ವಿಂಡೀಸ್ ವಾರ್ ಗೆ KL ವೈಸ್ ಕ್ಯಾಪ್ಟನ್ – ಕಿಶನ್ & ಶ್ರೇಯಸ್ ಸರಣಿಯಿಂದ OUT
RO-KO ಮೇಲೆ BCCI ಹದ್ದಿನಕಣ್ಣು!

ಅಫ್ಘಾನಿಸ್ತಾನ ವಿರುದ್ಧದ ಟಿ-20ಐ ಸರಣಿ ಬಳಿಕ ಟೀಂ ಇಂಡಿಯಾಗೆ ಡಬಲ್ ಟಾಸ್ಕ್ ಇದೆ. ಒಂದ್ಕಡೆ ಏಷ್ಯನ್ ಗೇಮ್ಸ್ ಮತ್ತೊಂದೆಡೆ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ. ಎರಡೂ ಈವೆಂಟ್ಗಳಿಗೆ ಟೀಂ ರೆಡಿ ಮಾಡ್ಬೇಕಿದೆ. ವಿಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಕನ್ನಡಿಗ ಕೆಎಲ್ ರಾಹುಲ್ಗೆ ಅದೃಷ್ಟ ಖುಲಾಯಿಸಲಿದೆ.
ಇದನ್ನೂ ಓದಿ : ಟ್ರೋಫಿ ಕಳ್ಳ ಟ್ರೋಫಿ ಕಳ್ಳ ನಖ್ವಿ – ನಾಚಿಕೆ ಬಿಟ್ಟು ಫೈನಲ್ ಗೆ ಬಂದಿದ್ದೇಕೆ?
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಸೆಪ್ಟೆಂಬರ್ 27 ರಿಂದ ಶುರುವಾಗಲಿದೆ. ಮೊದಲ ಪಂದ್ಯ ತಿರುವನಂತಪುರದಲ್ಲಿ ನಡೆದ್ರೆ ಎರಡನೇ ಪಂದ್ಯ ಗುವಾಹಟಿಯಲ್ಲಿ ಸೆಪ್ಟೆಂಬರ್ 30 ಮತ್ತು ಮೂರನೇ ಪಂದ್ಯ ಮುಲ್ಲನ್ಪುರದಲ್ಲಿ ಅಕ್ಟೋಬರ್ 3ರಂದು ನಡೆಯಲಿದೆ. ಈ ಸರಣಿಗೆ ಶುಭಮನ್ ಗಿಲ್ ಕ್ಯಾಪ್ಟನ್ಸಿಯಲ್ಲಿ ಭಾರತ ಕಣಕ್ಕಿಳಿಯಲಿದೆ. ಌಂಡ್ ಕನ್ನಡಿಗ ಕೆಎಲ್ ರಾಹುಲ್ಗೆ ವೈಸ್ ಕ್ಯಾಪ್ಟನ್ಸಿ ಸಿಗೋ ಚಾನ್ಸಸ್ ಇದೆ.
ಏಷ್ಯನ್ ಗೇಮ್ಸ್ ಗೆ ಶ್ರೇಯಸ್.. ವಿಂಡೀಸ್ ಗೆ ರಾಹುಲ್ ವೈಸ್ ಕ್ಯಾಪ್ಟನ್!
ಪ್ರಸ್ತುತ ಅಫ್ಘಾನಿಸ್ತಾ ವಿರುದ್ಧದ ಟಿ-20ಐ ಸರಣಿಯಲ್ಲಿ ಬ್ಯುಸಿ ಇರೋ ಟೀಂ ಇಂಡಿಯಾ ಈಗಾಗಲೇ ಮೊದಲ ಪಂದ್ಯ ಗೆದ್ದಿದೆ. ನಂತ್ರ ವೆಸ್ಟ್ ಇಂಡೀಸ್ ಸರಣಿ ಮತ್ತು ಇರಾನಿ ಕಪ್ಗಾಗಿ ಭಾರತ ತಂಡವನ್ನ ಸೆಪ್ಟೆಂಬರ್ 16 ರಂದು ದೆಹಲಿಯಲ್ಲಿ ಆಯ್ಕೆ ಮಾಡಲಾಗುತ್ತೆ. ಈ ಸಭೆಯಲ್ಲಿ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಕೂಡ ಭಾಗವಹಿಸ್ತಾರೆ. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ಅಕ್ಟೋಬರ್ 4 ರಂದು ಅಜಿತ್ ಅಗರ್ಕರ್ ಅವರ ಅಧಿಕಾರಾವಧಿ ಕೊನೆಗೊಳ್ಳಲಿದ್ದು ಅದಕ್ಕೂ ಮುನ್ನ ಇದು ಅವ್ರ ಕೊನೆಯ ಸಭೆಯಾಗಲಿದೆ. ಬಟ್ ಇನ್ನೂ ಒಂದು ವರ್ಷ ಅವ್ರ ಅಧಿಕಾರವನ್ನ ಎಕ್ಸ್ಟೆಂಡ್ ಮಾಡ್ಬೋದು. ಇಲ್ಲಿಯವರೆಗೆ ಬಿಸಿಸಿಐ ಅಗರ್ಕರ್ ಅವರ ಭವಿಷ್ಯದ ಬಗ್ಗೆ ಮೌನವಾಗಿದೆ. ಆದ್ರೆ ಏಷ್ಯನ್ ಕ್ರೀಡಾಕೂಟ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯಗಳು ಒಂದೇ ಟೈಮಲ್ಲಿ ನಡೆಯೋದ್ರಿಂದ ಏಕದಿನ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ರನ್ನ ಹೊರಗಿಡಲಾಗುತ್ತೆ. ಜಪಾನ್ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ನಲ್ಲಿ ಭಾರತ ಟಿ20 ತಂಡವನ್ನು ಲೀಡ್ ಮಾಡೋದ್ರಿಂದ ಶ್ರೇಯಸ್ ವಿಂಡೀಸ್ ಸರಣಿಗೆ ಲಭ್ಯವಿರಲ್ಲ. ಶ್ರೇಯಸ್ ಬದಲಿಗೆ ಕೆಎಲ್ ರಾಹುಲ್ಗೆ ವೈಸ್ ಕ್ಯಾಪ್ಟನ್ಸಿ ನೀಡೋ ಚಾನ್ಸಸ್ ಜಾಸ್ತಿ ಇದೆ. ಈಗಾಗ್ಲೇ ಕೆಎಲ್ ರಾಹುಲ್ ಭಾರತ ಟೆಸ್ಟ್ ತಂಡದಲ್ಲೂ ಉಪನಾಯಕನಾಗಿದ್ದಾರೆ.
ಬ್ಯಾಕಪ್ ವಿಕೆಟ್ ಕೀಪರ್ ಆಗಲು ಪಂತ್ & ಜುರೇಲ್ ರೇಸ್!
ಇನ್ನು ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯಗಳಲ್ಲಿ ರಾಹುಲ್ ಬಳಿಕ ಎರಡನೇ ವಿಕೆಟ್ ಕೀಪರ್ ಸ್ಥಾನಕ್ಕೆ ರಿಷಭ್ ಪಂತ್ ಮತ್ತು ಧ್ರುವ್ ಜುರೆಲ್ ನಡುವೆ ಫೈಟ್ ಇದೆ. ಯಾಕಂದ್ರೆ ಇಶಾನ್ ಕಿಶನ್ ಕೂಡ ಏಷ್ಯನ್ ಗೇಮ್ಸ್ ನಲ್ಲಿ ಭಾಗಿಯಾಗೋದ್ರಿಂದ ರಾಹುಲ್ ನಂತರ ಎರಡನೇ ವಿಕೆಟ್ ಕೀಪರ್ ಸ್ಥಾನದ ಬಗ್ಗೆ ಚರ್ಚೆ ನಡೆಯಲಿದೆ. ಒಂದು ವೇಳೆ ಪಂತ್ ಎರಡನೇ ಕೀಪರ್ ಆಗಿ ಸೆಲೆಕ್ಟ್ ಆಗದೇ ಇದ್ರೆ ಅವರು ಶ್ರೀನಗರದಲ್ಲಿ ಜಮ್ಮು ಮತ್ತು ಕಾಶ್ಮೀರ ವಿರುದ್ಧ ನಡೆಯಲಿರುವ ಇರಾನಿ ಕಪ್ನಲ್ಲಿ ರೆಸ್ಟ್ ಆಫ್ ಇಂಡಿಯಾ ತಂಡವನ್ನು ಮುನ್ನಡೆಸಬಹುದು. ಒಂದು ವೇಳೆ ಪಂತ್ ಭಾರತ ತಂಡಕ್ಕೆ ಪಂತ್ ಆಯ್ಕೆಯಾದರೆ ಜುರೇಲ್ ರೆಸ್ಟ್ ಆಫ್ ಇಂಡಿಯಾ ತಂಡವನ್ನು ಮುನ್ನಡೆಸಬಹುದು.
ಸೀಮ್ ಬೌಲಿಂಗ್ ಆಲ್ ರೌಂಡರ್ ಆಯ್ಕೆಯೂ ಕಷ್ಟ ಕಷ್ಟ!
ಇಲ್ಲಿ ಟೀಂ ಇಂಡಿಯಾಗೆ ಇರೋ ಇನ್ನೊಂದು ಟಾಸ್ಕ್ ಅಂದ್ರೆ ಸೀಮ್ ಬೌಲಿಂಗ್ ಆಲ್ ರೌಂಡರ್. ಹಾರ್ದಿಕ್ ಪಾಂಡ್ಯ ಈವರೆಗೂ ಫಿಟ್ನೆಸ್ ಸಾಧಿಸಿಲ್ಲ. ಹೀಗಾಗಿ ಏಕದಿನ ಪಂದ್ಯಗಳಿಗೆ ಸೀಮ್ ಬೌಲಿಂಗ್ ಆಲ್ರೌಂಡರ್ ಅನ್ನು ಆಯ್ಕೆ ಮಾಡುವುದು ರಾಷ್ಟ್ರೀಯ ಆಯ್ಕೆದಾರರಿಗೆ ಬಿಗ್ ಟಾಸ್ಕ್ ಆಗಿದೆ. ಫಾಸ್ಟ್ ಬೌಲಿಂಗ್ನಲ್ಲಿ ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್ ಮತ್ತು ಪ್ರಿನ್ಸ್ ಯಾದವ್ ತಂತ ಪ್ಲೇಯರ್ಸ್ ಫಿಟ್ ಆಗಿದ್ದು ಸೆಲೆಕ್ಷನ್ ಲಿಸ್ಟ್ನಲ್ಲಿ ಇದ್ದಾರೆ. ಌಂಡ್ ಇಲ್ಲಿ ಇಂಜುರಿ ಲಿಸ್ಟ್ನಲ್ಲಿ ಹರ್ಷ್ ದುಬೆ, ಸೂರ್ಯಾಂಶ್ ಶೆಡ್ಜ್ಗೆ , ಮೊಹ್ಸಿನ್ ಖಾನ್, ವೆಂಕಟೇಶ್ ಅಯ್ಯರ್, ಹರ್ಷಿತ್ ರಾಣಾ ಮತ್ತು ಶಹಬಾಜ್ ಅಹ್ಮದ್ ಕೂಡ ಇದ್ದು ಸೀನಿಯರ್ ಅಥವಾ ಎ ತಂಡ ಅಥವಾ ಇರಾನಿ ಕಪ್ಗೆ ಆಯ್ಕೆಗೆ ಲಭ್ಯವಿಲ್ಲ. ಹೀಗಾಗಿ ಬಿಸಿಸಿಐ ಸೆಲೆಕ್ಷನ್ ಕಮಿಟಿಗೆ ಯಾವ್ಯಾವ ಪಂದ್ಯಗಳಿಗೆ ಯಾರನ್ನ ಸೆಲೆಕ್ಟ್ ಮಾಡೋದು ಅನ್ನೋ ತಲೆಬಿಸಿ ಸ್ಟಾರ್ಟ್ ಆಗಿದೆ. ಮತ್ತೊಂದೆಡೆ ವಿಂಡೀಸ್ ವಿರುದ್ಧದ ಏಕದಿನ ಸರಣಿಗೆ ರೋಹಿತ್ ಶರ್ಮಾ ಮತ್ತು ಕಿಂಗ್ ವಿರಾಟ್ ಕೊಹ್ಲಿ ಸೆಲೆಕ್ಟ್ ಆಗ್ತಾರೆ ಅಂದ್ರೂ ಕೂಡ 2027ರ ಏಕದಿನ ವಿಶ್ವಕಪ್ ಹಿನ್ನೆಲೆಯಲ್ಲಿ ರೋಕೋ ಪರ್ಫಾಮೆನ್ಸ್ ಮೇಲೆ ಬಿಸಿಸಿಐ ಹದ್ದಿನಕಣ್ಣಿಟ್ಟಿದೆ.

ನೋಡಿರಿ

