ಸೋಲಿಲ್ಲದವರ FINAL ಫೈಟ್! – ಏಷ್ಯಾಕಪ್ ಭಾರತಕ್ಕೋ.. ಲಂಕಾಗೋ?
ಟ್ರೋಫಿ ಹೆಸ್ರಲ್ಲಿ ನಖ್ವಿ ಮತ್ತೆ ನಾಟಕ!

2026ರ ಮಹಿಳಾ ಏಷ್ಯಾಕಪ್ ಈಗ ರಣರೋಚಕ ಘಟ್ಟಕ್ಕೆ ಬಂದಿದೆ. ಭಾರತ ಹಾಗೇ ಶ್ರೀಲಂಕಾ ಮಹಿಳಾ ಪಡೆ ಫೈನಲ್ಗೆ ಲಗ್ಗೆ ಇಟ್ಟಿದ್ದಾರೆ. ಅದ್ರಲ್ಲೂ ಇಡೀ ಟೂರ್ನಿಯಲ್ಲಿ ಸೋಲನ್ನೇ ಕಾಣದೆ ಎರಡೂ ತಂಡಗಳು ಪ್ರಶಸ್ತಿ ಸುತ್ತಿಗೆ ಕಾಲಿಟ್ಟಿದ್ದಾರೆ. ಹೀಗಾಗಿ ಭಾನುವಾರ ದುಬೈನಲ್ಲಿ ನಡೆಯಲಿಯೋ ಫೈನಲ್ ಪಂದ್ಯದಲ್ಲಿ ಯಾರೇ ಸೋತ್ರೂ ಅದು ಬರೀ ಸೋಲಾಗಿರಲ್ಲ.
ಇದನ್ನೂ ಓದಿ : ಸಿರಾಜ್ಗೆ ನಾಯಕತ್ವ ಪಟ್ಟ!- ಹೈದರಾಬಾದ್ ಕ್ಯಾಪ್ಟನ್ ಆದ ವೇಗಿ
ಮಹಿಳಾ ಏಷ್ಯಾಕಪ್ ಇತಿಹಾಸದಲ್ಲೇ ಭಾರತ ಅತ್ಯಂತ ಯಶಸ್ವೀ ಮತ್ತು ಬಲಿಷ್ಠ. ಹತ್ತಕ್ಕೆ ಹತ್ತೂ ಸಲ ಫೈನಲ್ 7 ಸಲ ಟ್ರೋಫಿ ವಿನ್ನರ್ಸ್.. ಈಗ ಮತ್ತೆ ಚಾಂಪಿಯನ್ಸ್ ಕ್ಯೂನಲ್ಲಿದ್ದಾರೆ. ಇನ್ನು ಏಷ್ಯಾಕಪ್ ಟೂರ್ನಮೆಂಟ್ಸ್ನಲ್ಲಿ ಹಾಲಿ ಚಾಂಪಿಯನನ್ಸ್ ಆಗಿ ಕಣಕ್ಕಿಳಿದಿರೋ ಶ್ರೀಲಂಕಾ ಕೂಡ ಸ್ಟ್ರಾಂಗ್ ಆಗಿದೆ. ಈ ಆವೃತ್ತಿಯಲ್ಲಿ ಚಾಮರಿ ಅಟಪಟ್ಟು ಕ್ಯಾಪ್ಟನ್ಸಿಯಲ್ಲಿ ಆಡಿರುವಂಥ ಎಲ್ಲಾ ಪಂದ್ಯಗಳಲ್ಲೂ ಗೆದ್ದು ಅವ್ರೂ ಫೈನಲ್ಗೇರಿದ್ದಾರೆ. ಇದೀಗ 2024ರ ಏಷ್ಯಾಕಪ್ ಫೈನಲ್ ಮತ್ತೆ ರಿಪೀಟ್ ಆಗಿದೆ.
ಲಂಕಾ ದಹನ ಮಾಡಿ ಸೇಡು ತೀರಿಸಿಕೊಳ್ಳುತ್ತಾ ಭಾರತ?
ಲಂಕಾಗೆ ಟ್ರೋಫಿ ಡಿಫೆನ್ಸ್ ಮಾಡಿಕೊಳ್ಳೋ ಚಾಲೆಂಜ್ ಇದ್ರೆ ಭಾರತಕ್ಕೆ ಕಳೆದ ಬಾರಿಯ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳೋ ಅವಕಾಶ ಸಿಕ್ಕಿದೆ. 2024ರ ಮಹಿಳಾ ಟಿ20 ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಭಾರತ ತಂಡಗಳು ಮುಖಾಮುಖಿಯಾಗಿದ್ವು. ಈ ಪಂದ್ಯದಲ್ಲಿ ಶ್ರೀಲಂಕಾ ತಂಡ ಭಾರತವನ್ನು 8 ವಿಕೆಟ್ಗಳಿಂದ ಸೋಲಿಸಿ, ಚೊಚ್ಚಲ ಬಾರಿಗೆ ಏಷ್ಯಾಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಭಾರತ ಫಸ್ಟ್ ಬ್ಯಾಟಿಂಗ್ ಮಾಡಿ ಸ್ಮೃತಿ ಮಂದಾನ ಅವ್ರ 60 ರನ್ಗಳ ಜವಾಬ್ದಾರಿಯುತ ಇನ್ನಿಂಗ್ಸ್ನಿಂದ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು. 166 ರನ್ಗಳ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ, ಕೇವಲ 18.2 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 167 ರನ್ ಗಳಿಸುವ ಮೂಲಕ ಐತಿಹಾಸಿಕ ಜಯ ಸಾಧಿಸಿತ್ತು.
ಭಾರತ ಪ್ಲಸ್ & ಮೈನಸ್!
ಏಷ್ಯಾಕಪ್ ಟೂರ್ನಿ ಇತಿಹಾಸದಲ್ಲಿ ಭಾರತ ಮಹಿಳಾ ಪಡೆ ಬಲಿಷ್ಠ ತಂಡ
ಸ್ಮೃತಿ ಮಂಧಾನ ಮತ್ತು ಶೆಫಾಲಿ ವರ್ಮಾ ಅವರ ಸ್ಫೋಟಕ ಆರಂಭ
ಹರ್ಮನ್ ಪ್ರೀತ್ ಕೌರ್, ರಿಚಾ ಘೋಷ್ ಫಿನಿಶಿಂಗ್.. ದೀಪ್ತಿ ಬೌಲಿಂಗ್
ಟಾಪ್ ಆರ್ಡರ್ ಬ್ಯಾಟರ್ಸ್ ಬೇಗ ಔಟ್ ಆದ್ರೆ ಮಿಡಲ್ ಆರ್ಡರ್ ರನ್ಸ್ ಇಲ್ಲ
ಐಸಿಸಿ ಟೂರ್ನಿಗಳು ಮತ್ತು ಏಷ್ಯಾಕಪ್ ಟೂರ್ನಿ ಫೈನಲ್ ನಲ್ಲಿ ಭಾರತಕ್ಕೆ ಒತ್ತಡ
ಕ್ಯಾಚ್ ಗಳನ್ನ ಕೈಚೆಲ್ಲುವುದು ಹಾಗೂ ಮಿಸ್ ಫೀಲ್ಡ್ ಮಾಡುವುದು
ತಂಡದಲ್ಲಿ ಇದೆಲ್ಲಾ ಏನೇ ಇದ್ರೂ ಓವರ್ ಆಲ್ ಅಂತಾ ಬಂದಾಗ ಭಾರತದ ಪರ್ಫಾಮೆನ್ಸ್ ಚೆನ್ನಾಗೇ ಇದೆ. ಹಿಂದಿನ ನಾಲ್ಕೂ ಪಂದ್ಯಗಳನ್ನೂ ಒನ್ ಸೈಡೆಡ್ ಆಗೇ ಗೆದ್ಕೊಂಡು ಫೈನಲ್ಗೆ ಬಂದಿದ್ದಾರೆ. ಆದ್ರೆ ಶ್ರೀಲಂಕಾ ತಂಡವನ್ನ ಅಷ್ಟು ಈಸಿಯಾಗಿ ತಗೊಳ್ಳೋಕೂ ಆಗಲ್ಲ.
ಶ್ರೀಲಂಕಾ ಪ್ಲಸ್ & ಮೈನಸ್!
ಶ್ರೀಲಂಕಾ ತಂಡದ ಅತಿದೊಡ್ಡ ಶಕ್ತಿಯೇ ನಾಯಕಿ ಚಾಮರಿ ಅಟಪಟ್ಟು
4 ಪಂದ್ಯಗಳಲ್ಲಿ 11 ವಿಕೆಟ್ಸ್ ಪಡೆದಿದ್ದು ಬ್ಯಾಟಿಂಗ್ ನಲ್ಲೂ ಕೊಡುಗೆ
ಸೆ.2ರಂದು ಇಂಡೋನೇಷ್ಯಾ ವಿರುದ್ಧ 3.3 ಓವರ್, 5 ರನ್, 7 ವಿಕೆಟ್
ಹರ್ಷಿತಾ ಸಮರವಿಕ್ರಮ & ಕವಿಶಾ ದಿಲ್ಹಾರಿ ಅವರಂತಹ ಬೆಸ್ಟ್ ಪ್ಲೇಯರ್ಸ್
ಆರಂಭದಲ್ಲೇ ಎಡವಿದ್ರೂ ಕೊನೇವರೆಗೂ ಪಂದ್ಯ ಕೊಂಡೊಯ್ಯುವ ಸಾಮರ್ಥ್ಯ
ಲಂಕಾ ಮೈನಸ್ ಅಂದ್ರೆ ಬೌಲಿಂಗ್ ನಲ್ಲಿ ಡೆತ್ ಓವರ್ ಗಳಲ್ಲಿ ಕಳಪೆ ಪ್ರದರ್ಶನ
ಬಹುತೇಕ ಪಂದ್ಯಗಳಲ್ಲಿ ಚಾಮರಿ ಮೇಲೆಯೇ ಡಿಪೆಂಡ್ ಆಗಿರುವುದು ಮೈನಸ್
ಹೀಗೆ ಎರಡೂ ತಂಡಗಳಲ್ಲೂ ಒಂದಷ್ಟು ಪ್ಲಸ್ & ಮೈನಸ್ ಅಂತೂ ಇದ್ದೇ ಇದೆ. ಹೀಗಾಗಿ ಫೈನಲ್ ಫೈಟ್ ಜಿದ್ದಾಜಿದ್ದಿನಿಂದ ಇರೋದ್ರಲ್ಲಿ ಡೌಟೇ ಇಲ್ಲ. ಮತ್ತೊಂದ್ಕಡೆ ಏಷ್ಯಾಕಪ್ ಫೈನಲ್ ಮುಗಿದ್ಮೇಲೆ ಮೊಹ್ಸಿನ್ ನಖ್ವಿ ನಾಟಕ ಕೂಡ ಇರುತ್ತೆ. ಭಾರತ ವಿನ್ ಆದ್ರೆ ನಖ್ವಿ ಕೈಯಿಂದ ಟ್ರೋಫಿ ತಗೊಳ್ತಾರಾ ಇಲ್ವಾ ಅನ್ನೋ ಕನ್ಫ್ಯೂಷನ್ಸ್ ನಡುವೆ ಮತ್ತೆ ತಾನೇ ಕೈಯ್ಯಾರೆ ಟ್ರೋಫಿ ಕೊಡ್ಬೇಕು ಅಂತಾ ನಖ್ವಿ ಕೂಡ ಕಾಯ್ತಿದ್ದಾರೆ. ಹೀಗಾಗಿ ಏಷ್ಯಾಕಪ್ ಫೈನಲ್ ನಲ್ಲಿ ಡ್ರಾಮಾ ಅಂತೂ ಇದ್ದದ್ದೇ.

ನೋಡಿರಿ

