಅಫ್ಘಾನಿಸ್ತಾನ ನೀಡಿದ್ದ 160 ರನ್ ಗುರಿಯನ್ನು ಭಾರತ 14.5 ಓವರ್ಗಳಲ್ಲೇ ತಲುಪಿತು. ಮೂರನೇ ಪಂದ್ಯ ಇದೀಗ ಔಪಚಾರಿಕವಾಗಿದ್ದು, ಭಾರತದ ಗಮನ ಕ್ಲೀನ್ ಸ್ವೀಪ್ ಮೇಲೆ ಇದೆ.
ಅಫ್ಘಾನಿಸ್ತಾನ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಕೇವಲ 22 ಎಸೆತಗಳಲ್ಲಿ 57 ರನ್ ಸಿಡಿಸಿ ಮಿಂಚಿದರು. ಪಂದ್ಯದ ಬಳಿಕ ನಕಾರಾತ್ಮಕ ಕಾಮೆಂಟ್ಗಳನ್ನು ಹೇಗೆ ಎದುರಿಸುತ್ತೀರಿ ಎಂಬ ಪ್ರಶ್ನೆಗೆ, ನಾನು ವೈ-ಫೈ ಆಫ್ ಮಾಡಿಬಿಡುತ್ತೇನೆ ಎಂದು ಹಾಸ್ಯಭರಿತವಾಗಿ ಉತ್ತರಿಸಿದರು. ಸಾಮಾಜಿಕ ಜಾಲತಾಣದ ಚರ್ಚೆಗಳಿಂದ ದೂರವಿದ್ದು, ಆಟದ ಮೇಲೆ ಗಮನ ಕೇಂದ್ರೀಕರಿಸುವುದೇ ತಮ್ಮ ವಿಧಾನ ಎಂದರು.
ಅಫ್ಘಾನಿಸ್ತಾನ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಮೊದಲ ಓವರ್ನಲ್ಲೇ ಮೇಡನ್ ಓವರ್ ಎಸೆದರು. ಇದರೊಂದಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಮೇಡನ್ ಓವರ್ಗಳನ್ನು ಎಸೆದ ಬೌಲರ್ಗಳ ಪಟ್ಟಿಯಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ತಲುಪಿದರು. ಆರಂಭದಲ್ಲೇ ರನ್ ನೀಡದೆ ಒತ್ತಡ ಸೃಷ್ಟಿಸಿದ ಬುಮ್ರಾ, ತಮ್ಮ ನಿಖರ ಬೌಲಿಂಗ್ನಿಂದ ಮತ್ತೊಮ್ಮೆ ಗಮನ ಸೆಳೆದರು.
ಅಫ್ಘಾನಿಸ್ತಾನ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲೂ ಯುವ ಬ್ಯಾಟರ್ ವೈಭವ್ ಸೂರ್ಯವಂಶಿಗೆ ಆಡುವ ಹನ್ನೊಂದರಲ್ಲಿ ಸ್ಥಾನ ಸಿಗಲಿಲ್ಲ. ತಂಡದ ಮ್ಯಾನೇಜ್ಮೆಂಟ್ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ಗೆ ಅವಕಾಶ ಮುಂದುವರಿಸಿದೆ. ಎರಡನೇ ಪಂದ್ಯದಲ್ಲೂ ವೈಭವ್ ಬೆಂಚ್ನಲ್ಲೇ ಉಳಿದಿದ್ದು, ಮುಂದಿನ ಪಂದ್ಯದಲ್ಲಿ ಅವರಿಗೆ ಅವಕಾಶ ಸಿಗುವುದು ಡೌಟ್ ಎನ್ನಲಾಗ್ತಿದೆ.
ಅಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ಅಭಿಷೇಕ್ ಶರ್ಮಾ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಎರಡನೇ ಟಿ20ಯಲ್ಲಿ ಕೇವಲ 19 ಎಸೆತಗಳಲ್ಲಿ 39 ರನ್ ಸಿಡಿಸಿದ ಅವರು ಭಾರತದ ಚೇಸ್ಗೆ ಸ್ಫೋಟಕ ಆರಂಭ ನೀಡಿದರು. ಎರಡು ಪಂದ್ಯಗಳ ಬಳಿಕ ಅಭಿಷೇಕ್ ಸರಣಿಯಲ್ಲಿ 121 ರನ್ ಗಳಿಸಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಅವರ ಈ ಫಾರ್ಮ್ ತಂಡಕ್ಕೆ ದೊಡ್ಡ ಪ್ಲಸ್ ಆಗಿದೆ
ಭಾರತದ ವೇಗದ ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಹೆಸರುಗಳು ಮತ್ತೆ ಚರ್ಚೆಯಲ್ಲಿವೆ. ಮುಂಬರುವ ದೊಡ್ಡ ಟೂರ್ನಿಗಳ ದೃಷ್ಟಿಯಿಂದ ಭಾರತದ ವೇಗದ ಬೌಲಿಂಗ್ ಸಂಯೋಜನೆ ಕುತೂಹಲ ಮೂಡಿಸಿದೆ. ಅಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ಬುಮ್ರಾ ತಮ್ಮ ಅನುಭವದ ಮೂಲಕ ಪರಿಣಾಮ ಬೀರಿದ್ದಾರೆ. ಏಷ್ಯನ್ ಗೇಮ್ಸ್ ಸೇರಿದಂತೆ ಮುಂದಿನ ಪಂದ್ಯಗಳಲ್ಲಿ ಭಾರತದ ಇವರಿಬ್ಬರ ಬೌಲಿಂಗ್ ಕಾಂಬಿನೇಷನ್ ಮೇಲೆ ಗಮನ ಹೆಚ್ಚಾಗಿದೆ.
2027ರ ಏಕದಿನ ವಿಶ್ವಕಪ್ ಸಿದ್ಧತೆಯ ದೃಷ್ಟಿಯಿಂದ ವೆಸ್ಟ್ ಇಂಡೀಸ್ ವಿರುದ್ಧದ ಮುಂಬರುವ ಏಕದಿನ ಸರಣಿಯ ತಂಡದ ಆಯ್ಕೆ ಕುತೂಹಲ ಮೂಡಿಸಿದೆ. ಇಂದು ನಡೆಯುವ ಆಯ್ಕೆ ಸಭೆಯಲ್ಲಿ ಹಲವು ಪ್ರಮುಖ ನಿರ್ಧಾರಗಳ ಸಾಧ್ಯತೆ ಇದೆ. ಈ ಸರಣಿಯಲ್ಲಿ ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಸ್ಥಾನ ಪಡೆಯುತ್ತಾರಾ ಅನ್ನೋ ಕುತೂಹಲ ಹೆಚ್ಚಾಗಿದೆ.
ಇದನ್ನೂ ಓದಿ:ಏಷ್ಯಾಕಪ್ ಗೆ ಭಾರತ ಅವಮಾನ – ಜೋಕರ್ ನಖ್ವಿಯ ಹೊಸ ನಾಟಕ
ಭಾರತೀಯ ಕ್ರಿಕೆಟಿಗ ರಿಂಕು ಸಿಂಗ್ ಮತ್ತು ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ಡಿಸೆಂಬರ್ 4 ರಂದು ವೈವಾಹಿಕ ಜೀವನಕ್ಕೆ ಕಾಲಿರಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಇವರಿಬ್ಬರ ವಿವಾಹ ಸಮಾರಂಭವು ಲಕ್ನೋದ ರಾಮದಾ ಹೋಟೆಲ್ನಲ್ಲಿ ನಡೆಯಲಿದ್ದು, ವಿವಾಹಕ್ಕೆ ಈಗಾಗಲೇ ಸಿದ್ಧತೆಗಳು ಆರಂಭವಾಗಿವೆ. ಡಿಸೆಂಬರ್ 4 ರಂದು ನಡೆಯಲಿರುವ ವಿವಾಹ ಸಮಾರಂಭದಲ್ಲಿ ಎರಡೂ ಕುಟುಂಬಗಳ ಆಪ್ತರು ಮತ್ತು ಸ್ನೇಹಿತರು, ಕ್ರಿಕೆಟ್ ಮತ್ತು ರಾಜಕೀಯದ ಹಲವಾರು ವ್ಯಕ್ತಿಗಳು ಭಾಗವಹಿಸುವ ನಿರೀಕ್ಷೆಯಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಂದಿನ ಮುಖ್ಯ ಕೋಚ್ ಆಗಿ ಹೆಮಾಂಗ್ ಬದಾನಿ ನೇಮಕವಾಗಲಿದ್ದಾರೆ ಎಂಬ ವದಂತಿಗಳಿಗೆ ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ಸ್ಪಷ್ಟನೆ ನೀಡಿದ್ದಾರೆ. ಬದಾನಿ ಹೆಸರು ಕೇಳಿಬರುತ್ತಿದ್ದರೂ, ಮಹೇಂದ್ರ ಸಿಂಗ್ ಧೋನಿ ಮುಖ್ಯ ಕೋಚ್ ಹುದ್ದೆ ನಿಭಾಯಿಸಲು ಸಂಪೂರ್ಣ ಅರ್ಹರು ಎಂದು ಶ್ರೀಕಾಂತ್ ಹೇಳಿದ್ದಾರೆ. ಧೋನಿ ಅನುಭವ ಮತ್ತು ನಾಯಕತ್ವದ ಗುಣಗಳು ತಂಡಕ್ಕೆ ಮತ್ತಷ್ಟು ನೆರವಾಗಬಹುದು ಎಂದಿದ್ದಾರೆ.
ನಟಿ ಸೋಫಿಯಾ ಹಯಾತ್, ರೋಹಿತ್ ಶರ್ಮಾ ಅವರೊಂದಿಗೆ ತಮ್ಮ ಹಿಂದಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ರೋಹಿತ್ ಜೊತೆ ಬೆಡ್ ರೂಂನಲ್ಲಿನ ಖಾಸಗಿ ಅನುಭವ ಉತ್ತಮವಾಗಿರಲಿಲ್ಲ ಎಂದು ಹೇಳಿರುವುದು ಇಂಟರ್ನೆಟ್ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆದರೆ, ಇದು ಸೋಫಿಯಾ ಅವರ ವೈಯಕ್ತಿಕ ಹೇಳಿಕೆಯಾಗಿದ್ದು, ರೋಹಿತ್ ಶರ್ಮಾ ಈ ಹೇಳಿಕೆಗಳ ಕುರಿತು ಯಾವುದೇ ಸಾರ್ವಜನಿಕ ಪ್ರತಿಕ್ರಿಯೆ ನೀಡಿಲ್ಲ.

ನೋಡಿರಿ

