AFG ಮೊದಲ ಪಂದ್ಯಕ್ಕಿಲ್ಲ ಕಿಶನ್ – 350 ರನ್ಸ್.. ಬ್ರೇಕ್ ಸಾಕಾಗಲಿಲ್ವಾ?
ನಂ.3ನಲ್ಲಿ ಬ್ಯಾಟ್ ಬೀಸ್ತಾರಾ ಸಂಜು?

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಟಿ-20ಐ ಸರಣಿ ಆರಂಭಕ್ಕೆ ಕೌಂಟ್ಡೌನ್ ಸ್ಟಾರ್ಟ್ ಆಗಿದೆ. ಭಾನುವಾರ ಮೊದಲ ಪಂದ್ಯ ನಡೆಯಲಿದ್ದು, ಪ್ರಾಕ್ಟೀಸ್ ಕೂಡ ಜೋರಾಗಿದೆ. ಆದ್ರೆ ಇಶಾನ್ ಕಿಶನ್ ಮೊದಲ ಪಂದ್ಯವನ್ನ ಮಿಸ್ ಮಾಡಿಕೊಳ್ಳೋ ಚಾನ್ಸಸ್ ಇದೆ.
ಇದನ್ನೂ ಓದಿ : ಹರ್ಷಿತ್ ರಾಣಾ T20Iಯಿಂದ OUT! CSK ಕೋಚ್..20 ಕೋಟಿಗೆ ಡೀಲ್?
3 ಪಂದ್ಯಗಳ ಟಿ-20ಐ ಸರಣಿಗೆ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂ ಸಿದ್ಧವಾಗಿದೆ. ಆದ್ರೆ ಮೊದಲ ಪಂದ್ಯದಿಂದ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ಇಶಾನ್ ಕಿಶನ್ ಹೊರಗುಳಿಯೋ ಚಾನ್ಸಸ್ ಇದೆ. ಅದಕ್ಕೆ ಕಾರಣ ಶುಕ್ರವಾರ ಸ್ಟೇಡಿಯಂನಲ್ಲಿ ನಡೆದ ನೆಟ್ ಪ್ರಾಕ್ಟೀಸ್ ಅವಧಿಯಲ್ಲಿ ಬ್ಯಾಕ್ ಸ್ಟ್ರೇನ್ ಅಂದ್ರೆ ಬೆನ್ನುನೋವಿಗೆ ಒಳಗಾಗಿದ್ದಾರೆ. ಹೀಗಾಗಿ ಮೊದಲ ಪಂದ್ಯ ಮಿಸ್ ಮಾಡಿಕೊಳ್ತಾರಾ ಅನ್ನೋ ಚರ್ಚೆ ಶುರುವಾಗಿದೆ.
ಬೌನ್ಸರ್ ನಿಂದ ತಪ್ಪಿಸಿಕೊಳ್ಳುವಾಗ ಗಾಯಗೊಂಡ ಕಿಶನ್!
ಆಗಿದ್ದೇನಂದ್ರೆ ಶುಕ್ರವಾರ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ, ನೆಟ್ ಬೌಲರ್ ನವದೀಪ್ ಸೈನಿ ಎಸೆದ ಬೌನ್ಸರ್ ಚೆಂಡಿನಿಂದ ತಪ್ಪಿಸಿಕೊಳ್ಳಲು ಇಶಾನ್ ಕಿಶನ್ ಕೆಳಗೆ ಬಗ್ಗಿದ್ದಾರೆ. ಈ ವೇಳೆ ಕೆಳಬೆನ್ನಿನ ಸ್ನಾಯು ಉಳುಕಿದೆ. ತುಂಬಾ ನೋವಿನಿಂದ ಕೆಳಗೆ ಕುಸಿದಿದ್ದು ಕೂಡ್ಲೇ ತಂಡದ ಫಿಸಿಯೋ ಕಾಮೇಶ್ ಜೈನ್ ಅವರು ಮೈದಾನಕ್ಕೆ ಬಂದು ಪ್ರಾಥಮಿಕ ಚಿಕಿತ್ಸೆ ನೀಡಿದರು. ನಂತರ ಇಶಾನ್ ಕಿಶನ್ ಬ್ಯಾಟಿಂಗ್ ನಿಲ್ಲಿಸಿ ನೆಟ್ಸ್‌ನಿಂದ ಹೊರನಡೆದರು. ಆರಂಭದಲ್ಲಿ ಇದು ದೊಡ್ಡ ಮಟ್ಟದ ಇಂಜುರಿ ಆಗಿರ್ಬೋದು ಅನ್ಸಿತ್ತು. ಬಟ್ ಬೌಲರ್ ನವದೀಪ್ ಸೈನಿ ಇಶಾನ್ ಕಿಶನ್ ಜೊತೆ ಮಾತನಾಡಿದ್ದು, ಈಗ ಚೆನ್ನಾಗಿದ್ದಾರೆ, ಚಿಂತಿಸುವ ಅಗತ್ಯವಿಲ್ಲ ಎಂದಿದ್ದಾರೆ. ಆದ್ರೆ ಕಂಪ್ಲೀಟ್ ಆಗಿ ರಿಕವರ್ ಆಗಿದ್ದಾರಾ ಮೊದಲ ಪಂದ್ಯದ ವೇಳೆಗೆ ಫಿಟ್ ಆಗ್ತಾರಾ ಅನ್ನೋ ಬಗ್ಗೆ ಚರ್ಚೆಗಳಿವೆ. ಹಾಗೇನಾದ್ರೂ ಕಿಶನ್ ಆಡಲು ಸಾಧ್ಯವಾಗಲೇ ಇದ್ರೆ ಬಹುಶಃ ನಂಬರ್ 3ನಲ್ಲಿ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಮಾಡಬಹುದು. ಓಪನರ್ ಗಳಾಗಿ ಅಭಿಷೇಕ್ ಮತ್ತು ವೈಭವ್ ಸೂರ್ಯವಂಶಿ ಇನ್ನಿಂಗ್ಸ್ ಆರಂಭ ಮಾಡಿದ್ರೆ ಒನ್ ಡೌನ್ ಬ್ಯಾಟರ್ ಆಗಿ ಕಿಶನ್ ಬದಲಿಗೆ ಸಂಜು ಸ್ಯಾಮ್ಸನ್ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕಾಣಿಸಿಕೊಳ್ತಾರೆ. ಮತ್ತೊಂದೆಡೆ ಇಶಾನ್ ಕಿಶನ್ ಇಂಜುರಿಗೆ ಒಳಗಾಗಲು ಒತ್ತಡವೇ ಕಾರಣ ಅನ್ನೋ ಮಾತುಗಳೂ ಕೇಳಿ ಬರ್ತಿವೆ.
2 ಇನ್ನಿಂಗ್ಸ್.. 350 ರನ್ಸ್.. 2 ದಿನ ಬ್ರೇಕ್ ಸಾಕಾ?
ಇತ್ತೀಚೆಗೆ ಮುಗಿದ ದುಲೀಫ್ ಟ್ರೋಫಿಯಲ್ಲೂ ಇಶಾನ್ ಕಿಶನ್ ಈಸ್ಟ್ ಝೋನ್ ತಂಡದ ಕ್ಯಾಪ್ಟನ್ ಆಗಿ ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸಿದ್ರು. ಸೆಪ್ಟೆಂಬರ್ 6ರಿಂದ 10ರವರೆಗೆ ನಡೆದ ಈ ಪಂದ್ಯದಲ್ಲಿ ಐದೂ ದಿನವೂ ಪಂದ್ಯ ನಡೆದಿತ್ತು. ಪ್ರಸ್ತುತ ಅಫ್ಘನ್ ಸರಣಿಯಲ್ಲಿ ವೈಭವ್ ಸೂರ್ಯವಂಶಿ, ಇಶಾನ್ ಕಿಶನ್ ಹಾಗೂ ತಿಲಕ್ ವರ್ಮಾ ಪೂಡ ಫೈನಲ್ ಪಂದ್ಯದಲ್ಲಿದ್ರು. ಅದ್ರಲ್ಲೂ ಈಸ್ಟ್ ಝೋನ್ ನಾಯಕನಾಗಿ ಇಶಾನ್ ಕಿಶನ್ ಎಕ್ಸ್ಟ್ರಾರ್ಡಿನರಿ ಪರ್ಫಾಮೆನ್ಸ್ ನೀಡಿದ್ರು. 2 ಇನ್ನಿಂಗ್ಸ್ಗಳಲ್ಲಿ ಬರೋಬ್ಬರಿ 350 ರನ್ ಕಲೆಹಾಕುವ ಮೂಲಕ ಐತಿಹಾಸಿಕ ಮತ್ತು ದಾಖಲೆಯ ಪ್ರದರ್ಶನ ನೀಡಿದ್ರು. ಹೀಗೆ ಭರ್ಜರಿ ಫಾರ್ಮ್‌ನಲ್ಲಿದ್ದ ಇಶಾನ್ ಕಿಶನ್ ಈಗ ಪ್ರಾಕ್ಟೀಸ್ ವೇಳೆ ಇಂಜುರಿಗೊಂಡಿದ್ದು ಸರಣಿಯ ಮೊದಲ ಪಂದ್ಯದಲ್ಲಿ ಆಡೋದ್ರ ಬಗ್ಗೆ ಅನುಮಾನ ಶುಉರವಾಗಿದ ಬರೋಬ್ಬರಿ 350 ರನ್ ಕಲೆಹಾಕುವ ಮೂಲಕ ಐತಿಹಾಸಿಕ ಮತ್ತು ದಾಖಲೆಗಳ ಪ್ರದರ್ಶನ ಶುರುವಾಗಿದೆ. ಬಿಸಿಸಿಐ ವೈದ್ಯಕೀಯ ತಂಡದ ಅಂತಿಮ ತಪಾಸಣೆಯ ನಂತರ ಸ್ಪಷ್ಟ ನಿರ್ಧಾರ ಹೊರಬೀಳಲಿದೆ.

ನೋಡಿರಿ

