ಮತ್ತೆ ಅರ್ಧಕ್ಕೆ ಆಟ ನಿಲ್ಲಿಸಿದ ಓಂ ಪ್ರಕಾಶ್ ರಾವ್ – ಬಿಗ್ ಬಾಸ್ ಮನೆಯಿಂದ ಹೊರ ಬಂದ ಡೈರೆಕ್ಟರ್

ಮತ್ತೆ ಅರ್ಧಕ್ಕೆ ಆಟ ನಿಲ್ಲಿಸಿದ ಓಂ ಪ್ರಕಾಶ್ ರಾವ್ – ಬಿಗ್ ಬಾಸ್ ಮನೆಯಿಂದ ಹೊರ ಬಂದ ಡೈರೆಕ್ಟರ್

ಸ್ಯಾಂಡಲ್‌ವುಡ್ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಈ ಹಿಂದಿನ ಸೀಸನ್-4 ರಲ್ಲೂ ಓಂ ಪ್ರಕಾಶ್ ರಾವ್ ತಮ್ಮ ಆಟವನ್ನ ಅರ್ಧಕ್ಕೆ ನಿಲ್ಲಿಸಿ ಹೊರಬಂದಿದ್ದರು. ಈಗಲೂ ಕೂಡಾ ತನ್ನ ಸ್ಪರ್ಧೆಯನ್ನು ಅರ್ಧಕ್ಕೆ ನಿಲ್ಲಿಸಿ ಹೊರಬಂದಿದ್ದಾರೆ.

ಇದನ್ನೂ ಓದಿ:ಮಂಜುಗೆ ಹೊಡೆದು ತಪ್ಪು ಮಾಡಿದ್ರಾ ಸೌಂದರ್ಯ? – ಬಿಗ್‌ಬಾಸ್‌ ಮೂಲ ನಿಯಮ ಉಲ್ಲಂಘನೆಗೆ ಶಿಕ್ಷೆಯಾಗುತ್ತಾ?

ಬಿಗ್ ಬಾಸ್ ಸೀಸನ್ -13ರಲ್ಲಿ ಓಂ ಪ್ರಕಾಶ್ ರಾವ್ ಅವರ ಆಟ ಅರ್ಧಕ್ಕೆ ನಿಂತಿದೆ. ಈ ವಿಚಾರವನ್ನು ಕಲರ್ಸ್ ಕನ್ನಡ ಅಧಿಕೃತವಾಗಿಯೇ ಘೋಷಣೆ ಮಾಡಿದೆ. ಈ ಹಿಂದೆ ಬಿಗ್‌ಬಾಸ್ ಸೀಸನ್‌-4 ರಲ್ಲೂ ಓಂ ಪ್ರಕಾಶ್ ರಾವ್  ಸ್ಪರ್ಧೆಯಿಂದ ಅರ್ಧಕ್ಕೆ ನಿರ್ಗಮಿಸಿದ್ದರು. ಈಗ 2 ನೇ ಸಲವೂ ಓಂ ಪ್ರಕಾಶ್ ರಾವ್ ಅನಾರೋಗ್ಯದ ಕಾರಣದಿಂದಾಗಿ ಮನೆಯಿಂದ ಹೊರಬಂದಿದ್ದಾರೆ.

ಓಂ ಪ್ರಕಾಶ್ ರಾವ್ ಅವರಿಗೆ ವಿಪರೀತ ಕಾಲು ನೋವು ಕಾಣಿಸಿಕೊಂಡಿದೆ. ಬಿಡದಿ ಹತ್ತಿರದ ಆರಾಧ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ. ನಂತರ ಓಂ ಪ್ರಕಾಶ್ ಅವರು ಬಿಗ್‌ಬಾಸ್ ಮನೆಗೆ ಮರಳಲಿಲ್ಲ. ಅನಾರೋಗ್ಯದಿಂದಾಗಿ ಸೀದಾ ತಮ್ಮ ಮನೆಗೆ ತೆರಳಿದ್ದಾರೆ. ಈ ಹಿಂದೆ ಓಂ ಪ್ರಕಾಶ್ ರಾವ್ ಅವರಿಗೆ ಅಪಘಾತವಾಗಿತ್ತು. ಈ ವೇಳೆ ಅವರ ಕಾಲಿಗೆ ಬಲವಾದ ಪೆಟ್ಟಾಗಿತ್ತು. ಇದೀಗ ಅದೇ ಕಾಲಿನಲ್ಲಿ ಮತ್ತೆ ಊತ ಕಾಣಿಸಿಕೊಂಡು ತೀವ್ರ ನೋವು ಕಾಣಿಸಿಕೊಂಡಿದೆ.

Sulekha

Leave a Reply

Your email address will not be published. Required fields are marked *