OTTಗಾಗಿ ಟಾಕ್ಸಿಕ್ ರೀ-ಎಡಿಟಿಂಗ್- 500Cr ಗಡಿ ಮುಟ್ಟುತ್ತಾ TOXIC ಕಲೆಕ್ಷನ್?

ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ರಿಲೀಸ್ ಆಗಿ ಎರಡು ವಾರಕ್ಕೂ ಹೆಚ್ಚು ಸಮಯ ಕಳೆದಿದೆ. ಸಿನಿಮಾ ಆರಂಭದಲ್ಲಿ ಸೃಷ್ಟಿಸಿದ್ದ ಹೈಪ್, ಮೊದಲ ದಿನದ ಭರ್ಜರಿ ಕಲೆಕ್ಷನ್ ಮತ್ತು ನಂತರ ಕಂಡ ಕಲೆಕ್ಷನ್ ಕುಸಿತ… ಈಗ ಟಾಕ್ಸಿಕ್ ಸುತ್ತ ಮತ್ತೊಂದು ದೊಡ್ಡ ಚರ್ಚೆ ಶುರುವಾಗಿದೆ. ಅಷ್ಟಕ್ಕೂ ಟಾಕ್ಸಿಕ್ 500 ಕೋಟಿ ರೂಪಾಯಿ ಗಡಿ ಮುಟ್ಟುತ್ತಾ? ಇಂಗ್ಲಿಷ್ ವರ್ಷನ್ ಯಾಕೆ ತರಲಾಯ್ತು? ಹಾಗೇ ಸಿನಿಮಾದ OTT ರೈಟ್ಸ್ ಕಥೆ ಎಲ್ಲಿಗೆ ಬಂದು ನಿಂತಿದೆ? ಅನ್ನೋದ್ದನ್ನ ನೋಡೋಣ.
ಟಾಕ್ಸಿಕ್ ಮೊದಲ ದಿನವೇ ಭಾರತದಲ್ಲಿ 100 ಕೋಟಿ ರೂಪಾಯಿಗೂ ಹೆಚ್ಚು ನೆಟ್ ಕಲೆಕ್ಷನ್ ಮಾಡಿದ್ದು ಬಿಟ್ರೆ. ಆಮೇಲೆ ದಿನಕ್ಕೆ 50 ಕೋಟಿ ಗಡಿ ಕೂಡ ದಾಟಿಲ್ಲ. ಸಾವಿರ ಕೋಟಿ ಗಡಿ ದಾಟುಂತೆ ಅನ್ನೋ ಭರವಸೆ ಇದ್ದ ಸಿನಿಮಾ, ಭಾರತದಲ್ಲಿ ಸುಮಾರು 247 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಆಗಿದೆ ಅಷ್ಟೇ.. ವರ್ಲ್ಡ್ವೈಡ್ ಗ್ರಾಸ್ ಕಲೆಕ್ಷನ್ ಅಂದಾಜು 340 ಕೋಟಿ ರೂಪಾಯಿ ಆಗಿರಬಹುದು.
ಹೀಗಾಗಿ 500 ಕೋಟಿ ರೂಪಾಯಿ ತಲುಪಲು ಇನ್ನೂ ಸುಮಾರು 162 ಕೋಟಿ ರೂಪಾಯಿ ಬೇಕಿದೆ. ಆದರೆ ಈಗ ಡೇಲಿ ಕಲೆಕ್ಷನ್ ಲಕ್ಷಗಳ ಮಟ್ಟಕ್ಕೆ ಕುಸಿದಿರುವ ಹಿನ್ನೆಲೆಯಲ್ಲಿ 500 ಕೋಟಿ ತಲುಪುವುದು ಕಷ್ಟ ಎನ್ನುವುದು ಟ್ರೇಡ್ ವಲಯದ ಲೆಕ್ಕಾಚಾರ. ಇದೇ ವೇಗ ಮುಂದುವರಿದರೆ ಟಾಕ್ಸಿಕ್ನ ಲೈಫ್ಟೈಮ್ ಕಲೆಕ್ಷನ್ 350 ಕೋಟಿಯ ಆಸುಪಾಸಿನಲ್ಲಿ ಅಂತ್ಯವಾಗುವ ಸಾಧ್ಯತೆ ಇದೆ. ಆದರೆ ಇದು ಸದ್ಯದ ಟ್ರೆಂಡ್ ಆಧಾರಿತ ಅಂದಾಜು ಮಾತ್ರ.
ಇನ್ನು ಟಾಕ್ಸಿಕ್ನ ಇಂಗ್ಲಿಷ್ ವರ್ಷನ್ ಸೆಪ್ಟೆಂಬರ್ 4ರಂದು ಬಿಡುಗಡೆ ಮಾಡಲಾಗಿತ್ತು.. ಮೂಲ ಸಿನಿಮಾದಿಂದ 17 ನಿಮಿಷ ಕಟ್ ಮಾಡಿ ರಿಲೀಸ್ ಮಾಡಲಾಗಿತ್ತು. ಸಿನಿಮಾ ಮೂಲತಃ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಶೂಟ್ ಮಾಡಲಾಗಿತ್ತು. ಇಂಗ್ಲಿಷ್ ಕೂಡ ಹೇಳಿಕೊಳ್ಳುವ ಕಲೆಕ್ಷನ್ ಮಾಡಿಲ್ಲ. ಟಾಕ್ಸಿಕ್ ಇಂಗ್ಲಿಷ್ ಕಲೆಕ್ಷನ್ ಮಾಡಿದ್ದು ಜಸ್ಟ್ ಒಂದು ಲಕ್ಷದ 40 ಸಾವಿರ ಅಷ್ಟೇ.. ಮೊದಲ ದಿನ ಮಾರಾಟ ಆಗಿದ್ದು 450 ಟಿಕೆಟ್ಗಳು ಮಾತ್ರ. ಮುಂಬೈ ಮತ್ತು ಬೆಂಗಳೂರಿನಲ್ಲಿ ಇತರ ನಗರಗಳಿಗಿಂತ ಸ್ವಲ್ಪ ಉತ್ತಮ ಪ್ರತಿಕ್ರಿಯೆ ಕಂಡುಬಂದಿದ್ದರೂ, ಒಟ್ಟಾರೆ ಇಂಗ್ಲಿಷ್ ವರ್ಷನ್ಗೆ ಪ್ರೇಕ್ಷಕರ ಬೇಡಿಕೆ ಬಹಳ ಕಡಿಮೆಯಾಗಿತ್ತು. ಒಟ್ಟಾರೆ ಟಾಕ್ಸಿಕ್ ಇಂಗ್ಲಿಷ್ ಕಲೆಕ್ಷನ್ 5 ಲಕ್ಷನೂ ದಾಟಿಲ್ಲ.
ಇದನ್ನೂ ಓದಿ: ಶನಿದೇವನ ಕೃಪೆಗೆ ಹಾಗೂ ಶನಿ ದೋಷ ನಿವಾರಣೆಗೆ ಶನಿವಾರ ರಾತ್ರಿ ಈ ಕೆಲಸ ಮಾಡಿ!
ಇನ್ನು ದೊಡ್ಡ ಟ್ವಿಸ್ಟ್ OTT ರೈಟ್ಸ್ನಲ್ಲಿ. ಟಾಕ್ಸಿಕ್ಗೆ OTTನಿಂದ 200ರಿಂದ 235 ಕೋಟಿ ರೂಪಾಯಿ ಮಟ್ಟದ ದೊಡ್ಡ ಡೀಲ್ ನಿರೀಕ್ಷಿಸಲಾಗಿತ್ತು ಎಂಬ ವರದಿಗಳು ಬಂದಿದ್ದವು. ಆದರೆ ಸಿನಿಮಾ ಥಿಯೇಟರ್ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡದ ಹಿನ್ನೆಲೆಯಲ್ಲಿ ಈಗ ಡಿಜಿಟಲ್ ರೈಟ್ಸ್ಗೆ ಕೇವಲ 30 ಕೋಟಿ ರೂಪಾಯಿ ಆಫರ್ ಬಂದಿದೆ ಎನ್ನುವ ಹೊಸ ವರದಿ ಹೊರಬಿದ್ದಿದೆ.
ಆದರೆ ಇಲ್ಲಿ ಒಂದು ಮುಖ್ಯ ವಿಚಾರ. 235 ಕೋಟಿ ಅಥವಾ 30 ಕೋಟಿ ರೂಪಾಯಿಗೆ ZEE5 ಡೀಲ್ ಅಂತಿಮವಾಗಿದೆ ಎಂದು ಅಧಿಕೃತವಾಗಿ ದೃಢಪಟ್ಟಿಲ್ಲ. ಹಾಗಾಗಿ ಈ ಮೊತ್ತಗಳನ್ನು ಖಚಿತವಾದ ಡೀಲ್ ಎಂದು ಹೇಳಲು ಸಾಧ್ಯವಿಲ್ಲ.
ಇದಕ್ಕಿಂತ ಕುತೂಹಲಕಾರಿ ಸಂಗತಿ ಏನೆಂದರೆ, OTTಗಾಗಿ ಟಾಕ್ಸಿಕ್ನ ಹೊಸ ಅಥವಾ ರೀ-ಎಡಿಟೆಡ್ ವರ್ಷನ್ ತರುವ ಬಗ್ಗೆ ಕೂಡ ವರದಿಯಾಗಿದೆ. ಹೀಗಾಗಿ ಥಿಯೇಟರ್ನಲ್ಲಿ ನಿರೀಕ್ಷೆ ತಲುಪದ ಟಾಕ್ಸಿಕ್ಗೆ OTT ವೇದಿಕೆ ಹೊಸ ಅವಕಾಶ ಕೊಡುತ್ತಾ? 500 ಕೋಟಿ ಗುರಿ ಕೈತಪ್ಪಿದರೂ ಡಿಜಿಟಲ್ ಮೂಲಕ ಸಿನಿಮಾ ತನ್ನ ಲೆಕ್ಕಾಚಾರ ಬದಲಿಸಿಕೊಳ್ಳುತ್ತಾ? ಅನ್ನೋದು ಈಗ ಕುತೂಹಲಕ್ಕೆ ಕಾರಣವಾಗಿದೆ. ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನ ಕಾಮೆಂಟ್ ಮೂಲಕ ತಿಳಿಸಿ. ನಮಸ್ಕಾರ.

ನೋಡಿರಿ

